Leviticus · chapter 21 · verse 22
Leviticus 21:22 in Kannada
ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು.
Avanu ati parishuddhavaada mattu parishuddhavaada tanna devara rottiyannu tinnabeku.
Leviticus 21:22 in English
- King James Version (KJV)
- He shall eat the bread of his God, [both] of the most holy, and of the holy.
- World English Bible (WEB)
- He shall eat the bread of his God, both of the most holy, and of the holy.
- American Standard Version (ASV)
- He shall eat the bread of his God, both of the most holy, and of the holy:
- Bible in Basic English (BBE)
- He may take of the bread of God, the holy and the most holy;
- Darby Translation (DBY)
- The bread of his God, of the most holy and of the holy, shall he eat;
- Webster's Bible (WBS)
- He shall eat the bread of his God, [both] of the most holy, and of the holy.
- Young's Literal Translation (YLT)
- 'Bread of his God — of the most holy things, and of the holy things — he doth eat;
Read in context
- 20ಗೂನು ಬೆನ್ನುಳ್ಳವನು ಗಿಡ್ಡನು ಕಣ್ಣುಗಳಲ್ಲಿ ಕಳಂಕವುಳ್ಳವನು ಹುರುಕುಳ್ಳವನು ತುರಿಯುಳ್ಳವನು ತನ್ನ ಬೀಜಹೊಡೆದವನು
- 21ಯಾಜಕನಾದ ಆರೋನನ ಸಂತತಿಯಲ್ಲಿ ಕಳಂಕವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸು ವದಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಬರಬಾರದು; ಕಳಂಕವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವದಕ್ಕಾಗಿ ಸವಿಾಪಬರಬಾರದು.
- 22ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು.
- 23ಆದರೆ ಅವನು ಕಳಂಕವುಳ್ಳವನಾದದರಿಂದ ತೆರೆಯ ಒಳಕ್ಕೆ ಹೋಗ ಬಾರದು ಇಲ್ಲವೆ ಯಜ್ಞವೇದಿಯ ಸವಿಾಪಕ್ಕೂ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ.ಮೋಶೆಯು ಅದನ್ನು ಆರೋನ ನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಎಲ್ಲಾ ಮಕ್ಕಳಿಗೂ ಹೇಳಿದನು.
- 24ಮೋಶೆಯು ಅದನ್ನು ಆರೋನ ನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಎಲ್ಲಾ ಮಕ್ಕಳಿಗೂ ಹೇಳಿದನು.
Cross references
- Leviticus 2:3 ಯಾಜಕಕಾಂಡ 2:3ಆಹಾರದ ಸಮರ್ಪಣೆ ಯಲ್ಲಿ ಉಳಿದದ್ದು ಆರೋನನಿಗೂ ಅವನ ಕುಮಾರ ರಿಗೂ ಆಗಬೇಕು; ಅದು ಬೆಂಕಿಯಿಂದ ಮಾಡಿದ ಕರ್ತನ ಸಮರ್ಪಣೆಗಳಲ್ಲಿ ಅತಿ ಪರಿಶುದ್ಧವಾದದ್ದು.
- Numbers 18:9–10 ಅರಣ್ಯಕಾಂಡ 18:9–10ಬೆಂಕಿಗೆ ಒಳಗಾಗದ ಅತೀ ಪರಿಶುದ್ಧ ವಾದವುಗಳಲ್ಲಿ ನಿನಗಾಗಬೇಕಾದವುಗಳು ಯಾವ ವೆಂದರೆ--ಅವರ ಅರ್ಪಣೆಗಳೆಲ್ಲಾ ಅಂದರೆ ಅವರು ನನಗೆ ತರುವ ಆಹಾರ ಸಮರ್ಪಣೆಗಳು ಪಾಪದ ಬಲಿಗಳು ಅಪರಾಧದ ಬಲಿಗಳು ಇವೆಲ್ಲಾ ಅತೀ ಪರಿಶುದ್ಧವಾಗಿ ನಿನಗೂ ನಿನ್ನ ಕುಮಾರರಿಗೂ ಇರಬೇಕು. ನೀನು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು; ಎಲ್ಲಾ ಗಂಡಸರು ಅದನ್ನು ತಿನ್ನಬೇಕು. ಅದು ನಿನಗೆ ಪರಿಶುದ್ಧವಾಗಿರುವದು.
