Jeremiah · chapter 50 · verse 18
Jeremiah 50:18 in Kannada
ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅಶ್ಶೂರಿನ ಅರಸನನ್ನು ಶಿಕ್ಷಿಸಿದ ಹಾಗೆ, ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ಶಿಕ್ಷಿಸುತ್ತೇನೆ.
Aadadarinda israayelina devaraada sainyagala kartanu heege heluttaane--igo, naanu ashshoorina arasanannu shikshisida haage, baabelina arasanannoo avana deshavannoo shikshisuttene.
Jeremiah 50:18 in English
- King James Version (KJV)
- Therefore thus saith the LORD of hosts, the God of Israel; Behold, I will punish the king of Babylon and his land, as I have punished the king of Assyria.
- World English Bible (WEB)
- Therefore the LORD of Armies, the God of Israel, says: “Behold, I will punish the king of Babylon and his land, as I have punished the king of Assyria.
- American Standard Version (ASV)
- Therefore thus saith Jehovah of hosts, the God of Israel: Behold, I will punish the king of Babylon and his land, as I have punished the king of Assyria.
- Bible in Basic English (BBE)
- So this is what the Lord of armies, the God of Israel, has said: See, I will send punishment on the king of Babylon and on his land, as I have given punishment to the king of Assyria.
- Darby Translation (DBY)
- Therefore thus saith Jehovah of hosts, the God of Israel: Behold, I will visit the king of Babylon and his land, like as I have visited the king of Assyria.
- Webster's Bible (WBS)
- Therefore thus saith the LORD of hosts, the God of Israel; Behold, I will punish the king of Babylon and his land, as I have punished the king of Assyria.
- Young's Literal Translation (YLT)
- Therefore thus said Jehovah of Hosts, God of Israel: Lo, I am seeing after the king of Babylon, And after his land, As I have seen after the king of Asshur;
Read in context
- 16ಬಿತ್ತುವವನನ್ನೂ ಸುಗ್ಗಿ ಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನೊಳ ಗಿಂದ ಕಡಿದು ಬಿಡಿರಿ; ಕಷ್ಟಪಡಿಸುವ ಕತ್ತಿಯ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿ ಹೋಗುವರು.
- 17ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.
- 18ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅಶ್ಶೂರಿನ ಅರಸನನ್ನು ಶಿಕ್ಷಿಸಿದ ಹಾಗೆ, ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ಶಿಕ್ಷಿಸುತ್ತೇನೆ.
- 19ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರಿಗಿ ಬರಮಾಡುತ್ತೇನೆ; ಅವನು ಕರ್ಮೆಲಿ ನಲ್ಲಿಯೂ ಬಾಷಾನಿನ್ನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯಿಮ್ ಬೆಟ್ಟದಲ್ಲಿಯೂ ಗಿಲ್ಯಾದಿ ನಲ್ಲಿಯೂ ತೃಪ್ತಿಹೊಂದುವದು.
- 20ಕರ್ತನು ಹೀಗೆ ಅನ್ನುತ್ತಾನೆ--ಆ ದಿವಸಗಳಲ್ಲಿ ಆ ಕಾಲದಲ್ಲಿ ಇಸ್ರಾ ಯೇಲಿನ ಅಕ್ರಮವನ್ನು ಹುಡುಕಿದರೂ ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವದಿಲ್ಲ. ನಾನು ಉಳಿಸುವವರನ್ನು ಮನ್ನಿಸುತ್ತೇನೆ.
Cross references
- Isaiah 10:12 ಯೆಶಾಯ 10:12ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು.
- Nahum 1:1–3 ನಹೂಮ 1:1–3ನಿನೆವೆಯ ಭಾರವು. ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು. ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ. ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
- Zephaniah 2:13–15 ಚೆಫನ್ಯ 2:13–15ಆತನು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ ಅಶ್ಶೂರನ್ನು ನಾಶಮಾಡಿ ನಿನೆವೆಯನ್ನು ಹಾಳಾಗಿಯೂ ಅರಣ್ಯದಂತೆ ಒಣಗಿ ದ್ದಾಗಿಯೂ ಮಾಡುವನು. ಅದರ ಮಧ್ಯದಲ್ಲಿ ಮಂದೆಗಳೂ ಜನಾಂಗಗಳ ಮೃಗಗಳೆಲ್ಲವೂ ಮಲಗುವವು; ಬಕಪಕ್ಷಿಯೂ ಮುಳ್ಳು ಹಂದಿಯೂ ಅದರ ಮೇಲಿನ ಅವುಗಳ ಹಾಸುಗಳಲ್ಲಿ ಇಳುಕೊಳ್ಳುವವು; ಕಿಟಕಿಗಳಲ್ಲಿ ಹಾಡುವ ಶಬ್ದವಿರುವದು; ಹೊಸ್ತಿಲಗಳಲ್ಲಿ ಹಾಳು ಇರುವದು; ದೇವದಾ ರಿನ ಕೆಲಸವನ್ನು ಬೈಲುಮಾಡುವನು.ನಿಶ್ಚಿಂತೆಯಾಗಿ ವಾಸಿಸಿದಂಥ ತಾನೇ ಹೊರತು ಮತ್ತೊಂದಿಲ್ಲವೆಂದು ತನ್ನೊಳಗೆ ಅಂದುಕೊಂಡಂಥ ಉಲ್ಲಾಸದ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದನ್ನು ಹಾದು ಹೋಗುವವರೆಲ್ಲರು ಸಿಳ್ಳಿಟ್ಟು ಕೈ ಅಲ್ಲಾಡಿಸುವರು. ನಿಶ್ಚಿಂತೆಯಾಗಿ ವಾಸಿಸಿದಂಥ ತಾನೇ ಹೊರತು ಮತ್ತೊಂದಿಲ್ಲವೆಂದು ತನ್ನೊಳಗೆ ಅಂದುಕೊಂಡಂಥ ಉಲ್ಲಾಸದ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದನ್ನು ಹಾದು ಹೋಗುವವರೆಲ್ಲರು ಸಿಳ್ಳಿಟ್ಟು ಕೈ ಅಲ್ಲಾಡಿಸುವರು.
