John · chapter 9 · verse 40
John 9:40 in Kannada
ಆತ ನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತು ಗಳನ್ನು ಕೇಳಿ--ನಾವು ಸಹ ಕುರುಡರೋ ಎಂದು ಆತನನ್ನು ಕೇಳಿದರು.ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.
Aata nondigidda pharisaayaralli kelavaru ee maatu galannu keli--naavu saha kurudaro endu aatanannu kelidaru.adakke yesu avarige--neevu kurudaraagiddare nimmalli paapavu iruttira lilla. Aadare--naavu noduttevendu neevu heluvadarinda nimma paapavu ulidade andanu.
John 9:40 in English
- King James Version (KJV)
- And [some] of the Pharisees which were with him heard these words, and said unto him, Are we blind also?
- World English Bible (WEB)
- Those of the Pharisees who were with him heard these things, and said to him, “Are we also blind?”
- American Standard Version (ASV)
- Those of the Pharisees who were with him heard these things, and said unto him, Are we also blind?
- Bible in Basic English (BBE)
- These words came to the ears of the Pharisees who were with him and they said to him, Are we, then, blind?
- Darby Translation (DBY)
- And [some] of the Pharisees who were with him heard these things, and they said to him, Are we blind also?
- Webster's Bible (WBS)
- And [some] of the Pharisees who were with him heard these words, and said to him, Are we blind also?
- Young's Literal Translation (YLT)
- And those of the Pharisees who were with him heard these things, and they said to him, 'Are we also blind?'
Read in context
- 38ಆಗ ಅವನು--ಕರ್ತನೇ, ನಾನು ನಂಬುತ್ತೇನೆ ಎಂದು ಹೇಳಿ ಆತನನ್ನು ಆರಾಧಿಸಿದನು.
- 39ಯೇಸು--ನೋಡದವರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನ್ಯಾಯತೀರ್ಪಿಗೋಸ್ಕರ ನಾನು ಈ ಲೋಕಕ್ಕೆ ಬಂದಿದ್ದೇನೆ ಅಂದನು.
- 40ಆತ ನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತು ಗಳನ್ನು ಕೇಳಿ--ನಾವು ಸಹ ಕುರುಡರೋ ಎಂದು ಆತನನ್ನು ಕೇಳಿದರು.ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.
- 41ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.
Cross references
- Revelation 3:17 ಪ್ರಕಟನೆ 3:17ನೀನು--ನಾನು ಐಶ್ವರ್ಯವಂತನು, ಧನವೃದ್ಧಿಯುಳ್ಳವನು, ಯಾವದರ ಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ನಿರ್ಗತಿಕನು, ದರಿದ್ರನು, ಬಡವನು, ಕುರುಡನು, ಬೆತ್ತಲೆಯಾದವನು ಆಗಿರುವ ದನ್ನು ತಿಳಿಯದೆ ಇದ್ದೀ.
- Matthew 15:12–14 ಮತ್ತಾಯನು 15:12–14ತರುವಾಯ ಆತನ ಶಿಷ್ಯರು ಬಂದು--ಫರಿಸಾ ಯರು ನಿನ್ನ ಈ ಮಾತನ್ನು ಕೇಳಿದ ಮೇಲೆ ಅಭ್ಯಂತರ ಪಟ್ಟರೆಂದು ನಿನಗೆ ತಿಳಿಯಿತೋ ಎಂದು ಕೇಳಿದರು. ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ಪರ ಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊ ಂದು ಗಿಡವು ಬೇರು ಸಹಿತವಾಗಿ ಕಿತ್ತುಹಾಕಲ್ಪಡುವದು. ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು.
- Matthew 23:16–28 ಮತ್ತಾಯನು 23:16–28ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ? ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಡುವದಾದರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅಪರಾಧಿ ಯೆಂದೂ ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? ಆದದರಿಂದ ಯಜ್ಞವೇದಿಯ ಮೇಲೆ ಆಣೆಯಿಡು ವವನು ಅದರ ಮೇಲೆಯೂ ಅದರಲ್ಲಿರುವಂಥವುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ. ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ. ಪರಲೋಕದ ಮೇಲೆ ಆಣೆ ಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಕೂತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೇ ಸೋಸುವವರು ಮತ್ತು ಒಂಟೇ ನುಂಗುವವರು. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ. ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ; ಆದರೆ ನೀವು ಒಳಗೆ ಕಪಟದಿಂದಲೂ ದುಷ್ಟತನ ದಿಂದಲೂ ತುಂಬಿದವರಾಗಿದ್ದೀರಿ.
