Joshua · chapter 23 · verse 2
Joshua 23:2 in Kannada
ಅವನು ಸಮಸ್ತ ಇಸ್ರಾಯೇಲ್ಯರನ್ನೂ ಅವರ ಹಿರಿಯರನ್ನೂ ಮುಖ್ಯ ಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರಿಸಿ ಅವರಿಗೆ--ನಾನು ವೃದ್ಧನಾಗಿ ದಿನಗಳು ತುಂಬಿ ದವನಾಗಿದ್ದೇನೆ.
Avanu samasta israayelyarannoo avara hiriyarannoo mukhya stharannoo nyaayaadhipatigalannoo adhikaarigalannoo karisi avarige--naanu vruddhanaagi dinagalu tumbi davanaagiddene.
Joshua 23:2 in English
- King James Version (KJV)
- And Joshua called for all Israel, [and] for their elders, and for their heads, and for their judges, and for their officers, and said unto them, I am old [and] stricken in age:
- World English Bible (WEB)
- Joshua called for all Israel, for their elders and for their heads, and for their judges and for their officers, and said to them, “I am old and well advanced in years.
- American Standard Version (ASV)
- that Joshua called for all Israel, for their elders and for their heads, and for their judges and for their officers, and said unto them, I am old and well stricken in years:
- Bible in Basic English (BBE)
- Joshua sent for all Israel, for their responsible men and their chiefs and their judges and their overseers, and said to them, I am old, and full of years:
- Darby Translation (DBY)
- that Joshua called for all Israel, for their elders, and for their heads, and for their judges, and for their officers, and said unto them, I am become old, advanced in age;
- Webster's Bible (WBS)
- And Joshua called for all Israel, [and] for their elders, and for their heads, and for their judges, and for their officers, and said to them, I am old [and] advanced in age:
- Young's Literal Translation (YLT)
- and Joshua calleth for all Israel, for its elders, and for its heads, and for its judges, and for its authorities, and saith unto them, 'I have become old; I have entered into days;
Read in context
- 1ಕರ್ತನು ಇಸ್ರಾಯೇಲನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ ವಿಶ್ರಾಂತಿ ಕೊಟ್ಟ ಬಹಳ ದಿನಗಳ ತರುವಾಯ ಯೆಹೋಶುವನ ದಿನಗಳು ತುಂಬಿ ವೃದ್ಧನಾದನು.
- 2ಅವನು ಸಮಸ್ತ ಇಸ್ರಾಯೇಲ್ಯರನ್ನೂ ಅವರ ಹಿರಿಯರನ್ನೂ ಮುಖ್ಯ ಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರಿಸಿ ಅವರಿಗೆ--ನಾನು ವೃದ್ಧನಾಗಿ ದಿನಗಳು ತುಂಬಿ ದವನಾಗಿದ್ದೇನೆ.
- 3ನಿಮ್ಮ ದೇವರಾದ ಕರ್ತನು ನಿಮ ಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿ ದ್ದೆಲ್ಲವನ್ನೂ ನೋಡಿದ್ದೀರಿ; ನಿಮಗೋಸ್ಕರವಾಗಿ ಯುದ್ಧ ಮಾಡಿದಾತನು ನಿಮ್ಮ ದೇವರಾದ ಕರ್ತನು.
- 4ಇಗೋ, ನಾನು ಯೊರ್ದನ್ ಮೊದಲುಗೊಂಡು ಪಶ್ಚಿಮಕ್ಕಿರುವ ದೊಡ್ಡ ಸಮುದ್ರದ ವರೆಗೂ ಜನಾಂಗಗಳನ್ನು ಕಡಿದು ಉಳಿದ ಸಕಲ ಜನಾಂಗಗಳ ದೇಶಗಳನ್ನು ನಿಮ್ಮ ಗೋತ್ರಗಳಿಗೆ ಚೀಟು ಹಾಕಿ ನಿಮಗೆ ಹಂಚಿಕೊಟ್ಟೆನು.
Cross references
- Joshua 24:1 ಯೆಹೋಶುವ 24:1ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲಿನ ಸಮಸ್ತ ಗೋತ್ರದವರನ್ನು ಕೂಡಿಸಿ ಇಸ್ರಾಯೇಲಿನ ಹಿರಿಯರನ್ನೂ ಅವರ ಮುಖ್ಯಸ್ಥ ರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರೆಸಿದನು. ಅವರು ದೇವರ ಮುಂದೆ ಬಂದು ನಿಂತರು.
- 1 Chronicles 28:1 1 ಪೂರ್ವಕಾಲವೃತ್ತಾಂತ 28:1ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನರಾದ ಗೋತ್ರಗಳ ಪ್ರಧಾನ ರನ್ನೂ ವರ್ಗವರ್ಗವಾಗಿ ಅರಸನನ್ನು ಸೇವಿಸುವ ಸಭೆಗಳ ಪ್ರಧಾನರನ್ನೂ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಅರಸನ ಸ್ವಾಸ್ಥ್ಯದ ಮೇಲೆಯೂ ಅವನ ಕುಮಾರರ ಸ್ವಾಸ್ಥ್ಯಗಳ ಮೇಲೆಯೂ ಇರುವ ಪ್ರಧಾನರನ್ನೂ ಅಧಿಕಾರಿಗಳನ್ನೂ ಪರಾಕ್ರಮಶಾಲಿ ಗಳನ್ನೂ ಶೂರರನ್ನೂ ಯೆರೂಸಲೇಮಿಗೆ ಕೂಡಿ ಬರ ಮಾಡಿದನು.
