Judges · chapter 3 · verse 7
Judges 3:7 in Kannada
ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತು ಬಾಳ ನನ್ನೂ ತೋಪುಗಳನ್ನೂ ಸೇವಿಸಿದರು.
Israayel makkalu kartana munde kettatana maadi tamma devaraada kartanannu maretu baala nannoo topugalannoo sevisidaru.
Judges 3:7 in English
- King James Version (KJV)
- And the children of Israel did evil in the sight of the LORD, and forgat the LORD their God, and served Baalim and the groves.
- World English Bible (WEB)
- The children of Israel did that which was evil in the LORD’s sight, and forgot the LORD their God, and served the Baals and the Asheroth.
- American Standard Version (ASV)
- And the children of Israel did that which was evil in the sight of Jehovah, and forgat Jehovah their God, and served the Baalim and the Asheroth.
- Bible in Basic English (BBE)
- And the children of Israel did evil in the eyes of the Lord, and put out of their minds the Lord their God, and became servants to the Baals and the Astartes.
- Darby Translation (DBY)
- And the children of Israel did evil in the sight of Jehovah, and forgot Jehovah their God, and served the Baals and the Asherahs.
- Webster's Bible (WBS)
- And the children of Israel did evil in the sight of the LORD, and forgot the LORD their God, and served Baalim, and the groves.
- Young's Literal Translation (YLT)
- and the sons of Israel do the evil thing in the eyes of Jehovah, and forget Jehovah their God, and serve the Baalim and the shrines.
Read in context
- 5ಇಸ್ರಾಯೇಲ್ ಮಕ್ಕಳು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು
- 6ಅವರ ಕುಮಾರ್ತೆಯರನ್ನು ತಾವು ಹೆಂಡತಿಯರ ನ್ನಾಗಿ ತಕ್ಕೊಂಡು ತಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೆ ಮದುವೆ ಮಾಡಿಕೊಟ್ಟು ಅವರ ದೇವರು ಗಳನ್ನು ಸೇವಿಸಿದರು.
- 7ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತು ಬಾಳ ನನ್ನೂ ತೋಪುಗಳನ್ನೂ ಸೇವಿಸಿದರು.
- 8ಆದದರಿಂದ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಮೆಸೊಪೋತಾಮ್ಯದ ಅರಸನಾದ ಕೂಷನ್ ರಿಷಾತಯಿಮ್ ಕೈಗೆ ಮಾರಿಬಿಟ್ಟನು. ಇಸ್ರಾಯೇಲ್ ಮಕ್ಕಳು ಕೂಷನ್ರಿಷಾತಯಿಮ್ನ್ನು ಎಂಟು ವರುಷ ಸೇವಿಸಿದರು.
- 9ತರುವಾಯ ಇಸ್ರಾಯೇಲ್ ಮಕ್ಕಳು ಕರ್ತನನ್ನು ಕೂಗಿದಾಗ ಕರ್ತನು ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ ಕಾಲೇಬನ ತಮ್ಮನಾದ ಕೆನಜನ ಮಗನಾದ ಒತ್ನೀಯೇಲನನ್ನು ಎಬ್ಬಿಸಿದನು.
Cross references
- Exodus 34:13 ವಿಮೋಚನಕಾಂಡ 34:13ಆದರೆ ನೀವು ಅವರ ಯಜ್ಞ ವೇದಿಗಳನ್ನು ಹಾಳುಮಾಡಿ ವಿಗ್ರಹಗಳನ್ನು ಒಡೆದು (ಅಶೇರ) ವಿಗ್ರಹ ಸ್ತಂಭಗಳನ್ನು ಕಡಿದುಹಾಕಬೇಕು.
- Deuteronomy 4:9 ಧರ್ಮೋಪದೇಶಕಾಂಡ 4:9ನಿನ್ನ ಕಣ್ಣುಗಳು ನೋಡಿದ ಕಾರ್ಯಗಳನ್ನು ನೀನು ಮರೆಯದ ಹಾಗೆಯೂ ನೀನು ಬದುಕುವ ದಿನಗಳೆಲ್ಲಾ ಅವು ನಿನ್ನ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು ನಿನ್ನ ಪ್ರಾಣ ವನ್ನು ಬಹಳವಾಗಿ ಕಾಪಾಡು; ಅವುಗಳನ್ನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ಬೋಧಿಸು.
- 2 Kings 23:6 2 ಅರಸುಗಳು 23:6ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.
- 2 Kings 23:14 2 ಅರಸುಗಳು 23:14ವಿಗ್ರಹಗಳನ್ನು ಮುರಿದು ವಿಗ್ರಹದ ತೋಪುಗಳನ್ನು ಕಡಿದುಬಿಟ್ಟು ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.
