John · chapter 5 · verse 10
John 5:10 in Kannada
ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ--ಇದು ಸಬ್ಬತ್ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.
Aadadarinda yehoodyaru svasthanaadavanige--idu sabbat dinavaagide; neenu haasigeyannu hottukolluvadu nyaayavalla andaru.
John 5:10 in English
- King James Version (KJV)
- The Jews therefore said unto him that was cured, It is the sabbath day: it is not lawful for thee to carry [thy] bed.
- World English Bible (WEB)
- So the Jews said to him who was cured, “It is the Sabbath. It is not lawful for you to carry the mat.”
- American Standard Version (ASV)
- So the Jews said unto him that was cured, It is the sabbath, and it is not lawful for thee to take up thy bed.
- Bible in Basic English (BBE)
- So the Jews said to the man who had been made well, It is the Sabbath; and it is against the law for you to take up your bed.
- Darby Translation (DBY)
- The Jews therefore said to the healed [man], It is sabbath, it is not permitted thee to take up thy couch.
- Webster's Bible (WBS)
- The Jews therefore said to him that was cured, it is the sabbath; it is not lawful for thee to carry [thy] bed.
- Young's Literal Translation (YLT)
- the Jews then said to him that hath been healed, 'It is a sabbath; it is not lawful to thee to take up the couch.'
Read in context
- 8ಯೇಸು ಅವನಿಗೆ-- ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅಂದನು.
- 9ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.
- 10ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ--ಇದು ಸಬ್ಬತ್ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.
- 11ಅವನು ಪ್ರತ್ಯುತ್ತರವಾಗಿ ಅವರಿಗೆ--ನನ್ನನ್ನು ಸ್ವಸ್ಥ ಮಾಡಿದಾತನೇ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನನಗೆ ಹೇಳಿದ್ದಾನೆ ಅಂದನು.
- 12ಅದಕ್ಕೆ ಅವರು ಅವನಿಗೆ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು ಎಂದು ಕೇಳಿದರು.
Cross references
- Jeremiah 17:21 ಯೆರೆಮೀಯ 17:21ಕರ್ತನು ಹೀಗೆ ಹೇಳುತ್ತಾನೆ--ನಿಮಗೆ ನೀವೇ ಎಚ್ಚರಿಕೆಯಾಗಿರ್ರಿ; ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತಕ್ಕೊಂಡು ಬರಬೇಡಿರಿ.
- John 9:16 ಯೋಹಾನನು 9:16ತರುವಾಯ ಫರಿಸಾಯರಲ್ಲಿ ಕೆಲವರು--ಈ ಮನುಷ್ಯನು ದೇವರಿಗೆ ಸಂಬಂಧಪಟ್ಟವನಲ್ಲ; ಯಾಕಂದರೆ ಈತನು ಸಬ್ಬತ್ ದಿನವನ್ನು ಕೈಕೊಳ್ಳುವವನಲ್ಲ ಅಂದರು. ಬೇರೆಯ ವರು--ಪಾಪಿಯಾದ ಒಬ್ಬ ಮನುಷ್ಯನು ಇಂಥ ಅದ್ಭುತ ಕಾರ್ಯಗಳನ್ನು ಹೇಗೆ ಮಾಡುತ್ತಾನೆ ಅಂದರು. ಹೀಗೆ ಅವರಲ್ಲಿ ಭೇದವುಂಟಾ
- Luke 6:2 ಲೂಕನು 6:2ಆದರೆ ಫರಿಸಾಯ ರಲ್ಲಿ ಕೆಲವರು ಅವರಿಗೆ--ಸಬ್ಬತ್ ದಿನಗಳಲ್ಲಿ ಮಾಡ ಬಾರದ್ದನ್ನು ನೀವು ಯಾಕೆ ಮಾಡುತ್ತೀರಿ ಅಂದರು.
- Luke 13:14 ಲೂಕನು 13:14ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು.
