Jeremiah · chapter 43 · verse 1
Jeremiah 43:1 in Kannada
ಯೆರೆವಿಾಯನು ಜನರೆಲ್ಲರಿಗೆ ಅವರ ದೇವರಾದ ಕರ್ತನ ಮಾತುಗಳನ್ನೂ, ಅವರ ದೇವರಾದ ಕರ್ತನು ಯಾವವುಗಳ ವಿಷಯ ವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದನೋ ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ
Yereviాyanu janarellarige avara devaraada kartana maatugalannoo, avara devaraada kartanu yaavavugala vishaya vaagi avanannu avara balige kaluhisiddano aa maatugalannellaa heli mugisidaaga
Jeremiah 43:1 in English
- King James Version (KJV)
- And it came to pass, [that] when Jeremiah had made an end of speaking unto all the people all the words of the LORD their God, for which the LORD their God had sent him to them, [even] all these words,
- World English Bible (WEB)
- When Jeremiah had finished speaking to all the people all the words of the LORD their God, with which the LORD their God had sent him to them, even all these words,
- American Standard Version (ASV)
- And it came to pass that, when Jeremiah had made an end of speaking unto all the people all the words of Jehovah their God, wherewith Jehovah their God had sent him to them, even all these words,
- Bible in Basic English (BBE)
- And it came about that when Jeremiah had come to the end of giving all the people the words of the Lord their God, which the Lord their God had sent him to say to them, even all these words,
- Darby Translation (DBY)
- And it came to pass, when Jeremiah had ended speaking unto all the people all the words of Jehovah their God, with which Jehovah their God had sent him to them — all these words,
- Webster's Bible (WBS)
- And it came to pass, [that] when Jeremiah had made an end of speaking to all the people all the words of the LORD their God, for which the LORD their God had sent him to them, [even] all these words.
- Young's Literal Translation (YLT)
- And it cometh to pass, when Jeremiah doth finish to speak unto all the people all the words of Jehovah their God, with which Jehovah their God hath sent him unto them — all these words —
Read in context
- 1ಯೆರೆವಿಾಯನು ಜನರೆಲ್ಲರಿಗೆ ಅವರ ದೇವರಾದ ಕರ್ತನ ಮಾತುಗಳನ್ನೂ, ಅವರ ದೇವರಾದ ಕರ್ತನು ಯಾವವುಗಳ ವಿಷಯ ವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದನೋ ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ
- 2ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಗರ್ವಿಷ್ಠ ಮನುಷ್ಯ ರೆಲ್ಲರೂ ಮಾತನಾಡಿ ಯೆರೆವಿಾಯನಿಗೆ ಹೇಳಿದ್ದೇ ನಂದರೆ-ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾ ಗಿರುವದಕ್ಕೆ ಐಗುಪ್ತಕ್ಕೆ ಹೋಗಬಾರದೆಂದು ಹೇಳುವದಕ್ಕೆ ನಮ್ಮ ದೇವರಾದ ಕರ್ತನು ನಿನ್ನನ್ನು ಕಳುಹಿಸಲಿಲ್ಲ.
- 3ಅವರು ನಮ್ಮನ್ನು ಕೊಂದುಹಾಕುವಂತೆ ನಮ್ಮನ್ನು ಬಾಬೆಲಿಗೆ ಸೆರೆ ಒಯ್ಯುವ ಹಾಗೆ ನಮ್ಮನ್ನು ಕಸ್ದೀಯರ ಕೈಗೆ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂ ಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರಿಸಿದ್ದಾನೆ ಅಂದರು.
Cross references
- Jeremiah 26:8 ಯೆರೆಮೀಯ 26:8ಯೆರೆವಿಾಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಕರ್ತನು ಆಜ್ಞಾಪಿಸಿ ದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಹಿಡಿದು--ನೀನು ನಿಶ್ಚಯವಾಗಿ ಸಾಯಬೇಕು ಅಂದರು.
- Jeremiah 42:22 ಯೆರೆಮೀಯ 42:22ನೀವು ವಾಸಿಸುವದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರೆಂದು ಈಗ ನೀವು ನಿಶ್ಚಯವಾಗಿ ತಿಳುಕೊಳ್ಳಿರಿ ಅಂದನು.
- Jeremiah 51:63 ಯೆರೆಮೀಯ 51:63ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅದಕ್ಕೆ ಕಲ್ಲುಕಟ್ಟಿ ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ ಹೀಗೆ ಹೇಳು--ಈ ಪ್ರಕಾರ ಬಾಬೆಲ್ ಮುಳುಗಿಹೋಗುವದು;ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು, ಅವರು ಆಯಾಸ ಪಡುವರು. ಇಲ್ಲಿಯ ತನಕ ಯೆರೆವಿಾಯನ ವಾಕ್ಯಗಳು.
- Acts 20:27 ಅಪೊಸ್ತಲರ ಕೃತ್ಯಗಳು 20:27ಯಾಕಂದರೆ ದೇವರ ಸಂಕಲ್ಪ ವನ್ನೆಲ್ಲಾ ನಿಮಗೆ ತಿಳಿಸುವದರಲ್ಲಿ ನಾನು ಹಿಂದೆಗೆಯ ಲಿಲ್ಲ.
- Acts 5:20 ಅಪೊಸ್ತಲರ ಕೃತ್ಯಗಳು 5:20ನೀವು ಹೋಗಿ ದೇವಾಲಯದಲ್ಲಿ ನಿಂತು ಕೊಂಡು ಈ ಜೀವ ವಾಕ್ಯಗಳನ್ನೆಲ್ಲಾ ಜನರಿಗೆ ತಿಳಿಸಿರಿ ಎಂದು ಹೇಳಿದನು.
- Jeremiah 42:3–5 ಯೆರೆಮೀಯ 42:3–5ನಾವು ನಡೆಯತಕ್ಕ ಮಾರ್ಗವನ್ನು ನಾವು ಮಾಡತಕ್ಕ ಕಾರ್ಯವನ್ನು ನಿನ್ನ ದೇವರಾದ ಕರ್ತನು ನಮಗೆ ತಿಳಿಸುವ ಹಾಗೆ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡು ಅಂದರು. ಆಗ ಪ್ರವಾದಿಯಾದ ಯೆರೆವಿಾ ಯನು ಅವರಿಗೆ--ನಾನು ಕೇಳಿದ್ದೇನೆ; ಇಗೋ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡುತ್ತೇನೆ; ಕರ್ತನು ನಿಮಗೆ ಯಾವ ಉತ್ತರವನ್ನು ಕೊಡುವನೋ ಅದನ್ನು ನಿಮಗೆ ತಿಳಿಸು ವೆನು; ಒಂದು ಮಾತನ್ನಾದರೂ ನಿಮ್ಮಿಂದ ಹಿಂತೆಗೆ ಯುವದಿಲ್ಲವೆಂದು ಹೇಳಿದನು. ಆಗ ಅವರು ಯೆರೆ ವಿಾಯನಿಗೆ ಹೇಳಿದ್ದೇನಂದರೆ--ನಿನ್ನ ದೇವರಾದ ಕರ್ತನು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾನೋ ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ ಕರ್ತನು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಕರ್ತನ ಸ್ವರವನ್ನು ಕೇಳುವಾಗ ನಮಗೆ ಒಳ್ಳೇದಾ ಗುವ ಹಾಗೆ
- Jeremiah 1:7 ಯೆರೆಮೀಯ 1:7ಆಗ ಕರ್ತನು ನನಗೆ--ನಾನು ಚಿಕ್ಕವನೆಂದು ಹೇಳಬೇಡ; ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ಹೋಗಬೇಕು; ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಮಾತನಾಡಬೇಕು.
- Exodus 24:3 ವಿಮೋಚನಕಾಂಡ 24:3ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.
- Matthew 28:20 ಮತ್ತಾಯನು 28:20ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
- Jeremiah 1:17 ಯೆರೆಮೀಯ 1:17ಆದದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಅವರ ಸಂಗಡ ಮಾತನಾಡು; ನಾನು ನಿನ್ನನ್ನು ಅವರ ಮುಂದೆ ದಿಗಿಲುಪಡಿಸದ ಹಾಗೆ ನೀನು ಅವರಿಂದ ನಿರಾಶೆಪಡಬೇಡ.
- 1 Samuel 8:10 1 ಸಮುವೇಲನು 8:10ಆಗ ಸಮುವೇಲನು ಅರಸನನ್ನು ಕೇಳಿದ ಜನ ರಿಗೆ ಕರ್ತನ ವಾಕ್ಯಗಳನ್ನೆಲ್ಲಾ ಹೇಳಿದನು.
- Jeremiah 26:2 ಯೆರೆಮೀಯ 26:2ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಆಲಯದ ಅಂಗಳದಲ್ಲಿ ನಿಂತುಕೊಂಡು ಕರ್ತನ ಆಲಯದಲ್ಲಿ ಆರಾಧಿಸುವದಕ್ಕೆ ಬರುವ ಯೆಹೂದದ ಪಟ್ಟಣದವರೆಲ್ಲರಿಗೆ ಹೇಳಬೇಕೆಂದು ನಾನು ನಿನಗೆ ಆಜ್ಞಾಪಿಸಿದ ವಾಕ್ಯಗಳನ್ನೆಲ್ಲಾ ಹೇಳು; ಒಂದು ಮಾತಾದರೂ ಕಡಿಮೆ ಮಾಡಬೇಡ;