- Isaiah 37:36–38 ಯೆಶಾಯ 37:36–38ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು. ಆಗ ಅಶ್ಶೂರದ ಅರಸನಾದ ಸನ್ಹೇರೀಬನು ಹಿಂತಿರುಗಿ ನಿನವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿ ದನು.ತರುವಾಯ ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಪೂಜಿಸುತ್ತಿದ್ದಾಗ ಅದ್ರಮ್ಮೆ ಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವ ನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿ ಕೊಂಡು ಹೋದರು; ಅವನಿಗೆ ಬದಲಾಗಿ ಅವನ ಮಗನಾದ ಏಸರ್ಹದ್ದೋನನು ಆಳಿದನು. ತರುವಾಯ ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಪೂಜಿಸುತ್ತಿದ್ದಾಗ ಅದ್ರಮ್ಮೆ ಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವ ನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿ ಕೊಂಡು ಹೋದರು; ಅವನಿಗೆ ಬದಲಾಗಿ ಅವನ ಮಗನಾದ ಏಸರ್ಹದ್ದೋನನು ಆಳಿದನು.
- Ezekiel 31:3–17 ಯೆಹೆಜ್ಕೇಲನು 31:3–17ಇಗೋ, ಅಶ್ಶೂರ್ಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವ ದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಎತ್ತರವು ನೀಳವಾಗಿದೆ; ಅದರ ತುದಿಯು ದಟ್ಟವಾದ ಕೊಂಬೆಗಳ ಮಧ್ಯದಲ್ಲಿತ್ತು. ನೀರು ಅದನ್ನು ಬೆಳೆಸಿತು, ಅಗಾಧವು ತನ್ನ ನದಿಗಳನ್ನು ಅದರ ಸುತ್ತಲೂ ಹರಿಸಿ ತನ್ನ ಕಾಲುವೆಗಳನ್ನು ಬಯಲಿನ ಮರಗಳಿಗೆಲ್ಲಾ ಕಳುಹಿಸಿ, ಅದನ್ನು ಎತ್ತರವಾಗಿ ಬೆಳೆಯುವಂತೆ ಮಾಡಿತು. ಆದ ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರ ಗಳಿಗಿಂತ ಎತ್ತರವಾಗಿತ್ತು; ಅದು ಹಬ್ಬಿದ್ದದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು. ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು; ಅದರ ರೆಂಬೆ ಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮಕೊಟ್ಟವು; ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು. ಹೀಗೆ ಅವನು ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ಕೊಂಬೆಗಳ ಉದ್ದದಲ್ಲಿ ಸುಂದರವಾಗಿದ್ದನು; ಯಾಕಂದರೆ ಅವನ ಬೇರು ಮಹಾ ನೀರಿನಿಂದಾಗಿತ್ತು. ದೇವರ ತೋಟದ ದೇವದಾರುಗಳು ಅವನನ್ನು ಮರೆಮಾಡಲಿಲ್ಲ; ತುರಾಯಿ ಮರಗಳು ಅವನ ಕೊಂಬೆಗಳಿಗೆ ಸಮ ವಾಗಲಿಲ್ಲ; ಆಲದ ಮರಗಳು ಅವನ ರೆಂಬೆಗಳಷ್ಟೂ ಇಲ್ಲ; ಆ ದೇವರ ತೋಟದ ಯಾವುದೇ ಮರವು ಇವನ ಸೌಂದರ್ಯಕ್ಕೆ ಸಮವಾಗಲಿಲ್ಲ. ನಾನು ಅವನನ್ನು ಅವನ ಕೊಂಬೆಗಳ ಸಮೂಹದಿಂದ ಸೌಂದರ್ಯಪಡಿಸಿದೆನು; ಅದರಿಂದ ದೇವರ ತೋಟ ದಲ್ಲಿನ ಏದೆನಿನ ಮರಗಳೆಲ್ಲಾ ಅವನ ಮೇಲೆ ಹೊಟ್ಟೇ ಕಿಚ್ಚುಪಟ್ಟವು. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಯಾಕಂದರೆ ನೀನು ನೀಳದಲ್ಲಿ ಎತ್ತರವಾಗಿ ಅವನು ತನ್ನ ತಲೆಯನ್ನು ಒತ್ತಿಕೊಂಡಿರುವ ಕೊಂಬೆಗಳ ಕಡೆಗೆ ಚಾಚಿದ ಕಾರಣದಿಂದ ಅವನ ಹೃದಯವು ತನ್ನ ಎತ್ತರದಲ್ಲಿ ಹೆಚ್ಚಿಸಲ್ಪಟ್ಟಿದೆ. ಆದದರಿಂದ ನಾನು ಅವನನ್ನು ಅನ್ಯಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಒಪ್ಪಿಸಿದ್ದೇನೆ; ಇವನು ನಿಶ್ಚಯವಾಗಿ ಅವನನ್ನು ದಂಡಿಸುತ್ತಾನೆ. ಅವನ ದುಷ್ಟತ್ವದ ನಿಮಿತ್ತ ನಾನು ಅವನನ್ನು ತಳ್ಳಿಹಾಕಿದ್ದೇನೆ. ಜನಾಂಗಗಳಲ್ಲಿ ಭಯಂಕರವಾದ ಅಪರಿಚಿತರು ಅವನನ್ನು ಕಡಿದುಹಾಕು ವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅವನ ಕೊಂಬೆಗಳು ಬೀಳುವವು, ದೇಶದ ಹಳ್ಳಗಳ ಲ್ಲೆಲ್ಲಾ ಅವನ ರೆಂಬೆಗಳು ಮುರಿದುಹೋಗುವವು; ಭೂಮಿಯ ಜನಗಳೆಲ್ಲಾ ಅವನ ನೆರಳಿನಿಂದ ದೂರ ಸರಿದು ಅವನನ್ನು ಬಿಟ್ಟುಬಿಡುವರು. ಅವನ ಬುಡದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವವು; ಬಯಲಿನ ಎಲ್ಲಾ ಪ್ರಾಣಿಗಳು ಅವನ ರೆಂಬೆಗಳ ಬಳಿಯಲ್ಲಿರುವವು; ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದೆ ಇರುವದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವವು; ಅವುಗಳಿಗೆ ಅಧೋ ಲೋಕವೇ ಗತಿಯಾಗುವದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವವು. ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅವನು ಸಮಾಧಿಗೆ ಇಳಿದ ದಿನದಲ್ಲಿ ಗೋಳಾಟ ಹುಟ್ಟಿಸುವೆನು, ಅವನಿಗಾಗಿ ನಾನು ಅಗಾಧವನ್ನು ಮುಚ್ಚುವೆನು; ನಾನು ಅದರ ಪ್ರವಾಹವನ್ನು ತಡೆಹಿಡಿಯುವೆನು; ಮಹಾ ಜಲವು ನಿಲ್ಲಿಸಲ್ಪಡುವವು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಾಡಿಸುವೆನು. ಬಯಲಿನ ಮರಗಳೆಲ್ಲಾ ಅವನಿಗೋಸ್ಕರ ಕುಗ್ಗಿಹೋಗುವವು. ನಾನು ಅದನ್ನು ಕುಣಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು; ಅಧೋ ಲೋಕಕ್ಕೆ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿ ಕೊಂಡವು. ಅವರು ಕೂಡ ಅನ್ಯಜನಾಂಗಗಳೊಳಗೆ ಅವನ ನೆರಳಿನಲ್ಲಿ ಕುಳಿತುಕೊಳ್ಳುವರು; ಅವನ ಕೈಗಳು ಸಹ ಅವನ ಸಂಗಡವೇ ಪಾತಾಳಕ್ಕೆ ಕತ್ತಿಯಿಂದ ಹತವಾದವರ ಬಳಿಗೆ ಇಳಿದುಹೋಗುವವು;ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆ ಯಿಂದಲೂ ಏದೆನಿನ ಯಾವ ಮರಗಳಿಗೆ ಸಮ ನಾಗಿರುವೆ? ಆದರೂ ಏದೆನಿನ ಮರಗಳ ಸಂಗಡ ಕೆಳಗಿನ ಸೀಮೆಗಳಿಗೆ ಇಳಿಸಲ್ಪಡುವಿ; ಸುನ್ನತಿಯಿಲ್ಲದವರ ಮಧ್ಯದಲ್ಲಿ ಕತ್ತಿಯಿಂದ ಹತವಾದವರ ಸಂಗಡ ಮಲ ಗುವಿ. ಇದೇ ಫರೋಹನನೂ ಅವನ ಎಲ್ಲಾ ಜನ ಸಮೂಹವೂ ಆಗಿವೆ ಎಂದು ದೇವರಾದ ಕರ್ತನು ಹೇಳುತ್ತಾನೆ.