John · chapter 16 · verse 14
John 16:14 in Kannada
ಆತನು ನನ್ನನ್ನು ಮಹಿಮೆಪಡಿ ಸುವನು; ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು.
Aatanu nannannu mahimepadi suvanu; aatanu nannadarolaginda tegedukondu nimage tiliyapadisuvanu.
John 16:14 in English
- King James Version (KJV)
- He shall glorify me: for he shall receive of mine, and shall shew [it] unto you.
- World English Bible (WEB)
- He will glorify me, for he will take from what is mine and will declare it to you.
- American Standard Version (ASV)
- He shall glorify me: for he shall take of mine, and shall declare [it] unto you.
- Bible in Basic English (BBE)
- He will give me glory, because he will take of what is mine, and make it clear to you.
- Darby Translation (DBY)
- He shall glorify me, for he shall receive of mine and shall announce [it] to you.
- Webster's Bible (WBS)
- He will glorify me: for he will receive of mine, and will show [it] to you.
- Young's Literal Translation (YLT)
- He will glorify me, because of mine He will take, and will tell to you.
Read in context
- 12ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ; ಆದರೆ ನೀವು ಈಗ ಅವುಗಳನ್ನು ಹೊರಲಾರಿರಿ;
- 13ಆದರೆ ಆತನು ಅಂದರೆ ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ಎಲ್ಲಾ ಸತ್ಯಕ್ಕೆ ನಡಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ತಾನು ಕೇಳಿದವುಗಳನ್ನೇ ಮಾತನಾಡುತ್ತಾನೆ; ಮುಂದೆ ಬರುವದಕ್ಕಿರುವ ವಿಷಯಗಳನ್ನು ಆತನು ನಿಮಗೆ ತೋರಿಸುವನು.
- 14ಆತನು ನನ್ನನ್ನು ಮಹಿಮೆಪಡಿ ಸುವನು; ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು.
- 15ತಂದೆಗೆ ಇರುವವು ಗಳೆಲ್ಲವು ನನ್ನವೇ; ಆದದರಿಂದಲೇ ಆತನು ನನ್ನದರೊ ಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು ಎಂದು ನಾನು ಹೇಳಿದೆನು.
- 16ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು.
Cross references
- 1 John 4:13–14 1 ಯೋಹಾನನು 4:13–14ಆತನು ನಮಗೆ ತನ್ನ ಆತ್ಮದಲ್ಲಿ ಪಾಲನ್ನು ಅನುಗ್ರಹಿಸದ್ದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆಂತಲೂ ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂತಲೂ ತಿಳಿದುಕೊಳ್ಳು ತ್ತೇವೆ. ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
- 2 Corinthians 3:14–18 2 ಕೊರಿಂಥದವರಿಗೆ 3:14–18ಆದರೆ ಅವರ ಬುದ್ದಿಮಂದವಾಯಿತು, ಆ ಮುಸುಕು ಕ್ರಿಸ್ತನಲ್ಲಿ ತೆಗೆದು ಹಾಕಲ್ಪಟ್ಟಿರುವದರಿಂದ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗೆಲ್ಲಾ ಈ ದಿನದ ವರೆಗೂ ಅವರಿಗೆ ಆ ಮುಸುಕು ತೆಗೆಯಲ್ಪಡದೆ ಉಳಿದಿದೆ. ಆದರೆ ಈ ದಿನದವರೆಗೂ ಮೋಶೆಯ ಗ್ರಂಥಪಾರಾಯಣವು ಆಗುವಾಗೆಲ್ಲಾ ಮುಸುಕು ಅವರ ಹೃದಯದ ಮೇಲೆ ಇರುತ್ತದೆ. ಆದಾಗ್ಯೂ ಅವರ ಹೃದಯವು ಕರ್ತನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವದು. ಕರ್ತನು ಆ ಆತ್ಮನೇ ಆಗಿದ್ದಾನೆ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.ಆದರೆ ನಾವೆಲ್ಲರೂ ತೆರೆದ ಮುಖವುಳ್ಳವರಾಗಿ ದರ್ಪಣದಲ್ಲಿ ಕಾಣುವಂತೆ ಕರ್ತನ ಮಹಿಮೆಯನ್ನು ನೋಡುತ್ತಾ ಕರ್ತನ ಆತ್ಮನಿಂದಲೋ ಎಂಬಂತೆ ಅದೇ ಸಾರೂಪ್ಯಕ್ಕೆ ಮಹಿಮೆಯಿಂದ ಮಹಿಮೆಗೆ ಮಾರ್ಪಡುತ್ತೇವೆ. ಆದರೆ ನಾವೆಲ್ಲರೂ ತೆರೆದ ಮುಖವುಳ್ಳವರಾಗಿ ದರ್ಪಣದಲ್ಲಿ ಕಾಣುವಂತೆ ಕರ್ತನ ಮಹಿಮೆಯನ್ನು ನೋಡುತ್ತಾ ಕರ್ತನ ಆತ್ಮನಿಂದಲೋ ಎಂಬಂತೆ ಅದೇ ಸಾರೂಪ್ಯಕ್ಕೆ ಮಹಿಮೆಯಿಂದ ಮಹಿಮೆಗೆ ಮಾರ್ಪಡುತ್ತೇವೆ.
