Job · chapter 32 · verse 18
Job 32:18 in Kannada
ವಿಷಯಗಳಿಂದ ನಾನು ತುಂಬಿದ್ದೇನೆ: ನನ್ನೊಳಗಿನ ಆತ್ಮವು ನನ್ನನ್ನು ಇರಿಕಿಸುತ್ತದೆ.
Vishayagalinda naanu tumbiddene: nannolagina aatmavu nannannu irikisuttade.
Job 32:18 in English
- King James Version (KJV)
- For I am full of matter, the spirit within me constraineth me.
- World English Bible (WEB)
- For I am full of words. The spirit within me constrains me.
- American Standard Version (ASV)
- For I am full of words; The spirit within me constraineth me.
- Bible in Basic English (BBE)
- For I am full of words, I am unable to keep in my breath any longer:
- Darby Translation (DBY)
- For I am full of matter, the spirit within me constraineth me.
- Webster's Bible (WBS)
- For I am full of matter, the spirit within me constraineth me.
- Young's Literal Translation (YLT)
- For I have been full of words, Distressed me hath the spirit of my breast,
Read in context
- 16ಅವರು ಮಾತನಾಡದೇ ಇರುವದರಿಂದ ನಾನು ಎದುರು ನೋಡಿದೆನು; ಯಾಕಂದರೆ ಇನ್ನೂ ಉತ್ತರ ಕೊಡದೆ ನಿಂತಿದ್ದಾರೆ.
- 17ನಾನು ನನ್ನ ಪಾಲಾಗಿ ಉತ್ತರ ಕೊಡುವೆನು: ನಾನೇ ನನ್ನ ಅಭಿಪ್ರಾಯ ತಿಳಿಸುವೆನು.
- 18ವಿಷಯಗಳಿಂದ ನಾನು ತುಂಬಿದ್ದೇನೆ: ನನ್ನೊಳಗಿನ ಆತ್ಮವು ನನ್ನನ್ನು ಇರಿಕಿಸುತ್ತದೆ.
- 19ಇಗೋ, ನನ್ನ ಹೊಟ್ಟೆಯು ತೆರೆಯಲ್ಪಡದ ದ್ರಾಕ್ಷಾರಸದ ಹಾಗೆಯೂ ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಅದೆ.
- 20ನಾನು ಚೈತನ್ಯಗೊಳ್ಳುವಂತೆ ಮಾತನಾಡು ವೆನು: ನನ್ನ ತುಟಿಗಳನ್ನು ತೆರೆದು ಉತ್ತರ ಕೊಡು ವೆನು.
Cross references
- Psalm 39:3 ಕೀರ್ತನೆಗಳು 39:3ನನ್ನ ಹೃದಯದಲ್ಲಿ ಸಂತಾಪ ಉಕ್ಕಿತು; ನಾನು ಯೋಚಿಸುತ್ತಿರುವಲ್ಲಿ ಬೆಂಕಿಯು ರಿಯಿತು. ನನ್ನ ನಾಲಿಗೆಯಿಂದ ಮಾತಾಡಿದೆನು.
- Acts 4:20 ಅಪೊಸ್ತಲರ ಕೃತ್ಯಗಳು 4:20ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.
- Jeremiah 20:9 ಯೆರೆಮೀಯ 20:9ಆಗ ನಾನು ಆತನನ್ನು ಕುರಿತು ಏನೂ ಹೇಳುವದಿಲ್ಲ, ಇಲ್ಲವೆ ಆತನ ಹೆಸರಿನಲ್ಲಿ ಇನ್ನು ಮಾತನಾಡುವದೇ ಇಲ್ಲ ಎಂದು ಅಂದುಕೊಂಡೆನು; ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲ್ಪಟ್ಟಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು; ಬಿಗಿಹಿಡಿದು ದಣಿ ದೆನು. ನನ್ನಿಂದ ಆಗದೆ ಹೋಯಿತು.
