John · chapter 9 · verse 14
John 9:14 in Kannada
ಯೇಸು ಕೆಸರುಮಾಡಿ ಅವನ ಕಣ್ಣುಗಳನ್ನು ತೆರೆದಾಗ ಅದು ಸಬ್ಬತ್ದಿನವಾಗಿತ್ತು.
Yesu kesarumaadi avana kannugalannu teredaaga adu sabbatdinavaagittu.
John 9:14 in English
- King James Version (KJV)
- And it was the sabbath day when Jesus made the clay, and opened his eyes.
- World English Bible (WEB)
- It was a Sabbath when Jesus made the mud and opened his eyes.
- American Standard Version (ASV)
- Now it was the sabbath on the day when Jesus made the clay, and opened his eyes.
- Bible in Basic English (BBE)
- Now the day on which the earth was mixed by Jesus and the man's eyes were made open was the Sabbath.
- Darby Translation (DBY)
- Now it was sabbath when Jesus made the mud and opened his eyes.
- Webster's Bible (WBS)
- And it was the sabbath when Jesus made the clay, and opened his eyes.
- Young's Literal Translation (YLT)
- and it was a sabbath when Jesus made the clay, and opened his eyes.
Read in context
- 12ಆಗ ಅವರು ಅವನಿಗೆ--ಅವನು ಎಲ್ಲಿದ್ದಾನೆ? ಅಂದಾಗ ಅವನು--ನನಗೆ ಗೊತ್ತಿಲ್ಲ ಅಂದನು;
- 13ಮೊದಲು ಕುರುಡನಾಗಿದ್ದವನನ್ನು ಅವರು ಫರಿಸಾ ಯರ ಬಳಿಗೆ ಕರೆದುಕೊಂಡು ಬಂದರು.
- 14ಯೇಸು ಕೆಸರುಮಾಡಿ ಅವನ ಕಣ್ಣುಗಳನ್ನು ತೆರೆದಾಗ ಅದು ಸಬ್ಬತ್ದಿನವಾಗಿತ್ತು.
- 15ಆಗ ಫರಿಸಾಯರು ಸಹ ತಿರಿಗಿ ಅವನು ಹೇಗೆ ದೃಷ್ಟಿಹೊಂದಿದ್ದಾನೆಂದು ಅವ ನನ್ನು ಕೇಳಲು ಅವನು ಅವರಿಗೆ--ಆತನು ಕೆಸರನ್ನು ನನ್ನ ಕಣ್ಣುಗಳ ಮೇಲೆ ಇಡಲು ನಾನು ತೊಳೆದುಕೊಂಡ ವನಾಗಿ ನೋಡುತ್ತೇನೆ ಅಂದನು.
- 16ತರುವಾಯ ಫರಿಸಾಯರಲ್ಲಿ ಕೆಲವರು--ಈ ಮನುಷ್ಯನು ದೇವರಿಗೆ ಸಂಬಂಧಪಟ್ಟವನಲ್ಲ; ಯಾಕಂದರೆ ಈತನು ಸಬ್ಬತ್ ದಿನವನ್ನು ಕೈಕೊಳ್ಳುವವನಲ್ಲ ಅಂದರು. ಬೇರೆಯ ವರು--ಪಾಪಿಯಾದ ಒಬ್ಬ ಮನುಷ್ಯನು ಇಂಥ ಅದ್ಭುತ ಕಾರ್ಯಗಳನ್ನು ಹೇಗೆ ಮಾಡುತ್ತಾನೆ ಅಂದರು. ಹೀಗೆ ಅವರಲ್ಲಿ ಭೇದವುಂಟಾ
Cross references
- John 5:9 ಯೋಹಾನನು 5:9ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.
- Matthew 12:1–14 ಮತ್ತಾಯನು 12:1–14ಆ ಸಮಯದಲ್ಲಿ ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲವನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಹಸಿದಿ ದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. ಆದರೆ ಫರಿಸಾಯರು ಅದನ್ನು ನೋಡಿ ಆತನಿಗೆ--ಇಗೋ, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡ ಬಾರದ್ದನ್ನು ಮಾಡುತ್ತಾರೆ ಅಂದರು. ಅದಕ್ಕೆ ಆತನು ಅವರಿಗೆ--ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂದು ನೀವು ಓದಲಿಲ್ಲವೋ? ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು? ಇದಲ್ಲದೆ ಸಬ್ಬತ್ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ? ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ. ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ. ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು. ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು. ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು. ಅದಕ್ಕಾತನು ಅವರಿಗೆ-- ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೆ ಇರುವನೇ? ಹಾಗಾದರೆ ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಶ್ರೇಷ್ಠನಾಗಿದ್ದಾನಲ್ಲವೇ? ಆದದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವದು ನ್ಯಾಯವಾಗಿದೆ ಎಂದು ಹೇಳಿದನು. ಆಗ ಆತನು ಆ ಮನುಷ್ಯನಿಗೆ--ನಿನ್ನ ಕೈಯನ್ನು ಮುಂದೆ ಚಾಚು ಅಂದನು. ಅವನು ಚಾಚಿದಾಗ ಅದು ಗುಣವಾಗಿ ಮತ್ತೊಂದರ ಹಾಗಾಯಿತು. ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು.