- John 15:26 ಯೋಹಾನನು 15:26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆದರಿಕನು ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ ಆತನು ನನ್ನ ವಿಷಯವಾಗಿ ಸಾಕ್ಷಿ ಕೊಡುವನು.ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.
- Revelation 19:10 ಪ್ರಕಟನೆ 19:10ಆಗ ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮುಂದೆ ಬೀಳಲು ಅವನು--ನೀನು ಹಾಗೆ ಮಾಡಬೇಡ ನೋಡು, ನಾನು ನಿನಗೂ ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದ ನಿನ್ನ ಸಹೋದರ ರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೆ ಆರಾಧನೆ ಮಾಡು. ಯಾಕಂದರೆ ಯೇಸುವಿನ ವಿಷಯ
- 1 Peter 1:10–12 1 ಪೇತ್ರನು 1:10–12ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು. ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಪ್ರಭಾವವನ್ನೂ ಮುಂದಾಗಿ ಸಾಕ್ಷೀಕರಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವ ನೆಂಬದನ್ನು ಅವರು ಪರಿಶೋಧನೆ ಮಾಡಿದರು. ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.
- 1 Corinthians 12:3 1 ಕೊರಿಂಥದವರಿಗೆ 12:3ಹೀಗಿರುವದರಿಂದ ನಾನು ನಿಮಗೆ ತಿಳಿಸುವದೇನಂದರೆ, ದೇವರಾತ್ಮನಿಂದ ಮಾತನಾಡುವ ಯಾವ ಮನುಷ್ಯನಾದರೂ ಯೇಸು ವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ; ಪವಿತ್ರಾತ್ಮ ನಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.
- Galatians 5:5 ಗಲಾತ್ಯದವರಿಗೆ 5:5ನಾವಾದರೋ ಆತ್ಮನ ಮೂಲಕ ನಂಬಿಕೆಯಿಂದಾದ ನೀತಿಯ ನಿರೀಕ್ಷೆಗಾಗಿ ಎದುರು ನೋಡುತ್ತೇವೆ.
- Acts 2:32–36 ಅಪೊಸ್ತಲರ ಕೃತ್ಯಗಳು 2:32–36ಈ ಯೇಸುವನ್ನೇ ದೇವರು ಎಬ್ಬಿಸಿದನು. ಇದಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ. ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ. ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ. ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
- 1 Corinthians 2:8–10 1 ಕೊರಿಂಥದವರಿಗೆ 2:8–10ಇದನ್ನು (ಆ ಜ್ಞಾನವನ್ನು) ಇಹಲೋಕಾಧಿ ಪತಿಗಳಲ್ಲಿ ಯಾರೂ ಅರಿಯಲಿಲ್ಲ; ಅರಿತಿದ್ದರೆ ಅವರು ಮಹಿಮೆ ಯುಳ್ಳ ಕರ್ತನನ್ನು ಶಿಲುಬೆಗೆ ಹಾಕುತ್ತಿರಲಿಲ್ಲ. ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ. ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅವುಗಳನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ಹೌದು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸು ವವನಾಗಿದ್ದಾನೆ.
- 2 Corinthians 4:6 2 ಕೊರಿಂಥದವರಿಗೆ 4:6ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.
- John 7:39 ಯೋಹಾನನು 7:39(ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)