Joshua · chapter 6 · verse 16
Joshua 6:16 in Kannada
ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು.
Elane saari yaajakaru tutoorigalannu ooduvaaga aadaddenandare, yehoshuvanu janarige--aarbhatisiri; kartanu nimage ee pattanavannu kottiddaane andanu.
Joshua 6:16 in English
- King James Version (KJV)
- And it came to pass at the seventh time, when the priests blew with the trumpets, Joshua said unto the people, Shout; for the LORD hath given you the city.
- World English Bible (WEB)
- At the seventh time, when the priests blew the trumpets, Joshua said to the people, “Shout, for the LORD has given you the city!
- American Standard Version (ASV)
- And it came to pass at the seventh time, when the priests blew the trumpets, Joshua said unto the people, Shout; for Jehovah hath given you the city.
- Bible in Basic English (BBE)
- And the seventh time, at the sound of the priests' horns, Joshua said to the people, Now give a loud cry; for the Lord has given you the town.
- Darby Translation (DBY)
- And it came to pass the seventh time, when the priests blew with the trumpets, that Joshua said to the people, Shout; for Jehovah has given you the city.
- Webster's Bible (WBS)
- And it came to pass at the seventh time, when the priests blew with the trumpets, Joshua said to the people, Shout; for the LORD hath given you the city.
- Young's Literal Translation (YLT)
- and it cometh to pass, at the seventh time, the priests have blown with the trumpets, and Joshua saith unto the people, 'Shout ye, for Jehovah hath given to you the city;
Read in context
- 14ಹೀಗೆ ಎರಡನೆ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿ ಬಂದು ಪಾಳೆಯಕ್ಕೆ ಹಿಂತಿರುಗಿದರು. ಹೀಗೆಯೇ ಆರು ದಿವಸ ಮಾಡಿದರು.
- 15ಆದರೆ ಏಳನೇ ದಿವಸ ಸೂರ್ಯೋದಯವಾಗುವಾಗ ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು; ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿ ಬಂದರು.
- 16ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು.
- 17ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು.
- 18ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ.
Cross references
- 2 Chronicles 13:15 2 ಪೂರ್ವಕಾಲವೃತ್ತಾಂತ 13:15ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು.
- 2 Chronicles 20:22–23 2 ಪೂರ್ವಕಾಲವೃತ್ತಾಂತ 20:22–23ಅವರು ಹಾಡುವದಕ್ಕೂ ಸ್ತುತಿಸುವದಕ್ಕೂ ಆರಂಭಿಸಿದಾಗಲೇ ಕರ್ತನು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯಾರ್ ಪರ್ವತಗಳ ಮಕ್ಕಳಿಗೆ ವಿರೋಧವಾಗಿ ಹೊಂಚಿಕೊಳ್ಳುವವರನ್ನು ಇಟ್ಟಿದ್ದ ರಿಂದ ಅವರು ಹೊಡೆಯಲ್ಪಟ್ಟಿದ್ದರು. ಅಮ್ಮೋನ್, ಮೋವಾಬ್ಯರ ಮಕ್ಕಳು ಸೇಯಾರ್ ಪರ್ವತದ ನಿವಾಸಿ ಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯಾರಿನ ನಿವಾಸಿಗಳನ್ನು ಮುಗಿಸಿಬಿಟ್ಟ ತರುವಾಯ ತಾವೇ ಒಬ್ಬರನ್ನೊಬ್ಬರು ನಾಶಮಾಡಲು ಸಹಾಯ ಕೊಟ್ಟರು.
- Judges 7:20–22 ನ್ಯಾಯಸ್ಥಾಪಕರು 7:20–22ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ ಆ ಕೊಡಗಳನ್ನು ಒಡೆದುಬಿಟ್ಟು ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು--ಕರ್ತನ ಕತ್ತಿ, ಗಿದ್ಯೋನನ ಕತ್ತಿ ಎಂದು ಕೂಗಿ ದಂಡಿನ ಸುತ್ತಲೂ ಅವರವರು ತಮ್ಮ ಸ್ಥಳದಲ್ಲಿ ನಿಂತರು. ಆಗ ದಂಡೆಲ್ಲಾ ಕಿರಿಚಿಕೊಂಡು ಓಡಿ ಹೋದರು. ಮುನ್ನೂರು ಜನರು ತುತೂರಿಗಳನ್ನು ಊದುವಾಗ ಕರ್ತನು ದಂಡಿನಲ್ಲಿ ಎಲ್ಲೆಲ್ಲಿಯೂ ಒಬ್ಬನ ಕತ್ತಿಯನ್ನು ಒಬ್ಬನ ಮೇಲೆ ಬರಮಾಡಿದನು. ದಂಡು ಚೆರೇರಿನಲ್ಲಿರುವ ಬೇತ್ಷಿಟ್ಟದ ಮಟ್ಟಿಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾದ ಮೇರೆಯ ವರೆಗೂ ಓಡಿಹೋಯಿತು.
- Joshua 6:5 ಯೆಹೋಶುವ 6:5ಅವರು ಟಗರಿನ ಕೊಂಬುಗಳ ತುತೂರಿಗಳಿಂದ ದೀರ್ಘ ಧ್ವನಿ ಗೈಯುವಾಗ ನೀವು ಆ ತುತೂರಿಯ ಧ್ವನಿಯನ್ನು ಕೇಳಿದವರಾಗಿ ಜನರೆಲ್ಲರು ಮಹಾ ಆರ್ಭಟವಾಗಿ ಆರ್ಭಟಿಸಬೇಕು; ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದು ಹೋಗುವದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಹೋಗುವನು ಎಂದು ಹೇಳಿದನು.