Judges · chapter 11 · verse 25
Judges 11:25 in Kannada
ಈಗ ಚಿಪ್ಪೋರನ ಮಗನೂ ಮೋವಾ ಬಿನ ಅರಸನೂ ಆದ ಬಾಲಾಕನಿಗಿಂತ ಯಾವದ ರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿನ ವಿರೋಧವಾಗಿ ಯಾವಾಗಲಾದರೂ ವಿವಾದ ಮಾಡಿದನೋ? ಯಾವಾಗಲಾದರೂ ಅವರಿಗೆ ವಿರೋಧವಾಗಿ ಯುದ್ಧಮಾಡಿದನೋ?
Eega chipporana maganoo movaa bina arasanoo aada baalaakaniginta yaavada rallaadaroo neenu uttamano? Avanu israayelina virodhavaagi yaavaagalaadaroo vivaada maadidano? Yaavaagalaadaroo avarige virodhavaagi yuddhamaadidano?
Judges 11:25 in English
- King James Version (KJV)
- And now [art] thou any thing better than Balak the son of Zippor, king of Moab? did he ever strive against Israel, or did he ever fight against them,
- World English Bible (WEB)
- Now are you anything better than Balak the son of Zippor, king of Moab? Did he ever strive against Israel, or did he ever fight against them?
- American Standard Version (ASV)
- And now art thou anything better than Balak the son of Zippor, king of Moab? did he ever strive against Israel, or did he ever fight against them?
- Bible in Basic English (BBE)
- What! are you any better than Balak, the son of Zippor, king of Moab? Did he ever take up a cause against Israel or make war against them?
- Darby Translation (DBY)
- And now art thou indeed better than Balak the son of Zippor, king of Moab? did he ever strive with Israel? did he ever fight against them?
- Webster's Bible (WBS)
- And now [art] thou any thing better than Balak the son of Zippor king of Moab? did he ever strive against Israel, or did he ever fight against them,
- Young's Literal Translation (YLT)
- 'And now, [art] thou at all better than Balak son of Zippor, king of Moab? did he at all strive with Israel? did he at all fight against them?
Read in context
- 23ಈಗ ಇಸ್ರಾ ಯೇಲಿನ ದೇವರಾದ ಕರ್ತನು ಅಮೋರಿಯರನ್ನು ತನ್ನ ಜನವಾದ ಇಸ್ರಾಯೇಲಿನ ಮುಂದೆ ಹೊರಡಿಸಿ ರುವಾಗ ನೀನು ಆ ದೇಶವನ್ನು ಸ್ವಾಧೀನಮಾಡಿಕೊಳ್ಳು ವಿಯೋ?
- 24ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು.
- 25ಈಗ ಚಿಪ್ಪೋರನ ಮಗನೂ ಮೋವಾ ಬಿನ ಅರಸನೂ ಆದ ಬಾಲಾಕನಿಗಿಂತ ಯಾವದ ರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿನ ವಿರೋಧವಾಗಿ ಯಾವಾಗಲಾದರೂ ವಿವಾದ ಮಾಡಿದನೋ? ಯಾವಾಗಲಾದರೂ ಅವರಿಗೆ ವಿರೋಧವಾಗಿ ಯುದ್ಧಮಾಡಿದನೋ?
- 26ಇಸ್ರಾಯೇಲು ಹೆಷ್ಬೋನಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರೋಯೇರಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರ್ನೋನಿನ ತೀರವಾದ ಎಲ್ಲಾ ಪಟ್ಟಣ ಗಳಲ್ಲಿಯೂ ಮುನ್ನೂರು ವರುಷಗಳಿಂದ ವಾಸಿಸಿರು ವಾಗ ಇಷ್ಟರ ವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?
- 27ಆದದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧಮಾಡುವದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀ. ನ್ಯಾಯಾಧಿಪತಿಯಾದ ಕರ್ತನು ಈಹೊತ್ತು ಇಸ್ರಾ ಯೇಲ್ ಮಕ್ಕಳಿಗೂ ಅಮ್ಮೋನನ ಮಕ್ಕಳಿಗೂ ಮಧ್ಯ ದಲ್ಲಿ ನ್ಯಾಯತೀರಿಸಲಿ.
Cross references
- Micah 6:5 ಮೀಕ 6:5ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿ ದ್ದನ್ನೂ ಬೆಯೋರನ ಮಗನಾದ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲು ಗೊಂಡು ಗಿಲ್ಗಾಲಿನ ವರೆಗೂ ಆದದ್ದನ್ನೂ ಈಗ ಜ್ಞಾಪಕ ಮಾಡಿಕೊಳ್ಳಿರಿ. ಆಗ ಕರ್ತನ ನೀತಿಯನ್ನು ತಿಳುಕೊಳ್ಳು ವಿರಿ.
- Joshua 24:9–10 ಯೆಹೋಶುವ 24:9–10ಆಗ ಮೋವಾಬ್ಯರ ಅರಸನಾದ ಚಿಪ್ಪೋರನ ಮಗ ನಾದ ಬಾಲಾಕನು ಎದ್ದು ಇಸ್ರಾಯೇಲಿಗೆ ವಿರೋಧ ವಾಗಿ ಯುದ್ಧಮಾಡಿ ನಿಮ್ಮನ್ನು ಶಪಿಸುವ ಹಾಗೆ ಬೆಯೋರನ ಮಗನಾದ ಬಿಳಾಮನನ್ನು ಕರೇ ಕಳುಹಿಸಿ ದನು. ಆದರೆ ನಾನು ಬಿಳಾಮನ ಮಾತನ್ನು ಕೇಳಲು ಮನಸ್ಸಿಲ್ಲದ್ದರಿಂದ ಅವನು ನಿಮ್ಮನ್ನು ಆಶೀರ್ವದಿ ಸುತ್ತಲೇ ಇರಬೇಕಾಯಿತು. ಹೀಗೆ ನಾನು ಅವನ ಕೈಯಿಂದ ನಿಮ್ಮನ್ನು ತಪ್ಪಿಸಿದೆನು.
- Deuteronomy 23:3–4 ಧರ್ಮೋಪದೇಶಕಾಂಡ 23:3–4ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು. ನೀವು ಐಗುಪ್ತವನ್ನು ಬಿಟ್ಟು ಬರುವಾಗ ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವದಕ್ಕೆ ಎದು ರಾಗಿ ಬರಲಿಲ್ಲ; ನಿಮ್ಮನ್ನು ಶಪಿಸುವದಕ್ಕೆ ಮೆಸೊಪೊ ತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ನಾದ ಬಿಳಾಮನನ್ನು ಕೂಲಿ ಕೊಟ್ಟು ನಿಮಗೆ ವಿರೋಧ ವಾಗಿ ತರಿಸಿದರು.
- Numbers 22:2–21 ಅರಣ್ಯಕಾಂಡ 22:2–21ಇಸ್ರಾಯೇಲ್ಯರು ಅಮೋರಿಯರಿಗೆ ಮಾಡಿದ್ದನ್ನೆಲ್ಲಾ ಚಿಪ್ಪೋರನ ಮಗನಾದ ಬಾಲಾಕನು ನೋಡಿದನು. ಆ ಜನರು ಬಹುಮಂದಿಯಾದದರಿಂದ ಮೋವಾಬಿನವರು ಅವರಿಗೆ ಬಹಳವಾಗಿ ಅಂಜಿದರು; ಮೋವಾಬಿ ನವರು ಇಸ್ರಾಯೇಲ್ ಮಕ್ಕಳನ್ನು ಕಂಡು ದಿಗಿಲು ಪಟ್ಟರು. ಆದದರಿಂದ ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ ಹೇಳಿದ್ದೇನಂದರೆ--ಈಗ ಈ ಸಮೂಹವು ನಮ್ಮ ಸುತ್ತಲಿರುವದನ್ನೆಲ್ಲಾ ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ ಮೇಯುವದು. ಆ ಕಾಲದಲ್ಲಿ ಚಿಪ್ಪೋ ರನ ಮಗನಾದ ಬಾಲಾಕನು ಮೋವಾಬ್ಯರ ಅರಸ ನಾಗಿದ್ದನು. ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ--ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ. ಈಗ ನೀನು ದಯಮಾಡಿ ಬಂದು ಈ ಜನವನ್ನು ನನಗಾಗಿ ಶಪಿಸು; ಅವರು ನನಗಿಂತ ಬಲಿಷ್ಠರಾಗಿದ್ದಾರೆ. ಒಂದು ವೇಳೆ ನಾನು ಗೆದ್ದೇನು, ನಾವು ಅವರನ್ನು ಹೊಡೆದೇವು; ನಾನು ಅವರನ್ನು ದೇಶದೊಳಗಿಂದ ಹೊರಡಿಸೇನು; ನೀನು ಯಾವನನ್ನು ಆಶೀರ್ವದಿಸು ತ್ತೀಯೋ ಅವನು ಆಶೀರ್ವದಿಸಲ್ಪಟ್ಟವನೇ; ನೀನು ಯಾವನನ್ನು ಶಪಿಸುತ್ತೀಯೋ ಅವನು ಶಪಿಸಲ್ಪಟ್ಟವನೇ ಎಂದು ನಾನು ಬಲ್ಲೆನು. ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಕಣಿ ಕೇಳುವದಕ್ಕಾಗಿ ತಮ್ಮ ಕೈಯಲ್ಲಿ ಕಾಣಿಕೆ ಗಳನ್ನು ತಕ್ಕೊಂಡು ಹೋದರು; ಅವರು ಬಿಳಾಮನ ಬಳಿಗೆ ಬಂದು ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು. ಅವನು ಅವರಿಗೆ ಹೇಳಿದ್ದು--ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ; ಆಗ ಕರ್ತನು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು; ಆದ ಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳುಕೊಂಡರು. ದೇವರು ಬಿಳಾಮನ ಬಳಿಗೆ ಬಂದು--ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು ಅಂದನು. ಬಿಳಾ ಮನು ದೇವರಿಗೆ ಹೇಳಿದ್ದೇನಂದರೆ--ಚಿಪ್ಪೋರನ ಮಗನೂ ಮೋವಾಬಿನ ಅರಸನೂ ಬಾಲಾಕನು ನನ್ನ ಬಳಿಗೆ ಹೇಳಿಕಳುಹಿಸಿದ್ದೇನಂದರೆ-- ಇಗೋ, ಐಗುಪ್ತ ದೇಶದಿಂದ ಹೊರಟಿರುವ ಒಂದು ಜನಾಂಗವು ಭೂಮುಖವನ್ನು ಆವರಿಸಿಕೊಂಡಿದೆ; ಈಗ ನೀನು ಬಂದು ನನಗೋಸ್ಕರ ಅದನ್ನು ಶಪಿಸು; ಒಂದು ವೇಳೆ ಅದರ ಸಂಗಡ ಯುದ್ಧಮಾಡಿ ಅದನ್ನು ಹೊರಗೆ ಹಾಕುವದಕ್ಕೆ ನಾನು ಸಮರ್ಥನಾದೇನು ಎಂಬದು. ಆಗ ದೇವರು ಬಿಳಾಮನಿಗೆ ಹೇಳಿದ್ದೇನಂದರೆನೀನು ಅವರ ಸಂಗಡ ಹೋಗಬೇಡ; ನೀನು ಆ ಜನವನ್ನು ಶಪಿಸಬೇಡ; ಅದು ಆಶೀರ್ವದಿಸಲ್ಪಟ್ಟಿದೆ. ಆಗ ಬಿಳಾಮನು ಉದಯದಲ್ಲಿ ಎದ್ದು ಬಾಲಾಕನ ಪ್ರಭುಗಳಿಗೆ--ಕರ್ತನು ನಿಮ್ಮ ಸಂಗಡ ಹೋಗುವದಕ್ಕೆ ನನಗೆ ಅಪ್ಪಣೆ ಕೊಡುವದಿಲ್ಲ. ನೀವು ನಿಮ್ಮ ದೇಶಕ್ಕೆ ಹೋಗಿರಿ ಎಂದು ಹೇಳಲಾಗಿ, ಮೋವಾಬಿನ ಪ್ರಭುಗಳು ಎದ್ದು ಬಾಲಾಕನ ಬಳಿಗೆ ಬಂದು--ಬಿಳಾಮನು ನಮ್ಮ ಸಂಗಡ ಬರಲೊಲ್ಲನು ಅಂದರು. ಆದರೆ ಬಾಲಾಕನು ತಿರಿಗಿ ಇವರಿಗಿಂತ ಹೆಚ್ಚು ಘನವುಳ್ಳವರಾದ ಅನೇಕ ಪ್ರಭುಗಳನ್ನು ಕಳುಹಿಸಿದನು. ಅವರು ಬಿಳಾಮನ ಬಳಿಗೆ ಬಂದು ಅವನಿಗೆ ಹೇಳಿ ದ್ದೇನಂದರೆ--ಚಿಪ್ಪೋರನ ಮಗನಾದ ಬಾಲಾಕನು ಹೀಗೆ ಹೇಳುತ್ತಾನೆ--ನೀನು ದಯಮಾಡಿ ನನ್ನ ಬಳಿಗೆ ಬರುವದಕ್ಕೆ ಯಾವದೂ ಅಡ್ಡಿಮಾಡಬಾರದು. ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು; ನೀನು ನನಗೆ ಹೇಳುವದನ್ನೆಲ್ಲಾ ನಾನು ಮಾಡುವೆನು; ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು ಅಂದನು. ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನ ಸೇವಕರಿಗೆ ಹೇಳಿದ್ದೇನಂದರೆ--ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಯನ್ನು ಬಂಗಾರವನ್ನು ಕೊಟ್ಟರೂ ನಾನು ನನ್ನ ದೇವರಾಗಿರುವ ಕರ್ತನ ಮಾತನ್ನು ವಿಾರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು. ಆದರೆ ಈಗ ಕರ್ತನು ನನಗೆ ಮತ್ತೇನು ಹೇಳುವನೆಂದು ನಾನು ತಿಳುಕೊಳ್ಳುವ ಹಾಗೆ ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ ಅಂದನು. ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ ಹೇಳಿದ್ದೇನಂದರೆ--ಈ ಮನುಷ್ಯರು ನಿನ್ನನ್ನು ಕರೆಯುವದಕ್ಕೆ ಬಂದಿದ್ದರೆ ನೀನು ಎದ್ದು ಅವರ ಸಂಗಡ ಹೋಗು; ಆದರೆ ನಾನು ನಿನಗೆ ಹೇಳುವ ಮಾತೇ ನೀನು ಆಡಬೇಕು ಅಂದನು. ಬಿಳಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಯನ್ನು ಕಟ್ಟಿ ಮೋವಾಬಿನ ಪ್ರಭುಗಳ ಸಂಗಡ ಹೋದನು.