Leviticus · chapter 21 · verse 9
Leviticus 21:9 in Kannada
ಯಾವದೇ ಯಾಜಕನ ಮಗಳು ವ್ಯಭಿ ಚಾರ ಕೃತ್ಯದಿಂದ ತನ್ನನ್ನು ಅಪವಿತ್ರಮಾಡಿಕೊಂಡರೆ ಅವಳು ತನ್ನ ತಂದೆಯನ್ನು ಅಪವಿತ್ರಮಾಡುತ್ತಾಳೆ; ಅವಳನ್ನು ಬೆಂಕಿಯಿಂದ ಸುಡಬೇಕು.
Yaavade yaajakana magalu vyabhi chaara krutyadinda tannannu apavitramaadikondare avalu tanna tandeyannu apavitramaaduttaale; avalannu benkiyinda sudabeku.
Leviticus 21:9 in English
- King James Version (KJV)
- And the daughter of any priest, if she profane herself by playing the whore, she profaneth her father: she shall be burnt with fire.
- World English Bible (WEB)
- “‘The daughter of any priest, if she profanes herself by playing the prostitute, she profanes her father. She shall be burned with fire.
- American Standard Version (ASV)
- And the daughter of any priest, if she profane herself by playing the harlot, she profaneth her father: she shall be burnt with fire.
- Bible in Basic English (BBE)
- And if the daughter of a priest makes herself common and by her loose behaviour puts shame on her father, let her be burned with fire.
- Darby Translation (DBY)
- And the daughter of any priest, if she profane herself by playing the whore, she profaneth her father: she shall be burned with fire.
- Webster's Bible (WBS)
- And the daughter of any priest, if she shall profane herself by lewdness, she profaneth her father: she shall be burnt with fire.
- Young's Literal Translation (YLT)
- 'And a daughter of any priest when she polluteth herself by going a-whoring — her father she is polluting; with fire she is burnt.
Read in context
- 7ಅವರು ವ್ಯಭಿಚಾರಿಯನ್ನು ಇಲ್ಲವೆ ಅಪವಿತ್ರಳನ್ನು ಹೆಂಡತಿಯಾಗಿ ತೆಗೆದುಕೊಳ್ಳಬಾರದು; ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯನ್ನು ತೆಗೆದು ಕೊಳ್ಳಬಾರದು; ಅವನು ತನ್ನ ದೇವರಿಗೆ ಪರಿಶುದ್ಧ ನಾಗಿದ್ದಾನೆ.
- 8ಅವನು ನಿನ್ನ ದೇವರಿಗೆ ರೊಟ್ಟಿಯನ್ನು ಸಮರ್ಪಿಸುವ ಕಾರಣ ನೀನು ಅವನನ್ನು ಶುದ್ಧೀಕರಿಸ ಬೇಕು, ಅವನು ನನಗೆ ಪರಿಶುದ್ಧನಾಗಿರುವನು. ನಿನ್ನನ್ನು ಶುದ್ಧೀಕರಿಸುವ ಕರ್ತನಾದ ನಾನು ಪರಿಶುದ್ಧನು.
- 9ಯಾವದೇ ಯಾಜಕನ ಮಗಳು ವ್ಯಭಿ ಚಾರ ಕೃತ್ಯದಿಂದ ತನ್ನನ್ನು ಅಪವಿತ್ರಮಾಡಿಕೊಂಡರೆ ಅವಳು ತನ್ನ ತಂದೆಯನ್ನು ಅಪವಿತ್ರಮಾಡುತ್ತಾಳೆ; ಅವಳನ್ನು ಬೆಂಕಿಯಿಂದ ಸುಡಬೇಕು.
- 10ಅವನ ಸಹೋದರರೊಳಗೆ ಮಹಾಯಾಜಕ ನಾಗಿದ್ದು ಯಾವನ ತಲೆಯ ಮೇಲೆ ಅಭಿಷೇಕ ತೈಲವು ಸುರಿಯಲ್ಪಟ್ಟಿದೆಯೋ ಮತ್ತು ಯಾವನು ಉಡುಪು ಗಳನ್ನು ಧರಿಸಿಕೊಳ್ಳುವದಕ್ಕೆ ಪ್ರತಿಷ್ಠಿಸಲ್ಪಟ್ಟಿದ್ದಾನೋ ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು ಮತ್ತು ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು;
- 11ಇಲ್ಲವೆ ಯಾವ ಮೃತ ಶರೀರದ ಬಳಿಗೂ ಹೋಗಬಾರದು; ತನ್ನ ತಂದೆಗಾಗಲಿ ತಾಯಿಗಾಗಲಿ ತನ್ನನ್ನು ಹೊಲೆಮಾಡಿಕೊಳ್ಳಬಾರದು.
