Jeremiah · chapter 49 · verse 1
Jeremiah 49:1 in Kannada
ಅಮ್ಮೋನ್ಯರ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿಗೆ ಕುಮಾರರಿ ಲ್ಲವೋ? ಅವನಿಗೆ ಬಾಧ್ಯನಿಲ್ಲವೋ? ಅವರ ಅರಸನು ಗಾದನ್ನು ಬಾಧ್ಯವಾಗಿ ತಕ್ಕೊಳ್ಳುವದು ಯಾಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವದು ಯಾಕೆ?
Ammonyara vishayavaagi kartanu heege heluttaane--israayelige kumaarari llavo? Avanige baadhyanillavo? Avara arasanu gaadannu baadhyavaagi takkolluvadu yaake? Avana janaru adara pattanagalalli vaasamaaduvadu yaake?
Jeremiah 49:1 in English
- King James Version (KJV)
- Concerning the Ammonites, thus saith the LORD; Hath Israel no sons? hath he no heir? why [then] doth their king inherit Gad, and his people dwell in his cities?
- World English Bible (WEB)
- Of the children of Ammon. The LORD says: “Has Israel no sons? Has he no heir? Why then does Malcam possess Gad, and his people dwell in its cities?
- American Standard Version (ASV)
- Of the children of Ammon. Thus saith Jehovah: Hath Israel no sons? hath he no heir? why then doth Malcam possess Gad, and his people dwell in the cities thereof?
- Bible in Basic English (BBE)
- About the children of Ammon. These are the words of the Lord: Has Israel no sons? has he no one to take the heritage? why then has Milcom taken Gad for himself, putting his people in its towns?
- Darby Translation (DBY)
- Concerning the children of Ammon. Thus saith Jehovah: Hath Israel no sons? hath he no heir? Why is Malcam heir of Gad, and his people dwell in the cities thereof?
- Webster's Bible (WBS)
- Concerning the Ammonites, thus saith the LORD; Hath Israel no sons? hath he no heir? why [then] doth their king inherit Gad, and his people dwell in his cities?
- Young's Literal Translation (YLT)
- Concerning the sons of Ammon: 'Thus said Jehovah: Sons — hath Israel none? heir — hath he none? Wherefore hath Malcam possessed Gad? And his people in its cities have dwelt?
Read in context
- 1ಅಮ್ಮೋನ್ಯರ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿಗೆ ಕುಮಾರರಿ ಲ್ಲವೋ? ಅವನಿಗೆ ಬಾಧ್ಯನಿಲ್ಲವೋ? ಅವರ ಅರಸನು ಗಾದನ್ನು ಬಾಧ್ಯವಾಗಿ ತಕ್ಕೊಳ್ಳುವದು ಯಾಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವದು ಯಾಕೆ?
- 2ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ನಾನು ಮಾಡುವೆನು; ಅದು ಹಾಳು ದಿಬ್ಬೆಯಾಗುವದು; ಅದರ ಕುಮಾರ್ತೆಯರು ಸಹ ಬೆಂಕಿಯಿಂದ ಸುಡಲ್ಪಡು ವರು; ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯ ವನ್ನು ಹೊಂದುವದೆಂದು ಕರ್ತನು ಹೇಳುತ್ತಾನೆ.
- 3ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
Cross references
- Deuteronomy 23:3 ಧರ್ಮೋಪದೇಶಕಾಂಡ 23:3ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು.
- Zephaniah 2:8–11 ಚೆಫನ್ಯ 2:8–11ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ. ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು. ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವದು; ಅವರು ಸೈನ್ಯಗಳ ಕರ್ತನ ಜನರಿಗೆ ವಿರೋಧವಾಗಿ ನಿಂದಿಸಿ ತಮ್ಮನ್ನು ಹೆಚ್ಚಿಸಿಕೊಂಡ ದ್ದರಿಂದಲೇ ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು.
- Amos 1:13–15 ಆಮೋಸ 1:13–15ಕರ್ತನು ಹೀಗೆ ಹೇಳುತ್ತಾನೆ--ಅಮ್ಮೋನಿನ ಮಕ್ಕಳ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ವಾಗಿ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವ ದಿಲ್ಲ; ತಮ್ಮ ಮೇರೆಯನ್ನು ವಿಸ್ತಾರ ಮಾಡುವದಕ್ಕಾಗಿ ಗಿಲ್ಯಾದಿನ ಗರ್ಭಿಣಿಯರನ್ನು ಸೀಳಿದ್ದಾರೆ. ಆದರೆ ನಾನು ರಬ್ಬದ ಗೋಡೆಯಲ್ಲಿ ಬೆಂಕಿಯನ್ನು ಹತ್ತಿಸುವೆನು; ಅದು ಯುದ್ಧದ ದಿನದಲ್ಲಿ ಆರ್ಭಟದ ಸಂಗಡವೂ ಬಿರುಗಾಳಿಯ ದಿನದಲ್ಲಿ ಸುಳಿಗಾಳಿಯ ಸಂಗಡವೂ ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ. ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.
