Job · chapter 10 · verse 17
Job 10:17 in Kannada
ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ಇಡುತ್ತೀ. ನಿನ್ನ ಕೋಪವು ನನ್ನ ಮೇಲೆ ಅಧಿಕಗೊಳ್ಳುತ್ತದೆ; ಬದಲಾವಣೆಗಳೂ ಯುದ್ಧವೂ ನನಗೆ ಎದುರಾಗಿವೆ.
Hosa saakshigalannu nanage virodhavaagi iduttee. Ninna kopavu nanna mele adhikagolluttade; badalaavanegaloo yuddhavoo nanage eduraagive.
Job 10:17 in English
- King James Version (KJV)
- Thou renewest thy witnesses against me, and increasest thine indignation upon me; changes and war [are] against me.
- World English Bible (WEB)
- You renew your witnesses against me, and increase your indignation on me. Changes and warfare are with me.
- American Standard Version (ASV)
- Thou renewest thy witnesses against me, And increasest thine indignation upon me: Changes and warfare are with me.
- Bible in Basic English (BBE)
- That you would send new witnesses against me, increasing your wrath against me, and letting loose new armies on me.
- Darby Translation (DBY)
- Thou renewest thy witnesses before me and increasest thy displeasure against me; successions [of evil] and a time of toil are with me.
- Webster's Bible (WBS)
- Thou renewest thy witnesses against me, and increasest thy indignation upon me; changes and war [are] against me.
- Young's Literal Translation (YLT)
- Thou renewest Thy witnesses against me, And dost multiply Thine anger with me, Changes and warfare [are] with me.
Read in context
- 15ನಾನು ದುಷ್ಟನಾಗಿದ್ದರೆ ನನಗೆ ಅಯ್ಯೋ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತುವದಿಲ್ಲ; ಗಲಿಬಿಲಿಯಿಂದ ನಾನು ತುಂಬಿದ್ದೇನೆ, ಆದದರಿಂದ ನನ್ನ ಬಾಧೆಯನ್ನು ನೋಡು.
- 16ಅದು ಹೆಚ್ಚುತ್ತಿದೆ; ಸಿಂಹದಂತೆ ನನ್ನನ್ನು ಬೇಟೆಯಾಡುವಿ; ಇನ್ನೂ ಆಶ್ಚರ್ಯವಾದವುಗಳನ್ನು ನನಗೆ ತೋರಿಸುವಿ.
- 17ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ಇಡುತ್ತೀ. ನಿನ್ನ ಕೋಪವು ನನ್ನ ಮೇಲೆ ಅಧಿಕಗೊಳ್ಳುತ್ತದೆ; ಬದಲಾವಣೆಗಳೂ ಯುದ್ಧವೂ ನನಗೆ ಎದುರಾಗಿವೆ.
- 18ಹಾಗಾದರೆ ಯಾಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದಿ? ಯಾವ ಕಣ್ಣು ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
- 19ನಾನು ಇರದವನಂತಿದ್ದು ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು.
Cross references
- Ruth 1:21 ರೂತಳು 1:21ನಾನು ಸಮೃದ್ಧಿ ಯಾಗಿ ಹೊರಟು ಹೋದೆನು; ಕರ್ತನು ನನ್ನನ್ನು ಏನೂ ಇಲ್ಲದೆ ತಿರಿಗಿ ಮನೆಗೆ ಬರಮಾಡಿದ್ದಾನೆ. ಕರ್ತನು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಆದದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವದೇನು ಅಂದಳು.ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶ ದಿಂದ ತಿರಿಗಿ ಬಂದಳು. ಇದಲ್ಲದೆ ಅವರು ಜವೆ ಗೋಧಿಯ ಸುಗ್ಗಿಯ ಕಾಲ ಪ್ರಾರಂಭಿಸಿದಾಗ ಬೇತ್ಲೆಹೇಮಿಗೆ ಬಂದರು.
