Job · chapter 39 · verse 11
Job 39:11 in Kannada
ಅದರ ಶಕ್ತಿ ಬಹಳವಾಗಿರುವದರಿಂದ ಅದರಲ್ಲಿ ಭರವಸ ಇಡುವಿಯೋ? ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸುವಿಯೋ?
Adara shakti bahalavaagiruvadarinda adaralli bharavasa iduviyo? Ninna kelasavannu adakke oppisuviyo?
Job 39:11 in English
- King James Version (KJV)
- Wilt thou trust him, because his strength [is] great? or wilt thou leave thy labour to him?
- World English Bible (WEB)
- Will you trust him, because his strength is great? Or will you leave to him your labor?
- American Standard Version (ASV)
- Wilt thou trust him, because his strength is great? Or wilt thou leave to him thy labor?
- Bible in Basic English (BBE)
- Will you put your faith in him, because his strength is great? will you give the fruit of your work into his care?
- Darby Translation (DBY)
- Wilt thou put confidence in him, because his strength is great? and wilt thou leave thy labour to him?
- Webster's Bible (WBS)
- Wilt thou trust him, because his strength [is] great? or wilt thou leave thy labor to him?
- Young's Literal Translation (YLT)
- Dost thou trust in him because great [is] his power? And dost thou leave unto him thy labour?
Read in context
- 9ಕಾಡು ಕೋಣವು ನಿನ್ನನ್ನು ಸೇವಿಸಲು ಮನಸ್ಸಾಗಿ ರುವದೋ? ಇಲ್ಲವೆ ನಿನ್ನ ಗೋದಲಿಯ ಬಳಿಯಲ್ಲಿ ಉಳುಕೊಳ್ಳುವದೋ?
- 10ಕಾಡು ಕೋಣವನ್ನು ಹುರಿ ಯಿಂದ ಸಾಲಾಗಿ ಕಟ್ಟುವಿಯೋ? ಇಲ್ಲವೆ ಅದು ನಿನ್ನ ಹಿಂದೆ ಕಣಿವೆಗಳಿಗೆ ಹಲಿಗೆ ಹೊಡೆಯುವದೋ?
- 11ಅದರ ಶಕ್ತಿ ಬಹಳವಾಗಿರುವದರಿಂದ ಅದರಲ್ಲಿ ಭರವಸ ಇಡುವಿಯೋ? ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸುವಿಯೋ?
- 12ಅದು ನಿನ್ನ ಬೀಜವನ್ನು ಮನೆಗೆ ತರುವದೆಂದೂ ನಿನ್ನ ಕಣದಲ್ಲಿ ಕೂಡಿಸುವದೆಂದೂ ಅದನ್ನು ನಂಬುವಿಯೋ?
- 13ನೀನು ನವಿಲುಗಳಿಗೆ ಅಂದವಾದ ರೆಕ್ಕೆಗಳನ್ನು ಉಷ್ಟ್ರಪಕ್ಷಿಗೆ ಗರಿಗಳನ್ನೂ ರೆಕ್ಕೆಗಳನ್ನೂ ಕೊಟ್ಟಿರು ತ್ತೀಯೋ?
Cross references
- Psalm 20:7 ಕೀರ್ತನೆಗಳು 20:7ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳ ಲ್ಲಿಯೂ ಭರವಸವಿಡುತ್ತಾರೆ; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರನ್ನು ಜ್ಞಾಪಕಮಾಡುತ್ತೇವೆ.
- Psalm 147:10 ಕೀರ್ತನೆಗಳು 147:10ಆತನು ಕುದು ರೆಯ ಶಕ್ತಿಯಲ್ಲಿ ಸಂತೋಷಿಸುವದಿಲ್ಲ; ಮನುಷ್ಯನ ತೊಡೆಯಬಲವನ್ನು ಮೆಚ್ಚುವದಿಲ್ಲ.
- Psalm 144:14 ಕೀರ್ತನೆಗಳು 144:14ನಮ್ಮ ಎತ್ತುಗಳು ಪ್ರಯಾಸಪಡುವದಕ್ಕೆ ಬಲವುಳ್ಳ ವುಗಳಾಗಲಿ; ಒಳಗೆ ನುಗ್ಗುವದಾಗಲಿ ಹೊರಗೆ ಹೋಗು ವದಾಗಲಿ ಆಗದಿರಲಿ; ನಮ್ಮ ಬೀದಿಗಳಲ್ಲಿ ದೂರು ವದು ಇಲ್ಲದಿರಲಿ.ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
- Isaiah 30:6 ಯೆಶಾಯ 30:6ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ.
- Isaiah 31:1–3 ಯೆಶಾಯ 31:1–3ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವ ಬಲವನ್ನು ರಥವನ್ನು ಆಶ್ರಯಿಸುವವರಿಗೆ ಅಯ್ಯೊ! ರಥಗಳು ಬಹಳವೆಂದೂ ಸವಾರರು ಬಹು ಬಲಿಷ್ಠರೆಂದೂ ಅವರ ಮೇಲೆ ಭರವಸವಿಡುತ್ತಾರೆ. ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವದಿಲ್ಲ; ಇಲ್ಲವೆ ಕರ್ತನನ್ನು ಆಶ್ರಯಿಸು (ಹುಡು ಕು)ವದಿಲ್ಲ. ಆದಾಗ್ಯೂ ಆತನು ಜ್ಞಾನಿಯಾಗಿದ್ದಾನೆ ತನ್ನ ಮಾತನ್ನು ಹಿಂತೆಗೆಯದೆ ಕೇಡನ್ನು ಬರಮಾಡು ವನು; ಆದರೆ ಕೆಡುಕರ ಮನೆತನಕ್ಕೂ ಅನ್ಯಾಯಗಾ ರರ ಸಹಾಯಕರಿಗೂ ವಿರುದ್ಧವಾಗಿ ಏಳುವನು. ಐಗು ಪ್ತ್ಯರು ಮನುಷ್ಯಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವೇ; ಹೀಗಿರುವದ ರಿಂದ ಕರ್ತನು ತನ್ನ ಕೈಚಾಚುವಾಗ ಸಹಾಯ ಮಾಡಿ ದವನು ಮತ್ತು ಸಹಾಯಪಡೆದವನೂ ಬಿದ್ದುಹೋಗು ವನು, ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
- Genesis 42:26 ಆದಿಕಾಂಡ 42:26ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಅಲ್ಲಿಂದ ಹೋಗಿಬಿಟ್ಟರು.
- Genesis 9:2 ಆದಿಕಾಂಡ 9:2ಭೂಮಿಯ ಮೇಲಿರುವ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವುಗಳ ಮೇಲೆಯೂ ಸಮುದ್ರದ ಎಲ್ಲಾ ವಿಾನುಗಳ ಮೇಲೆಯೂ ನಿಮ್ಮ ಭಯವು ಮತ್ತು ನಿಮ್ಮ ಹೆದರಿಕೆಯು ಇರುವದು; ನಿಮ್ಮ ಕೈಗಳಲ್ಲಿ ಅವು ಕೊಡಲ್ಪಟ್ಟಿವೆ.
- Genesis 1:26 ಆದಿಕಾಂಡ 1:26ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.
- Proverbs 14:4 ಜ್ಞಾನೋಕ್ತಿಗಳು 14:4ಎತ್ತುಗಳು ಇಲ್ಲದೆ ಇರು ವಲ್ಲಿ ಗೋದಲಿಯು ಶುದ್ಧಿಯಾಗಿದೆ; ಎತ್ತಿನ ಬಲದಿಂದ ಬಹಳ ವೃದ್ಧಿಯು ಉಂಟಾಗುತ್ತದೆ.
- Isaiah 30:16 ಯೆಶಾಯ 30:16ಆದರೆ ನೀವು ಬೇಡವೇ ಬೇಡ, ನಾವು ಕುದುರೆಗಳ ಮೇಲೆ ಓಡುವೆವು ಅಂದುಕೊಂಡಿದ್ದರಿಂದ ನೀವು ಓಡೇ ಹೋಗುವಿರಿ, ಮತ್ತು--ನಾವು ವೇಗವಾಗಿ ಸವಾರಿ ಮಾಡುವೆವು ಅಂದುಕೊಂಡದ್ದರಿಂದ ಆ ವೇಗ ಗಳೇ ನಿಮ್ಮನ್ನು ಅಟ್ಟಿಬಿಡುವವು.
- Genesis 1:28 ಆದಿಕಾಂಡ 1:28ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು. ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು.
- Psalm 33:16–17 ಕೀರ್ತನೆಗಳು 33:16–17ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ. ಕುದುರೆಯು ಭದ್ರತೆಗೆ ವ್ಯರ್ಥವಾಗಿದೆ; ಇಲ್ಲವೆ ತನ್ನ ಅಧಿಕಬಲದಿಂದ ಯಾರನ್ನೂ ತಪ್ಪಿಸುವದಿಲ್ಲ.