- Leviticus 7:1 ಯಾಜಕಕಾಂಡ 7:1ಅದರಂತೆಯೇ ಅತಿಕ್ರಮ ಬಲಿಯ ನಿಯಮವು ಇದೇ: ಇದು ಅತಿ ಪರಿಶುದ್ಧ ವಾದದ್ದು.
- Numbers 18:19 ಅರಣ್ಯಕಾಂಡ 18:19ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು.
- Leviticus 24:8–9 ಯಾಜಕಕಾಂಡ 24:8–9ಪ್ರತಿಯೊಂದು ಸಬ್ಬತ್ತಿನಲ್ಲಿ ಕರ್ತನ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮ ಪಡಿಸಬೇಕು; ಇದು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು. ಅದು ಆರೋನನ ಮತ್ತು ಅವನ ಕುಮಾರರದ್ದಾಗಿರಬೇಕು; ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು; ಅದು ನಿತ್ಯವಾದ ನಿಯಮವಾಗಿ ಕರ್ತನಿಗೆ ಬೆಂಕಿಯಿಂದ ಮಾಡಿ ಸಮರ್ಪಿಸುವವುಗಳಲ್ಲಿ ಅವನಿಗೆ ಅತಿ ಪರಿಶುದ್ಧವಾಗಿರುವದು.
- 1 Corinthians 9:13 1 ಕೊರಿಂಥದವರಿಗೆ 9:13ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ?
- Leviticus 22:10–13 ಯಾಜಕಕಾಂಡ 22:10–13ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಪ್ರವಾಸಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು. ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ ಅವನು ಅದರಲ್ಲಿ ತಿನ್ನಬೇಕು, ಅವನ ಮನೆಯಲ್ಲಿ ಹುಟ್ಟಿದವನು ತಿನ್ನಲಿ; ಅವರು ಅವನ ಆಹಾರವನ್ನು ತಿನ್ನಲಿ. ಯಾಜಕನ ಮಗಳು ಒಬ್ಬ ಪರಕೀಯನನ್ನು ಮದುವೆಯಾದರೆ ಅವಳು ಸಮ ರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು. ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಬಿಡಲ್ಪಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ; ಆದರೆ ಪರಕೀಯನು ಅದರಲ್ಲಿ ತಿನ್ನಬಾರದು.
- Leviticus 2:10 ಯಾಜಕಕಾಂಡ 2:10ಆಹಾರ ಸಮರ್ಪಣೆಯಲ್ಲಿ ಉಳಿದದ್ದು ಆರೋನನಿಗೂ ಅವನ ಕುಮಾರರಿಗೂ ಆಗಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಕರ್ತನ ಸಮ ರ್ಪಣೆಗಳಲ್ಲಿ ಅತಿ ಪರಿಶುದ್ಧವಾಗಿರುವದು.
- Leviticus 6:16–17 ಯಾಜಕಕಾಂಡ 6:16–17ಅದ ರಲ್ಲಿ ಉಳಿದದ್ದನ್ನು ಆರೋನನೂ ಅವನ ಕುಮಾರರೂ ತಿನ್ನಬೇಕು; ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು; ಅದನ್ನು ಅವರು ಸಭೆಯ ಗುಡಾರದ ಅಂಗಳದಲ್ಲಿ ತಿನ್ನಬೇಕು. ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ನಾನು ಅದನ್ನು ಅವರಿಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆ ಗಳಲ್ಲಿ ಅವರ ಪಾಲನ್ನು ಅವರಿಗೆ ಕೊಟ್ಟಿದ್ದೇನೆ. ಅದು ಅತಿಕ್ರಮದ ಬಲಿಯ ಹಾಗೆಯೂ ಪಾಪದ ಬಲಿಯ ಹಾಗೆಯೂ ಅತಿ ಪರಿಶುದ್ಧವಾದದ್ದು.
- Leviticus 6:29 ಯಾಜಕಕಾಂಡ 6:29ಯಾಜಕರಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು; ಅದು ಅತಿ ಪರಿಶುದ್ಧವಾದದ್ದು.ಯಾವ ಪಾಪದ ಬಲಿಯ ರಕ್ತವು ಸಭೆಯ ಡೇರೆಯೊಳಗೆ ಸಮಾಧಾನಕ್ಕಾಗಿ ತರಲ್ಪಟ್ಟಿತೋ ಆ ಪಾಪದ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು; ಅದನ್ನು ಬೆಂಕಿಯಿಂದ ಸುಡಬೇಕು.