Leviticus · chapter 3 · verse 1
Leviticus 3:1 in Kannada
ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.
Avana kaanikeyu samaadhaanada baliya arpaneyaagiddu adannu mandeyinda arpisuvadaadare adu gandaagali illave hennaagali adannu avanu kartana munde doshavilladdaagi samarpisali.
Leviticus 3:1 in English
- King James Version (KJV)
- And if his oblation [be] a sacrifice of peace offering, if he offer [it] of the herd; whether [it be] a male or female, he shall offer it without blemish before the LORD.
- World English Bible (WEB)
- “‘If his offering is a sacrifice of peace offerings, if he offers it from the herd, whether male or female, he shall offer it without defect before the LORD.
- American Standard Version (ASV)
- And if his oblation be a sacrifice of peace-offerings; if he offer of the herd, whether male or female, he shall offer it without blemish before Jehovah.
- Bible in Basic English (BBE)
- And if his offering is given for a peace-offering; if he gives of the herd, male or female, let him give it without any mark on it, before the Lord.
- Darby Translation (DBY)
- And if his offering be a sacrifice of peace-offering, — if he present [it] of the herd, whether a male or female, he shall present it without blemish before Jehovah.
- Webster's Bible (WBS)
- And if his oblation [shall be] a sacrifice of peace-offering, if he shall offer [it] of the herd, whether a male or female; he shall offer it without blemish before the LORD.
- Young's Literal Translation (YLT)
- 'And if his offering [is] a sacrifice of peace-offerings, if out of the herd he is bringing near, whether male or female, a perfect one he doth bring near before Jehovah,
Read in context
- 1ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.
- 2ಅವನು ಸಮರ್ಪಿ ಸುವದರ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ವಧಿಸ ಬೇಕು; ಯಾಜಕರಾದ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸ ಬೇಕು.
- 3ಅವನು ಸಮಾಧಾನದ ಕಾಣಿಕೆಯ ಯಜ್ಞಾ ರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ
Cross references
- Leviticus 1:3 ಯಾಜಕಕಾಂಡ 1:3ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.
- Numbers 6:14 ಅರಣ್ಯಕಾಂಡ 6:14ಅವನು ಕರ್ತನಿಗೆ ತನ್ನ ಅರ್ಪಣೆಯನ್ನು ಅರ್ಪಿಸ ಬೇಕು; ಅದೇನಂದರೆ, ದಹನ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಟಗರಿನ ಮರಿಯನ್ನೂ ಪಾಪದ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಒಂದು ಕುರಿಮರಿಯನ್ನೂ ಸಮಾಧಾನದ ಬಲಿಗಾಗಿ ದೋಷವಿಲ್ಲದ ಒಂದು ಟಗರನ್ನೂ ತರಬೇಕು.
- Romans 5:1–2 ರೋಮಾಪುರದವರಿಗೆ 5:1–2ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ. ಈಗ ನಾವು ನೆಲೆ ಗೊಂಡಿರುವ ಈ ಕೃಪೆಯಲ್ಲಿ ಆತನ ಮುಖಾಂತರವೇ ನಂಬಿಕೆಯಿಂದ ಪ್ರವೇಶವಾದದರಿಂದ ದೇವರ ಮಹಿ ಮೆಯ ನಿರೀಕ್ಷೆಯಲ್ಲಿ ಉಲ್ಲಾಸಿಸುತ್ತೇವೆ.
- Hebrews 10:22 ಇಬ್ರಿಯರಿಗೆ 10:22ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ.
