Joshua · chapter 17 · verse 18
Joshua 17:18 in Kannada
ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.
Adu adaviyaagide; adannu neevu kadiya beku. Adara antyagala varegoo nimmadaagiruvadu. Kabbinada rathagaliddaroo avaru balishtharaagiddaroo neevu avarannu horadisi biduviri andanu.
Joshua 17:18 in English
- King James Version (KJV)
- But the mountain shall be thine; for it [is] a wood, and thou shalt cut it down: and the outgoings of it shall be thine: for thou shalt drive out the Canaanites, though they have iron chariots, [and] though they [be] strong.
- World English Bible (WEB)
- but the hill country shall be yours. Although it is a forest, you shall cut it down, and it’s farthest extent shall be yours; for you shall drive out the Canaanites, though they have chariots of iron, and though they are strong.”
- American Standard Version (ASV)
- but the hill-country shall be thine; for though it is a forest, thou shalt cut it down, and the goings out thereof shall be thine; for thou shalt drive out the Canaanites, though they have chariots of iron, and though they are strong.
- Bible in Basic English (BBE)
- For the hill-country of Gilead will be yours ... the woodland and cut down ... its outskirts will be yours ... get the Canaanites out, for they have iron war-carriages ... strong.
- Darby Translation (DBY)
- but the hill-country shall be thine, as it is a wood, thou shalt cut it down, and its outgoings shall be thine; for thou shalt dispossess the Canaanites, though they have iron chariots; for they are powerful.
- Webster's Bible (WBS)
- But the mountain shall be thine; for it [is] a wood, and thou shalt cut it down: and the limits of it shall be thine: for thou shalt drive out the Canaanites, though they have iron chariots, [and] though they [are] strong.
- Young's Literal Translation (YLT)
- because the mountain is thine; because it [is] a forest — thou hast prepared it, and its outgoings have been thine; because thou dost dispossess the Canaanite, though it hath chariots of iron — though it [is] strong.'
Read in context
- 16ಅದಕ್ಕೆ ಯೋಸೇಫನ ಮಕ್ಕಳು--ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿ ಇರುವ ಬೇತ್ಷೆಯಾನ್ನಲ್ಲಿಯೂ ಅದರ ಊರು ಗಳಲ್ಲಿಯೂ ಇಜ್ರೇಲಿನ ತಗ್ಗಿನಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಉಂಟು ಅಂದರು.
- 17ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯಾಮನಿಗೂ ಮನಸ್ಸೆಗೂ--ನೀವು ಮಹಾ ಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವದು;ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.
- 18ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.
Cross references
- Hebrews 13:6 ಇಬ್ರಿಯರಿಗೆ 13:6ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Romans 8:31 ರೋಮಾಪುರದವರಿಗೆ 8:31ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
- Deuteronomy 20:1–4 ಧರ್ಮೋಪದೇಶಕಾಂಡ 20:1–4ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಕುದುರೆಗಳನ್ನೂ ರಥ ಗಳನ್ನೂ ನಿನಗಿಂತ ಹೆಚ್ಚಾದ ಜನರನ್ನೂ ನೋಡಿದರೆ ಅವರಿಗೆ ಭಯಪಡಬೇಡ; ಐಗುಪ್ತದೇಶದೊಳಗಿಂದ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ. ನೀವು ಯುದ್ಧಕ್ಕೆ ಸವಿಾಪ ಬಂದಾಗ ಯಾಜಕನು ಹತ್ತಿರ ಬಂದು ಜನರ ಸಂಗಡ ಮಾತನಾಡಿ ಅವ ರಿಗೆ-- ಓ ಇಸ್ರಾಯೇಲೇ ಕೇಳು, ನೀವು ಈಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸವಿಾಪ ಬಂದಿದ್ದೀರಿ; ನಿಮ್ಮ ಹೃದಯಗಳು ಬಳಲಬಾರದು; ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂಬೇಡಿರಿ; ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.
- Isaiah 41:10–16 ಯೆಶಾಯ 41:10–16ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ. ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು; ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು. ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ. ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ! ಇಗೋ, ನಿನ್ನನ್ನು ಹದವಾದ, ಹೊಸ, ಮೊನೆಹಲ್ಲಿನ ಹಂತಿಕುಂಟೆಯನ್ನಾಗಿ (ಹೊಕ್ಕುವ ಯಂತ್ರ) ಮಾಡು ವೆನು, ನೀನು ಬೆಟ್ಟಗಳನ್ನು ಹೊಕ್ಕು ಪುಡಿಪುಡಿ ಮಾಡಿ ಗುಡ್ಡಗಳನ್ನು ಹೊಟ್ಟಿನಂತೆ ಮಾಡುವಿ. ನೀನು ಅವುಗಳನ್ನು ತೂರಲು ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವದು; ನೀನಂತೂ ಕರ್ತನಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧನಲ್ಲಿ ಮಹಿಮೆಹೊಂದುವಿ.
