Jeremiah · chapter 51 · verse 42
Jeremiah 51:42 in Kannada
ಬಾಬೆಲಿನ ಮೇಲೆ ಸಮುದ್ರವು ಬಂತು; ಅದರ ತೆರೆಗಳ ಸಮೂಹದಿಂದ ಮುಚ್ಚಲ್ಪಟ್ಟಿದೆ.
Baabelina mele samudravu bantu; adara teregala samoohadinda muchchalpattide.
Jeremiah 51:42 in English
- King James Version (KJV)
- The sea is come up upon Babylon: she is covered with the multitude of the waves thereof.
- World English Bible (WEB)
- The sea has come up on Babylon. She is covered with the multitude of its waves.
- American Standard Version (ASV)
- The sea is come up upon Babylon; she is covered with the multitude of the waves thereof.
- Bible in Basic English (BBE)
- The sea has come up over Babylon; she is covered with the mass of its waves.
- Darby Translation (DBY)
- The sea is come up upon Babylon: she is covered with the multitude of its waves.
- Webster's Bible (WBS)
- The sea is come up upon Babylon: she is covered with the multitude of its waves.
- Young's Literal Translation (YLT)
- Come up against Babylon hath the sea, With a multitude of its billows it hath been covered.
Read in context
- 40ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು.
- 41ಶೇಷಕ್ ಹೇಗೆ ಹಿಡಿಯಲ್ಪಟ್ಟಿದೆ, ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; ಬಾಬೆಲ್ ಜನಾಂಗಗಳೊಳಗೆ ಹೀಗೆ ವಿಸ್ಮಯಗೊಳಗಾಯಿತು!
- 42ಬಾಬೆಲಿನ ಮೇಲೆ ಸಮುದ್ರವು ಬಂತು; ಅದರ ತೆರೆಗಳ ಸಮೂಹದಿಂದ ಮುಚ್ಚಲ್ಪಟ್ಟಿದೆ.
- 43ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ.
- 44ನಾನು ಬಾಬೆಲಿನಲ್ಲಿರುವ ಬೇಲ್ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
Cross references
- Isaiah 8:7–8 ಯೆಶಾಯ 8:7–8ಇಗೋ, ಕರ್ತನು ಎಲ್ಲಾ ಮಹಿಮೆಯಿಂದ ಕೂಡಿದ ಅಶ್ಯೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ವಿಾರಿ ಯೆಹೂದ ದಲ್ಲಿಯೂ ನುಗ್ಗಿ ತುಂಬಿ ತುಳುಕಿ ಹಬ್ಬಿಕೊಂಡು ಕತ್ತಿ ನವರೆಗೂ ಏರುವದು; ಓ ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವವು.
- Daniel 9:26 ದಾನಿಯೇಲನು 9:26ಅರವತ್ತೆರಡು ವಾರಗಳಾದ ಮೇಲೆ ಮೆಸ್ಸೀಯನು ಛೇದಿಸಲ್ಪಡುವನು. ಆದರೆ ತನಗೆ ಅಲ್ಲ; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವದು. ಅಂತ್ಯದ ವರೆಗೂ ಯುದ್ಧವಾಗಿ ನಾಶನಗಳು ಸಂಭವಿಸುವವು.ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
- Psalm 18:16 ಕೀರ್ತನೆಗಳು 18:16ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು.
- Ezekiel 27:26–34 ಯೆಹೆಜ್ಕೇಲನು 27:26–34ಹುಟ್ಟುಹಾಕುವವರು ನಿನ್ನನ್ನು (ಮಹಾತರಂಗ ಗಳಿಗೆ) ಸಿಕ್ಕಿಸಿದ್ದಾರೆ. ಮೂಡಣ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ. ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಾವಿಕರೂ ಅಂಬಿಗರೂ ಒಡಕುಗಳನ್ನು ಮುಚ್ಚುವವರೂ ವ್ಯಾಪಾರಿ ಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು. ನಿನ್ನ ನಾವಿಕರ ಕಿರಿಚಾಟಕ್ಕೆ ಉಪ ನಗರಗಳು, ಪ್ರದೇಶಗಳು, ನಡುಗುವವು. ಹುಟ್ಟು ಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು, ನಿನ್ನ ನಿಮಿತ್ತ ದುಃಖದಿಂದ ಅರಚಿ ತಲೆಗೆ ದೂಳೆರೆಚಿಕೊಂಡು ಬೂದಿಯಲ್ಲಿ ಬಿದ್ದು ಹೊರಳಾಡಿ; ನಿನಗಾಗಿ ತಲೆಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆ ಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು. ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು--ಸಮುದ್ರದ ನಡುವೆ ಹಾಳಾಗಿರುವ ತೂರಿನಂತ ಪಟ್ಟಣ ಯಾವದು? ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ; ಅವುಗಳಿಂದ ಬಹು ಜನಾಂಗ ಗಳನ್ನು ತುಂಬಿಸಿದೆ; ನಿನ್ನ ಅಪಾರವಾದ ಐಶ್ವರ್ಯ ದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜ ರನ್ನು ಸಮೃದ್ಧಿಪಡಿಸಿದೆ. ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಅಗಾಧ ಜಲದಲ್ಲಿ ಮುಳುಗಿ ಹೋದರು.
- Luke 21:25 ಲೂಕನು 21:25ಸೂರ್ಯ ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು; ಇದಲ್ಲದೆ ಭೂಮಿಯ ಮೇಲಿರುವ ಜನಾಂಗಗಳಿಗೆ ಕಳವಳದಿಂದ ಸಂಕಟ ಉಂಟಾಗುವದು; ಸಮುದ್ರದ ಮತ್ತು ತೆರೆಗಳ ಘೋಷಣೆಯ ನಿಮಿತ್ತವಾಗಿ ಕಳವಳವಾಗುವದು.
- Jeremiah 51:55 ಯೆರೆಮೀಯ 51:55ಕರ್ತನು ಬಾಬೆಲನ್ನು ಸೂರೆಮಾಡಿ ದ್ದಾನೆ; ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿ ದ್ದಾನೆ; ಅವಳ ತೆರೆಗಳು ಬಹಳ ನೀರುಗಳ ಹಾಗೆ ಘೋಷಿಸುವಾಗ ಅವುಗಳ ಶಬ್ದದ ಧ್ವನಿ ಹೊರಟಿತು.
- Revelation 17:15–16 ಪ್ರಕಟನೆ 17:15–16ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ. ಮೃಗದ ಮೇಲೆ ನೀನು ನೋಡಿದ ಹತ್ತು ಕೊಂಬು ಗಳು ಆ ಜಾರ ಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟ ವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವವು.
- Psalm 42:7 ಕೀರ್ತನೆಗಳು 42:7ನಿನ್ನ ನೀರಿನ ಪ್ರವಾಹದ ಶಬ್ದದಿಂದ ಅಗಾಧವು ಅಗಾಧಕ್ಕೆ ಕೂಗು ತ್ತದೆ; ನಿನ್ನ ಅಲೆಗಳೂ ತೆರೆಗಳೂ ಎಲ್ಲಾ ನನ್ನ ಮೇಲೆ ಹಾದುಹೋಗಿವೆ.
- Psalm 65:7 ಕೀರ್ತನೆಗಳು 65:7ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,
- Psalm 93:3 ಕೀರ್ತನೆಗಳು 93:3ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ.
- Psalm 18:4 ಕೀರ್ತನೆಗಳು 18:4ಮರಣದ ದುಃಖಗಳು ನನ್ನನ್ನು ಆವರಿಸಿಕೊಂಡವು, ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು.