John · chapter 13 · verse 14
John 13:14 in Kannada
ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದರೆ ನೀವು ಸಹ ಒಬ್ಬರ ಕಾಲುಗಳನ್ನೊಬ್ಬರು ತೊಳೆಯತಕ್ಕದ್ದು.
Haagaadare nimma kartanoo bodhakanoo aagiruva naanu nimma kaalugalannu toledare neevu saha obbara kaalugalannobbaru toleyatakkaddu.
John 13:14 in English
- King James Version (KJV)
- If I then, [your] Lord and Master, have washed your feet; ye also ought to wash one another’s feet.
- World English Bible (WEB)
- If I then, the Lord and the Teacher, have washed your feet, you also ought to wash one another’s feet.
- American Standard Version (ASV)
- If I then, the Lord and the Teacher, have washed your feet, ye also ought to wash one another’s feet.
- Bible in Basic English (BBE)
- If then I, the Lord and the Master, have made your feet clean, it is right for you to make one another's feet clean.
- Darby Translation (DBY)
- If I therefore, the Lord and the Teacher, have washed your feet, ye also ought to wash one another's feet;
- Webster's Bible (WBS)
- If I then, [your] Lord and Master, have washed your feet; ye also ought to wash one another's feet.
- Young's Literal Translation (YLT)
- if then I did wash your feet — the Lord and the Teacher — ye also ought to wash one another's feet.
Read in context
- 12ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಉಡುಪುಗಳನ್ನು ಹಾಕಿಕೊಂಡು ತಿರಿಗಿ ಕೂತು ಕೊಂಡ ಮೇಲೆ ಅವರಿಗೆ--ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?
- 13ನೀವು ನನ್ನನ್ನು ಬೋಧ ಕನು ಮತ್ತು ಕರ್ತನು ಎಂದು ಕರೆಯುತ್ತೀರಿ; ನೀವು ಹೇಳುವದು ಸರಿ; ಯಾಕಂದರೆ ನಾನು ಅಂಥವನೇ ಹೌದು.
- 14ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದರೆ ನೀವು ಸಹ ಒಬ್ಬರ ಕಾಲುಗಳನ್ನೊಬ್ಬರು ತೊಳೆಯತಕ್ಕದ್ದು.
- 15ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.
- 16ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ತನ್ನ ಒಡೆಯನಿಗಿಂತ ಸೇವಕನು ದೊಡ್ಡವನಲ್ಲ; ಇಲ್ಲವೆ ಕಳುಹಿಸಲ್ಪಟ್ಟವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
Cross references
- 1 Peter 5:5 1 ಪೇತ್ರನು 5:5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.
- Acts 20:35 ಅಪೊಸ್ತಲರ ಕೃತ್ಯಗಳು 20:35ನೀವು ಹಾಗೆಯೇ ಕೆಲಸಮಾಡಿ ಬಲಹೀನ ರಿಗೆ ಹೀಗೆ ಆಧಾರವಾಗಿರತಕ್ಕದ್ದೆಂದೂ ಮತ್ತು--ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ ವೆಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳಬೇಕೆಂದೂ ಇವೆಲ್ಲವು ಗಳನ್ನು ನಾನು ನಿಮಗೆ ತಿಳಿಯಪಡಿಸಿದ್ದೇನೆ.
- Romans 12:16 ರೋಮಾಪುರದವರಿಗೆ 12:16ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
- Galatians 5:13 ಗಲಾತ್ಯದವರಿಗೆ 5:13ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
- Luke 22:26–27 ಲೂಕನು 22:26–27ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿದೊಡ್ಡವನಾಗಿರು ವವನು ಚಿಕ್ಕವನಂತೆ ಇರಲಿ; ಮುಖ್ಯಸ್ಥನಾಗಿರುವವನು ಸೇವೆ ಮಾಡುವವನಂತೆ ಇರಲಿ. ಹಾಗಾದರೆ ಯಾರು ದೊಡ್ಡವರು? ಊಟಕ್ಕೆ ಕೂತುಕೊಂಡಿರುವ ವನೋ ಇಲ್ಲವೆ ಸೇವೆ ಮಾಡುವವನೋ? ಊಟಕ್ಕೆ ಕೂತುಕೊಂಡವನಲ್ಲವೋ? ಆದರೆ ನಾನು ನಿಮ್ಮೊಳಗೆ ಸೇವೆ ಮಾಡುವವನಂತಿದ್ದೇನೆ.
- Mark 10:43–45 ಮಾರ್ಕನು 10:43–45ಆದರೆ ನಿಮ್ಮೊಳಗೆ ಹಾಗಿರಬಾರದು; ಮತ್ತು ನಿಮ್ಮೊಳಗೆ ದೊಡ್ಡವನಾಗಿರ ಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು. ನಿಮ್ಮಲ್ಲಿ ಮುಖ್ಯಸ್ಥನಾಗಬೇಕೆಂದಿರುವವನು ಎಲ್ಲರಿಗೆ ಸೇವಕನಾಗಿರಬೇಕು. ಯಾಕಂದರೆ ಮನುಷ್ಯಕು ಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಆದರೆ ಸೇವೆ ಮಾಡುವದಕ್ಕೂ ತನ್ನ ಪ್ರಾಣವನ್ನು ಅನೇಕರಿಗೋಸ್ಕರ ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
- 1 Peter 4:1 1 ಪೇತ್ರನು 4:1ಕ್ರಿಸ್ತನು ಶರೀರದಲ್ಲಿ ನಮಗೋಸ್ಕರ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಮನಸ್ಸನ್ನು ಧರಿಸಿಕೊಳ್ಳಿರಿ. ಯಾಕಂದರೆ ಶರೀರ ದಲ್ಲಿ ಬಾಧೆಪಟ್ಟವನು ಪಾಪಮಾಡುವದನ್ನು ನಿಲ್ಲಿಸಿ ಬಿಟ್ಟಿದ್ದಾನೆ.
- Hebrews 5:8–9 ಇಬ್ರಿಯರಿಗೆ 5:8–9ಹೀಗೆ ಆತನು ಮಗನಾಗಿದ್ದರೂ ತಾನು ಅನುಭ ವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತು ಕೊಂಡನು. ಇದಲ್ಲದೆ ಸಿದ್ಧಿಗೆ ಬಂದು ತನಗೆ ವಿಧೇಯ ರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಆತನು ಕರ್ತನಾದನು.
- Matthew 20:26–28 ಮತ್ತಾಯನು 20:26–28ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿ ರಲಿ ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆ ಂದಿದ್ದರೆ ಅವನು ನಿಮ್ಮ ಆಳಾಗಿರಲಿ. ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
- Philippians 2:2–8 ಫಿಲಿಪ್ಪಿಯವರಿಗೆ 2:2–8ಐಕ್ಯಮತ್ಯವುಳ್ಳವ ರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋ ನ್ಯತೆಯುಳ್ಳವರೂ ಒಂದೇ ಮನಸ್ಸಿನವರೂ ಆಗಿರ್ರಿ. ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ. ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ. ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು.
- 1 Corinthians 8:13 1 ಕೊರಿಂಥದವರಿಗೆ 8:13ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ.
- 2 Corinthians 8:9 2 ಕೊರಿಂಥದವರಿಗೆ 8:9ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.