Job · chapter 29 · verse 15
Job 29:15 in Kannada
ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು.
Naanu kurudanige kannoo kuntanige kaaloo aagiddenu.
Job 29:15 in English
- King James Version (KJV)
- I was eyes to the blind, and feet [was] I to the lame.
- World English Bible (WEB)
- I was eyes to the blind, and feet to the lame.
- American Standard Version (ASV)
- I was eyes to the blind, And feet was I to the lame.
- Bible in Basic English (BBE)
- I was eyes to the blind, and feet to him who had no power of walking.
- Darby Translation (DBY)
- I was eyes to the blind, and feet was I to the lame;
- Webster's Bible (WBS)
- I was eyes to the blind, and feet [was] I to the lame.
- Young's Literal Translation (YLT)
- Eyes I have been to the blind, And feet to the lame [am] I.
Read in context
- 13ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು.
- 14ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು.
- 15ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು.
- 16ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು.
- 17ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು.
Cross references
- Numbers 10:31 ಅರಣ್ಯಕಾಂಡ 10:31ಅದಕ್ಕೆ ಮೋಶೆ--ನಮ್ಮನ್ನು ಬಿಟ್ಟುಹೋಗಬೇಡ, ನಾವು ಎಲ್ಲಿ ಇಳುಕೊಳ್ಳಬೇಕೋ ನಿನಗೆ ತಿಳಿದದೆ; ನೀನು ನಮಗೆ ಕಣ್ಣುಗಳಾಗಿರುವಿ.
- Matthew 11:5 ಮತ್ತಾಯನು 11:5ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.
- 1 Corinthians 12:12–31 1 ಕೊರಿಂಥದವರಿಗೆ 12:12–31ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ಆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿ ರುವದೋ, ಹಾಗೆಯೇ ಕ್ರಿಸ್ತನು ಇದ್ದಾನೆ. ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ. ದೇಹವು ಒಂದೇ ಅಂಗವಲ್ಲ, ಆದರೆ ಅದು ಅನೇಕ ಅಂಗಗಳುಳ್ಳದ್ದಾಗಿದೆ. ಕಾಲು--ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ? ಕಿವಿ--ನಾನು ಕಣ್ಣಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ? ದೇಹವೆಲ್ಲಾ ಕಣ್ಣಾದರೆ ಕೇಳುವದೆಲ್ಲಿ? ಅದೆಲ್ಲಾ ಕೇಳುವದಾದರೆ ಮೂಸಿ ನೋಡುವದೆಲ್ಲಿ? ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನ್ನ ಇಷ್ಟಾನುಸಾರವಾಗಿ ದೇಹದಲ್ಲಿ ಇಟ್ಟಿದ್ದಾನೆ. ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವದು? ಆದರೆ ಅಂಗಗಳೇನೋ ಅನೇಕ, ದೇಹವು ಒಂದೇ. ಕಣ್ಣು ಕೈಗೆ--ನೀನು ನನಗೆ ಅವಶ್ಯವಿಲ್ಲವೆಂದೂ ತಲೆಯು ಕಾಲು ಗಳಿಗೆ--ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದ ಕ್ಕಾಗುವದಿಲ್ಲ. ಹೌದು, ಶರೀರದ ಅಂಗಗಳು ಬಹಳ ಬಲಹೀನವಾದವುಗಳೆಂದು ಕಂಡರೂ ಹೆಚ್ಚಾಗಿ ಅವಶ್ಯ ವಾಗಿವೆ. ಇದಲ್ಲದೆ ಅಲ್ಪ ಮಾನವುಳ್ಳವುಗಳೆಂದು ನಾವು ಎಣಿಸುವ ದೇಹದ ಅಂಗಗಳಿಗೆ ಹೆಚ್ಚಾದ ಗೌರವವನ್ನು ಕೊಡುತ್ತೇವೆ. ಆಗ ಅಂದವಿಲ್ಲದ ನಮ್ಮ ಅಂಗಗಳು ಹೆಚ್ಚು ಅಂದವಾಗಿರುತ್ತವೆ. ಅಂದವುಳ್ಳ ನಮ್ಮ ಅಂಗಗಳಿಗೆ ಯಾವ ಅವಶ್ಯಕತೆಯೂ ಇರುವದಿಲ್ಲ; ಆದರೆ ದೇವರು ಕೊರತೆಯುಳ್ಳ ಅಂಗ ವನ್ನು ಹೆಚ್ಚಾಗಿ ಗೌರವಿಸಿ ದೇಹವನ್ನು ಹದವಾಗಿ ಜೋಡಿಸಿದ್ದಾನೆ. ಹೀಗೆ ದೇಹದಲ್ಲಿ ಭೇದವಿರದೆ ಅಂಗಗಳು ಒಂದಕ್ಕೊಂದು ಚಿಂತಿಸುವವುಗಳಾಗಿ ರುತ್ತವೆ. ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ. ಈಗ ನೀವು ಕ್ರಿಸ್ತನ ದೇಹವಾಗಿದ್ದು ವಿಶೇಷ ವಾಗಿ ಅಂಗಗಳಾಗಿದ್ದೀರಿ. ದೇವರು ಕೆಲವರನ್ನು ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ; ಆಮೇಲೆ ಮಹತ್ಕಾರ್ಯ ಗಳನ್ನೂ ವಾಸಿಮಾಡುವ ವರಗಳನ್ನೂ ಸಹಾಯ ಮಾಡುವದನ್ನೂ ಕಾರ್ಯಗಳನ್ನು ನಿರ್ವಹಿಸುವದನ್ನೂ ವಿವಿಧ ಭಾಷೆಗಳನಾ ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿ ಗಳೋ? ಎಲ್ಲರೂ ಉಪದೇಶಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ? ವಾಸಿ ಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಭಾಷೆಗಳನ್ನಾಡುವರೋ? ಭಾಷೆಗಳ ಅರ್ಥವನ್ನು ಎಲ್ಲರೂ ಹೇಳುವರೋ?ಆದರೆ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಆದಾಗ್ಯೂ ನಾನು ನಿಮಗೆ ಉತ್ಕೃಷ್ಟವಾದ ಮಾರ್ಗವನ್ನು ತೋರಿಸುತ್ತೇನೆ. ಆದರೆ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಆದಾಗ್ಯೂ ನಾನು ನಿಮಗೆ ಉತ್ಕೃಷ್ಟವಾದ ಮಾರ್ಗವನ್ನು ತೋರಿಸುತ್ತೇನೆ.