- John 7:47–52 ಯೋಹಾನನು 7:47–52ಆಗ ಫರಿಸಾಯರೂ ಅವರಿಗೆ--ನೀವು ಸಹ ಮೋಸ ಹೋದಿರೋ? ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಅವನ ಮೇಲೆ ವಿಶ್ವಾಸವಿಟ್ಟಿದ್ದಾರೋ? ಆದರೆ ನ್ಯಾಯಪ್ರಮಾಣ ವನ್ನರಿಯದ ಈ ಜನರು ಶಾಪಗ್ರಸ್ತರೇ ಎಂದು ಹೇಳಿದರು. ನಿಕೊದೇಮನು ಅವರಿಗೆ--(ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ಇವನು ಅವರಲ್ಲಿ ಒಬ್ಬ ನಾಗಿದ್ದನು.) ಒಬ್ಬನನ್ನು ವಿಚಾರಿಸಿ ಅವನು ಮಾಡು ವದೇನೆಂದು ತಿಳಿದುಕೊಳ್ಳುವದಕ್ಕಿಂತ ಮುಂಚೆ ಅವ ನನ್ನು ನಮ್ಮ ನ್ಯಾಯಪ್ರಮಾಣವು ತೀರ್ಪು ಮಾಡುವ ದುಂಟೇ ಅಂದನು. ಅವರು ಪ್ರತ್ಯುತ್ತರವಾಗಿ ಅವನಿಗೆ--ನೀನು ಸಹ ಗಲಿಲಾಯದವನೋ? ಗಲಿ ಲಾಯದಲ್ಲಿ ಪ್ರವಾದಿಯು ಏಳುವದೇ ಇಲ್ಲ, ಪರಿ ಶೋಧಿಸಿ ನೋಡು ಅಂದರು.ಪ್ರತಿಯೊಬ್ಬನು ತನ್ನ ಸ್ವಂತ ಮನೆಗೆ ಹೋದನು.
- Luke 11:39–54 ಲೂಕನು 11:39–54ಆಗ ಕರ್ತನು ಅವನಿಗೆ-- ಫರಿಸಾಯರಾದ ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನ ದಿಂದಲೂ ತುಂಬಿರುತ್ತದೆ ಮೂರ್ಖರೇ, ಹೊರ ಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ? ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು. ಆದರೆ ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಮರುಗಪತ್ರೆ ಸದಾಪು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು ನ್ಯಾಯತೀರ್ಪನ್ನೂ ದೇವರಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಇವುಗಳನ್ನು ತಪ್ಪದೆ ಮಾಡಿ ಬೇರೆಯವು ಗಳನ್ನು ಬಿಡದೆ ಮಾಡಬೇಕಾಗಿತ್ತು. ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸಭಾಮಂದಿರ ಗಳಲ್ಲಿ ಅತ್ಯುನ್ನತ ಸ್ಥಾನಗಳನ್ನೂ ಸಂತೆಗಳಲ್ಲಿ ವಂದನೆಗಳನ್ನೂ ಪ್ರೀತಿಸುತ್ತೀರಿ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೊ! ಯಾಕಂದರೆ ನೀವು ಕಾಣಿಸದ ಸಮಾಧಿಗಳಂತೆ ಇದ್ದೀರಿ; ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು ಎಂದು ಹೇಳಿದನು. ಆಗ ನ್ಯಾಯಶಾಸ್ತ್ರಿಗಳಲ್ಲಿ ಒಬ್ಬನು ಆತನಿಗೆ-- ಬೋಧಕನೇ, ನೀನು ಇವುಗಳನ್ನು ಹೇಳುವದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀ ಅಂದನು. ಅದಕ್ಕೆ ಆತನು--ನ್ಯಾಯಶಾಸ್ತ್ರಿಗಳಾದ ನಿಮಗೂ ಅಯ್ಯೋ! ಯಾಕಂದರೆ ಹೊರಲು ಕಠಿಣವಾದ ಹೊರೆ ಗಳನ್ನು ಮನುಷ್ಯರ ಮೇಲೆ ಹೊರಿಸಿ ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ನೀವು ಆ ಹೊರೆಗಳನ್ನು ಮುಟ್ಟು ವದಿಲ್ಲ. ನಿಮಗೆ ಅಯ್ಯೋ! ಯಾಕಂದರೆ ನಿಮ್ಮ ತಂದೆಗಳು ಪ್ರವಾದಿಗಳನ್ನು ಕೊಂದರು. ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. ಇದರಿಂದ ನಿಜವಾ ಗಿಯೂ ನಿಮ್ಮ ತಂದೆಗಳ ಕೃತ್ಯಗಳನ್ನು ನೀವು ಒಪ್ಪಿ ಕೊಳ್ಳುವಂತೆ ಸಾಕ್ಷೀಕರಿಸುತ್ತೀರಿ; ಯಾಕಂದರೆ ಅವರು ನಿಜವಾಗಿಯೂ ಅವರನ್ನು ಕೊಂದರು; ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. ಆದದರಿಂದ ದೇವರ ಜ್ಞಾನವು ಸಹ ಹೇಳಿದ್ದೇನಂದರೆ -- ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸು ವೆನು; ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸಿಸುವರು. ಹೀಗೆ ಜಗತ್ತಿನ ಅಸ್ತಿವಾರ ಮೊದಲುಗೊಂಡು ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಉತ್ತರ ಕೊಡಬೇಕಾಗಿರುವದು. ಹೇಬೆಲನ ರಕ್ತ ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು; ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ನ್ಯಾಯ ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಯಾಕಂದರೆ ನೀವು ಜ್ಞಾನದ ಬೀಗದ ಕೈಯನ್ನು ತಕ್ಕೊಂಡಿದ್ದೀರಿ, ನೀವಂತೂ ಒಳಗೆ ಪ್ರವೇಶಿಸಲಿಲ್ಲ. ಒಳಗೆ ಪ್ರವೇಶಿಸುತ್ತಿರುವವ ರಿಗೂ ನೀವು ತಡೆದಿರಿ ಎಂದು ಹೇಳಿದನು. ಆತನು ಅವರಿಗೆ ಈ ವಿಷಯಗಳನ್ನು ಹೇಳು ತ್ತಿದ್ದಾಗ ಶಾಸ್ತ್ರಿಗಳು ಮತ್ತು ಫರಿಸಾಯರು ಕೋಪಾವೇಶ ವುಳ್ಳವರಾಗಿ ಆತನು ಇನ್ನೂ ಅನೇಕವಾದವುಗಳ ವಿಷಯವಾಗಿ ಮಾತನಾಡುವಂತೆ ಆತನನ್ನು ಉದ್ರೇಕ ಗೊಳಿಸಲಾರಂಭಿಸಿದರು.ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು. ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು.
- John 9:34 ಯೋಹಾನನು 9:34ಅದಕ್ಕೆ ಅವರು ಅವನಿಗೆ--ನೀನು ಕೇವಲ ಪಾಪ ದಲ್ಲಿಯೇ ಹುಟ್ಟಿದವನು; ನೀನು ನಮಗೆ ಬೋಧಿಸು ತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
- Romans 2:19–22 ರೋಮಾಪುರದವರಿಗೆ 2:19–22ಇದಲ್ಲದೆ ನೀನೇ ಕುರುಡರ ಮಾರ್ಗದರ್ಶ ಕನೂ ಕತ್ತಲೆಯಲ್ಲಿರುವವರಿಗೆ ಬೆಳಕೂ ಮೂರ್ಖರ ಉಪಾಧ್ಯಾಯನೂ ಶಿಶುಗಳ ಬೋಧಕನೂ ನ್ಯಾಯ ಪ್ರಮಾಣದಲ್ಲಿರುವ ತಿಳುವಳಿಕೆಯ ಮತ್ತು ಸತ್ಯದ ಸ್ವರೂಪವುಳ್ಳವನೂ ಆಗಿದ್ದೀ ಎಂದು ನಂಬಿಕೊಂಡಿದ್ದೀ. ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ? ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ?
Original words (Greek)
- And · G2532καί kaí
- of · G1537ἐκ ek
- Pharisees · G5330Φαρισαῖος Pharisaîos
- were · G5607ὤν ṓn
- with · G3326μετά metá
- him · G846αὐτός autós
- heard · G191ἀκούω akoúō
- words · G5023ταῦτα taûta
- and · G2532καί kaí
- said · G2036ἔπω épō
- him · G846αὐτός autós
- Are · G2070ἐσμέν esmén
- we · G2249ἡμεῖς hēmeîs
- blind · G5185τυφλός typhlós
- also · G2532καί kaí