- 2 Chronicles 33:19 2 ಪೂರ್ವಕಾಲವೃತ್ತಾಂತ 33:19ಇದಲ್ಲದೆ ಅವನ ಪ್ರಾರ್ಥನೆಯೂ ಅವನು ದೇವ ರಿಗೆ ಭಿನ್ನವಿಸಿದ್ದೂ ಅವನ ಸಮಸ್ತ ಪಾಪವೂ ಅವನ ಅಪರಾಧವೂ ಅವನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಉನ್ನತ ಸ್ಥಳಗಳಲ್ಲಿ ಕಟ್ಟಿಸಿದ ತೋಪುಗಳೂ ಕೆತ್ತಿಸಿದ ವಿಗ್ರಹಗಳೂ ಸ್ಥಾಪಿಸಿದ ಸ್ಥಳಗಳೂ ಇಗೋ, ಪ್ರವಾದಿ ಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿವೆ.
- 2 Chronicles 24:18 2 ಪೂರ್ವಕಾಲವೃತ್ತಾಂತ 24:18ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು.
- Deuteronomy 16:21 ಧರ್ಮೋಪದೇಶಕಾಂಡ 16:21ನೀನು ನಿನಗೆ ಮಾಡಿಕೊಳ್ಳುವ ನಿನ್ನ ದೇವರಾದ ಕರ್ತನ ಯಜ್ಞವೇದಿಯ ಸವಿಾಪದಲ್ಲಿ ಯಾವ ಮರಗಳ ತೋಪನ್ನಾದರೂ ನೆಡಬಾರದು.ಯಾವ ವಿಗ್ರಹ ವನ್ನೂ ನಿಲ್ಲಿಸಬಾರದು; ಇದನ್ನು ನಿನ್ನ ದೇವರಾದ ಕರ್ತನು ಹಗೆಮಾಡುತ್ತಾನೆ.
- Judges 3:12 ನ್ಯಾಯಸ್ಥಾಪಕರು 3:12ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ತಿರಿಗಿ ಕೆಟ್ಟತನ ಮಾಡಿದರು. ಅವರು ಕರ್ತನ ಮುಂದೆ ಕೆಟ್ಟತನ ಮಾಡಿದ್ದರಿಂದ ಕರ್ತನು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲ ಪಡಿಸಿದನು.
- Judges 6:25 ನ್ಯಾಯಸ್ಥಾಪಕರು 6:25ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ--ನೀನು ನಿನ್ನ ತಂದೆಗಿರುವ ಎತ್ತುಗಳಲ್ಲಿ ಎಳೇದಾದ ಏಳು ವರುಷದ ಎರಡನೇ ಹೋರಿಯನ್ನು ತೆಗೆದುಕೊಂಡು ಹೋಗಿ ನಿನ್ನ ತಂದೆಗೆ ಇರುವ ಬಾಳನ ಬಲಿಪೀಠವನ್ನು ಕೆಡವಿ ಅದರ ಸವಿಾಪದಲ್ಲಿರುವ ತೋಪನ್ನು ಕಡಿದು ಹಾಕಿ
- 2 Chronicles 33:3 2 ಪೂರ್ವಕಾಲವೃತ್ತಾಂತ 33:3ಏನಂದರೆ, ಅವನು ತನ್ನ ತಂದೆಯಾದ ಹಿಜ್ಕೀಯನು ಕೆಡವಿಹಾಕಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಎಬ್ಬಿಸಿ ತೋಪುಗಳನ್ನು ಹಾಕಿ ಆಕಾಶದ ಸೈನ್ಯ ಕ್ಕೆಲ್ಲಾ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.
- 1 Kings 16:33 1 ಅರಸುಗಳು 16:33ಅಹಾಬನು ತೋಪನ್ನು ಹಾಕಿಸಿದನು. ಹೀಗೆಯೆ ಅಹಾಬನು ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕ ವಾಗಿ ಕೆಟ್ಟತನಮಾಡಿದನು.ಅವನ ದಿವಸಗಳಲ್ಲಿ ಬೇತೇಲಿನವನಾದ ಹೀಯೇ ಲನು ಯೆರಿಕೋವನ್ನು ಕಟ್ಟಿಸಿದನು; ಕರ್ತನು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ ತನ್ನ ಚೊಚ್ಚಲ ಮಗನಾದ ಅಬೀರಾಮನೂ ಅದರ ಬಾಗಲುಗಳನ್ನು ಇಟ್ಟಾಗ ಅವನ ಚಿಕ್ಕಮಗನಾದ ಸೆಗೂಬನೂ ಸತ್ತರು.
- 1 Kings 18:19 1 ಅರಸುಗಳು 18:19ಆದದರಿಂದ ನೀನು ಸಮಸ್ತ ಇಸ್ರಾಯೇಲ್ಯರನ್ನೂ ಬಾಳನ ನಾನೂರ ಐವತ್ತು ಮಂದಿ ಪ್ರವಾದಿಗಳನ್ನೂ ಈಜೆಬೇಲಳ ಮೇಜಿನ ಹತ್ತಿರ ಭೋಜನ ಮಾಡುವ ತೋಪುಗಳ ನಾನೂರು ಮಂದಿ ಪ್ರವಾದಿಗಳನ್ನೂ ನನ್ನ ಬಳಿಗೆ ಕರ್ಮೆಲ್ ಬೆಟ್ಟಕ್ಕೆ ಕೂಡಿಸು ಅಂದನು.