John · chapter 18 · verse 12
John 18:12 in Kannada
ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ.
Taruvaaya janara gumpoo naayakanoo yehoodyara adhikaarigaloo yesuvannu hididu katti.
John 18:12 in English
- King James Version (KJV)
- Then the band and the captain and officers of the Jews took Jesus, and bound him,
- World English Bible (WEB)
- So the detachment, the commanding officer, and the officers of the Jews seized Jesus and bound him,
- American Standard Version (ASV)
- So the band and the chief captain, and the officers of the Jews, seized Jesus and bound him,
- Bible in Basic English (BBE)
- Then the band and the chief captain and the police took Jesus and put cords round him.
- Darby Translation (DBY)
- The band therefore, and the chiliarch, and the officers of the Jews, took Jesus and bound him:
- Webster's Bible (WBS)
- Then the band, and the captain, and officers of the Jews took Jesus, and bound him,
- Young's Literal Translation (YLT)
- The band, therefore, and the captain, and the officers of the Jews, took hold on Jesus, and bound him,
Read in context
- 10ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು; ಆ ಆಳಿನ ಹೆಸರು ಮಲ್ಕನು.
- 11ಆಗ ಯೇಸು ಪೇತ್ರನಿಗೆ--ನಿನ್ನ ಕತ್ತಿಯನ್ನು ಒರೆಗೆಹಾಕು. ನನ್ನ ತಂದೆಯೂ ನನಗೆ ಕೊಟ್ಟ ಪಾತ್ರೆಯನ್ನು ನಾನು ಕುಡಿಯಬಾರದೋ ಎಂದು ಹೇಳಿದನು.
- 12ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ.
- 13ಆತನನ್ನು ಮೊದಲು ಅನ್ನನ ಬಳಿಗೆ ಕರೆದು ಕೊಂಡು ಹೋದರು; ಅವನು ಆ ವರುಷದ ಮಹಾ ಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.
- 14ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವದು ಹಿತವೆಂದು ಯೆಹೂದ್ಯರಿಗೆ ಆಲೋಚನೆ ಹೇಳಿಕೊಟ್ಟ ಕಾಯಫನು ಇವನೇ.
Cross references
- John 18:3 ಯೋಹಾನನು 18:3ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು.
- Matthew 26:57 ಮತ್ತಾಯನು 26:57ಮತ್ತು ಯೇಸುವನ್ನು ಹಿಡಿದಿದ್ದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ತಕ್ಕೊಂಡು ಹೋದರು; ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಕೂಡಿಬಂದಿದ್ದರು.
- Acts 21:37 ಅಪೊಸ್ತಲರ ಕೃತ್ಯಗಳು 21:37ಪೌಲನನ್ನು ಕೋಟೆಯೊಳಗೆ ಕರೆದುಕೊಂಡು ಹೋಗುವದಕ್ಕಿದ್ದಾಗ ಅವನು ಸಹಸ್ರಾಧಿಪತಿಗೆ-- ನಿನ್ನೊಂದಿಗೆ ನಾನು ಮಾತನಾಡಬಹುದೋ ಎಂದು ಕೇಳಿದಾಗ ಅವನು--ನೀನು ಗ್ರೀಕ್ ಮಾತನಾಡ ಬಲ್ಲೆಯಾ?
- Acts 21:31 ಅಪೊಸ್ತಲರ ಕೃತ್ಯಗಳು 21:31ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು.
- Matthew 27:2 ಮತ್ತಾಯನು 27:2ಮತ್ತು ಅವರು ಆತನನ್ನು ಕಟ್ಟಿ ತೆಗೆದುಕೊಂಡು ಹೋಗಿ ಅಧಿಪತಿಯಾದ ಪೊಂತ್ಯ ಪಿಲಾತನಿಗೆ ಒಪ್ಪಿಸಿದರು.
- Acts 22:24–28 ಅಪೊಸ್ತಲರ ಕೃತ್ಯಗಳು 22:24–28ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು; ಅವರು ಅವನನ್ನು ಬಾರುಗಳಿಂದ ಕಟ್ಟುತ್ತಿರುವಾಗ ಪೌಲನು ಹತ್ತಿರ ನಿಂತಿದ್ದ ಶತಾಧಿಪತಿಗೆ--ರೋಮ್ ನವನಾದ ಒಬ್ಬನನ್ನು ನ್ಯಾಯವಿಚಾರಣೆ ಮಾಡದೆ ಕೊರಡೆಯಿಂದ ಹೊಡಿಸುವದು ನಿಮಗೆ ನ್ಯಾಯವೋ ಎಂದು ಕೇಳಿದನು. ಆಗ ಶತಾಧಿಪತಿಯು ಅದನ್ನು ಕೇಳಿ ಅಲ್ಲಿಂದ ಹೋಗಿ ಮುಖ್ಯ ನಾಯಕನಿಗೆ--ನೀನು ಮಾಡುವದರಲ್ಲಿ ಎಚ್ಚರಿಕೆಯಾಗಿರು; ಈ ಮನುಷ್ಯನು ರೋಮ್ನವನು ಎಂದು ಹೇಳಿದನು. ಆಗ ಮುಖ್ಯ ನಾಯಕನು ಬಂದು ಅವನಿಗೆ--ನೀನು ರೋಮ್ನವನೋ? ನನಗೆ ಹೇಳು ಎಂದು ಕೇಳಿದ್ದಕ್ಕೆ ಅವನು--ಹೌದು ಅಂದನು. ಅದಕ್ಕೆ ಮುಖ್ಯ ನಾಯಕನು ಪ್ರತ್ಯುತ್ತರವಾಗಿ--ನಾನು ಬಹಳ ಹಣ ಕೊಟ್ಟು ಪೌರತ್ವವನ್ನು ಪಡೆದುಕೊಂಡಿರುವೆನು ಅಂದನು. ಅದಕ್ಕೆ ಪೌಲನು--ನಾನಾದರೋ ಹುಟ್ಟು ಪೌರತ್ವನು ಎಂದು ಹೇಳಿದನು.
- Mark 14:53 ಮಾರ್ಕನು 14:53ಇದಾದ ಮೇಲೆ ಅವರು ಯೇಸುವನ್ನು ಮಹಾ ಯಾಜಕನ ಬಳಿಗೆ ತೆಗೆದುಕೊಂಡು ಹೋದರು; ಆತನ ಸಂಗಡ ಪ್ರಧಾನ ಯಾಜಕರೆಲ್ಲರೂ ಹಿರಿಯರೂ ಶಾಸ್ತ್ರಿಗಳೂ ಅವನ ಬಳಿಗೆ ಕೂಡಿ ಬಂದರು.
- Luke 22:54 ಲೂಕನು 22:54ಆಗ ಅವರು ಆತನನ್ನು ತೆಗೆದುಕೊಂಡು ಮಹಾ ಯಾಜಕನ ಮನೆಯೊಳಕ್ಕೆ ಸಾಗಿಸಿಕೊಂಡು ಬಂದರು. ಪೇತ್ರನು ದೂರದಿಂದ ಹಿಂಬಾಲಿಸಿದನು.
- Mark 15:1 ಮಾರ್ಕನು 15:1ಬೆಳಗಾದ ಕೂಡಲೆ ಪ್ರಧಾನ ಯಾಜಕರು ಹಿರಿಯರ ಶಾಸ್ತ್ರಿಗಳ ಮತ್ತು ಸಭೆಯವ ರೆಲ್ಲರೊಂದಿಗೆ ಆಲೋಚನೆ ಮಾಡಿಕೊಂಡು ಯೇಸು ವನ್ನು ಕಟ್ಟಿತೆಗೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿ ದರು.
- Genesis 22:9 ಆದಿಕಾಂಡ 22:9ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.
- Judges 16:21 ನ್ಯಾಯಸ್ಥಾಪಕರು 16:21ಆದರೆ ಫಿಲಿಷ್ಟಿ ಯರು ಅವನನ್ನು ಹಿಡಿದು ಅವನ ಕಣ್ಣುಗಳನ್ನು ಕಿತ್ತು ಗಾಜಕ್ಕೆ ಒಯ್ದು ಎರಡು ಹಿತ್ತಾಳೆಯ ಸಂಕೋಲೆಗಳನ್ನು ಹಾಕಿದರು, ಅವನು ಸೆರೆಮನೆಯಲ್ಲಿ ಬೀಸುತ್ತಿದ್ದನು.
- Acts 23:17–22 ಅಪೊಸ್ತಲರ ಕೃತ್ಯಗಳು 23:17–22ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು. ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು. ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು. ಅದಕ್ಕೆ ಅವನು--ಪೌಲನ ವಿಷಯದಲ್ಲಿ ಯೆಹೂದ್ಯರು ಇನ್ನೂ ಸಂಪೂ ರ್ಣವಾಗಿ ವಿಚಾರಣೆ ಮಾಡುವವರೋ ಎಂಬಂತೆ ಅವನನ್ನು ನಾಳೆ ಆಲೋಚನಾಸಭೆಗೆ ತರುವದಕ್ಕಾಗಿ ಅವರು ನಿನ್ನನ್ನು ಬೇಡಿಕೊಳ್ಳುವದಕ್ಕೆ ಅಪೇಕ್ಷೆಪಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.