John · chapter 8 · verse 14
John 8:14 in Kannada
ಯೇಸು ಪ್ರತ್ಯುತ್ತರವಾಗಿ ಅವರಿಗೆ--ನನ್ನ ವಿಷಯ ವಾಗಿ ನಾನು ಸಾಕ್ಷಿಕೊಟ್ಟಾಗ್ಯೂ ನನ್ನ ಸಾಕ್ಷಿ ನಿಜವೇ; ಯಾಕಂದರೆ ನಾನು ಎಲ್ಲಿಂದ ಬಂದೆನೋ ಮತ್ತು ಎಲ್ಲಿಗೆ ಹೋಗುತ್ತೇನೋ ನಾನು ಬಲ್ಲೆನು; ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನೀವು ಹೇಳಲಾರಿರಿ.
Yesu pratyuttaravaagi avarige--nanna vishaya vaagi naanu saakshikottaagyoo nanna saakshi nijave; yaakandare naanu ellinda bandeno mattu ellige hogutteno naanu ballenu; aadare naanu ellinda bandeno illave ellige hogutteno neevu helalaariri.
John 8:14 in English
- King James Version (KJV)
- Jesus answered and said unto them, Though I bear record of myself, [yet] my record is true: for I know whence I came, and whither I go; but ye cannot tell whence I come, and whither I go.
- World English Bible (WEB)
- Jesus answered them, “Even if I testify about myself, my testimony is true, for I know where I came from, and where I am going; but you don’t know where I came from, or where I am going.
- American Standard Version (ASV)
- Jesus answered and said unto them, Even if I bear witness of myself, my witness is true; for I know whence I came, and whither I go; but ye know not whence I come, or whither I go.
- Bible in Basic English (BBE)
- Jesus said in answer, Even if I give witness about myself, my witness is true, because I have knowledge of where I came from and where I am going; but you have no knowledge of where I come from or of where I am going.
- Darby Translation (DBY)
- Jesus answered and said to them, Even if I bear witness concerning myself, my witness is true, because I know whence I came and whither I go: but ye know not whence I come and whither I go.
- Webster's Bible (WBS)
- Jesus answered and said to them, Though I testify concerning myself, [yet] my testimony is true: for I know whence I came, and whither I go; but ye cannot tell whence I come, and whither I go.
- Young's Literal Translation (YLT)
- Jesus answered and said to them, 'And if I testify of myself — my testimony is true, because I have known whence I came, and whither I go, and ye — ye have not known whence I come, or whither I go.
Read in context
- 12ತರುವಾಯ ಯೇಸು ತಿರಿಗಿ ಮಾತನಾಡಿ ಅವರಿಗೆ--ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ; ಆದರೆ ಜೀವದ ಬೆಳಕನ್ನು ಹೊಂದುವನು ಎಂದು ಹೇಳಿದನು.
- 13ಆದಕಾರಣ ಫರಿಸಾಯರು ಆತ ನಿಗೆ--ನಿನ್ನ ವಿಷಯವಾಗಿ ನೀನೇ ಸಾಕ್ಷಿಕೊಡುತ್ತೀ; ನಿನ್ನ ಸಾಕ್ಷಿಯು ನಿಜವಲ್ಲ ಎಂದು ಹೇಳಿದರು.
- 14ಯೇಸು ಪ್ರತ್ಯುತ್ತರವಾಗಿ ಅವರಿಗೆ--ನನ್ನ ವಿಷಯ ವಾಗಿ ನಾನು ಸಾಕ್ಷಿಕೊಟ್ಟಾಗ್ಯೂ ನನ್ನ ಸಾಕ್ಷಿ ನಿಜವೇ; ಯಾಕಂದರೆ ನಾನು ಎಲ್ಲಿಂದ ಬಂದೆನೋ ಮತ್ತು ಎಲ್ಲಿಗೆ ಹೋಗುತ್ತೇನೋ ನಾನು ಬಲ್ಲೆನು; ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನೀವು ಹೇಳಲಾರಿರಿ.
- 15ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ; ಆದರೆ ಯಾವ ಮನುಷ್ಯನಿಗೂ ನಾನು ತೀರ್ಪುಮಾಡುವದಿಲ್ಲ.
- 16ನಾನು ತೀರ್ಪು ಮಾಡಿದರೂ ನನ್ನ ತೀರ್ಪು ನಿಜ ವಾದದ್ದೇ; ಯಾಕಂದರೆ ನಾನು ಒಂಟಿಗನಲ್ಲ, ಆದರೆ ನಾನೂ ನನ್ನನ್ನು ಕಳುಹಿಸಿದ ತಂದೆಯೂ ಇದ್ದೇವೆ.
Cross references
- John 13:3 ಯೋಹಾನನು 13:3ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟು ಬಂದಿದ್ದು ತಿರಿಗಿ ದೇವರ ಬಳಿಗೆ ಹೋಗುತ್ತೇನೆಂತಲೂ ಯೇಸು ತಿಳಿದು ಕೊಂಡು
- John 16:28 ಯೋಹಾನನು 16:28ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ತಿರಿಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.
- John 14:10 ಯೋಹಾನನು 14:10ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವದಿಲ್ಲ; ಆದರೆ ನನ್ನಲ್ಲಿ ವಾಸಿಸುತ್ತಿರುವ ತಂದೆಯೇ ಆ ಕಾರ್ಯಗಳನ್ನು ಮಾಡುತ್ತಾನೆ.
- John 8:42 ಯೋಹಾನನು 8:42ಯೇಸು ಅವರಿಗೆ--ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದ ಹೊರಟುಬಂದಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆದರೆ ಆತನೇ ನನ್ನನ್ನು ಕಳುಹಿಸಿದನು.
