Joshua · chapter 1 · verse 13
Joshua 1:13 in Kannada
ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ವಾಕ್ಯವನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಕರ್ತನು ನಿಮ್ಮನ್ನು ವಿಶ್ರಾಂತಿಪಡಿಸಿ ನಿಮಗೆ ಈ ದೇಶವನ್ನು ಕೊಟ್ಟನು.
Kartana sevakanaada mosheyu nimage aajnyaapisida vaakyavannu jnyaapaka maadikolliri. Nimma devaraada kartanu nimmannu vishraantipadisi nimage ee deshavannu kottanu.
Joshua 1:13 in English
- King James Version (KJV)
- Remember the word which Moses the servant of the LORD commanded you, saying, The LORD your God hath given you rest, and hath given you this land.
- World English Bible (WEB)
- “Remember the word which Moses the servant of the LORD commanded you, saying, ‘The LORD your God gives you rest, and will give you this land.
- American Standard Version (ASV)
- Remember the word which Moses the servant of Jehovah commanded you, saying, Jehovah your God giveth you rest, and will give you this land.
- Bible in Basic English (BBE)
- Keep in mind what Moses, the servant of the Lord, said to you, The Lord your God is sending you rest and will give you this land.
- Darby Translation (DBY)
- Remember the word that Moses the servant of Jehovah commanded you, saying, Jehovah your God has given you rest and has given you this land.
- Webster's Bible (WBS)
- Remember the word which Moses the servant of the LORD commanded you, saying, The LORD your God hath given you rest, and hath given you this land.
- Young's Literal Translation (YLT)
- 'Remember the word which Moses, servant of Jehovah, commanded you, saying, Jehovah your God is giving rest to you, and He hath given to you this land;
Read in context
- 11ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.
- 12ಇದಲ್ಲದೆ ಯೆಹೋಶುವನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧಗೋತ್ರದವರಿಗೂ ಹೇಳಿದ್ದೇನಂದರೆ --
- 13ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ವಾಕ್ಯವನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಕರ್ತನು ನಿಮ್ಮನ್ನು ವಿಶ್ರಾಂತಿಪಡಿಸಿ ನಿಮಗೆ ಈ ದೇಶವನ್ನು ಕೊಟ್ಟನು.
- 14ಹೇಗಂದರೆ ನಿಮ್ಮ ಹೆಂಡತಿಯರೂ ಚಿಕ್ಕವರೂ ಪಶುಗಳೂ ಮೋಶೆ ನಿಮಗೆ ಕೊಟ್ಟ ಯೊರ್ದನಿಗೆ ಈಚೆ ಇರುವ ದೇಶದಲ್ಲೇ ಇರಲಿ; ಆದರೆ ನಿಮ್ಮಲ್ಲಿ ಇರುವ ಪರಾಕ್ರಮಶಾಲಿಗಳೆಲ್ಲಾ ನಿಮ್ಮ ಸಹೋದರರ ಮುಂದೆ ಯುದ್ಧಸನ್ನದ್ಧರಾಗಿ ನಡೆದುಹೋಗಿ
- 15ಕರ್ತನು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿ ಪಡಿಸಿ ಅವರು ನಿಮ್ಮ ದೇವರಾದ ಕರ್ತನು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವ ವರೆಗೆ ಅವರಿಗೆ ಸಹಾಯ ಮಾಡಿರಿ; ತರುವಾಯ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸ್ವಾಸ್ತ್ಯವಾದ ದೇಶಕ್ಕೆ ತಿರಿಗಿ ಬಂದು ಅದನ್ನು ಅನುಭವಿಸಿರಿ ಅಂದನು.
