Leviticus · chapter 14 · verse 19
Leviticus 14:19 in Kannada
ಇದಲ್ಲದೆ ಯಾಜಕನು ಪಾಪದ ಬಲಿಯನ್ನು ಸಮರ್ಪಿಸಿ ಶುದ್ಧಪಡಿಸಿಕೊಳ್ಳುವ ವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು; ತರುವಾಯ ಅವನು ದಹನಬಲಿಯನ್ನು ವಧಿಸಬೇಕು.
Idallade yaajakanu paapada baliyannu samarpisi shuddhapadisikolluva vanigoskara avana ashuddhategaagi praayashchitta maadabeku; taruvaaya avanu dahanabaliyannu vadhisabeku.
Leviticus 14:19 in English
- King James Version (KJV)
- And the priest shall offer the sin offering, and make an atonement for him that is to be cleansed from his uncleanness; and afterward he shall kill the burnt offering:
- World English Bible (WEB)
- “The priest shall offer the sin offering, and make atonement for him who is to be cleansed because of his uncleanness. Afterward he shall kill the burnt offering;
- American Standard Version (ASV)
- And the priest shall offer the sin-offering, and make atonement for him that is to be cleansed because of his uncleanness: and afterward he shall kill the burnt-offering;
- Bible in Basic English (BBE)
- And the priest will give the sin-offering, and take away the sin of him who is to be made clean from his unclean condition; and after that he will put the burned offering to death.
- Darby Translation (DBY)
- And the priest shall offer the sin-offering, and make atonement for him that is to be cleansed from his uncleanness; and afterwards shall he slaughter the burnt-offering.
- Webster's Bible (WBS)
- And the priest shall offer the sin-offering, and make an atonement for him that is to be cleansed from his uncleanness; and afterward he shall kill the burnt-offering.
- Young's Literal Translation (YLT)
- 'And the priest hath made the sin-offering, and hath made atonement for him who is to be cleansed from his uncleanness, and afterwards he doth slaughter the burnt-offering;
Read in context
- 17ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಪಡಿಸಿಕೊಳ್ಳವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿಗೆ ಬಲಗಾಲಿನ ಹೆಬ್ಬೆರಳಿಗೆ ಹಚ್ಚ ಬೇಕು.
- 18ಯಾಜಕನ ಕೈಯಲ್ಲಿ ಮಿಕ್ಕಿದ್ದ ಆ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯ ಬೇಕು. ಯಾಜಕನು ಅವನಿಗಾಗಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು.
- 19ಇದಲ್ಲದೆ ಯಾಜಕನು ಪಾಪದ ಬಲಿಯನ್ನು ಸಮರ್ಪಿಸಿ ಶುದ್ಧಪಡಿಸಿಕೊಳ್ಳುವ ವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು; ತರುವಾಯ ಅವನು ದಹನಬಲಿಯನ್ನು ವಧಿಸಬೇಕು.
- 20ಯಾಜಕನು ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋ ಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
- 21ಅವನು ಬಡವನಾಗಿದ್ದರೆ ಅಷ್ಟೊಂದು ತರುವದಕ್ಕೆ ಆಗದಿದ್ದರೆ ತನ್ನ ಪ್ರಾಯಶ್ಚಿತ್ತ ಅಪರಾಧದ ಬಲಿಗಾಗಿ ಆಡಿಸುವದಕ್ಕೆ ಒಂದು ಕುರಿ ಮರಿಯನ್ನೂ ಎಣ್ಣೆಬೆರೆಸಿದ ಹತ್ತರಲ್ಲೊಂದು ಭಾಗ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ
Cross references
- Leviticus 14:12 ಯಾಜಕಕಾಂಡ 14:12ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಂಡು ಅಪರಾಧ ಬಲಿಗಾಗಿ ಸಮರ್ಪಿಸಿ ಅವುಗಳನ್ನು ಆಡಿಸುವ ಸಮರ್ಪಣೆಗಾಗಿ ಕರ್ತನ ಎದುರಿನಲ್ಲಿ ಆಡಿಸಬೇಕು.