Cross references
- Genesis 38:24 ಆದಿಕಾಂಡ 38:24ಹೆಚ್ಚುಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ--ನಿನ್ನ ಸೊಸೆಯಾದ ತಾಮಾರಳು ಜಾರತ್ವ ಮಾಡಿದ್ದಾಳೆ; ಜಾರತ್ವದಿಂದ ಗರ್ಭಿಣಿಯಾಗಿ ದ್ದಾಳೆ ಎಂದು ತಿಳಿಸಿದರು. ಆಗ ಯೆಹೂದನು--ಅವಳನ್ನು ಹೊರಗೆ ತನ್ನಿರಿ, ಅವಳು ಸುಡಲ್ಪಡಲಿ ಅಂದನು.
- Leviticus 19:29 ಯಾಜಕಕಾಂಡ 19:29ನಿನ್ನ ಮಗಳು ಸೂಳೆಯಾಗುವಂತೆ ವ್ಯಭಿಚಾರಕ್ಕೆ ಬಿಡಬೇಡ; ಬಿಟ್ಟರೆ ಅದರಿಂದ ದೇಶವು ಸೂಳೆತನಕ್ಕೆ ಒಳಪಟ್ಟು, ದೇಶವು ಎಲ್ಲಾ ಕೆಟ್ಟತನದಿಂದ ತುಂಬು ವದು.
- 1 Samuel 2:17 1 ಸಮುವೇಲನು 2:17ಆ ಯೌವನಸ್ಥರ ಪಾಪವು ಕರ್ತನ ಸನ್ನಿಧಿಯಲ್ಲಿ ಅಧಿಕವಾಗಿತ್ತು. ಆದದರಿಂದ ಜನರು ಕರ್ತನ ಅರ್ಪಣೆಯನ್ನು ತುಚ್ಛ ವಾಗಿ ಕಂಡರು.
- Malachi 2:3 ಮಲಾಕಿಯ 2:3ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು.
- 1 Samuel 2:34 1 ಸಮುವೇಲನು 2:34ಇದ ಲ್ಲದೆ ನಿನಗೆ ಗುರುತಾಗಿ ಹೊಫ್ನಿಯು ಫೀನೆಹಾಸನು ಎಂಬ ನಿನ್ನ ಇಬ್ಬರು ಮಕ್ಕಳಿಗೆ ಬರುವದೇನಂದರೆ, ಅವರಿಬ್ಬರೂ ಒಂದೇ ದಿವಸದಲ್ಲಿ ಸಾಯುವರು.
- Joshua 7:25 ಯೆಹೋಶುವ 7:25ಆಗ ಯೆಹೋಶುವನು ಅವನಿಗೆ--ನೀನು ನಮ್ಮನ್ನು ತೊಂದರೆ ಪಡಿಸಿದ್ದೇನು? ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು. ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು. ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
- Matthew 11:20–24 ಮತ್ತಾಯನು 11:20–24ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ -- ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು. ಆದರೆ ನಾನು ನಿಮಗೆ ಹೇಳುವದೇನಂದರೆ-- ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್ಗಳ ಗತಿಯು ಹೆಚ್ಚು ತಾಳಬಹುದಾಗಿರುವದು. ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು. ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
- Isaiah 33:14 ಯೆಶಾಯ 33:14ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯವು ಕಪಟಿಗಳನ್ನು ಆಶ್ಚರ್ಯಕ್ಕೊಳಗಾಗಿ--ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುವರು.
- 1 Timothy 3:4–5 1 ತಿಮೊಥೆಯನಿಗೆ 3:4–5ಪೂರ್ಣ ಗೌರವದಿಂದ ತನ್ನ ಮಕ್ಕಳನ್ನೂ ಅಧೀನದಲ್ಲಿ ಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವ ನಾಗಿರಬೇಕು. (ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿ ಸುವನು)?
- Joshua 7:15 ಯೆಹೋಶುವ 7:15ಆಗ ಶಾಪಕ್ಕೀಡಾದ ದ್ದನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುವವನು ಕರ್ತನ ಒಡಂಬಡಿಕೆಯನ್ನು ವಿಾರಿ ಇಸ್ರಾಯೇಲಿ ನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲ್ಪಡಬೇಕು ಅಂದನು.
- 1 Samuel 3:13–14 1 ಸಮುವೇಲನು 3:13–14ತನ್ನ ಕುಮಾರರು ತಮ್ಮ ಭ್ರಷ್ಟತ ನಕ್ಕೆ ಈಡಾದಾಗ ಅವರನ್ನು ಹತೋಟಿಗೆ ತರಲಿಲ್ಲ. ಆದದರಿಂದ ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯ ತೀರಿಸುವೆನು ಎಂದು ಹೇಳಿದ್ದೇನೆ. ಆದದರಿಂದ ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿ ಯಿಂದಲಾದರೂ ಅರ್ಪಣೆಯಿಂದಲಾದರೂ ಶುದ್ಧ ಮಾಡಲ್ಪಡುವದಿಲ್ಲ ಎಂದು ನಾನು ಏಲಿಯ ಮನೆ ಯನ್ನು ಕುರಿತು ಆಣೆ ಇಟ್ಟೆನು ಅಂದನು.
- Ezekiel 9:6 ಯೆಹೆಜ್ಕೇಲನು 9:6ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.