Joel · chapter 3 · verse 1
Joel 3:1 in Kannada
ಇಗೋ, ಆ ದಿನಗಳಲ್ಲಿಯೂ ಆ ಸಮಯದಲ್ಲಿಯೂ ನಾನು ಯೆಹೂದದ ಮತ್ತು ಯೆರೂಸಲೇಮಿನ ಸೆರೆಯನ್ನು ತಿರುಗಿಸುವಾಗ
Igo, aa dinagalalliyoo aa samayadalliyoo naanu yehoodada mattu yeroosalemina sereyannu tirugisuvaaga
Joel 3:1 in English
- King James Version (KJV)
- For, behold, in those days, and in that time, when I shall bring again the captivity of Judah and Jerusalem,
- World English Bible (WEB)
- “For, behold, in those days, and in that time, when I restore the fortunes of Judah and Jerusalem,
- American Standard Version (ASV)
- For, behold, in those days, and in that time, when I shall bring back the captivity of Judah and Jerusalem,
- Bible in Basic English (BBE)
- For in those days and in that time, when I let the fate of Judah and Jerusalem be changed,
- Darby Translation (DBY)
- For behold, in those days, and in that time, when I shall turn again the captivity of Judah and Jerusalem,
- Webster's Bible (WBS)
- For behold, in those days, and in that time, when I shall bring again the captivity of Judah and Jerusalem,
- Young's Literal Translation (YLT)
- For lo, in those days, and in that time, When I turn back [to] the captivity of Judah and Jerusalem,
Read in context
- 1ಇಗೋ, ಆ ದಿನಗಳಲ್ಲಿಯೂ ಆ ಸಮಯದಲ್ಲಿಯೂ ನಾನು ಯೆಹೂದದ ಮತ್ತು ಯೆರೂಸಲೇಮಿನ ಸೆರೆಯನ್ನು ತಿರುಗಿಸುವಾಗ
- 2ಎಲ್ಲಾ ಜನಾಂಗಗಳನ್ನು ಕೂಡಿಸಿ ಯೆಹೋಷಾಫಾಟನ ತಗ್ಗಿಗೆ ಅವರನ್ನು ಇಳಿಸಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯ ಅವರ ಸಂಗಡ ವ್ಯಾಜ್ಯವಾಡುವೆನು; ಅವರು ಅವರನ್ನು ಜನಾಂಗಗಳಲ್ಲಿ ಚದರಿಸಿ ನನ್ನ ದೇಶವನ್ನು ಪಾಲಿಟ್ಟು
- 3ನನ್ನ ಜನರಿ ಗೋಸ್ಕರ ಚೀಟು ಹಾಕಿ ಹುಡುಗನನ್ನು ಸೂಳೆಗಾಗಿ ಕೊಟ್ಟು, ಹುಡುಗಿಯನ್ನು ದ್ರಾಕ್ಷಾರಸಕ್ಕಾಗಿ ಮಾರಿ ಅವರು ಕುಡಿಯುವ ಹಾಗೆ ಮಾರಿದ್ದಾರಲ್ಲಾ?
Cross references
- Zephaniah 3:19–20 ಚೆಫನ್ಯ 3:19–20ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ. ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.
- Jeremiah 30:3 ಯೆರೆಮೀಯ 30:3ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ನನ್ನ ಜನರಾದ ಇಸ್ರಾಯೇಲ್ ಮತ್ತು ಯೆಹೂದದ ಸೆರೆಯವರನ್ನು ತಿರುಗಿ ಬರ ಮಾಡುತ್ತೇನೆ; ಆಗ ನಾನು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ; ಅವರು ಅದನ್ನು ಸ್ವಾಧೀನ ಮಾಡಿಕೊಳ್ಳುವರು.
- Ezekiel 39:25 ಯೆಹೆಜ್ಕೇಲನು 39:25ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈಗ ನಾನು ಯಾಕೋಬಿನ ಸೆರೆಯನ್ನು ತಿರಿಗಿ ತರುತ್ತೇನೆ, ಸಂಪೂರ್ಣ ಇಸ್ರಾಯೇಲಿನ ಮನೆತನದ ವರ ಮೇಲೆ ಕರುಣೆಯಿಡುತ್ತೆನೆ; ನನ್ನ ಪರಿಶುದ್ಧ ಹೆಸರಿಗಾಗಿ ಸ್ವಗೌರವುಳ್ಳವನಾಗಿರುವೆನು.
- Amos 9:14 ಆಮೋಸ 9:14ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Jeremiah 29:14 ಯೆರೆಮೀಯ 29:14ನಿಮಗೆ ಕಂಡುಕೊಳ್ಳಲ್ಪಡುವೆನೆಂದು ಕರ್ತನು ಅನ್ನುತ್ತಾನೆ; ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿ ಬಿಟ್ಟ ಎಲ್ಲಾ ಜನಾಂಗಗಳಿಂದಲೂ ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನೆಂದು ಕರ್ತನು ಅನ್ನುತ್ತಾನೆ; ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿ ದೆನೋ ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.
- Psalm 85:1 ಕೀರ್ತನೆಗಳು 85:1ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.
- Deuteronomy 30:3 ಧರ್ಮೋಪದೇಶಕಾಂಡ 30:3ನಿನ್ನ ದೇವರಾದ ಕರ್ತನು ನಿನ್ನನ್ನು ಸೆರೆಯಿಂದ ಬಿಡಿಸಿ ನಿನ್ನ ಮೇಲೆ ಅಂತಃಕರಣಪಟ್ಟು ತಿರುಗಿಕೊಂಡು ನಿನ್ನನ್ನು ಚದುರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿನ್ನನ್ನು ಕೂಡಿಸುವನು.