- Ezekiel 3:14–27 ಯೆಹೆಜ್ಕೇಲನು 3:14–27ಹೀಗೆ ಆತ್ಮನು ನನ್ನನ್ನು ಎತ್ತಿಕೊಂಡು ಹೋದನು; ನಾನು ಕಹಿಯಲ್ಲಿಯೂ ಆತ್ಮನ ಉರಿಯ ಲ್ಲಿಯೂ ಹೋದೆನು; ಅದರೆ ಕರ್ತನ ಕೈ ನನ್ನ ಮೇಲೆ ಬಲವಾಗಿತ್ತು. ಆಮೇಲೆ ನಾನು ಕೆಬಾರ್ ನದಿಯ ದಡದಲ್ಲಿ ವಾಸಿಸುತ್ತಿದ್ದ ತೇಲ್ ಆಬೀಬಿನ ಸೆರೆಯವರ ಬಳಿಗೆ ಬಂದೆನು; ಅವರು ಕುಳಿತಿದ್ದ ಕಡೆಗೆ ನಾನು ಕುಳಿತು ಏಳು ದಿವಸಗಳು ಅವರ ಜೊತೆ ಆಶ್ಚರ್ಯವಾಗಿ ಉಳಿದೆನು. ಏಳು ದಿವಸಗಳಾದ ಮೇಲೆ ಆದದ್ದೇನಂದರೆ, ಕರ್ತನ ವಾಕ್ಯವು ಹೀಗೆ ಹೇಳುತ್ತಾ ನನ್ನ ಕಡೆಗೆ ಬಂದು -- ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು. ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು. ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು; ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ. ಆಗ ಅಲ್ಲಿ ಕರ್ತನ ಹಸ್ತವು ನನ್ನ ಮೇಲಿತ್ತು; ನನಗೆ ಆತನು ಹೇಳಿದ್ದೇನಂದರೆ--ಎದ್ದೇಳು, ಬಯಲು ಸೀಮೆಗೆ ಹೋಗು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು ಅಂದನು. ಆಮೇಲೆ ನಾನು ಎದ್ದು ಬಯಲು ಸೀಮೆಯ ಕಡೆಗೆ ಹೋದೆನು; ಇಗೋ, ಕರ್ತನ ಮಹಿಮೆಯ ಅಲ್ಲಿ ನಿಂತಿದೆ. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿದೆ. ಆಗ ನಾನು ಮುಖ ಕೆಳಗಾಗಿ ಬಿದ್ದೆನು. ಆಮೇಲೆ ಆತ್ಮನು ನನ್ನೊಳಗೆ ಪ್ರವೇಶಿಸಿ ನನ್ನನ್ನು ನನ್ನ ಪಾದದ ಮೇಲೆ ನಿಲ್ಲಿಸಿ ಮಾತಾಡಿ ನನಗೆ ಹೇಳಿದ್ದೇನೆಂದರೆ--ಹೋಗು, ನಿನ್ನ ಮನೆಯಲ್ಲಿ ನೀನು ಅಡಗಿಕೋ. ನೀನಾದರೋ ಓ ಮನುಷ್ಯ ಪುತ್ರನೇ, ಇಗೋ, ಅವರು ನಿನ್ನ ಮೇಲೆ ಬಂಧನ ಗಳನ್ನಿಟ್ಟು ಅವುಗಳಿಂದ ನಿನ್ನನ್ನು ಕಟ್ಟುವರು; ನೀನು ಅವರಿಂದ ಹೊರಗೆ ಬರಲು ಆಗುವದಿಲ್ಲ. ಇದಲ್ಲದೆ ನಾಲಿ ಗೆಯು ನಿನ್ನ ಅಂಗಳಕ್ಕೆ ಹತ್ತುವ ಹಾಗೆ ಮಾಡುವೆನು. ಆಗ ನೀನು ಮೂಕನಾಗಿ ಅವರನ್ನು ಗದರಿಸುವ ವನಾಗಲಾರೆ; ಯಾಕಂದರೆ ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ. ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
- 2 Corinthians 5:13–14 2 ಕೊರಿಂಥದವರಿಗೆ 5:13–14ನಮಗೆ ಬುದ್ದಿಪರವಶವಾಗಿದ್ದರೆ ಅದು ದೇವರಿಗಾಗಿ ಇರುತ್ತದೆ; ಇಲ್ಲವೆ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ನಿಮಿತ್ತವಾಗಿ ಇರುತ್ತದೆ. ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಹೀಗೆ ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಾವು ಹೀಗೆ ನಿಶ್ಚಯಿಸಿಕೊಳ್ಳುತ್ತೇವೆ.