- Romans 8:3 ರೋಮಾಪುರದವರಿಗೆ 8:3ನ್ಯಾಯಪ್ರಮಾಣವು ಶರೀರದ ಮೂಲಕ ನಿರ್ಬಲವಾಗಿ ಯಾವದನ್ನು ಮಾಡಲಾರದೆ ಇತ್ತೋ ಅದನ್ನು ದೇವರೇ ಮಾಡಿದನು; ಹೇಗಂದರೆ ಆತನು ತನ್ನ ಸ್ವಂತ ಮಗನನ್ನು ಪಾಪಶರೀರದ ಹೋಲಿಕೆ ಯಲ್ಲಿ ಕಳುಹಿಸಿ ಪಾಪಕ್ಕಾಗಿ ಆ ಶರೀರದಲ್ಲಿಯೇ ಪಾಪವನ್ನು ದಂಡಿಸಿದನು.
- Leviticus 5:1 ಯಾಜಕಕಾಂಡ 5:1ಯಾವನಾದರೂ ಆಣೆಯಿಡುವದನ್ನು ಕೇಳಿ ಸಾಕ್ಷಿಯಾಗಿದ್ದು ಪಾಪಮಾಡಿದರೆ ಅವನು ಅದನ್ನು ನೋಡಿಯೂ ಇಲ್ಲವೆ ತಿಳಿದೂ ಹೇಳದಿದ್ದರೆ ಅವನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು.
- Leviticus 12:6–8 ಯಾಜಕಕಾಂಡ 12:6–8ಮಗನಿಗಾಗಿ ಮಗಳಿಗಾಗಿ ಅವಳ ಶುದ್ಧೀಕರಣದ ದಿನಗಳು ಪೂರ್ತಿಯಾದರೆ ಅವಳು ದಹನಬಲಿಗಾಗಿ ಮೊದಲನೇ ವರುಷದ ಕುರಿಮರಿಯನ್ನೂ ಪಾಪದ ಬಲಿಗಾಗಿ ಪಾರಿವಾಳದ ಮರಿಯನ್ನೂ ಒಂದು ಬೆಳವ ವನ್ನೂ ಸಭೆಯ ಗುಡಾರದ ಬಾಗಲಲ್ಲಿ ಯಾಜಕನ ಬಳಿಗೆ ತರಬೇಕು. ಅವನು ಕರ್ತನ ಮುಂದೆ ಅದನ್ನು ಅರ್ಪಿಸಿ ಅವಳಿಗಾಗಿ ಪ್ರಾಯಶ್ಚಿತ್ತಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗುವಳು. ಗಂಡು ಮಗುವನ್ನಾಗಲಿ ಹೆಣ್ಣು ಮಗುವನ್ನಾಗಲಿ ಹೆತ್ತವಳ ನಿಯಮವು ಇದೇ.ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ ದಹನಬಲಿಗಾಗಿ ಒಂದು ಪಾಪದ ಬಲಿಗಾಗಿ ಇನ್ನೊಂದು ಎಂಬಂತೆ ಎರಡು ಬೆಳವಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತಮಾಡಬೇಕು, ಆಗ ಅವಳು ಶುದ್ಧಳಾಗುವಳು. ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ ದಹನಬಲಿಗಾಗಿ ಒಂದು ಪಾಪದ ಬಲಿಗಾಗಿ ಇನ್ನೊಂದು ಎಂಬಂತೆ ಎರಡು ಬೆಳವಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತಮಾಡಬೇಕು, ಆಗ ಅವಳು ಶುದ್ಧಳಾಗುವಳು.
- Leviticus 5:6 ಯಾಜಕಕಾಂಡ 5:6ಅವನು ತಾನು ಮಾಡಿದ ಪಾಪಕ್ಕಾಗಿ ಕರ್ತನಿಗೆ ಅಪರಾಧ ಬಲಿಯನ್ನು ಪಾಪದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣುಕುರಿ ಇಲ್ಲವೆ ಮೇಕೆಗಳಲ್ಲಿ ಒಂದು ಮರಿಯನ್ನು ತರಬೇಕು; ಯಾಜಕನು ಅವನ ಪಾಪದ ವಿಷಯದಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
- 2 Corinthians 5:21 2 ಕೊರಿಂಥದವರಿಗೆ 5:21ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.