- Jeremiah 23:3–8 ಯೆರೆಮೀಯ 23:3–8ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು. ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ; ಅವರು ಇನ್ನು ಮೇಲೆ ಭಯಪಡುವದೇ ಇಲ್ಲ, ಅಂಜುವದಿಲ್ಲ, ಕೊರತೆಪಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ. ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು. ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ. ಆದದರಿಂದ ಇಗೋ, ದಿನಗಳು ಬರುತ್ತವೆಂದು ಕರ್ತನು ಅನ್ನುತ್ತಾನೆ; ಆಗ ಇಸ್ರಾಯೇಲಿನ ಮಕ್ಕಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನ ಜೀವದಾಣೆ ಎಂದು ಹೇಳುವದೇ ಇಲ್ಲ. ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮನೆತನದವರ ಸಂತಾನವನ್ನು ಉತ್ತರ ದೇಶದಿಂದಲೂ ತಾನು ಅವರನ್ನು ಹೊರಡಿಸಿ ಬಿಟ್ಟಿದ್ದ ಎಲ್ಲಾ ದೇಶ ಗಳಿಂದಲೂ ಬರಮಾಡಿದನು ಎಂದು ಹೇಳುವರು; ಅವರು ತಮ್ಮ ದೇಶದಲ್ಲಿ ವಾಸಮಾಡುವರು.
- Jeremiah 30:18 ಯೆರೆಮೀಯ 30:18ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ; ಅವನ ನಿವಾಸಗಳನ್ನು ಕರುಣಿಸುತ್ತೇನೆ; ಪಟ್ಟಣವು ಅದರ ದಿಣ್ಣೆಯ ಮೇಲೆ ಕಟ್ಟಲ್ಪಡುವದು; ಅರಮನೆಯು ತಕ್ಕಸ್ಥಳದಲ್ಲಿ ನೆಲೆಯಾಗಿರುವದು.
- Jeremiah 16:15 ಯೆರೆಮೀಯ 16:15ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮಕ್ಕಳನ್ನು ಉತ್ತರ ದೇಶ ದೊಳಗಿಂದಲೂ ನಾನು ಅವರನ್ನು ಅಟ್ಟಿ ಬಿಟ್ಟಿದ್ದ ಸಮಸ್ತ ದೇಶಗಳೊಳಗಿಂದಲೂ ಬರಮಾಡಿ ನಾನು ಅವರ ಪಿತೃಗಳಿಗೆ ಕೊಟ್ಟಂಥ ಅವರ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು ಎಂದು ಹೇಳುವ ದಿನಗಳು ಬರುವವು.
- Ezekiel 38:14–18 ಯೆಹೆಜ್ಕೇಲನು 38:14–18ಆದದರಿಂದ ಮನುಷ್ಯಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಗೋಗನಿಗೆ ಪ್ರವಾ ದಿಸು ಮತ್ತು ಹೇಳು--ಯಾವಾಗ ನನ್ನ ಜನರಾದ ಇಸ್ರಾಯೇಲ್ಯರು ಸುಖವಾಗಿ ವಾಸಿಸುವರೋ ಆ ದಿನದಲ್ಲಿ ಅದು ನಿನಗೆ ತಿಳಿಯುವುದಿಲ್ಲವೋ ನೀನು ಉತ್ತರ ಭಾಗಗಳ ನಿನ್ನ ಸ್ಥಳದಿಂದ ಬರುವಿ; ನೀನೂ ನಿನ್ನ ಸಂಗಡ ಅನೇಕ ಜನರೂ ಕುದುರೆಗಳನ್ನು ಹತ್ತಿದ ವರಾಗಿ ಬಲವಾದ ಸೈನ್ಯವಾಗಿಯೂ ಮಹಾದಂಡಾ ಗಿಯೂ ಬರುವಿರಿ. ನೀನು ದೇಶವನ್ನು ಮುಚ್ಚುವ ಮೇಘದಂತೆ ನನ್ನ ಜನರಾಗಿರುವ ಇಸ್ರಾಯೇಲ್ಯರಿಗೆ ವಿರೋಧವಾಗಿ ಅವರ ಮೇಲೆ ಬರುವಿ; ಇದು ನಡೆ ಯುವ ಕೊನೆಯ ದಿವಸಗಳಲ್ಲಿ ಓ ಗೋಗನೇ, ನಾನು ಅವರ ಕಣ್ಣುಗಳ ಮುಂದೆ ನಿನ್ನಲ್ಲಿ ಪರಿಶುದ್ಧನಾಗುವಾಗ, ಅನ್ಯಜನಾಂಗಗಳು ನನ್ನನ್ನು ತಿಳಿಯುವ ಹಾಗೆ ನಿನ್ನನ್ನು ನನ್ನ ದೇಶಕ್ಕೆ ಬರಮಾಡುವೆನು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರ ಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗ ಳಿಗೆ ಮುಂಚೆ ಪ್ರವಾದಿಸಿದರಲ್ಲವೇ? ಆ ದಿನದಲ್ಲಿ ಗೋಗನು ಇಸ್ರಾಯೇಲ್ ದೇಶಕ್ಕೆ ವಿರೋಧವಾಗಿ ಬರುವಾಗ ರೋಷವು ನನ್ನ ಮುಖದ ಮೇಲೆ ಬರುವದೆಂದು ದೇವರಾದ ಕರ್ತನು ಹೇಳುತ್ತಾನೆ.
- Psalm 14:7 ಕೀರ್ತನೆಗಳು 14:7ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.