- Ezekiel 25:2–10 ಯೆಹೆಜ್ಕೇಲನು 25:2–10ಮನುಷ್ಯಪುತ್ರನೇ, ನೀನು ಅಮ್ಮೋನನ ಕುಮಾರರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು; ಅಮ್ಮೋನನ ಕುಮಾರರಿಗೆ ಹೇಳು, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಹೇಳುವದೇನಂದರೆ --ನೀನು ನನ್ನ ಪರಿಶುದ್ದಸ್ಥಳವನ್ನು ಅಪವಿತ್ರಪಡಿಸಿದಾ ಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ಅಹಾ, ಅಂದವಾದದರಿಂದ ನಿನ್ನನ್ನು ಹೆಚ್ಚಿಸಿಕೊಂಡದ್ದ ರಿಂದ ಇಗೋ, ನಾನು ನಿನ್ನನ್ನು ಮೂಡಣದವರಿಗೆ ಸ್ವಾಸ್ತ್ಯವಾಗಿ ಕೊಡುತ್ತೇನೆ, ಅವರು ತಮ್ಮ ಭವನಗಳನ್ನು ನಿನ್ನಲ್ಲಿ ಇರಿಸುವರು, ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿನ್ನ ಫಲವನ್ನು ತಿಂದು ನಿನ್ನ ಹಾಲನ್ನೇ ಕುಡಿಯುವರು. ನಾನು ರಬ್ಬಾವನ್ನು ಒಂಟೆಗಳ ನಿವಾಸಸ್ಥಳವಾಗಿಯೂ ಅಮ್ಮೋನ್ಯರ ಮಂದೆ ಗಳು ಮಲಗುವ ಸ್ಥಳವನ್ನಾಗಿಯೂ ಮಾಡುವೆನು. ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶವನ್ನು ಮನಃ ಪೂರ್ವಕವಾಗಿ ತಿರಸ್ಕರಿಸಿ ಅದರ ಆ ಸ್ಥಿತಿಗೆ ಸಂತೋಷ ಪಟ್ಟದ್ದರಿಂದ ಇಗೋ, ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಅನ್ಯಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಗಳೊಳಗೆ ನಿನ್ನನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನನ್ನು ನಾಶಮಾಡಿ ಸಂಹಾರ ಮಾಡುವೆನು, ಆಗ ನಾನೇ ಕರ್ತನೆಂದು ತಿಳಿಯುವಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಮೋವಾಬು ಮತ್ತು ಸೇಯಾರು--ಇಗೋ, ಯೆಹೂ ದನ ಮನೆಯು ಸಮಸ್ತ ಅನ್ಯಜನಾಂಗಗಳ ಹಾಗಿದೆ ಎಂದು ಹೇಳುವರು. ಆದದರಿಂದ ಇಗೋ, ನಾನು ಮೋವಾಬಿನ ಗಡಿಯನ್ನು ಪಟ್ಟಣಗಳ ಕಡೆ ಯಿಂದಲೂ ಅದರ ಪ್ರಾಂತ್ಯದಲ್ಲಿರುವಂತ ಮಹತ್ತಾದ ರಮ್ಯ ದೇಶದ ಪಟ್ಟಣಗಳಾದ ಬೇತ್ಯೆಷೀ ಮೋತ್ ಬಾಳ್ಮೆ ಯೋನ್ ಕಿರ್ಯಾಥಯಿಮ್ ಸೀಮೆಗಳನ್ನಲ್ಲದೆ ಅಮ್ಮೋನನಿಗೆ ಮೂಡಣದ ವರೆಗೆ ಸ್ವಾಸ್ತ್ಯವಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವ ರಿಗೆ ಸ್ವಾಸ್ತ್ಯವಾಗಿ ಕೊಡುವೆನು;
- 2 Chronicles 20:1 2 ಪೂರ್ವಕಾಲವೃತ್ತಾಂತ 20:1ಇದರ ತರುವಾಯ ಏನಾಯಿತಂದರೆ, ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಅಮ್ಮೋನ್ಯರ ಕೊಡ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು.
- Jeremiah 25:21 ಯೆರೆಮೀಯ 25:21ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ
- Ezekiel 21:28–32 ಯೆಹೆಜ್ಕೇಲನು 21:28–32ಮನುಷ್ಯಪುತ್ರನೇ, ನೀನು ಪ್ರವಾದಿಸಿ ಹೇಳ ಬೇಕಾದದ್ದೇನಂದರೆ--ದೇವರಾದ ಕರ್ತನು ಅಮ್ಮೋನಿ ಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾನೆ--ಹೌದು, ನೀನು ಹೀಗೆ ಹೇಳು, ಹಿರಿದ ಕತ್ತಿಯು ಥಳಥಳಿಸುವದ ರಿಂದ ಸಂಹರಿಸುವದಕ್ಕೆ ಹಿಡಿದಿದೆ; ಮಿಂಚುವಂತೆ ಬಹಳವಾಗಿ ಮಸೆದಿದೆ. ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ. ಅದನ್ನು ನಾನು ಮತ್ತೆ ಒರೆಗೆ ಸೇರಿಸುವೆನೋ? ನೀನು ನಿರ್ಮಿಸಲ್ಪಟ್ಟ ಸ್ಥಳದಲ್ಲಿಯೇ ನೀನು ಹುಟ್ಟಿದ ಸ್ಥಳದಲ್ಲಿಯೇ ನಿನಗೆ ನ್ಯಾಯತೀರಿಸುವೆನು. ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ. ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ.
- Jeremiah 49:7 ಯೆರೆಮೀಯ 49:7ಎದೋಮಿನ ವಿಷಯವಾಗಿ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತೇಮಾನ್ನಲ್ಲಿ ಇನ್ನು ಮೇಲೆ ಜ್ಞಾನವಿರುವದಿಲ್ಲವೋ? ವಿವೇಕಿಗಳಿಂದ ಆಲೋಚ ನೆಯು ನಾಶವಾಯಿತೋ? ಅವರ ಜ್ಞಾನವು ಕಾಣದೆ ಹೋಯಿತೋ?
- 1 Samuel 11:1–3 1 ಸಮುವೇಲನು 11:1–3ಅಮ್ಮೋನಿಯನಾದ ನಾಹಾಷನು ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ವಿರೋಧ ವಾಗಿ ದಂಡು ಇರಿಸಿದನು. ಆಗ ಯಾಬೇಷಿನ ಜನರೆ ಲ್ಲರು ನಾಹಾಷನಿಗೆ--ನೀನು ನಮ್ಮ ಸಂಗಡ ಒಡಂಬ ಡಿಕೆ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು. ಅಮ್ಮೋನ್ಯನಾದ ನಾಹಾಷನು ಅವರಿಗೆ--ಇಸ್ರಾಯೇ ಲ್ಯರನ್ನು ಅವಮಾನ ಪಡಿಸುವದಕ್ಕಾಗಿ ನಿಮ್ಮೆಲ್ಲರ ಬಲ ಕಣ್ಣುಗಳನ್ನು ಕಿತ್ತುಹಾಕಿ ನಿಮ್ಮ ಸಂಗಡ ಒಡಂಬಡಿಕೆ ಮಾಡುತ್ತೇನೆ ಅಂದನು. ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ--ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಗಡುವನ್ನು ಕೊಡು. ನಮ್ಮನ್ನು ರಕ್ಷಿಸು ವವರು ಯಾರೂ ಇಲ್ಲದೆ ಹೋದರೆ ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು ಅಂದರು.
- Nehemiah 2:19 ನೆಹೆಮೀಯ 2:19ಆದರೆ ಹೋರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯನ ದಾಸನಾದ ಟೋಬೀಯನೂ ಅರಬಿ ಯನಾದ ಗೆಷೆಮನೂ ಇದನ್ನು ಕೇಳಿದಾಗ ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ--ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರಿಗಿ ಬೀಳುವಿರೋ ಅಂದರು.ಆಗ ನಾನು ಅವರಿಗೆ ಪ್ರತ್ಯುತ್ತರವಾಗಿ--ಪರಲೋಕದ ದೇವರು ನಮಗೆ ಸಫಲ ಮಾಡುವನು; ಆತನ ಸೇವಕರಾದ ನಾವು ಎದ್ದು ಕಟ್ಟುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಪಾಲಾದರೂ ಹಕ್ಕಾದರೂ ಜ್ಞಾಪಕಾರ್ಥವಾದ ಗುರುತಾದರೂ ಇಲ್ಲವೆಂದು ಹೇಳಿದನು.
- Jeremiah 25:9 ಯೆರೆಮೀಯ 25:9ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ.
- Psalm 9:6 ಕೀರ್ತನೆಗಳು 9:6ಓ ಶತ್ರುವೇ, ನಾಶನ ಗಳು ಸದಾಕಾಲಕ್ಕೆ ಮುಗಿದಿವೆ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು.