Jeremiah · chapter 46 · verse 13
Jeremiah 46:13 in Kannada
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೇಗೆ ಹೊಡೆಯುವನೆಂಬದರ ವಿಷಯ ಕರ್ತನು ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ ವಾಕ್ಯವು.
Baabelina arasanaada nebookadnechcharanu bandu aiguptadeshavannu hege hodeyuvanembadara vishaya kartanu pravaadiyaada yereviాyanige helida vaakyavu.
Jeremiah 46:13 in English
- King James Version (KJV)
- The word that the LORD spake to Jeremiah the prophet, how Nebuchadrezzar king of Babylon should come [and] smite the land of Egypt.
- World English Bible (WEB)
- The word that the LORD spoke to Jeremiah the prophet, how that Nebuchadnezzar king of Babylon should come and strike the land of Egypt:
- American Standard Version (ASV)
- The word that Jehovah spake to Jeremiah the prophet, how that Nebuchadrezzar king of Babylon should come and smite the land of Egypt.
- Bible in Basic English (BBE)
- The word which the Lord said to Jeremiah the prophet, of how Nebuchadrezzar, king of Babylon, would come and make war on the land of Egypt.
- Darby Translation (DBY)
- The word that Jehovah spoke to Jeremiah the prophet, concerning the coming of Nebuchadrezzar king of Babylon to smite the land of Egypt:
- Webster's Bible (WBS)
- The word that the LORD spoke to Jeremiah the prophet, how Nebuchadrezzar king of Babylon should come [and] smite the land of Egypt.
- Young's Literal Translation (YLT)
- The word that Jehovah hath spoken unto Jeremiah the prophet concerning the coming in of Nebuchadrezzar king of Babylon, to smite the land of Egypt:
Read in context
- 11ಐಗುಪ್ತದ ಮಗಳಾದ ಕನ್ಯಾಸ್ತ್ರೀಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತಕ್ಕೋ! ನೀನು ಬಹಳ ಮದ್ದು ತಕ್ಕೊಳ್ಳುವದು ವ್ಯರ್ಥವಾಗಿದೆ; ನಿನಗೆ ಗುಣವಾಗು ವದಿಲ್ಲ.
- 12ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿಯವೆ, ನಿನ್ನ ಕೂಗು ದೇಶವನ್ನು ತುಂಬಿಸಿ ಯದೆ; ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ; ಏಕವಾಗಿ ಬಿದ್ದುಹೋಗಿದ್ದಾರೆ.
- 13ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೇಗೆ ಹೊಡೆಯುವನೆಂಬದರ ವಿಷಯ ಕರ್ತನು ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ ವಾಕ್ಯವು.
- 14ಐಗುಪ್ತದಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿ ಸಿರಿ. ನೋಫ್ನಲ್ಲಿಯೂ ತಹಪನೇಸ್ನಲ್ಲಿಯೂ ಪ್ರಕ ಟಿಸಿ, ಸ್ಥಿರವಾಗಿ ನಿಂತುಕೋ; ಸಿದ್ದಮಾಡಿಕೋ; ಕತ್ತಿಯು ನಿನ್ನ ಸುತ್ತಲೂ ಸಂಹರಿಸುವದೆಂದು ಹೇಳಿರಿ.
- 15ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ.
Cross references
- Jeremiah 43:10–13 ಯೆರೆಮೀಯ 43:10–13ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು. ಅವನು ಬಂದು ಐಗುಪ್ತದೇಶವನ್ನು ಹೊಡೆದು ಮರಣಕ್ಕೆ ಇರುವವರನ್ನು ಮರಣಕ್ಕೂ ಸೆರೆಗೆ ಇರುವವರನ್ನು ಸೆರೆಗೂ ಕತ್ತಿಗೆ ಇರುವವರನ್ನು ಕತ್ತಿಗೂ ಒಪ್ಪಿಸುವನು. ಇದಲ್ಲದೆ ನಾನು ಐಗುಪ್ತದ ದೇವರುಗಳ ಮನೆಗಳಲ್ಲಿ ಬೆಂಕಿ ಹಚ್ಚುವೆನು; ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು; ಕುರುಬನು ತನ್ನ ವಸ್ತ್ರವನ್ನು ಹೊದ್ದು ಕೊಳ್ಳುವಂತೆ ಐಗುಪ್ತದೇಶವನ್ನು ಹೊದ್ದುಕೊಂಡು ಸಮಾಧಾನವಾಗಿ ಅಲ್ಲಿಂದ ಹೊರಡುವನು.ಇದ ಲ್ಲದೆ ಐಗುಪ್ತದೇಶದಲ್ಲಿರುವ ಬೇತ್ಷೆಮೇಷಿನ ವಿಗ್ರಹ ಗಳನ್ನು ಮುರಿದುಹಾಕಿ ಐಗುಪ್ತದ ದೇವರುಗಳ ಮನೆ ಗಳನ್ನು ಬೆಂಕಿಯಿಂದ ಸುಡುವನು ಎಂಬದು. ಇದ ಲ್ಲದೆ ಐಗುಪ್ತದೇಶದಲ್ಲಿರುವ ಬೇತ್ಷೆಮೇಷಿನ ವಿಗ್ರಹ ಗಳನ್ನು ಮುರಿದುಹಾಕಿ ಐಗುಪ್ತದ ದೇವರುಗಳ ಮನೆ ಗಳನ್ನು ಬೆಂಕಿಯಿಂದ ಸುಡುವನು ಎಂಬದು.
- Jeremiah 44:30 ಯೆರೆಮೀಯ 44:30ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಶತ್ರು ವಾದಂಥ ಅವನ ಪ್ರಾಣವನ್ನು ಹುಡುಕಿದಂಥ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಹೇಗೆ ಒಪ್ಪಿಸಿದೆನೋ ಹಾಗೆಯೇ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣವನ್ನು ಹುಡು ಕುವ ಶತ್ರುಗಳ ಕೈಯಲ್ಲಿ ಅವನನ್ನು ಒಪ್ಪಿಸುತ್ತೇನೆ.
- Isaiah 29:1–24 ಯೆಶಾಯ 29:1–24ಅಯ್ಯೋ, ಅರೀಯೇಲೇ, ಅರೀಯೇಲೇ, (ಅಗ್ನಿವೇದಿ) ದಾವೀದನು ವಾಸಿಸಿದ ಪಟ್ಟ ಣವೇ ವರುಷಕ್ಕೆ ವರುಷವನ್ನು ಕೂಡಿಸಿರಿ, ಬಲಿಗಳನ್ನು ವಧಿಸಿ ಅರ್ಪಿಸಿರಿ. ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು. ಅಲ್ಲಿ ಕಷ್ಟವೂ ದುಃಖವೂ ಇರುವದು. ಅದು ನನಗೆ ಅರೀಯೇಲಾಗಿಯೇ ಪರಿಣಮಿಸುವದು. ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ ದಿಬ್ಬಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು. ಆಗ ನೀನು ತಗ್ಗಿಸಲ್ಪಟ್ಟು ಭೂಮಿಯೊಳಗಿಂದ ಮಾತಾಡುವಿ. ನಿನ್ನ ನುಡಿಯು ದೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವದು, ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರು ವದು; ನಿನ್ನ ನುಡಿಯು ದೂಳಿನೊಳಗಿಂದ ಪಿಸುಗುಟ್ಟು ವದು; ಅದೂ ಅಲ್ಲದೆ ನಿನ್ನ ಅನ್ಯರ ಗುಂಪು ಸೂಕ್ಷ್ಮ ವಾದ ದೂಳಿನಂತಾಗುವದು, ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರು ವದು; ಹೌದು, ಅದು ಕ್ಷಣ ಮಾತ್ರದಲ್ಲಿ ಫಕ್ಕನೆ ಆಗುವದು. ಸೈನ್ಯಗಳ ಕರ್ತನ ಕಡೆಯಿಂದಲೇ ನೀನು ಗುಡುಗಿನಿಂದಲೂ ಮಹಾಶಬ್ದದಿಂದಲೂ ಬಿರುಗಾಳಿ, ಸುಳಿಗಾಳಿಯಿಂದಲೂ ದಹಿಸುವ ಅಗ್ನಿಜ್ವಾಲೆಯಿಂದ ಲೂ ವಿಚಾರಿಸಲ್ಪಡುವಿ. ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧ ವಾಗಿ ಯುದ್ಧ ಮಾಡಿ ಬಾಧಿಸುವ ಸಕಲ ಜನಾಂಗಗಳ ಗುಂಪು ರಾತ್ರಿಯ ದರ್ಶನದ ಕನಸಿನಂತೆ ಮಾಯ ವಾಗುವದು. ಹಸಿದ ಮನುಷ್ಯನು ಕನಸುಕಂಡು ಇಗೋ, ಉಣ್ಣುತ್ತಾನೆ ಆದರೆ ಅವನು ಎಚ್ಚತ್ತಾಗ ಪ್ರಾಣ ತುಂಬದ ಹಾಗೆಯೂ ಇಲ್ಲವೆ ಬಾಯಾರಿದ ವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತಾನೆ ಆದರೆ ಅವನು ಎಚ್ಚರವಾದಾಗ ಇಗೋ, ಬಲಹೀನನಾಗಿದ್ದು ಪ್ರಾಣ ಆಶಿಸುವ ಹಾಗೆಯೂ ಚೀಯೋನ್ ಪರ್ವ ತಕ್ಕೆ ವಿರೋಧವಾಗಿ ಯುದ್ಧಮಾಡುವ ಹಾಗೆಯೇ ಎಲ್ಲಾ ಜನಾಂಗಗಳ ಸಮೂಹವಿರುವದು. ತಾಮಸಮಾಡಿ ಆಶ್ಚರ್ಯಪಡಿರಿ, ನೀವು ಕೂಗಿರಿ, ಕೂಗಾಡಿರಿ ಇವರು ಅಮಲೇರಿದ್ದಾರೆ; ಆದರೆ ದ್ರಾಕ್ಷಾ ರಸದಿಂದಲ್ಲ; ಅವರು ಕೂಗಾಡುತ್ತಾರೆ, ಆದರೆ ಮದ್ಯ ದಿಂದಲ್ಲ. ಕರ್ತನು ನಿಮ್ಮ ಮೇಲೆ ಗಾಢ ನಿದ್ರೆಯ ಆತ್ಮವನ್ನು ಹೊಯಿದು ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾನೆ; ಪ್ರವಾದಿಗಳನ್ನೂ ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನೂ ಮುಚ್ಚಿದ್ದಾನೆ. ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿ ದ ವಾಕ್ಯಗಳ ಪುಸ್ತಕದ ಹಾಗಾಯಿತು; ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು ಇದನ್ನು ಓದು ಎಂದು ಬೇಡಿದರೆ ಅವನು--ಮುದ್ರೆ ಹಾಕಿದೆಯಲ್ಲಾ, ಆಗುವದಿಲ್ಲ ಅನ್ನು ವನು; ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು--ನನಗೆ ವಿದ್ಯೆಯಿಲ್ಲ ಅನ್ನುವನು. ಹೀಗಿರುವದರಿಂದ ಕರ್ತನು ಹೇಳುವದೇನಂದರೆ --ಈ ಜನರು ಬಾಯಿಂದ ನನ್ನನ್ನು ಸವಿಾಪಿಸಿ; ಅವರ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ತಮ್ಮ ಹೃದಯವನ್ನು ನನಗೆ ದೂರ ಮಾಡಿಕೊಂಡು ಬಾಯಿ ಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯವನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ. ಹೀಗಿರುವದ ರಿಂದ ಇಗೋ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಮಾಡು ವೆನು; ಅವರ ಜ್ಞಾನಿಗಳ ಜ್ಞಾನವು ಅಳಿಯುವದು (ನಾಶ), ಅವರ ವಿವೇಕಿಗಳ ತಿಳುವಳಿಕೆಯು ಅಡಗಿ ಕೊಳ್ಳುವದು ಅಂದನು. ತಮ್ಮ ಆಲೋಚನೆಯನ್ನು ಕರ್ತನಿಗೆ ಮರೆಮಾಜುವದಕ್ಕೆ ಅಗಾಧದಲ್ಲಿ ಮಾಡಿ--ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ತಿಳಿದಾರು ಅಂದುಕೊಂಡು ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸು ವವರಿಗೆ ಅಯ್ಯೋ! ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿ ಮಣ್ಣಿನಂತೆ ಎಣಿಸಲ್ಪಡುವದು; ಮಾಡಿದವನಿಗೆ ಮಾಡ ಲ್ಪಟ್ಟದ್ದು--ಆತನು ನನ್ನನ್ನು ಮಾಡಲಿಲ್ಲ ಎಂದು ಹೇಳು ವದೋ? ಇಲ್ಲವೆ ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸ ಲ್ಪಟ್ಟದ್ದು--ಆತನಿಗೆ ವಿವೇಕವಿಲ್ಲವೆಂದು ಹೇಳುವ ದೋ? ಆದಾಗ್ಯೂ ಇನ್ನು ಸ್ವಲ್ಪ ಕಾಲದಲ್ಲಿ ಲೆಬ ನೋನ್ ಫಲವುಳ್ಳ ಹೊಲವಾಗಿದ್ದು ಆ ಫಲವುಳ್ಳ ಹೊಲವು ಅಡವಿಯಾಗಿ ಎಣಿಸಲ್ಪಡುವದಿಲ್ಲವೋ? ಆ ದಿನದಲ್ಲಿ ಕಿವುಡರು ಪುಸ್ತಕದ ಮಾತುಗಳನ್ನು ಕೇಳುವರು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ ಅಂಧಕಾರದೊಳಗಿಂದಲೂ ನೋಡುವವು. ದೀನರ ಸಂತೋಷವು ಕರ್ತನಲ್ಲಿ ಹೆಚ್ಚಾಗುವದು, ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸು ವರು. ಭಯಂಕರನು ಇಲ್ಲವಾಗುತ್ತಾನೆ, ಹಾಸ್ಯಗಾ ರನು ದಹಿಸಲ್ಪಡುವನು, ಕೇಡಿಗೆ ಕಾಯುವವರೆಲ್ಲರು ಕಡಿದು ಹಾಕಲ್ಪಡುವರು. ಒಂದು ಮಾತಿನ ನಿಮಿತ್ತ ಮನುಷ್ಯರಿಗೆ ತಪ್ಪು ಹೊರಿಸುವವರೂ ಬಾಗಲಲ್ಲಿ ವಾದಿಸುವವನಿಗೆ ಉರ್ಲು ಒಡ್ಡುವವರೂ ಏನೂ ಇಲ್ಲದೆ ಕಾರ್ಯಕ್ಕೆ ನೀತಿವಂತನನ್ನು ತಿರುಗಿಸುವವರೂ ನಿರ್ನಾಮವಾಗುವರು. ಆದದರಿಂದ ಅಬ್ರಹಾಮನನ್ನು ವಿಮೋಚಿಸಿದ ಕರ್ತನು ಯಾಕೋಬನ ಮನೆತನದ ವಿಷಯವಾಗಿ ಹೇಳುವದೇನಂದರೆ--ಈಗ ಯಾಕೋಬ್ಯರು ನಾಚಿಕೆ ಪಡುವದಿಲ್ಲ ಇಲ್ಲವೆ ಅವನ ಮುಖವು ಕಳೆಗುಂದು ವದಿಲ್ಲ. ಆದರೆ ನನ್ನ ಕೈಕೆಲಸವಾದ ಅವನ ಮಕ್ಕಳನ್ನು ತನ್ನ ಮಧ್ಯದಲ್ಲಿ ನೋಡುವಾಗ ನನ್ನ ನಾಮವನ್ನು ಪರಿಶುದ್ಧವೆಂದೆಣಿಸಿ ಯಾಕೋಬನ ಪರಿ ಶುದ್ಧನನ್ನು ಪ್ರತಿಷ್ಠಿಸುವರು; ಇಸ್ರಾಯೇಲಿನ ದೇವ ರಿಗೆ ಭಯಪಡುವರು.ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗುಣುಗುಟ್ಟುವವರು ಬೋಧನೆ ಕಲಿಯುವರು. ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗುಣುಗುಟ್ಟುವವರು ಬೋಧನೆ ಕಲಿಯುವರು.