- Job 16:8 ಯೋಬನು 16:8ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ.
- Psalm 55:19 ಕೀರ್ತನೆಗಳು 55:19ಅನಾದಿಯಿಂದ ಇರುವ ದೇವರು ಲಕ್ಷ್ಯವಿಟ್ಟು ಅವರನ್ನು ಕುಗ್ಗಿಸುವನು. ಸೆಲಾ. ಅವರಲ್ಲಿ ಮಾರ್ಪಾಡುವಿಕೆಗಳು ಇಲ್ಲ; ಆದಕಾರಣ ದೇವರಿಗೆ ಅವರು ಭಯಪಡುವದಿಲ್ಲ.
- Job 19:6–11 ಯೋಬನು 19:6–11ದೇವರು ನನ್ನನ್ನು ತೊಲಗಿಸಿಬಿಟ್ಟು, ತನ್ನ ಬಲೆಯನ್ನು ನನ್ನ ಮೇಲೆ ಬೀಸಿದನೆಂದು ತಿಳಿಯಬೇಕಷ್ಟೆ. ಇಗೋ, ತಪ್ಪಿನೊಳಗಿಂದ ಕೂಗುತ್ತೇನೆ, ಉತ್ತರ ಕೊಡುವವನಿಲ್ಲ; ಗಟ್ಟಿಯಾಗಿ ಕೂಗುತ್ತೇನೆ, ನ್ಯಾಯ ತೀರ್ವಿಕೆ ಇಲ್ಲ. ನಾನು ದಾಟ ಕೂಡದ ಹಾಗೆ ಆತನು ನನ್ನ ದಾರಿಗೆ ಬೇಲಿ ಹಾಕಿದ್ದಾನೆ; ನನ್ನ ದಾರಿಗಳಲ್ಲಿ ಕತ್ತಲೆ ಇಡುತ್ತಾನೆ. ನನ್ನ ಘನತೆಯನ್ನು ನನ್ನಲ್ಲಿಂದ ಸುಲಿದುಕೊಂಡನು; ನನ್ನ ತಲೆಯ ಕಿರೀ ಟವನ್ನು ತೆಗೆದುಹಾಕಿದನು. ಸುತ್ತಲೂ ನನ್ನನ್ನು ನಾಶ ಪಡಿಸಿದ್ದರಿಂದ ನಾನು ಹೋಗುತ್ತೇನೆ; ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟನು. ಆತನ ಕೋಪವು ನನ್ನ ಮೇಲೆ ಹೊತ್ತಿ ಅದೆ; ತನ್ನ ವೈರಿಗಳ ಹಾಗೆ ನನ್ನನ್ನು ಎಣಿಸುತ್ತಾನೆ.
- Jeremiah 48:11 ಯೆರೆಮೀಯ 48:11ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯ ಲ್ಪಡಲಿಲ್ಲ; ಸೆರೆಗೆ ಹೋಗಲಿಲ್ಲ; ಆದದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.
- Zephaniah 1:12 ಚೆಫನ್ಯ 1:12ಆ ಕಾಲದಲ್ಲಿ ಆಗುವದೇನಂದರೆ--ನಾನು ಯೆರೂಸಲೇಮನ್ನು ದೀಪಗಳಿಂದ ಶೋಧಿಸುವೆನು; ಕರ್ತನು ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡು ವದಿಲ್ಲವೆಂದು ತಮ್ಮ ಹೃದಯಗಳಲ್ಲಿ ಅನ್ನುವವರಾಗಿ ಮರೆಯಾದವುಗಳ ಮೇಲೆ ಕಟ್ಟಿಕೊಂಡಿರುವ ಮನುಷ್ಯ ರನ್ನು ದಂಡಿಸುವೆನು.
- Job 16:11–16 ಯೋಬನು 16:11–16ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ. ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು; ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ. ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ. ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು. ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;