Leviticus · chapter 27 · verse 10
Leviticus 27:10 in Kannada
ಅದನ್ನು ಒಳ್ಳೇದಕ್ಕೆ ಕೆಟ್ಟದ್ದನ್ನಾಗಲಿ ಕೆಟ್ಟದ್ದಕ್ಕೆ ಒಳ್ಳೇದನ್ನಾಗಲಿ ಬದಲು ಮಾಡಬಾರದು ಮತ್ತು ಮಾರ್ಪಡಿ ಸಲೂಬಾರದು; ಹೇಗಾದರೂ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ ಅದು ಅದರ ಬದಲೂ ಪರಿಶುದ್ಧವಾಗಿರಬೇಕು.
Adannu olledakke kettaddannaagali kettaddakke olledannaagali badalu maadabaaradu mattu maarpadi saloobaaradu; hegaadaroo ondu pashuvige mattondannu badalu maadidare adu adara badaloo parishuddhavaagirabeku.
Leviticus 27:10 in English
- King James Version (KJV)
- He shall not alter it, nor change it, a good for a bad, or a bad for a good: and if he shall at all change beast for beast, then it and the exchange thereof shall be holy.
- World English Bible (WEB)
- He shall not alter it, nor exchange it, a good for a bad, or a bad for a good. If he shall at all exchange animal for animal, then both it and that for which it is exchanged shall be holy.
- American Standard Version (ASV)
- He shall not alter it, nor change it, a good for a bad, or a bad for a good: and if he shall at all change beast for beast, then both it and that for which it is changed shall be holy.
- Bible in Basic English (BBE)
- It may not be changed in any way, a good given for a bad, or a bad for a good; if one beast is changed for another, the two will be holy.
- Darby Translation (DBY)
- They shall not alter it nor change it, a good for a bad, or a bad for a good; and if he at all change beast for beast, then it and the exchange thereof shall be holy.
- Webster's Bible (WBS)
- He shall not alter it, nor change it, a good for a bad, or a bad for a good: and if he shall at all change beast for beast, then it and the exchange of it shall be holy.
- Young's Literal Translation (YLT)
- he doth not change it nor exchange it, a good for a bad, or a bad for a good; and if he really change beast for beast, — then it hath been — it and its exchange is holy.
Read in context
- 8ಆದರೆ ನೀನು ನೇಮಿಸಿದ ಕ್ರಯವನ್ನು ಕೂಡ ಕೊಡದಷ್ಟು ಅವನು ಬಡವನಾಗಿದ್ದರೆ ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿ ಸಬೇಕು. ಪ್ರಮಾಣಮಾಡಿದವನ ಸಂಪತ್ತಿಗೆ ಸರಿಯಾಗಿ ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು.
- 9ಮನುಷ್ಯನು ಕರ್ತನಿಗೆ ಅರ್ಪಣೆಗಾಗಿ ತರುವವುಗ ಳಲ್ಲಿ ಅದು ಪಶುವಾಗಿದ್ದರೆ ಅವನು ಕೊಡುವಂತವು ಗಳೆಲ್ಲಾ ಕರ್ತನಿಗೆ ಶುದ್ಧವಾಗಿರುವದು.
- 10ಅದನ್ನು ಒಳ್ಳೇದಕ್ಕೆ ಕೆಟ್ಟದ್ದನ್ನಾಗಲಿ ಕೆಟ್ಟದ್ದಕ್ಕೆ ಒಳ್ಳೇದನ್ನಾಗಲಿ ಬದಲು ಮಾಡಬಾರದು ಮತ್ತು ಮಾರ್ಪಡಿ ಸಲೂಬಾರದು; ಹೇಗಾದರೂ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ ಅದು ಅದರ ಬದಲೂ ಪರಿಶುದ್ಧವಾಗಿರಬೇಕು.
- 11ಅದು ಕರ್ತನಿಗೆ ಅರ್ಪಣೆಯಾಗಿ ತಾರದ ಯಾವದಾದರೂ ಅಶುದ್ಧ ಪಶುವಾಗಿದ್ದರೆ ಆ ಪಶುವನ್ನು ಅವನು ಯಾಜಕನ ಮುಂದೆ ನಿಲ್ಲಿಸಬೇಕು.
- 12ಆಗ ಯಾಜಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಅದಕ್ಕೆ ಕ್ರಯಕಟ್ಟಬೇಕು. ಯಾಜಕನಾದ ನೀನು ಮಾಡಿದ ಕ್ರಯವೇ ಕ್ರಯವಾ ಗಿರಬೇಕು.