- Numbers 14:6–9 ಅರಣ್ಯಕಾಂಡ 14:6–9ಆಗ ದೇಶವನ್ನು ಪಾಳತಿ ನೋಡಿದವರಲ್ಲಿದ್ದ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಕೊಂಡು ಇಸ್ರಾ ಯೇಲ್ ಮಕ್ಕಳ ಸಮಸ್ತ ಸಭೆಯ ಕೂಟಕ್ಕೆ--ಪಾಳತಿ ನೋಡುವದಕ್ಕೆ ನಾವು ದಾಟಿಹೋದ ದೇಶವು ಅತ್ಯು ತ್ತಮವಾದ ದೇಶವೇ. ಕರ್ತನು ನಮ್ಮಲ್ಲಿ ಇಷ್ಟಪಟ್ಟರೆ ಹಾಲು ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಬರಮಾಡಿ ಅದನ್ನು ನಮಗೆ ಕೊಡುವನು. ನೀವಾ ದರೋ ಕರ್ತನಿಗೆ ವಿರೋಧವಾಗಿ ಬೀಳಬೇಡಿರಿ, ಆ ದೇಶದ ಜನರಿಗೆ ಭಯಪಡಬೇಡಿರಿ, ಅವರು ನಮಗೆ ರೊಟ್ಟಿಯಾಗುವರು; ಅವರಿಗಿದ್ದ ಆಶ್ರಯವು ಅವರ ಬಳಿಯಿಂದ ಹೋಯಿತು; ಕರ್ತನು ನಮ್ಮ ಸಂಗಡ ಇದ್ದಾನೆ; ಅವರಿಗೆ ಭಯಪಡಬೇಡಿರಿ ಅಂದನು.
- Romans 8:37 ರೋಮಾಪುರದವರಿಗೆ 8:37ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- Psalm 27:1–2 ಕೀರ್ತನೆಗಳು 27:1–2ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
- Joshua 17:15–16 ಯೆಹೋಶುವ 17:15–16ಅದಕ್ಕೆ ಯೆಹೋಶುವನು ಪ್ರತ್ಯುತ್ತರವಾಗಿ ಅವರಿಗೆ--ನೀನು ಮಹಾಜನಾಂಗವಾಗಿದ್ದು ನಿನಗೆ ಎಫ್ರಾಯಾಮಿನ ಪರ್ವತವು ಇಕ್ಕಟ್ಟಾಗಿದರೆ ನೀನು ಪೆರಿಜ್ಜೀಯರ ಮತ್ತು ರೆಫಾಯರ ದೇಶದಲ್ಲಿರುವ ಅಡವಿಗೆ ಹೋಗಿ ಅದನ್ನು ಕಡಿದು ನಿನಗೋಸ್ಕರ ಸ್ಥಳಮಾಡಿಕೋ, ಅಂದನು. ಅದಕ್ಕೆ ಯೋಸೇಫನ ಮಕ್ಕಳು--ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿ ಇರುವ ಬೇತ್ಷೆಯಾನ್ನಲ್ಲಿಯೂ ಅದರ ಊರು ಗಳಲ್ಲಿಯೂ ಇಜ್ರೇಲಿನ ತಗ್ಗಿನಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಉಂಟು ಅಂದರು.
- Isaiah 51:12–13 ಯೆಶಾಯ 51:12–13ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು? ಆಕಾಶವನ್ನು ಹಾಸಿ, ಭೂಮಿಗೆ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟು ಮಾಡಿದ ಕರ್ತನನ್ನು ನೀನು ಮರೆತುಬಿಟ್ಟು ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶ ಪಡಿಸುವನೋ ಎಂಬಂತೆ ಅಂಜಿಕೊಂಡಿದ್ದಿಯಲ್ಲಾ? ಮತ್ತು ಆ ಹಿಂಸಕನ ಉಗ್ರವು ಎಲ್ಲಿ?
- Joshua 15:9 ಯೆಹೋಶುವ 15:9ಆ ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್ ಆದ ಬಾಲಾಕ್ಕೂ
- Joshua 20:7 ಯೆಹೋಶುವ 20:7ಹಾಗೆಯೇ ಅವರು ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ ಎಫ್ರಾ ಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಯೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯರ್ತ್ಬ ವನ್ನೂ ನೇಮಿಸಿದರು.
- Joshua 11:4–6 ಯೆಹೋಶುವ 11:4–6ಆಗ ಅವರು ಸಮುದ್ರ ದಡದ ಮರಳಿನ ಹಾಗೆ ಬಹು ಜನರು ಬಹುರಥಗಳ ಕುದುರೆಗಳು ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು. ಈ ಅರಸುಗಳೆಲ್ಲಾ ಕೂಡಿಕೊಂಡು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟಾಗಿ ಮೇರೋಮು ಎಂಬ ನೀರುಗಳ ಬಳಿಯಲ್ಲಿ ಇಳುಕೊಂಡರು. ಆಗ ಕರ್ತನು ಯೆಹೋಶುವನಿಗೆಅವರಿಗೆ ಭಯಪಡಬೇಡ; ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರನ್ನು ಇಸ್ರಾಯೇಲಿನ ಮುಂದೆ ಕೊಲ್ಲಲ್ಪ ಡುವಂತೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು ಅಂದನು.