Job · chapter 36 · verse 30
Job 36:30 in Kannada
ಇಗೋ, ತನ್ನ ಸುತ್ತಲೂ ಬೆಳಕನ್ನು ವಿಸ್ತರಿಸಿ ಸಮುದ್ರದ ಅಗಾಧವನ್ನು ಮುಚ್ಚುತ್ತಾನೆ.
Igo, tanna suttaloo belakannu vistarisi samudrada agaadhavannu muchchuttaane.
Job 36:30 in English
- King James Version (KJV)
- Behold, he spreadeth his light upon it, and covereth the bottom of the sea.
- World English Bible (WEB)
- Behold, he spreads his light around him. He covers the bottom of the sea.
- American Standard Version (ASV)
- Behold, he spreadeth his light around him; And he covereth the bottom of the sea.
- Bible in Basic English (BBE)
- See, he is stretching out his mist, covering the tops of the mountains with it.
- Darby Translation (DBY)
- Lo, he spreadeth his light around him, and covereth the bottom of the sea.
- Webster's Bible (WBS)
- Behold, he spreadeth his light upon it, and covereth the bottom of the sea.
- Young's Literal Translation (YLT)
- Lo, He hath spread over it His light, And the roots of the sea He hath covered,
Read in context
- 28ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ.
- 29ಮೋಡದ ವಿಸ್ತೀರ್ಣತೆಯನ್ನೂ ಆತನ ಗುಡಾರದ ಶಬ್ಧವನ್ನೂ ತಿಳುಕೊಳ್ಳುವವನಾರು?
- 30ಇಗೋ, ತನ್ನ ಸುತ್ತಲೂ ಬೆಳಕನ್ನು ವಿಸ್ತರಿಸಿ ಸಮುದ್ರದ ಅಗಾಧವನ್ನು ಮುಚ್ಚುತ್ತಾನೆ.
- 31ಅವುಗಳಿಂದ ಜನಗಳಿಗೆ ಆತನು ನ್ಯಾಯ ತೀರಿಸುತ್ತಾನೆ; ಸಮೃದ್ಧಿಯಾಗಿ ಆತನು ಆಹಾರ ಕೊಡುತ್ತಾನೆ.
- 32ಮೇಘಗಳಿಂದ ಬೆಳಕನ್ನು ಮುಚ್ಚು ತ್ತಾನೆ;ಅದರ ಶಬ್ದವು ಅದರ ವಿಷಯ ತಿಳಿಸುತ್ತದೆ; ಅವುಗಳ ಮಧ್ಯದಲ್ಲಿ ಬರುವ ಮೋಡದಿಂದ ಪ್ರಕಾಶಿಸ ದಂತೆ ಅಪ್ಪಣೆಕೊಡುತ್ತಾನೆ. ಪಶುಗಳು ಸಹ ಮಂಜಿನ ವಿಷಯವಾಗಿ ತಿಳಿಸುತ್ತವೆ.
Cross references
- Psalm 104:5–9 ಕೀರ್ತನೆಗಳು 104:5–9ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು. ನೀನು ಜಲಾಗಾಧದಿಂದ ವಸ್ತ್ರದ ಹಾಗೆ ಅದನ್ನು ಮುಚ್ಚಿದ್ದೀ; ಬೆಟ್ಟಗಳ ಮೇಲೆ ನೀರುಗಳು ನಿಂತವು. ಅವು ನಿನ್ನ ಗದರಿಕೆಯಿಂದ ಓಡಿಹೋದವು; ನಿನ್ನ ಗುಡುಗಿನ ಶಬ್ದದಿಂದ ಅವು ಓಡಿಹೋದವು. ಬೆಟ್ಟ ಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀನು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು. ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.
- Job 38:8–11 ಯೋಬನು 38:8–11ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು.
- Genesis 1:9 ಆದಿಕಾಂಡ 1:9ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು. ಅದು ಹಾಗೆಯೇ ಆಯಿತು.
- Exodus 14:28 ವಿಮೋಚನಕಾಂಡ 14:28ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.
- Psalm 18:11–16 ಕೀರ್ತನೆಗಳು 18:11–16ಕತ್ತಲನ್ನು ತನಗೆ ಮರೆಯ ಸ್ಥಳವಾಗಿ ಯೂ ಕತ್ತಲಿನ ನೀರುಗಳನ್ನು ಆಕಾಶದ ಮಂದವಾದ ಮೋಡಗಳನ್ನು ತನ್ನ ಸುತ್ತಲು ಡೇರೆಯಾಗಿಯೂ ಮಾಡಿ ದನು. ಆತನ ಮುಂದಿದ್ದ ಪ್ರಕಾಶದಿಂದ ಆತನ ಮಂದವಾದ ಮೋಡಗಳೂ ಕಲ್ಮಳೆಗಳೂ ಉರಿಗೆಂಡ ಗಳೂ ಹಾದು ಹೋದವು. ಕರ್ತನು ಆಕಾಶಗಳಲ್ಲಿ ಗುಡುಗಿದನು; ಮಹೋನ್ನತನು ಕಲ್ಮಳೆಯಿಂದಲೂ ಉರಿಗೆಂಡಗಳಿಂದಲೂ ತನ್ನ ಶಬ್ದವನ್ನು ಕೊಟ್ಟನು ಹೌದು, ತನ್ನ ಬಾಣಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚುಗಳನ್ನೆಸೆದು ಅವರನ್ನು ಗಲಿಬಿಲಿ ಮಾಡಿದನು. ಓ ಕರ್ತನೇ, ನಿನ್ನ ಗದರಿಕೆಯಿಂದಲೂ ನಿನ್ನ ಮೂಗಿನ ಶ್ವಾಸದ ಗಾಳಿಯಿಂದಲೂ ನೀರಿನ ಕಾಲುವೆಗಳ ನೆಲೆಯು ಕಾಣಬಂದು ಭೂಮಿಯ ಅಸ್ತಿವಾರಗಳು ಬೈಲಾದವು. ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು.
- Exodus 15:4–5 ವಿಮೋಚನಕಾಂಡ 15:4–5ಆತನು ಫರೋಹನ ರಥಗಳನ್ನೂ ಅವನ ಸೈನ್ಯವನ್ನೂ ಸಮುದ್ರ ದಲ್ಲಿ ನೂಕಿದ್ದಾನೆ; ಆಯಲ್ಪಟ್ಟ ಅವನ ಅಧಿಪತಿಗಳು ಸಹ ಕೆಂಪು ಸಮುದ್ರದಲ್ಲಿ ಮುಳುಗಿಹೋದರು. ಅಗಾಧಗಳು ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ (ಸಮುದ್ರದ) ತಳಕ್ಕೆ ಮುಳುಗಿದರು.
- Exodus 14:22 ವಿಮೋಚನಕಾಂಡ 14:22ಹೀಗೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.
- Job 38:25 ಯೋಬನು 38:25ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು?
- Job 38:34–35 ಯೋಬನು 38:34–35ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ? ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ?
- Luke 17:24 ಲೂಕನು 17:24ಯಾಕಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಆಕಾಶದ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿ ಇರುವನು.