Jeremiah · chapter 9 · verse 21
Jeremiah 9:21 in Kannada
ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು, ನಮ್ಮ ಅರಮನೆ ಗಳಲ್ಲಿ ಸೇರಿತು; ಹೊರಗಡೆ ಮಕ್ಕಳನ್ನೂ ಬೀದಿಗಳಲ್ಲಿ ಯೌವ್ವನಸ್ಥರನ್ನೂ ಕಡಿದು ಹಾಕುತ್ತದೆ.
Maranavu namma kitakigalolage eri bantu, namma aramane galalli seritu; horagade makkalannoo beedigalalli yauvvanastharannoo kadidu haakuttade.
Jeremiah 9:21 in English
- King James Version (KJV)
- For death is come up into our windows, [and] is entered into our palaces, to cut off the children from without, [and] the young men from the streets.
- World English Bible (WEB)
- For death has come up into our windows. It has entered into our palaces to cut off the children from outside, and the young men from the streets.
- American Standard Version (ASV)
- For death is come up into our windows, it is entered into our palaces; to cut off the children from without, [and] the young men from the streets.
- Bible in Basic English (BBE)
- For death has come up into our windows, forcing its way into our great houses; cutting off the children in the streets and the young men in the wide places.
- Darby Translation (DBY)
- For death is come up through our windows, is entered into our palaces, to cut off the children from the street, the young men from the broadways.
- Webster's Bible (WBS)
- For death hath come up into our windows, [and] hath entered into our palaces, to cut off the children from without, [and] the young men from the streets.
- Young's Literal Translation (YLT)
- For death hath come up into our windows, It hath come into our palaces, To cut off the suckling from without, Young men from the broad places.
Read in context
- 19ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆಪಡುತ್ತೇವೆ ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿ ಬಂತು.
- 20ಆದಾಗ್ಯೂ ಓ ಸ್ತ್ರೀಯರೇ, ಕರ್ತನ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ; ನಿಮ್ಮ ಕುಮಾರ್ತೆಯರಿಗೆ ಗೋಳಾಟವನ್ನೂ ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.
- 21ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು, ನಮ್ಮ ಅರಮನೆ ಗಳಲ್ಲಿ ಸೇರಿತು; ಹೊರಗಡೆ ಮಕ್ಕಳನ್ನೂ ಬೀದಿಗಳಲ್ಲಿ ಯೌವ್ವನಸ್ಥರನ್ನೂ ಕಡಿದು ಹಾಕುತ್ತದೆ.
- 22ಕರ್ತನು ಹೀಗೆ ಅನ್ನುತ್ತಾನೆ--ಮಾತನಾಡು, ಏನಂದರೆ ಮನು ಷ್ಯರ ಹೆಣಗಳು ಗೊಬ್ಬರದಂತೆ ಬಯಲಿನಲ್ಲಿ ಬೀಳು ವವು; ಧಾನ್ಯ ಕೊಯ್ಯುವವನು ಉಳಿಸಿದ ಕೈ ಹಿಡಿಯಂತೆ ಕೂಡಿಸುವವನಿಲ್ಲದೆ ಬೀಳುವವು.
- 23ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ.
Cross references
- Jeremiah 6:11 ಯೆರೆಮೀಯ 6:11ಆದದರಿಂದ ಕರ್ತನ ಕೋಪದಿಂದ ನಾನು ತುಂಬಿ ದ್ದೇನೆ, ಅದನ್ನು ನನ್ನೊಳಗೆ ಬಿಗಿಹಿಡಿದು ನನಗೆ ಸಾಕಾಯಿತು; ಅದನ್ನು ದೂರ ಇರುವ ಮಕ್ಕಳ ಮೇಲೆ ಮತ್ತು ಯೌವನಸ್ಥರ ಕೂಟ ಸಹಿತವಾಗಿ ಅವರ ಮೇಲೆ ಸುರಿಸುವೆನು. ನಿಶ್ಚಯವಾಗಿ ಗಂಡನು ಹೆಂಡತಿಯ ಸಂಗಡಲೂ ಮುದುಕನು ದಿನ ತುಂಬಿದವನ ಸಂಗ ಡಲೂ ಹಿಡಿಯಲ್ಪಡುವರು.