- Mark 3:4 ಮಾರ್ಕನು 3:4ಆತನು ಅವರಿಗೆ --ಸಬ್ಬತ್ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
- Nehemiah 13:15–21 ನೆಹೆಮೀಯ 13:15–21ಆ ದಿವಸಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ತುಗಳಲ್ಲಿ ಕೆಲವರು ದ್ರಾಕ್ಷೆ ತುಳಿಯುವದನ್ನೂ ಸಿವುಡುಗಳನ್ನು ತರುವದನ್ನೂ ಕತ್ತೆಗಳ ಮೇಲೆ ಹೇರಿ ಕೊಂಡು ಬರುವದನ್ನೂ ಮತ್ತು ಸಬ್ಬತ್ತುಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ ದ್ರಾಕ್ಷೆ ಹಣ್ಣು ಗಳನ್ನೂ ಅಂಜೂರದ ಹಣ್ಣುಗಳನ್ನೂ ಎಲ್ಲಾ ಹೊರೆ ಗಳನ್ನೂ ತರುವದನ್ನು ನಾನು ನೋಡಿದ್ದರಿಂದ ಮಾರುವ ದಿವಸದಲ್ಲಿ ನಾನು ಸಾಕ್ಷಿಯಾಗಿ ಹೇಳಿದೆನು. ಇದಲ್ಲದೆ ವಿಾನುಗಳನ್ನೂ ಎಲ್ಲಾ ಸರುಕುಗಳನ್ನೂ ತಕ್ಕೊಂಡು ಬಂದು ಸಬ್ಬತ್ ದಿವಸದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ತೂರಿನವರು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು. ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ, ಅವರಿಗೆ -- ಸಬ್ಬತ್ ದಿನವನ್ನು ನೀವು ಅಪವಿತ್ರಮಾಡುವ ಈ ಕೆಟ್ಟಕಾರ್ಯವೇನು? ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ ನಮ್ಮ ದೇವರು ನಮ್ಮ ಮೇಲೆಯೂ ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲ್ಲಿಲ್ಲವೋ? ಆದರೆ ನೀವು ಸಬ್ಬತ್ ದಿವಸವನ್ನು ಅಪವಿತ್ರ ಮಾಡುವದರಿಂದ ಇಸ್ರಾಯೇಲಿನ ಮೇಲೆ ಇನ್ನೂ ಉರಿಯನ್ನು ಬರಮಾಡುವಿರಿ. ಆದಕಾರಣ ಸಬ್ಬತ್ ಆಗುವದಕ್ಕಿಂತ ಮುಂಚೆ ಯೆರೂಸಲೇಮಿನ ಬಾಗಲು ಗಳಲ್ಲಿ ಕತ್ತಲು ಆಗಲಾರಂಭಿಸಿದಾಗ ಬಾಗಲುಗಳನ್ನು ಹಾಕುವ ಹಾಗೆಯೂ ಸಬ್ಬತ್ ದಿವಸವು ತೀರುವ ವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಮತ್ತು ಸಬ್ಬತ್ ದಿವಸದಲ್ಲಿ ಹೊರೆ ಏನಾದರೂ ಒಳಗೆ ತಾರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಇಟ್ಟೆನು. ಆಗ ವರ್ತಕರೂ ಎಲ್ಲಾ ಸರಕುಗಳನ್ನು ಮಾರುವವರೂ ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿಯನ್ನು ಕಳೆದರು. ಆಗ ನಾನು ಅವರನ್ನು ಗದರಿಸಿ ಅವರಿಗೆ--ನೀವು ಕೋಟೆಯ ಮುಂದೆ ಇಳುಕೊಂಡಿರುವದೇನು? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮ ಮೇಲೆ ಕೈ ಹಾಕುವೆನು ಅಂದೆನು. ಆ ಹೊತ್ತಿನಿಂದ ಅವರು ಸಬ್ಬತ್ ದಿವಸದಲ್ಲಿ ಬರಲೇ ಇಲ್ಲ;
- Mark 2:24 ಮಾರ್ಕನು 2:24ಅದಕ್ಕೆ ಫರಿಸಾಯರು ಆತನಿಗೆ--ಇಗೋ, ಅವರು ಸಬ್ಬತ್ ದಿನದಲ್ಲಿ ಮಾಡಬಾರದ್ದನ್ನು ಯಾಕೆ ಮಾಡು ತ್ತಾರೆ ಎಂದು ಕೇಳಿದರು.
- John 5:16 ಯೋಹಾನನು 5:16ಆತನು ಇವುಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸು ವನ್ನು ಹಿಂಸಿಸಿ ಆತನನ್ನು ಕೊಲ್ಲುವದಕ್ಕೆ ನೋಡಿದರು.
- Matthew 12:2–8 ಮತ್ತಾಯನು 12:2–8ಆದರೆ ಫರಿಸಾಯರು ಅದನ್ನು ನೋಡಿ ಆತನಿಗೆ--ಇಗೋ, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡ ಬಾರದ್ದನ್ನು ಮಾಡುತ್ತಾರೆ ಅಂದರು. ಅದಕ್ಕೆ ಆತನು ಅವರಿಗೆ--ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂದು ನೀವು ಓದಲಿಲ್ಲವೋ? ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು? ಇದಲ್ಲದೆ ಸಬ್ಬತ್ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ? ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ. ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ. ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.
- Luke 23:56 ಲೂಕನು 23:56ಅವರು ಹಿಂತಿರುಗಿದವರಾಗಿ ಪರಿಮಳ ದ್ಯವ್ಯವನ್ನು ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡು ಆಜ್ಞಾನು ಸಾರವಾಗಿ ಸಬ್ಬತ್ತಿನ ದಿನದಲ್ಲಿ ವಿಶ್ರಮಿಸಿಕೊಂಡರು.
- Jeremiah 17:27 ಯೆರೆಮೀಯ 17:27ಆದರೆ ನೀವು ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕೆಂದೂ ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಬಾರದೆಂದೂ ಹೇಳಿದ ನನ್ನ ಮಾತನ್ನು ಕೇಳದೆ ಹೋದರೆ, ಅದರ ಬಾಗಿಲುಗಳಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಆರಿ ಹೋಗದೆ ಯೆರೂಸಲೇಮಿನ ಅರಮನೆಗಳನ್ನು ದಹಿಸಿಬಿಡುವದು.
- Exodus 31:12–17 ವಿಮೋಚನಕಾಂಡ 31:12–17ಕರ್ತನು ಮೋಶೆಯೊಂದಿಗೆ ಮಾತನಾಡಿ-- ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ. ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು. ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು. ಹೀಗಿರ ಲಾಗಿ ಇಸ್ರಾಯೇಲ್ ಮಕ್ಕಳು ತಮ್ಮ ತಲತಲಾಂತರ ಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ತ ನ್ನು ಕೈಕೊಳ್ಳಬೇಕು. ನನಗೂ ಇಸ್ರಾಯೇಲ್ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.