Cross references
- Numbers 32:20–28 ಅರಣ್ಯಕಾಂಡ 32:20–28ಆಗ ಮೋಶೆಯು ಇವರಿಗೆ--ನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆ ನಿಮ್ಮಲ್ಲಿ ಯುದ್ಧಕ್ಕೆ ಸಿದ್ಧವಾದವರೆಲ್ಲರು ಕರ್ತನು ತನ್ನ ಶತ್ರುಗಳನ್ನು ತನ್ನ ಸನ್ನಿಧಿಯಿಂದ ಹೊರಡಿಸುವ ವರೆಗೆ ಕರ್ತನ ಮುಂದೆ ಯೊರ್ದನ್ ನದಿಯನ್ನು ದಾಟಿದರೆ ದೇಶವು ಕರ್ತನ ಮುಂದೆ ವಶವಾದ ತರುವಾಯ ನೀವು ಕರ್ತನಿಂದಲೂ ಇಸ್ರಾ ಯೇಲ್ಯರಿಂದಲೂ ನಿರಪರಾಧಿಗಳಾಗಿದ್ದು ತಿರುಗಿಕೊಳ್ಳ ಬಹುದು; ಈ ದೇಶವು ಕರ್ತನ ಮುಂದೆ ನಿಮ್ಮ ಸ್ವಾಸ್ತ್ಯಕ್ಕಾಗುವದು. ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಕರ್ತನಿಗೆ ವಿರೋಧವಾಗಿ ಪಾಪಮಾಡಿದವರಾಗುವಿರಿ; ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವದೆಂದು ತಿಳುಕೊಳ್ಳಿರಿ. ನಿಮ್ಮ ಮಕ್ಕಳಿ ಗೋಸ್ಕರ ಪಟ್ಟಣಗಳನ್ನೂ ನಿಮ್ಮ ಕುರಿಗಳಿಗೋಸ್ಕರ ಹಟ್ಟಿಗಳನ್ನೂ ಕಟ್ಟಿ ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ ಎಂದು ಹೇಳಿದನು. ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು. ನಮ್ಮ ಮಕ್ಕಳೂ ಹೆಂಡತಿಯರೂ ಸಂಪತ್ತೂ ಪಶು ಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ. ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರು ನಮ್ಮ ಒಡೆಯನು ಹೇಳಿದ ಪ್ರಕಾರ ಕರ್ತನ ಮುಂದೆ ಯುದ್ಧಕ್ಕೆ ದಾಟಿ ಹೋಗುವರು ಅಂದರು. ಆಗ ಮೋಶೆಯು ಅವರ ವಿಷಯವಾಗಿ ಯಾಜಕ ನಾದ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋ ಶುವನಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದನು.
- Deuteronomy 3:18–20 ಧರ್ಮೋಪದೇಶಕಾಂಡ 3:18–20ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ನಿಮಗೆ ಈ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆ; ಯುದ್ಧಸ್ಥ ರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲ್ ಮಕ್ಕಳ ಮುಂದೆ ಆಯುಧ ಧರಿಸಿ ಕೊಂಡು ಹಾದುಹೋಗಬೇಕು. ನಿಮ್ಮ ಹೆಂಡತಿ ಯರೂ ಮಕ್ಕಳೂ ಪಶುಗಳೂ (ನಿಮಗೆ ಬಹಳ ಪಶುಗಳಿವೆ ಎಂದು ನನಗೆ ತಿಳಿದಿದೆ) ಕರ್ತನು ನಿಮಗಾದ ಹಾಗೆ ನಿಮ್ಮ ಸಹೋದರರಿಗೂ ವಿಶ್ರಾಂತಿ ಕೊಡುವ ವರೆಗೂ ನಿಮ್ಮ ದೇವರಾದ ಕರ್ತನು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವ ವರೆಗೆ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಬೇಕು; ಆ ಮೇಲೆ ನಾನು ನಿಮಗೆ ಕೊಟ್ಟ ನಿಮ್ಮ ನಿಮ್ಮ ಸ್ವಾಸ್ತ್ಯಗಳ ಬಳಿಗೆ ತಿರುಗಬಹುದು ಎಂಬದು.
- Joshua 22:1–4 ಯೆಹೋಶುವ 22:1–4ಆಗ ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರ ದವರನ್ನೂ ಕರಿಸಿ ಅವರಿಗೆ-- ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ನೀವು ಕೈಕೊಂಡು ನಾನು ನಿಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನನ್ನ ಮಾತಿಗೆ ವಿಧೇಯರಾದಿರಿ. ನೀವು ಬಹಳ ದಿವಸ ಗಳಿಂದ ಇಂದಿನ ವರೆಗೂ ನಿಮ್ಮ ಸಹೋದರರನ್ನು ಕೈ ಬಿಡದೆ ನಿಮ್ಮ ದೇವರಾದ ಕರ್ತನು ಆಜ್ಞಾಪಿಸಿದ ಅಪ್ಪಣೆಯನ್ನು ಕೈಕೊಂಡಿರಿ. ಈಗ ನಿಮ್ಮ ದೇವರಾದ ಕರ್ತನು ಅವರಿಗೆ ವಾಗ್ದಾನಮಾಡಿದ ಪ್ರಕಾರ ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟನು. ಮತ್ತು ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ನಿಮಗೆ ಕೊಟ್ಟ ಸ್ವಾಸ್ತ್ಯವಾದ ನಿಮ್ಮ ದೇಶದಲ್ಲಿರುವ ನಿಮ್ಮ ಡೇರೆಗಳಿಗೆ ತಿರಿಗಿ ಹೋಗಿರಿ.