- Isaiah 19:1–25 ಯೆಶಾಯ 19:1–25ಐಗುಪ್ತ್ಯರ ವಿಷಯವಾದ ದೈವೋಕ್ತಿ; ಇಗೋ ಕರ್ತನು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಐಗುಪ್ತಕ್ಕೆ ಬರುತ್ತಾನೆ; ಆತನು ಸಮ್ಮುಖ ನಾದಾಗ ಐಗುಪ್ತದ ವಿಗ್ರಹಗಳು ನಡುಗುವವು, ಐಗುಪ್ತ್ಯರ ಹೃದಯವು ಅವರ ಮಧ್ಯೆ ಕರಗುವದು. ಇದಲ್ಲದೆ ನಾನು ಐಗುಪ್ತಕ್ಕೆ ವಿರೋಧವಾಗಿ ಐಗುಪ್ತ ವನ್ನು ಎಬ್ಬಿಸುವೆನು; ಸಹೋದರನಿಗೆ ವಿರೋದವಾಗಿ ಸಹೋದರನೂ ನೆರೆಯವನಿಗೆ ವಿರೋದವಾಗಿ ನೆರೆ ಯವನೂ ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೋರಾಡುವವು. ಐಗುಪ್ತದ ಆತ್ಮವು ಅದರ ಮಧ್ಯದಲ್ಲಿ ಕುಂದುವದು; ಅದರ ಆಲೋಚನೆಯನ್ನು ಕೆಡಿಸಿಬಿಡುವೆನು; ಅಲ್ಲಿಯ ವರು ವಿಗ್ರಹಗಳನ್ನೂ ಮಾಟಗಾರರನ್ನೂ ಯಕ್ಷಣಿಗಾರ ರನ್ನೂ ಮಂತ್ರವಾದಿಗಳನ್ನೂ ಹುಡುಕುವರು. ಇದ ಲ್ಲದೆ ಐಗುಪ್ತವನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು; ಭಯಂಕರನಾದ ರಾಜನು ಅವರ ನ್ನಾಳುವನು ಎಂದು ಸೈನ್ಯಗಳ ಕರ್ತನಾದ ಕರ್ತನು ಹೇಳುತ್ತಾನೆ. ಇದಲ್ಲದೆ ಸಮುದ್ರದ ಕಡೆಯಿಂದ ನೀರು ಬತ್ತಿ ಹೋಗುವದು; ನದಿಗಳು ಇಂಗಿ ಒಣಗುವವು. ನದಿ ಗಳು ನಾರುವವು ಅವರು ನದಿಗಳನ್ನು ದೂರಕ್ಕೆ ತಿರು ಗಿಸುವರು ತೊರೆಗಳು ಇಳಿದು ನೀರಿಲ್ಲದೆ ಹೋಗು ವವು; ಆಪೂ ಜಂಬುಹುಲ್ಲೂ ಬಾಡುವವು. ನದಿಯ ಹತ್ತಿರ, ನದಿತೀರದಲ್ಲಿಯೇ ಇರುವ ಬಯಲುಗಳು, ನದಿಯ ಬಳಿಯಲ್ಲಿ ಬಿತ್ತಿದ ಹೊಲಗಳೆಲ್ಲವೂ ಒಣಗಿ ಬಡಿಯಲ್ಪಟ್ಟು ಇಲ್ಲದೆ ಹೋಗುವವು. ವಿಾನು ಗಾರರು ಕೂಡಾ ದುಃಖಿಸುವರು ಮತ್ತು ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು, ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿಹೋಗುವರು. ನಯವಾದ ನಾರಿನ ಕೆಲಸದವರು, ಬಟ್ಟೆ ನೇಯುವವರು ನಾಚಿಕೊ ಳ್ಳುವರು. ಅವರ ಉದ್ದೇಶಗಳು ಮುರಿದು ಹೋಗು ವವು. ತೂಬಿನ ನೀರುಗಳನ್ನು ಕೊಳದ ನೀರುಗಳನ್ನು ವಿಾನಿಗೋಸ್ಕರ ಮಾಡಿದ್ದ ಉದ್ದೇಶಗಳೆಲ್ಲ ಮುರಿದು ಹೋಗುವವು. ಚೋಯನಿನ ಪ್ರಧಾನರು ನಿಜ ವಾಗಿ ಮೂರ್ಖರು, ಫರೋಹನ ಜ್ಞಾನವುಳ್ಳ ಸಲಹೆ ಗಾರರ ಆಲೋಚನೆಯು ಬುದ್ಧಿಹೀನವೇ. ನಾನು ಜ್ಞಾನಿಗಳ ಮಗನೆಂದು ಪುರಾತನ ರಾಜವಂಶಿಯನು ಎಂದು ನೀವು ಫರೋಹನಿಗೆ ಹೇಳುವದು ಹೇಗೆ? ಅವರು ಎಲ್ಲಿದ್ದಾರೆ? ನಿನ್ನ ಜ್ಞಾನಿಗಳು ಎಲ್ಲಿ? ಅವರು ನಿನಗೆ ಹೇಳಲಿ. ಸೈನ್ಯಗಳ ಕರ್ತನು ಐಗುಪ್ತ್ಯರ ವಿಷಯವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದು ಕೊಳ್ಳಲಿ. ಚೋಯನಿನ ಶ್ರೇಷ್ಠರು (ಪ್ರಧಾನರು) ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಐಗುಪ್ತದ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿ ತಪ್ಪುದಾರಿಗೆಳೆದಿದ್ದಾರೆ. ಕರ್ತನು ಅದರ ಮಧ್ಯದಲ್ಲಿ ವಕ್ರವಾದ ಆತ್ಮವನ್ನು ಕಲ್ಪಿಸಿದ್ದಾನೆ (ಬೆರೆಸಿದ್ದಾನೆ). ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾನೆ. ಇಲ್ಲವೆ ಐಗುಪ್ತದಲ್ಲಿ ತಲೆಯಾಗಲಿ ಬಾಲವಾಗಲಿ ಕೊಂಬೆಯಾಗಲಿ ಒಂದು ಕಡ್ಡಿಯಾಗಲಿ ಸಾಧಿಸಲು ಮಾಡತಕ್ಕ ಕೆಲಸವು ಒಂದಾದರೂ ಐಗುಪ್ತದ ಲ್ಲಿರುವದಿಲ್ಲ. ಆ ದಿನದಲ್ಲಿ ಐಗುಪ್ತವು ಹೆಂಗಸರ ಹಾಗೆ ಇರು ವದು. ಸೈನ್ಯಗಳ ಕರ್ತನು ಅದರ ಮೇಲೆ ಆಡಿಸುವ ಕೈಯನ್ನು ಬೀಸುತ್ತಿರುವದರಿಂದ ಹೆದರಿ ಭಯಪಡು ವದು. ಐಗುಪ್ತವು ಬೆಚ್ಚಿ ಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೈನ್ಯಗಳ ಕರ್ತನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆ ಯನ್ನು ತಿಳಿದು ಬೆರಗಾಗುವನು. ಆ ದಿವಸದಲ್ಲಿ ಕಾನಾನಿನ ಭಾಷೆಯನ್ನಾಡುವ ಐಗುಪ್ತದ ಐದು ಪಟ್ಟಣಗಳು ಸೈನ್ಯಗಳ ಕರ್ತನಿಗೆ ಆಣೆ ಇಟ್ಟುಕೊಳ್ಳುವವು. ಅವುಗಳಲ್ಲಿ ಒಂದರ ಹೆಸರು ನಾಶಪುರ. ಆ ದಿನದಲ್ಲಿ ಐಗುಪ್ತದೇಶದ ಮಧ್ಯೆ ಕರ್ತನಿಗೆ ಬಲಿಪೀಠವೂ ದೇಶದ ಎಲ್ಲೆಯಲ್ಲಿ ಕರ್ತನಿಗೆ ಒಂದು ಸ್ತಂಭವೂ ಇರುವವು. ಅದು ಸೈನ್ಯಗಳ ಕರ್ತನಿಗೆ ಐಗುಪ್ತ ದೇಶದಲ್ಲಿ ಗುರುತಾಗಿಯೂ ಸಾಕ್ಷಿ ಯಾಗಿಯೂ ಇರುವವು. ಹಿಂಸಕರ ದೆಸೆಯಿಂದ ಕರ್ತನನ್ನು ಕೂಗಿ ಕೊಳ್ಳಲು ಆತನು ಅವರಿಗೆ ಒಬ್ಬ ಶೂರನಾದ ರಕ್ಷಕ ನನ್ನು ಕಳುಹಿಸಿ ಅವರನ್ನು ಬಿಡುಗಡೆ ಮಾಡುವನು. ಕರ್ತನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು ಅವರು ಆ ದಿನದಲ್ಲಿ ಕರ್ತನನ್ನು ತಿಳಿದುಕೊಳ್ಳುವರು, ಬಲಿ ಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಕರ್ತನಿಗೆ ಪ್ರಮಾಣ ಮಾಡಿಕೊಂಡು ನೆರ ವೇರಿಸುವರು. ಇದಲ್ಲದೆ ಕರ್ತನು ಐಗುಪ್ತ್ಯರನ್ನು ಹೊಡೆಯುವನು, ಹೊಡೆದು ಸ್ವಸ್ಥಮಾಡುವನು. ಅವರು ಕರ್ತನ ಕಡೆಗೆ ತಿರುಗಿಕೊಳ್ಳುವರು, ಆತನು ಅವರನ್ನು ಆಲೈಸಿ ಸ್ವಸ್ಥಮಾಡುವನು. ಆ ದಿವಸದಲ್ಲಿ ಐಗುಪ್ತದಿಂದ ಅಶ್ಶೂರಕ್ಕೆ ಹೋಗುವ ಒಂದು ರಾಜಮಾರ್ಗವಿರುವದು. ಅಶ್ಶೂ ರ್ಯರು ಐಗುಪ್ತಕ್ಕೂ ಐಗುಪ್ತ್ಯರು ಅಶ್ಶೂರ್ಯಕ್ಕೂ ಹೋಗಿ ಬರುವರು ಮತ್ತು ಐಗುಪ್ತ್ಯರು ಅಶ್ಶೂರ್ಯರೊಂದಿಗೆ (ಕರ್ತನನ್ನು) ಸೇವಿಸುವರು. ಆ ದಿನದಲ್ಲಿ ಇಸ್ರಾಯೇಲು ಐಗುಪ್ತ್ಯರ ಸಂಗ ಡಲೂ ಅಶ್ಶೂರ್ಯರ ಸಂಗಡಲೂ ಮೂರನೆಯ ದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವದು.ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು. ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು.
Original words (Hebrew)
- word · H1697דָּבָר dâbâr
- spake · H1696דָבַר dâbar
- Jeremiah · H3414יִרְמְיָה Yirmᵉyâh
- prophet · H5030נָבִיא nâbîyʼ
- Nebuchadrezzar · H5019נְבוּכַדְנֶאצַּר Nᵉbûwkadneʼtstsar
- king · H4428מֶלֶךְ melek
- Babylon · H894בָּבֶל Bâbel
- come · H935בּוֹא bôwʼ
- smite · H5221נָכָה nâkâh
- land · H776אֶרֶץ ʼerets
- Egypt · H4714מִצְרַיִם Mitsrayim