John · chapter 19 · verse 1
John 19:1 in Kannada
ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಆತನನ್ನು ಕೊರಡೆ ಯಿಂದ ಹೊಡಿಸಿದನು.
Aaga pilaatanu yesuvannu tegedukondu aatanannu korade yinda hodisidanu.
John 19:1 in English
- King James Version (KJV)
- Then Pilate therefore took Jesus, and scourged [him].
- World English Bible (WEB)
- So Pilate then took Jesus and flogged him.
- American Standard Version (ASV)
- Then Pilate therefore took Jesus, and scourged him.
- Bible in Basic English (BBE)
- Then Pilate took Jesus and had him whipped with cords.
- Darby Translation (DBY)
- Then Pilate therefore took Jesus and scourged [him].
- Webster's Bible (WBS)
- Then Pilate therefore took Jesus, and scourged [him] .
- Young's Literal Translation (YLT)
- Then, therefore, did Pilate take Jesus and scourge [him],
Read in context
- 1ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಆತನನ್ನು ಕೊರಡೆ ಯಿಂದ ಹೊಡಿಸಿದನು.
- 2ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಊದಾ ಬಣ್ಣದ ನಿಲುವಂಗಿಯನ್ನು ತೊಡಿಸಿ--
- 3ಯೆಹೂದ್ಯರ ಅರಸನೇ, ವಂದನೆ! ಎಂದು ಹೇಳಿ ತಮ್ಮ ಕೈಗಳಿಂದ ಆತನನ್ನು ಹೊಡೆದರು.
Cross references
- Isaiah 53:5 ಯೆಶಾಯ 53:5ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು.
- Matthew 20:19 ಮತ್ತಾಯನು 20:19ಇದಲ್ಲದೆ ಆತನನ್ನು ಹಾಸ್ಯ ಮಾಡು ವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು ಎಂದು ಹೇಳಿದನು.
- Isaiah 50:6 ಯೆಶಾಯ 50:6ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
- Luke 23:16 ಲೂಕನು 23:16ಹೀಗಿರುವದರಿಂದ ನಾನು ಆತನನ್ನು ಹೊಡಿಸಿ ಬಿಟ್ಟುಬಿಡುವೆನು ಅಂದನು.
- Luke 18:33 ಲೂಕನು 18:33ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
- Luke 23:23 ಲೂಕನು 23:23ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.
- Mark 10:33–34 ಮಾರ್ಕನು 10:33–34ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು. ಮತ್ತು ಅವರು ಆತನನ್ನು ಹಾಸ್ಯ ಮಾಡಿ ಕೊರಡೆಯಿಂದ ಹೊಡೆದು ಆತನ ಮೇಲೆ ಉಗುಳಿ ಆತನನ್ನು ಕೊಲ್ಲುವರು; ಮತ್ತು ಮೂರನೇ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
- Matthew 27:26–31 ಮತ್ತಾಯನು 27:26–31ಆಗ ಅವನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು. ತರುವಾಯ ಅಧಿಪತಿಯ ಸೈನಿಕರು ಯೇಸುವನ್ನು ಸಾಮಾನ್ಯವಾದ ಕೋಣೆಯೊಳಕ್ಕೆ ತೆಗೆದುಕೊಂಡು ಹೋಗಿ ಸೈನಿಕರ ಪೂರ್ಣ ತಂಡವನ್ನು ಆತನ ಮುಂದೆ ಕೂಡಿಸಿದರು. ಮತ್ತು ಅವರು ಆತನ ಬಟ್ಟೆಗಳನ್ನು ತೆಗೆದು ರಕ್ತವರ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿದರು. ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು. ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು. ಅವರು ಆತನಿಗೆ ಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ಆತ ನಿಂದ ತೆಗೆದು ಆತನ ಸ್ವಂತವಸ್ತ್ರವನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡು ಹೋದರು.
- Psalm 129:3 ಕೀರ್ತನೆಗಳು 129:3ಉಳುವವರು ನನ್ನ ಬೆನ್ನಿನ ಮೇಲೆ ಉತ್ತು ತಮ್ಮ ಸಾಲುಗಳನ್ನು ಉದ್ದ ಮಾಡಿದ್ದಾರೆ.
- Mark 15:15–20 ಮಾರ್ಕನು 15:15–20ಹೀಗೆ ಪಿಲಾತನು ಜನರನ್ನು ತೃಪ್ತಿಪಡಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಯಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು. ತರುವಾಯ ಸೈನಿಕರು ಆತನನ್ನು ಪ್ರೇತೋ ರಿಯಂ ಎಂಬ ಮಂದಿರದೊಳಕ್ಕೆ ತೆಗೆದುಕೊಂಡು ಬಂದು ಸೈನಿಕರನ್ನೆಲ್ಲಾ ಒಟ್ಟಾಗಿ ಕರೆದರು. ಅವರು ಆತನಿಗೆ ಊದಾ ಬಣ್ಣದ ವಸ್ತ್ರವನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟು ಆತನನ್ನು ವಂದಿಸುವದಕ್ಕೆ ಆರಂಭಿಸಿ--ಯೆಹೂ ದ್ಯರ ಅರಸನೇ, ನಿನಗೆ ವಂದನೆ ಅಂದರು. ಅವರು ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ತಮ್ಮ ಮೊಣಕಾಲೂರಿ ಆತನಿಗೆ ನಮಸ್ಕರಿಸಿದರು. ಹೀಗೆ ಅವರು ಆತನನ್ನು ಪರಿ ಹಾಸ್ಯಮಾಡಿದ ಮೇಲೆ ಊದಾ ಬಣ್ಣದ ಬಟ್ಟೆಯನ್ನು ಆತನಿಂದ ತೆಗೆದುಹಾಕಿ ಆತನ ಸ್ವಂತ ಬಟ್ಟೆಗಳನ್ನು ಆತನ ಮೇಲೆ ಹೊದಿಸಿ ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡುಹೋದರು.
- Matthew 23:34 ಮತ್ತಾಯನು 23:34ಆದದರಿಂದ ಇಗೋ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿ ಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಂದು ಶಿಲುಬೆಗೆ ಹಾಕುವಿರಿ; ಮತ್ತು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವ ರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸ
- Acts 16:22–23 ಅಪೊಸ್ತಲರ ಕೃತ್ಯಗಳು 16:22–23ಸಮೂಹವು ಒಟ್ಟಾಗಿ ಕೂಡಿ ಅವರಿಗೆ ವಿರೋಧವಾಗಿ ಎದ್ದಾಗ ನ್ಯಾಯಾಧಿಪತಿಗಳು ಅವರ ವಸ್ತ್ರಗಳನ್ನು ಹರಿದು ಅವರನ್ನು ಹೊಡೆಯುವಂತೆ ಅಪ್ಪಣೆಕೊಟ್ಟರು. ಅವರನ್ನು ಬಹಳವಾಗಿ ಹೊಡೆಸಿದ ಮೇಲೆ ಅವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಖಂಡಿತವಾಗಿ ಆಜ್ಞಾಪಿಸಿ ಸೆರೆಮನೆಯೊಳಗೆ ಹಾಕಿದರು.