Cross references
- Leviticus 27:15–33 ಯಾಜಕಕಾಂಡ 27:15–33ಆದರೆ ಪರಿಶುದ್ಧ ಮಾಡಿ ದವನು ತನ್ನ ಮನೆಯನ್ನು ವಿಮೋಚಿಸಬೇಕೆಂದಿದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಪಾಲಿನ ಹಣವನ್ನು ಕೊಡಲಿ; ಆಗ ಅದು ಅವನದಾಗಿರುವದು. ಒಬ್ಬನು ತನ್ನ ಸ್ವಾಸ್ತ್ಯದ ಹೊಲದಲ್ಲಿ ಏನಾದರೂ ಕರ್ತನಿಗೆ ಪರಿಶುದ್ಧ ಮಾಡಿದರೆ ನೀನು ಅದರ ಬೀಜದ ಪ್ರಕಾರ ಕ್ರಯಕಟ್ಟಬೇಕು; ಜವೆಗೋಧಿಯ ಒಂದು ಓಮೆರಷ್ಟು ಬೀಜಕ್ಕೆ ಐವತ್ತು ಬೆಳ್ಳಿ ಶೇಕೆಲುಗಳು. ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು. ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ಜೂಬಿಲಿ ಸಂವತ್ಸರದ ವರೆಗೆ ಮಿಕ್ಕ ವರುಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ಎಣಿಸಿ ನೀನು ಕಟ್ಟಿದ ಕ್ರಯದಿಂದ ಕಳೆಯ ಬೇಕು. ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿ ದವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿ ದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅವನು ಕೊಡಬೇಕು; ಆಗ ಅವನಿಗೆ ಅದು ಸ್ಥಿರವಾಗಿರುವದು. ಆದರೆ ಅವನು ಹೊಲವನ್ನು ವಿಮೋಚಿಸದೆ ಹೋದರೆ ಇಲ್ಲವೆ ಮತ್ತೊಬ್ಬನಿಗೆ ಆ ಹೊಲವನ್ನು ಮಾರಿದ್ದರೆ ಅದನ್ನು ಇನ್ನು ಮೇಲೆ ವಿಮೋಚಿಸಕೂಡದು. ಆ ಹೊಲವು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವಾಗ ಪ್ರತ್ಯೇಕಿಸಲ್ಪಟ್ಟು ಒಪ್ಪಿಸಲ್ಪಟ್ಟ ಹೊಲದ ಹಾಗೆ ಕರ್ತನಿಗೆ ಅದು ಪರಿಶುದ್ಧವಾಗಿರಬೇಕು; ಅದರ ಸ್ವಾಸ್ತ್ಯವು ಯಾಜಕ ನಿಗೆ ಸಲ್ಲಬೇಕು. ತನ್ನ ಸ್ವಾಸ್ತ್ಯದ ಹೊಲಗಳಲ್ಲಿ ಸೇರದಂಥ, ತಾನು ಕೊಂಡುಕೊಂಡ ಹೊಲವನ್ನು ಒಬ್ಬನು ಕರ್ತನಿಗೆ ಪರಿಶುದ್ಧ ಮಾಡಿದರೆ ಯಾಜಕನು ಅವನಿಗೆ ನೀನು ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದ ವರೆಗೂ ಎಣಿಸಬೇಕು; ಅವರು ಆ ದಿವಸದಲ್ಲಿ ನೀನು ಕಟ್ಟಿದ ಕ್ರಯವನ್ನು ಕರ್ತನಿಗೆ ಪರಿಶುದ್ಧವಾದದ್ದಾಗಿ ಅವನು ಕೊಡಬೇಕು. ಜೂಬಿಲಿ ಸಂವತ್ಸರದಲ್ಲಿ ಆ ಹೊಲದ ಭೂಮಿಯ ಸ್ವಾಸ್ತ್ಯವುಂಟಾದವನಿಗೆ ಅಂದರೆ ಇವನು ಯಾವನಿಂದ ಕೊಂಡುಕೊಂಡನೋ ಅವನಿಗೆ ತಿರುಗಿ ಹಿಂದಕ್ಕೆ ಕೊಡಬೇಕು. ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು. ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ. ಆದರೆ ಅದು ಅಶುದ್ಧ ಪಶುವಾಗಿದ್ದರೆ ನೀನು ಕ್ರಯ ಕಟ್ಟಿದ ಪ್ರಕಾರ ಅದಕ್ಕೆ ಹೆಚ್ಚಾಗಿ ಐದನೇ ಪಾಲನ್ನು ಕೊಟ್ಟು ಅವನು ಅದನ್ನು ವಿಮೋಚಿಸಬೇಕು; ವಿಮೋಚಿಸದಿದ್ದರೆ ಅದನ್ನು ನೀನು ಕ್ರಯ ಕಟ್ಟಿದ ಪ್ರಕಾರ ಮಾರಬೇಕು. ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ. ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು. ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು. ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು. ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು. ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.
- James 1:8 ಯಾಕೋಬನು 1:8ಎರಡು ಮನಸ್ಸುಳ್ಳವನು ತನ್ನ ಮಾರ್ಗಗಳ ಲ್ಲೆಲ್ಲಾ ಚಂಚಲನಾಗಿದ್ದಾನೆ.