- Leviticus 7:11–34 ಯಾಜಕಕಾಂಡ 7:11–34ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ: ಅವನು ಉಪಕಾರಸ್ತುತಿಗಾಗಿ ಅರ್ಪಿಸುವದಾದರೆ, ಉಪಕಾರಸ್ತುತಿ ಬಲಿಯನ್ನು ಹುಳಿಯಿಲ್ಲದ ಎಣ್ಣೆ ಬೆರೆ ಸಿದ ರೊಟ್ಟಿಗಳೊಂದಿಗೆ ಹುಳಿಯಿಲ್ಲದ ಎಣ್ಣೆಹೊಯ್ದ ದೋಸೆಗಳೊಂದಿಗೂ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದರೊಟ್ಟಿಗಳೊಂದಿಗೂ ಸಮರ್ಪಿಸ ಬೇಕು. ರೊಟ್ಟಿಗಳಲ್ಲದೆ ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಸಮರ್ಪಣೆಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸ ಬೇಕು. ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಎತ್ತುವ ಕಾಣಿಕೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದಾಗಬೇಕು. ಉಪಕಾರಸ್ತುತಿಗಾಗಿ ಅವನ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ಅರ್ಪಿ ಸಲ್ಪಟ್ಟ ದಿನವೇ ತಿನ್ನಬೇಕು; ಅವನು ಅದರಲ್ಲಿ ಬೆಳಗಿನ ವರೆಗೆ ಯಾವದನ್ನೂ ಉಳಿಸಬಾರದು. ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಇಚ್ಛೆಯಾದ ಸಮರ್ಪಣೆ ಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ತಿನ್ನಬೇಕು; ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬೇಕು. ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿ ಯಿಂದ ಸುಡಬೇಕು. ತನ್ನ ಸಮಾಧಾನ ಬಲಿ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಸಮರ್ಪಣೆಯಾಗುವದಿಲ್ಲ ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರಿಸಲ್ಪಡುವದಿಲ್ಲ. ಅದು ಹೊಲೆಯಾಗಿರುವದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು. ಅಶುದ್ಧವಾದ ವಸ್ತುವನ್ನು ಮುಟ್ಟಿದ ಮಾಂಸವನ್ನು ತಿನ್ನಬಾರದು; ಅದು ಬೆಂಕಿಯಿಂದ ಸುಡಲ್ಪಡಬೇಕು. ಮಾಂಸದ ವಿಷಯದಲ್ಲಿ ಶುದ್ಧವಾಗಿರುವವರೆಲ್ಲರೂ ಅದನ್ನು ತಿನ್ನ ಬಹುದು. ಯಾವನಾದರೂ ಅಶುದ್ಧನಾಗಿದ್ದು ಕರ್ತ ನಿಗೆ ಸಂಬಂಧಪಟ್ಟ ಸಮಾಧಾನ ಬಲಿಗಳ ಯಜ್ಞದ ಮಾಂಸವನ್ನು ತಿನ್ನುವನೋ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು. ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧತ್ವವನ್ನಾಗಲಿ ಯಾವುದೇ ಅಶುದ್ಧ ವಾದದ್ದನ್ನಾಗಲಿ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧ ವಸ್ತುವನ್ನಾಗಲಿ ಯಾವುದೇ ಅಶುದ್ಧ ಪ್ರಾಣಿ ಯನ್ನಾಗಲಿ ಮುಟ್ಟಿದರೂ ಮತ್ತು ಕರ್ತನಿಗೆ ಸಂಬಂಧಿ ಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೂ ಅವನು ತನ್ನ ಜನರಿಂದ ತೆಗೆದುಹಾಕಲ್ಪಡ ಬೇಕು ಅಂದನು. ಕರ್ತನು ಮೋಶೆಯೊಂದಿಗೆ ಮಾತನಾಡಿ-- ಇಸ್ರಾಯೇಲನ ಮಕ್ಕಳೊಂದಿಗೆ ಮಾತನಾಡಿ ಹೇಳ ಬೇಕಾದದ್ದೇನಂದರೆ--ನೀವು ಎತ್ತು ಕುರಿ ಆಡು ಇವು ಗಳ ಕೊಬ್ಬನ್ನು ತಿನ್ನಬಾರದು. ತಾನಾಗಿಯೇ ಸತ್ತ ಪ್ರಾಣಿಯ ಕೊಬ್ಬನ್ನೂ ಮೃಗಗಳು ಸೀಳಿದ್ದರ ಕೊಬ್ಬನ್ನೂ ಬೇರೆ ಯಾವದಕ್ಕಾದರೂ ಉಪಯೋಗಿಸ ಬಹುದು; ಆದರೆ ನೀವು ಅದನ್ನು ಎಷ್ಟು ಮಾತ್ರವೂ ತಿನ್ನಬಾರದು. ಮನುಷ್ಯರು ಕರ್ತನಿಗೆ ಬೆಂಕಿಯಿಂದ ಸಮರ್ಪಿಸಿದ ಪ್ರಾಣಿಯ ಕೊಬ್ಬನ್ನು ಯಾವನಾದರೂ ತಿಂದರೆ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು. ಇದಲ್ಲದೆ ನೀವು ಯಾವತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾ ಗಲಿ, ಪ್ರಾಣಿಯದಾಗಲಿ, ನಿಮ್ಮ ಯಾವ ನಿವಾಸಗಳ ಲ್ಲಿಯೂ ತಿನ್ನಬಾರದು. ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ ಅವನು ತನ್ನ ಜನರಿಂದ ತೆಗೆದು ಹಾಕಲ್ಪಡಬೇಕು ಎಂಬದೇ. ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಹೀಗೆ ಹೇಳು--ಕರ್ತನಿಗೆ ತನ್ನ ಯಜ್ಞದ ಸಮಾಧಾನ ಬಲಿಯನ್ನು ಅರ್ಪಿಸುವವನು ಯಜ್ಞದ ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಕರ್ತನಿಗೆ ತರಬೇಕು. ಬೆಂಕಿಯಿಂದ ಮಾಡಿದ ಕರ್ತನ ಅರ್ಪಣೆ ಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಕರ್ತನ ಮುಂದೆ ಅಲ್ಲಾಡುವ ಸಮರ್ಪಣೆಗಾಗಿ ಎದೆಯು ಅಲ್ಲಾಡಿಸಲ್ಪಡುವಂತೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು. ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಸುಡಬೇಕು; ಆದರೆ ಎದೆಯು ಆರೋನನ ಮತ್ತು ಅವನ ಮಕ್ಕಳದ್ದಾಗಿರುವದು. ಬಲಭುಜವನ್ನು ನೀವು ಯಾಜಕನಿಗೆ ನಿಮ್ಮ ಸಮಾಧಾನದ ಯಜ್ಞಗಳ ಎತ್ತುವ ಸಮರ್ಪಣೆಗಾಗಿ ಕೊಡಬೇಕು. ಸಮಾ ಧಾನದ ಸಮರ್ಪಣೆಗಳ ರಕ್ತವನ್ನೂ ಕೊಬ್ಬನ್ನೂ ಸಮ ರ್ಪಿಸುವ ಆರೋನನ ಕುಮಾರರಲ್ಲಿ ಒಬ್ಬನು ಭುಜದ ಬಲಭಾಗವನ್ನು ತನ್ನ ಪಾಲಾಗಿ ತೆಗೆದುಕೊಳ್ಳಲಿ. ಆಡಿಸುವ ಎದೆಭಾಗವನ್ನು ಪ್ರತ್ಯೇಕವಾದ ಭುಜ ಭಾಗವನ್ನು ಇಸ್ರಾಯೇಲಿನ ಮಕ್ಕಳ ಸಮಾಧಾನದ ಸಮರ್ಪಣೆಗಳ ಯಜ್ಞಗಳಿಂದ ನಾನು ತೆಗೆದುಕೊಂಡು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲಿನ ಮಕ್ಕಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿ ಕೊಟ್ಟಿ ದ್ದೇನೆ.
- Amos 5:22 ಆಮೋಸ 5:22ನೀವು ನನಗೆ ದಹನಬಲಿಗಳನ್ನೂ ಆಹಾರ ಅರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವುಗಳನ್ನು ಅಂಗೀ ಕರಿಸುವದಿಲ್ಲ, ಇಲ್ಲವೆ ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನು ಲಕ್ಷಿಸುವದಿಲ್ಲ.