- Deuteronomy 31:28 ಧರ್ಮೋಪದೇಶಕಾಂಡ 31:28ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ ನಿಮ್ಮ ಅಧಿಕಾರಿ ಗಳನ್ನೂ ನನ್ನ ಬಳಿಗೆ ಕೂಡಿಸಿರಿ; ಆಗ ಈ ಮಾತುಗಳನ್ನು ಅವರು ಕೇಳುವಹಾಗೆ ಆಡುವೆನು; ಆಕಾಶವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು.
- Acts 20:17–35 ಅಪೊಸ್ತಲರ ಕೃತ್ಯಗಳು 20:17–35ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರೆಸಿದನು. ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇ ನಂದರೆ-- ನಾನು ಆಸ್ಯಕ್ಕೆ ಬಂದ ಮೊದಲನೆಯ ದಿವಸದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿ ಹೇಗೆ ನಡೆದುಕೊಂಡೆನೆಂಬದನ್ನು ನೀವೇ ಬಲ್ಲಿರಿ. ನಾನು ಬಹು ನಮ್ರತೆಯಿಂದಲೂ ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೆನು. ಇದರಲ್ಲಿ ಯೆಹೂದ್ಯರು ಹೊಂಚುಹಾಕಿದ್ದರಿಂದ ಸಂಕಷ್ಟಗಳು ಸಂಭವಿಸಿದವು. ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳು ವದಕ್ಕೂ ಬಹಿರಂಗವಾಗಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗೆಯದೆ ಯೆಹೂ ದ್ಯರೂ ಗ್ರೀಕರೂ ದೇವರ ಕಡೆಗೆ ಮಾನಸಾಂತರಪಟ್ಟು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೇಲೆ ನಂಬಿಕೆಯಿಡಬೇಕೆಂದು ಸಾಕ್ಷೀಕರಿಸುವವನಾಗಿದ್ದೆನು. ಇಗೋ, ನಾನು ಈಗ ಆತ್ಮನಿರ್ಬಂಧವುಳ್ಳವನಾಗಿ ಯೆರೂಸಲೇ ಮಿಗೆ ಹೋಗುತ್ತೇನೆ. ಅಲ್ಲಿ ನನಗೆ ಏನು ಸಂಭವಿಸು ವವೋ ನಾನರಿಯೆ. ಆದರೂ ಎಲ್ಲಾ ಪಟ್ಟಣಗಳಲ್ಲಿ ನನಗೆ ಬೇಡಿಗಳೂ ಸಂಕಟಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಸಾಕ್ಷಿ ಕೊಡುವದನ್ನು ಮಾತ್ರ ಬಲ್ಲೆನು. ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ ಇಗೋ, ನಿಮ್ಮಲ್ಲಿ ಸಂಚಾರ ಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ಕಾಣುವದಿಲ್ಲವೆಂದು ನಾನು ಬಲ್ಲೆನು. ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು. ಯಾಕಂದರೆ ದೇವರ ಸಂಕಲ್ಪ ವನ್ನೆಲ್ಲಾ ನಿಮಗೆ ತಿಳಿಸುವದರಲ್ಲಿ ನಾನು ಹಿಂದೆಗೆಯ ಲಿಲ್ಲ. ದೇವರು ತನ್ನ ಸ್ವರಕ್ತದಿಂದ ಕೊಂಡುಕೊಂಡ ಸಭೆಯನ್ನು ಪೋಷಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ಯಾಕಂದರೆ ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವ ವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸು ವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವಕ್ರ ಮಾತುಗಳನ್ನಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು. ಆದಕಾರಣ ನಾನು ಕಣ್ಣೀರಿನಿಂದ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬ ನನ್ನು ಎಚ್ಚರಿಸಿದೆನೆಂದು ನೀವು ಜ್ಞಾಪಕ ಮಾಡಿಕೊಂಡು ಎಚ್ಚರವಾಗಿರಿ. ಸಹೋದರರೇ, ನಿಮ್ಮನ್ನು ಕಟ್ಟುವ ದಕ್ಕೂ ಪವಿತ್ರರಾದವರೆಲ್ಲರಲ್ಲಿ ನಿಮಗೆ ಬಾಧ್ಯತೆಯನ್ನು ಅನುಗ್ರಹಿಸುವದಕ್ಕೂ ನಾನೀಗ ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ನಾನು ಯಾರ ಬೆಳ್ಳಿಯನ್ನಾಗಲಿ ಇಲ್ಲವೆ ಭಂಗಾರವನ್ನಾಗಲಿ ಇಲ್ಲವೆ ವಸ್ತ್ರವನ್ನಾಗಲಿ ಬಯಸಲಿಲ್ಲ. ಹೌದು, ಈ ಕೈಗಳೇ ಕೆಲಸಮಾಡಿ ನನ್ನ ಕೊರತೆಗಳನ್ನೂ ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನೂ ನೀಗಿದ್ದನ್ನು ನೀವೇ ಬಲ್ಲಿರಿ. ನೀವು ಹಾಗೆಯೇ ಕೆಲಸಮಾಡಿ ಬಲಹೀನ ರಿಗೆ ಹೀಗೆ ಆಧಾರವಾಗಿರತಕ್ಕದ್ದೆಂದೂ ಮತ್ತು--ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ ವೆಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳಬೇಕೆಂದೂ ಇವೆಲ್ಲವು ಗಳನ್ನು ನಾನು ನಿಮಗೆ ತಿಳಿಯಪಡಿಸಿದ್ದೇನೆ.