Leviticus · chapter 13 · verse 16
Leviticus 13:16 in Kannada
ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
Illave hasimaansavu matte tirigi bellagaadare avanu yaajakana balige barabeku.
Leviticus 13:16 in English
- King James Version (KJV)
- Or if the raw flesh turn again, and be changed unto white, he shall come unto the priest;
- World English Bible (WEB)
- Or if the raw flesh turns again, and is changed to white, then he shall come to the priest.
- American Standard Version (ASV)
- Or if the raw flesh turn again, and be changed unto white, then he shall come unto the priest;
- Bible in Basic English (BBE)
- Or if the diseased flesh is turned again and changed to white then he is to come to the priest,
- Darby Translation (DBY)
- But if the raw flesh change again, and be turned white, he shall come unto the priest;
- Webster's Bible (WBS)
- Or if the raw flesh shall turn again, and be changed into white, he shall come to the priest;
- Young's Literal Translation (YLT)
- Or when the raw flesh turneth back, and hath been turned to white, then he hath come in unto the priest,
Read in context
- 14ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು.
- 15ಯಾಜ ಕನು ಹಸಿಮಾಂಸವನ್ನು ನೋಡಿ ಅವನು ಅಶುದ್ಧನೆಂದು ನುಡಿಯಬೇಕು; ಹಸಿಮಾಂಸವು ಅಶುದ್ಧವಾದದ್ದು, ಅದು ಕುಷ್ಠವೇ.
- 16ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
- 17ಆಗ ಯಾಜಕನು ಅವನನ್ನು ನೋಡ ಬೇಕು. ಇಗೋ, ಆ ವ್ಯಾಧಿಯು ಬೆಳ್ಳಗಾಗಿದ್ದರೆ ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ಯಾಜಕನು ನುಡಿಯಬೇಕು; ಅವನು ಶುದ್ಧನೇ.
- 18ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
Cross references
- Romans 7:14–24 ರೋಮಾಪುರದವರಿಗೆ 7:14–24ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ. ಹೇಗಂದರೆ ನಾನು ಮಾಡುವದನ್ನು ನಾನೇ ಒಪ್ಪುವದಿಲ್ಲ; ಯಾವದನ್ನು ಮಾಡಬೇಕೆಂದು ನಾನು ಇಚ್ಛಿಸುತ್ತೇನೋ ಅದನ್ನು ಮಾಡದೆ ನಾನು ವಿರೋಧಿಸುವದನ್ನು ಮಾಡುತ್ತೇನೆ. ಆದರೆ ನನಗೆ ಮನಸ್ಸಿಲ್ಲದ್ದನ್ನು ಮಾಡಿ ದರೆ ನ್ಯಾಯಪ್ರಮಾಣವು ಉತ್ತಮವಾದದ್ದೆಂದು ಒಪ್ಪಿ ಕೊಂಡ ಹಾಗಾಯಿತು. ಹೀಗಿರಲಾಗಿ ವಿರೋಧ ವಾದದ್ದನ್ನು ಮಾಡುವವನು ಇನ್ನು ನಾನಲ್ಲ; ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ. ಯಾಕಂದರೆ ನನ್ನಲ್ಲಿ ಅಂದರೆ ನನ್ನ ಶರೀರದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ; ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಇಚ್ಛಿಸುವ ಒಳ್ಳೇದನ್ನು ಮಾಡದೆ ಇಚ್ಛಿಸದಿರುವ ಕೆಟ್ಟ ದ್ದನ್ನೇ ಮಾಡುವವನಾಗಿದ್ದೇನೆ. 20ಇಚ್ಛಿಸದಿರುವದನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ಇಚ್ಛಿಸದಿರುವದನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ಹೀಗಿರಲಾಗಿ ಒಳ್ಳೆಯದನ್ನು ಮಾಡ ಲಿಚ್ಛಿಸುವ ನನಗೆ ಕೆಟ್ಟದ್ದಾಗಿರುವ ನಿಯಮವು ನನ್ನಲ್ಲಿ ಕಾಣಬರುತ್ತದೆ. ಹೀಗಿದ್ದಾಗ್ಯೂ ಒಳಮನುಷ್ಯನಿಗನು ಗುಣವಾಗಿ ದೇವರ ನಿಯಮದಲ್ಲಿ ಆನಂದಪಡುವವ ನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮವುಂಟೆಂದು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಕಾದಾಡಿ ನನ್ನನ್ನು ಸೆರೆ ಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದ್ದಾಗಿದೆ. ಅಯ್ಯೋ, ನಾನು ಎಂಥ ನಿರ್ಗತಿಕನಾದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹ ದಿಂದ ನನ್ನನ್ನು ಬಿಡಿಸುವವನು ಯಾರು?ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಮಾಡುತ್ತೇನೆ; ಹೀಗೆ ನನ್ನಷ್ಟಕ್ಕೆ ನಾನೇ ಮನಸ್ಸಿನಿಂದ ದೇವರ ನಿಯಮಕ್ಕೂ ಶರೀರದಿಂದ ಪಾಪವೆಂಬ ನಿಯಮಕ್ಕೂ ಆಳಾಗಿದ್ದೇನೆ.
- 1 Timothy 1:13–15 1 ತಿಮೊಥೆಯನಿಗೆ 1:13–15ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು. ನಮ್ಮ ಕರ್ತನ ಕೃಪೆಯು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಅತ್ಯಧಿಕವಾಯಿತು. ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು.
- Galatians 1:14–16 ಗಲಾತ್ಯದವರಿಗೆ 1:14–16ಇದಲ್ಲದೆ ನಾನು ನನ್ನ ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ ಬಹು ಅಭಿಮಾನವುಳ್ಳವನಾಗಿ ನನ್ನ ಸ್ವಂತ ಜನಾಂಗದವ ರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತದಲ್ಲಿ ಹೆಚ್ಚು ಆಸಕ್ತನಾಗಿದ್ದೆನು ಆದರೆ ನಾನು ತಾಯಿಯ ಗರ್ಭದಲ್ಲಿದ್ದಾಗಲೇ ದೇವರು ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ನನ್ನನ್ನು ಕರೆದನು; ಇದಲ್ಲದೆ ದೇವರು ಅನ್ಯಜನರಲ್ಲಿ ತನ್ನ ಮಗನನ್ನು ನಾನು ಸಾರುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವದಕ್ಕೆ ಇಚ್ಛೈಸಿದಾಗಲೇ ನಾನು ಮನುಷ್ಯರನ್ನು ವಿಚಾರಿಸದೆ
- Philippians 3:6–8 ಫಿಲಿಪ್ಪಿಯವರಿಗೆ 3:6–8ಆಸಕ್ತಿಯನ್ನು ನೋಡಿದರೆ ನಾನು ಸಭೆಯ ಹಿಂಸಕನು, ನ್ಯಾಯಪ್ರಮಾಣದಲ್ಲಿ ಹೇಳಿರುವ ನೀತಿ ಯನ್ನು ನೋಡಿದರೆ ನಾನು ನಿರ್ದೋಷಿ. ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.