- Luke 13:10–17 ಲೂಕನು 13:10–17ಆತನು ಸಬ್ಬತ್ತಿನಲ್ಲಿ ಸಭಾಮಂದಿರದಲ್ಲಿ ಬೋಧಿ ಸುತ್ತಾ ಇದ್ದನು. ಆಗ ಇಗೋ, ಹದಿನೆಂಟು ವರುಷ ಗಳಿಂದಲೂ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬೊಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು; ಅವಳು ಯಾವ ರೀತಿಯಲ್ಲಿಯೂ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ--ಸ್ತ್ರೀಯೇ, ನೀನು ಈ ನಿನ್ನ ರೋಗದಿಂದ ಬಿಡುಗಡೆಯಾಗಿದ್ದೀ ಎಂದು ಹೇಳಿ ಆತನು ಆಕೆಯ ಮೇಲೆ ತನ್ನ ಕೈಗಳನ್ನು ಇಟ್ಟನು; ಕೂಡಲೆ ಆಕೆಯು ನೆಟ್ಟಗಾಗಿ ದೇವರನ್ನು ಮಹಿಮೆಪಡಿಸಿದಳು. ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ ಅವನಿಗೆ--ಕಪಟಿಯೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ತಿನಲ್ಲಿ ತನ್ನ ಎತ್ತನ್ನಾಗಲಿ ಇಲ್ಲವೆ ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವದಕ್ಕಾಗಿ ಹೋಗುವನಲ್ಲವೇ? ಹಾಗಾದರೆ ಇಗೋ, ಅಬ್ರ ಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರುಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನ ದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೋ ಅಂದನು. ಆತನು ಇವುಗಳನ್ನು ಹೇಳುತ್ತಿರುವಾಗ ಆತನ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು; ಆದರೆ ಜನರೆಲ್ಲಾ ಆತನಿಂದ ನಡೆದ ಎಲ್ಲಾ ಮಹತ್ತಾದ ಕಾರ್ಯಗಳಿಗಾಗಿ ಸಂತೋಷಪಟ್ಟರು.
- John 5:16 ಯೋಹಾನನು 5:16ಆತನು ಇವುಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸು ವನ್ನು ಹಿಂಸಿಸಿ ಆತನನ್ನು ಕೊಲ್ಲುವದಕ್ಕೆ ನೋಡಿದರು.
- Luke 14:1 ಲೂಕನು 14:1ಇದಾದ ಮೇಲೆ ಆತನು ಸಬ್ಬತ್ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಾ ಇದ್ದರು.