- 2 Chronicles 36:17 2 ಪೂರ್ವಕಾಲವೃತ್ತಾಂತ 36:17ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.
- Ezekiel 9:5–6 ಯೆಹೆಜ್ಕೇಲನು 9:5–6ಅದನ್ನು ನಾನು ಕೇಳುತ್ತಿರುವಾಗ ಇತರರಿಗೆ ಅವನು ಹೇಳಿದ್ದೇನಂದರೆ --ನೀವೂ ಅವನ ಹಿಂದೆ ಪಟ್ಟಣದಲ್ಲಿ ಹಾದು ಹೋಗಿ ಹೊಡೆಯಿರಿ; ನಿಮ್ಮ ಕಣ್ಣುಗಳು ಕನಿಕರಿಸದೆ ಇರಲಿ, ಕಟಾಕ್ಷಿಸದೆಯೂ ಇರಲಿ. ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.
- Jeremiah 15:7 ಯೆರೆಮೀಯ 15:7ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ತೂರುವೆನು; ನನ್ನ ಜನರನ್ನು ಮಕ್ಕಳಿಲ್ಲದವರಾಗ ಮಾಡಿ ನಾಶಮಾಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು ಹಿಂತಿರುಗದೆ ಇದ್ದದರಿಂದ
- Amos 6:10–11 ಆಮೋಸ 6:10–11ಒಬ್ಬ ನೆಂಟನೂ ಅವನನ್ನು ಸುಡುವವನೂ ಮನೆಯೊಳಗಿಂದ ಅವನ ಎಲುಬುಗಳನ್ನು ತೆಗೆದುಕೊಂಡು ಹೋಗುವದಕ್ಕೆ ಅವ ನನ್ನು ಎತ್ತಿಕೊಳ್ಳುವಾಗ ಮನೆಯ ಒಳಭಾಗದಲ್ಲಿ ಇರುವ ವರಿಗೆ--ಇನ್ನೂ ಯಾರಾದರೂ ನಿನ್ನ ಬಳಿಯಲ್ಲಿ ಇದ್ದಾರೆಯೇ? ಎಂದು ಹೇಳುವನು; ಆಗ ಅವನು--ಯಾರೂ ಇಲ್ಲವೆಂದರೆ ಇವನು--ಸುಮ್ಮನಿರು, ನಾವು ಕರ್ತನ ಹೆಸರನ್ನು ಜ್ಞಾಪಕ ಮಾಡಿಕೊಳ್ಳಬಾರದೆಂದು ಹೇಳುವನು. ಇಗೋ, ಕರ್ತನು ಆಜ್ಞಾಪಿಸುತ್ತಾನೆ; ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
- Ezekiel 21:14–15 ಯೆಹೆಜ್ಕೇಲನು 21:14–15ಆದದರಿಂದ ಮನುಷ್ಯ ಪುತ್ರನೇ ನೀನು ಚಪ್ಪಾಳೆ ತಟ್ಟಿ ಪ್ರವಾದಿಸು; ಹತ ರಾದವರ ಕತ್ತಿಯು ಮೂರನೆಯ ಸಾರಿಯೂ ಎರಡ ರಷ್ಟು ಮಾಡಲಿ; ಅದು ತಮ್ಮ ರಹಸ್ಯ ಕೋಣೆಗಳಲ್ಲಿ ಪ್ರವೇಶಿಸಿ ಮಹಾ ಪ್ರಜೆಗಳನ್ನು ಸಂಹರಿಸಿದ ಕತ್ತಿಯೇ. ಅವರ ಹೃದಯವು ಕುಂದುವ ಹಾಗೆಯೂ ಅವರ ಎಲ್ಲಾ ಬಾಗಿಲುಗಳಲ್ಲಿ ಬೀಳೋಣವು ಹೆಚ್ಚಾಗುವ ಹಾಗೆಯೂ ಕತ್ತಿಯ ಮೊನೆಯನ್ನಿಟ್ಟಿದ್ದೇನೆ; ಹಾ, ಅದು ಥಳಥಳಿಸುತ್ತಿದೆ, ಕೊಲೆ ಮಾಡುವದಕ್ಕೆ ಮಸಿಯಲ್ಪಟ್ಟಿದೆ.