- Leviticus 22:19–21 ಯಾಜಕಕಾಂಡ 22:19–21ನೀವು ನಿಮ್ಮ ಸ್ವಇಚ್ಛೆಯಿಂದ ಪಶುಗಳೊಳಗೆ ಕುರಿಗಳೊಳಗೆ ಇಲ್ಲವೆ ಮೇಕೆಗಳೊಳಗೆ ದೋಷವಿಲ್ಲದ ಗಂಡಾಗಿರುವದನ್ನು ಅರ್ಪಿಸಬೇಕು; ಆದರೆ ದೋಷವಿರುವ ಯಾವದನ್ನೂ ಸಮರ್ಪಿಸ ಬಾರದು; ಅದು ನಿಮಗೋಸ್ಕರ ಅಂಗೀಕಾರವಾಗು ವದಿಲ್ಲ. ತನ್ನ ಪ್ರಮಾಣವನ್ನು ಪೂರೈಸುವ ಹಾಗೆ ಯಾವನಾದರೂ ಸಮಾಧಾನದ ಬಲಿಗಳ ಯಜ್ಞ ಸಮರ್ಪಣೆಯನ್ನಾಗಲಿ ಪಶುಗಳನ್ನಾಗಲಿ ಕುರಿಗಳ ನ್ನಾಗಲಿ ಉಚಿತವಾದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸುವದಾದರೆ ಅದು ಅಂಗೀಕಾರಕ್ಕೆ ಪರಿಪೂರ್ಣ ವುಳ್ಳದ್ದಾಗಿರಬೇಕು; ಅದರೊಳಗೆ ಯಾವ ದೋಷವು ಇರಬಾರದು.
- 1 John 1:3 1 ಯೋಹಾನನು 1:3ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರ ಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿ ಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರು ವಂಥದ್ದು.
- Ezekiel 45:15 ಯೆಹೆಜ್ಕೇಲನು 45:15ಇಸ್ರಾಯೇಲಿನ ನೀರುಗಳ ಮೇವುಗಳಿಂದ ಮೇದಿ ರುವ ಇನ್ನೂರರೊಳಗೆ ಒಂದು ಕುರಿಮರಿಯನ್ನು ಮಂದೆಯೊಳಗಿಂದ ಅರ್ಪಣೆಗಾಗಿಯೂ ದಹನಬಲಿ ಗಾಗಿಯೂ ಸಮಾಧಾನ ಯಜ್ಞಕ್ಕಾಗಿಯೂ ಅವರಿ ಗೋಸ್ಕರ ಸಮಾಧಾನಕ್ಕಾಗಿ ಅರ್ಪಿಸಬೇಕೆಂದು ದೇವ ರಾದ ಕರ್ತನು ಹೇಳುತ್ತಾನೆ.
- Exodus 20:24 ವಿಮೋಚನಕಾಂಡ 20:24ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡ ಬೇಕು. ಅದರ ಮೇಲೆ ನಿನ್ನ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಗಳನ್ನೂ ಎತ್ತುಗಳನ್ನೂ ಅರ್ಪಿಸಬೇಕು; ನನ್ನ ಹೆಸರನ್ನು ಜ್ಞಾಪಕಮಾಡುವ ಎಲ್ಲಾ ಸ್ಥಳಗಳಲ್ಲಿ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
- Proverbs 7:14 ಜ್ಞಾನೋಕ್ತಿಗಳು 7:14ನಾಚಿಕೆಯಿಲ್ಲದೆ --ನನ್ನಲ್ಲಿ ಸಮಾಧಾನ ಅರ್ಪಣೆಗಳು ಇವೆ; ಈ ದಿವಸ ನನ್ನ ಪ್ರಮಾಣಗಳನ್ನು ನಾನು ಸಲ್ಲಿಸಿದ್ದೇನೆ.
- Malachi 1:8 ಮಲಾಕಿಯ 1:8ಇದ ಲ್ಲದೆ ನೀವು ಕುರುಡಾದದ್ದನ್ನು ಬಲಿಗಾಗಿ ಅರ್ಪಿಸಿ ದರೆ ಅದು ಕೆಟ್ಟದ್ದಲ್ಲವೋ? ಕುಂಟಾದದ್ದನ್ನೂ ರೋಗ ವುಳ್ಳದ್ದನ್ನೂ ಅರ್ಪಿಸಿದರೆ ಅದು ಕೆಟ್ಟದ್ದಲ್ಲವೋ? ಸೈನ್ಯ ಗಳ ಕರ್ತನು--ಅದನ್ನು ನಿನ್ನ ದೊರೆಗೆ ಅರ್ಪಿಸು, ಅವನು ನಿನಗೆ ಮೆಚ್ಚುವನೋ? ಇಲ್ಲವೆ ನಿನಗೆ ಮುಖ ದಾಕ್ಷಿಣ್ಯ ತೋರಿಸುವನೋ?