- Luke 6:1–11 ಲೂಕನು 6:1–11ಇದಾದ ಮೇಲೆ ಮೊದಲನೇ ಸಬ್ಬತ್ತಿನ ತರುವಾಯ ಎರಡನೇ ಸಬ್ಬತ್ತಿನಲ್ಲಿ ಆತನು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದನು. ಆಗ ಆತನ ಶಿಷ್ಯರು ತೆನೆಗಳನ್ನು ಕಿತ್ತು ತಮ್ಮ ಕೈಗಳಲ್ಲಿ ಹೊಸಗಿಕೊಂಡು ತಿನ್ನುತ್ತಿದ್ದರು. ಆದರೆ ಫರಿಸಾಯ ರಲ್ಲಿ ಕೆಲವರು ಅವರಿಗೆ--ಸಬ್ಬತ್ ದಿನಗಳಲ್ಲಿ ಮಾಡ ಬಾರದ್ದನ್ನು ನೀವು ಯಾಕೆ ಮಾಡುತ್ತೀರಿ ಅಂದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ದಾವೀದನೂ ತನ್ನ ಜೊತೆ ಇದ್ದವರೂ ಹಸಿದಾಗ ಅವನು ದೇವರ ಮನೆಯೊಳಗೆ ಹೋಗಿ ಯಾಜಕರು ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖ ರೊಟ್ಟಿಯನ್ನು ತೆಗೆದುಕೊಂಡು ತಿಂದು ತನ್ನ ಜೊತೆಯಲ್ಲಿದ್ದವರಿಗೆ ಸಹ ಹೇಗೆ ಕೊಟ್ಟನೆಂಬದನು ನೀವು ಓದಲಿಲ್ಲವೇ ಅಂದನು. ಆತನು ಅವ ರಿಗೆ--ಮನುಷ್ಯಕುಮಾರನು ಸಬ್ಬತ್ತಿಗೂ ಒಡೆಯನಾಗಿ ದ್ದಾನೆ ಅಂದನು. ಇದಾದ ಮೇಲೆ ಇನ್ನೊಂದು ಸಬ್ಬತ್ತಿನಲ್ಲಿ ಸಹ ಆತನು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿ ದನು; ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಶಾಸ್ತ್ರಿಗಳೂ ಫರಿಸಾಯರೂ ಆತನಿಗೆ ವಿರೋಧ ವಾಗಿ ತಪ್ಪು ಕಂಡುಹಿಡಿಯಬೇಕೆಂದು ಆತನು ಆ ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೇನೋ ಎಂದು ಕಾಯುತ್ತಿದ್ದರು. ಆದರೆ ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈ ಬತ್ತಿದವನಾದ ಆ ಮನುಷ್ಯನಿಗೆ--ಎದ್ದು ನಡುವೆ ನಿಂತುಕೋ ಅಂದಾಗ ಅವನು ಎದ್ದು ನಿಂತುಕೊಂಡನು. ತರು ವಾಯ ಯೇಸು ಅವರಿಗೆ--ನಿಮಗೆ ಒಂದು ಸಂಗತಿ ಯನ್ನು ನಾನು ಕೇಳುತ್ತೇನೆ; ಸಬ್ಬತ್ ದಿನಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ? ಇಲ್ಲವೆ ಕೆಟ್ಟದ್ದು ಮಾಡುವದೋ? ಪ್ರಾಣವನ್ನು ರಕ್ಷಿಸುವದೋ, ಇಲ್ಲವೆ ಅದನ್ನು ನಾಶಮಾಡುವದೋ ಅಂದನು. ಆತನು ಅವರೆಲ್ಲರ ಸುತ್ತಲೂ ನೋಡಿ ಆ ಮನುಷ್ಯನಿಗೆ--ನಿನ್ನ ಕೈ ಮುಂದಕ್ಕೆ ಚಾಚು ಅಂದನು. ಅವನು ಹಾಗೆಯೇ ಮಾಡಿದನು; ಆಗ ಅವನ ಕೈ ಗುಣವಾಗಿ ಮತ್ತೊಂದರಂತೆ ಆಯಿತು. ಆಗ ಅವರು ಕೋಪದಿಂದ ತುಂಬಿದವರಾಗಿ ಯೇಸುವಿಗೆ ತಾವು ಏನು ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
- John 7:21–23 ಯೋಹಾನನು 7:21–23ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಾನು ಒಂದು ಕ್ರಿಯೆಯನ್ನು ಮಾಡಿ ದೆನು; ಅದಕ್ಕೆ ನೀವೆಲ್ಲರು ಆಶ್ಚರ್ಯಪಡುತ್ತೀ ಹಾಗಿದ್ದರೆ ಮೋಶೆಯು ನಿಮಗೆ ಸುನ್ನತಿಯನ್ನು ಕೊಟ್ಟನು; (ಅದು ಮೋಶೆಯದಲ್ಲ, ಆದರೆ ಅದು ಪಿತೃಗಳದೇ). ನೀವು ಸಬ್ಬತ್ ದಿನದಲ್ಲಿ ಮನುಷ್ಯನಿಗೆ ಸುನ್ನತಿ ಮಾಡುತ್ತೀರಿ. ಒಬ್ಬ ಮನುಷ್ಯನು ಮೋಶೆಯ ನ್ಯಾಯಪ್ರಮಾಣವನ್ನು ವಿಾರದ ಹಾಗೆ ಸಬ್ಬತ್ ದಿನ ದಲ್ಲಿ ಸುನ್ನತಿಯನ್ನು ಮಾಡಿಸಿಕೊಂಡರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥ ಮಾಡಿದ್ದಕ್ಕೆ ನನ್ನ ಮೇಲೆ ನೀವು ಕೋಪಗೊಳ್ಳು ತ್ತೀರೋ?