- Numbers 12:3 ಅರಣ್ಯಕಾಂಡ 12:3(ಆದರೆ ಮೋಶೆ ಎಂಬವನು ಭೂಮುಖದ ಮೇಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ಸಾತ್ವಿಕನಾಗಿದ್ದನು.)
- John 17:8 ಯೋಹಾನನು 17:8ನೀನು ನನಗೆ ಕೊಟ್ಟ ವಾಕ್ಯಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಅವುಗಳನ್ನು ಅಂಗೀಕರಿಸಿದ್ದಾರೆ; ನಾನು ನಿನ್ನ ಬಳಿಯಿಂದಲೇ ಹೊರಟುಬಂದವನೆಂದು ನಿಶ್ಚಯವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿದ್ದೀ ಯೆಂದು ನಂಬಿದ್ದಾರೆ.
- Revelation 3:14 ಪ್ರಕಟನೆ 3:14ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,
- John 10:15 ಯೋಹಾನನು 10:15ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.
- Nehemiah 5:14–19 ನೆಹೆಮೀಯ 5:14–19ಇದಲ್ಲದೆ ನಾನು ಯೆಹೂದ ದೇಶದಲ್ಲಿ ಅವರ ಅಧಿಪತಿಯಾಗಿದ್ದ ಕಾಲ ಮೊದಲುಗೊಂಡು ಅರಸ ನಾದ ಆರ್ತಷಸ್ತನ ಇಪ್ಪತ್ತನೇ ವರುಷ ಮೊದಲು ಗೊಂಡು ಮೂವತ್ತೆರಡನೇ ವರುಷದ ವರೆಗೆ ಹನ್ನೆರಡು ವರುಷವಾಗಿ ನಾನೂ ನನ್ನ ಸಹೋದರರೂ ಅಧಿ ಪತಿಯಾದವನ ರೊಟ್ಟಿಯನ್ನು ತಿನ್ನಲಿಲ್ಲ. ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ. ಇದಲ್ಲದೆ ನಾನು ಈ ಗೋಡೆಯ ಕಾರ್ಯದಲ್ಲಿ ನೆಲೆಯಾಗಿದ್ದೆನು. ನಾವು ಭೂಮಿಯನ್ನು ಕೊಂಡುಕೊಳ್ಳಲಿಲ್ಲ. ನನ್ನ ಸೇವಕರೆಲ್ಲರು ಕೆಲಸಕ್ಕೆ ಕೂಡಿ ಬಂದರು. ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರ ಹೊರ ತು ಯೆಹೂದ್ಯರೂ ಅಧಿಕಾರಸ್ಥರೂ ನೂರ ಐವತ್ತು ಮಂದಿ ನನ್ನ ಮೇಜಿಗೆ ಸೇರುತ್ತಿದ್ದರು. ಪ್ರತಿದಿನಕ್ಕೆ ಸಿದ್ಧಮಾಡಿದ್ದೇನಂದರೆ, ಒಂದು ಎತ್ತೂ ಉತ್ತಮವಾದ ಆರು ಕುರಿಗಳೂ; ಕೋಳಿಗಳೂ, ಹತ್ತು ದಿವಸಕ್ಕೆ ಒಂದು ಸಾರಿ ಸಕಲ ವಿಧವಾದ ದ್ರಾಕ್ಷಾರಸವೂ ನನಗೋಸ್ಕರ ಸಿದ್ಧಮಾಡಲ್ಪಟ್ಟವು. ಆದರೆ ಈ ಜನರ ಮೇಲೆ ಇದ್ದ ದಾಸತ್ವ ಭಾರವಾಗಿದ್ದದರಿಂದ ನಾನು ಅಧಿಪತಿಯಾದವನ ರೊಟ್ಟಿಯನ್ನು ಇದಕ್ಕೋಸ್ಕರ ಕೇಳಿದ್ದಿಲ್ಲ.ನನ್ನ ದೇವರೆ, ನನಗೆ ಮೇಲನ್ನು ಮಾಡಲು ನಾನು ಈ ಜನರಿಗೆ ಮಾಡಿದ ಎಲ್ಲವನ್ನು ಜ್ಞಾಪಕಮಾಡು. ನನ್ನ ದೇವರೆ, ನನಗೆ ಮೇಲನ್ನು ಮಾಡಲು ನಾನು ಈ ಜನರಿಗೆ ಮಾಡಿದ ಎಲ್ಲವನ್ನು ಜ್ಞಾಪಕಮಾಡು.
- John 10:36 ಯೋಹಾನನು 10:36ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ--ನೀನು ದೇವ ದೂಷಣೆ ಮಾಡುತ್ತೀ ಎಂದು ನೀವು ಅನ್ನುತ್ತೀರೋ?
- John 9:29–30 ಯೋಹಾನನು 9:29–30ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ನಮಗೆ ಗೊತ್ತಿಲ್ಲ ಅಂದರು. ಆಗ ಆ ಮನುಷ್ಯನು ಪ್ರತ್ಯುತ್ತರವಾಗಿ ಅವರಿಗೆ--ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯ ವನೆಂದು ನಿಮಗೆ ತಿಳಿಯದೆ ಇರುವದು ಆಶ್ಚರ್ಯವಾದ ವಿಷಯವಲ್ಲವೇ?
- 2 Corinthians 11:31 2 ಕೊರಿಂಥದವರಿಗೆ 11:31ನಾನು ಸುಳ್ಳಾಡು ವದಿಲ್ಲವೆಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯೂ ನಿರಂತರ ಸ್ತುತಿ ಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು.