Leviticus · chapter 4 · verse 21
Leviticus 4:21 in Kannada
ಅವನು ಮೊದಲನೆಯ ಹೋರಿಯನ್ನು ಸುಟ್ಟಂತೆಯೇ ಈ ಹೋರಿಯನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಸುಡ ಬೇಕು. ಅದು ಸಭೆಗೆ ಪಾಪದ ಬಲಿಯಾಗಿ ಇರುವದು.
Avanu modalaneya horiyannu suttanteye ee horiyannu paaleyada aachege tegedukonduhogi suda beku. Adu sabhege paapada baliyaagi iruvadu.
Leviticus 4:21 in English
- King James Version (KJV)
- And he shall carry forth the bullock without the camp, and burn him as he burned the first bullock: it [is] a sin offering for the congregation.
- World English Bible (WEB)
- He shall carry the bull outside the camp, and burn it as he burned the first bull. It is the sin offering for the assembly.
- American Standard Version (ASV)
- And he shall carry forth the bullock without the camp, and burn it as he burned the first bullock: it is the sin-offering for the assembly.
- Bible in Basic English (BBE)
- Then let the ox be taken away outside the tent-circle, that it may be burned as the other ox was burned; it is the sin-offering for all the people.
- Darby Translation (DBY)
- And he shall carry forth the bullock outside the camp, and burn it as he burned the first bullock: it is a sin-offering of the congregation.
- Webster's Bible (WBS)
- And he shall carry forth the bullock without the camp, and burn him as he burned the first bullock: it [is] a sin-offering for the congregation.
- Young's Literal Translation (YLT)
- and he hath brought out the bullock unto the outside of the camp, and hath burned it as he hath burned the first bullock; it [is] a sin-offering of the assembly.
Read in context
- 19ಅವನು ಅದರ ಎಲ್ಲಾ ಕೊಬ್ಬನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು.
- 20ಪಾಪದ ಬಲಿ ಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ ಈ ಹೋರಿಗೂ ಮಾಡಬೇಕು; ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವರಿಗೆ ಕ್ಷಮಿಸಲ್ಪಡುವದು.
- 21ಅವನು ಮೊದಲನೆಯ ಹೋರಿಯನ್ನು ಸುಟ್ಟಂತೆಯೇ ಈ ಹೋರಿಯನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಸುಡ ಬೇಕು. ಅದು ಸಭೆಗೆ ಪಾಪದ ಬಲಿಯಾಗಿ ಇರುವದು.
- 22ಒಬ್ಬ ಅಧಿಪತಿಯು ಪಾಪಮಾಡಿ ತನ್ನ ದೇವ ರಾದ ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಮಾಡಬಾರದವುಗಳನ್ನು ಮಾಡಿ ಅಪರಾಧಿಯಾಗಿದ್ದರೆ,
- 23ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದು ಬಂದರೆ, ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಗಂಡು ಮರಿಯನ್ನು ತರಬೇಕು.
Cross references
- Leviticus 16:15 ಯಾಜಕಕಾಂಡ 16:15ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು.
- Ezra 8:35 ಎಜ್ರನು 8:35ಸೆರೆಯಿಂದ ಬಂದು ಸೆರೆಯಾಗಿ ಒಯ್ಯಲ್ಪಟ್ಟಿದ್ದ ಅವರ ಮಕ್ಕಳು ಇಸ್ರಾಯೇಲ್ ದೇವರಿಗೆ ದಹನ ಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲ್ಯರಿ ಗೋಸ್ಕರ ಹನ್ನೆರಡು ಹೋರಿಗಳನ್ನೂ ತೊಂಭತ್ತಾರು ಟಗರುಗಳನ್ನೂ ಎಪ್ಪತ್ತೇಳು ಕುರಿಮರಿಗಳನ್ನೂ ಪಾಪ ಕಳೆಯುವದಕ್ಕಾಗಿ ಹನ್ನೆರಡು ಮೇಕೆಯ ಹೋತಗ ಳನ್ನೂ ಅರ್ಪಿಸಿದರು. ಇವೆಲ್ಲಾ ಕರ್ತನಿಗೆ ದಹನಬಲಿ ಯಾಗಿತ್ತು.ಅವರು ಅರಸನ ಆಜ್ಞೆಗಳನ್ನು ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ ಯಜಮಾ ನರಿಗೂ ಒಪ್ಪಿಸಿದರು. ಆಗ ಅವರ ಜನರಿಗೂ ದೇವರ ಆಲಯಕ್ಕೂ ಸಹಾಯಮಾಡಿದರು.
- Leviticus 4:11–12 ಯಾಜಕಕಾಂಡ 4:11–12ಆ ಹೋರಿಯ ಚರ್ಮ ವನ್ನು, ಅದರ ಎಲ್ಲಾ ಮಾಂಸವನ್ನು, ತಲೆ, ಕಾಲುಗಳು, ಕರುಳುಗಳು, ಅದರ ಸಗಣಿಯೊಂದಿಗೆ ಇಡೀ ಹೋರಿಯನ್ನು ಪಾಳೆಯದ ಆಚೆಗಿರುವ ಶುದ್ಧವಾದ ಸ್ಥಳಕ್ಕೆ ಅಂದರೆ ಬೂದಿ ಚೆಲ್ಲುವ ಸ್ಥಳಕ್ಕೆ ತಂದು ಅದನ್ನು ಕಟ್ಟಿಗೆಯ ಮೇಲೆ ಬೆಂಕಿಯಿಂದ ಸುಡ ಬೇಕು. ಅದನ್ನು ಬೂದಿ ಚೆಲ್ಲುವ ಸ್ಥಳದಲ್ಲಿ ಸುಡಬೇಕು.
- 2 Corinthians 5:21 2 ಕೊರಿಂಥದವರಿಗೆ 5:21ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Matthew 20:28 ಮತ್ತಾಯನು 20:28ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
- 2 Chronicles 29:21–24 2 ಪೂರ್ವಕಾಲವೃತ್ತಾಂತ 29:21–24ಅವರು ರಾಜ್ಯಕ್ಕೋಸ್ಕರವೂ ಪರಿಶುದ್ಧ ಸ್ಥಾನಕ್ಕೋಸ್ಕರವೂ ಯೆಹೂದಕ್ಕೋಸ್ಕರವೂ ಪಾಪದ ಬಲಿಯಾಗಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಮೇಕೆ ಗಳನ್ನೂ ತಂದರು. ಆಗ ಕರ್ತನ ಬಲಿಪೀಠದ ಮೇಲೆ ಅವುಗಳನ್ನು ಅರ್ಪಿಸಲು ಆರೋನನ ಮಕ್ಕಳಾದ ಯಾಜಕರಿಗೆ ಹೇಳಿದನು. ಹೀಗೆ ಅವರು ಹೋರಿ ಗಳನ್ನು ವಧಿಸಿದಾಗ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಚಿಮಿಕಿಸಿದರು; ಹಾಗೆಯೇ ಅವರು ಟಗರುಗಳನ್ನು ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು; ಅವರು ಕುರಿಮರಿ ಗಳನ್ನೂ ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು. ಅರಸನ ಮುಂದೆಯೂ ಸಭೆಯ ಮುಂದೆಯೂ ಪಾಪದ ಬಲಿಯಾದ ಮೇಕೆ ಹೋತ ಗಳನ್ನು ಹತ್ತಿರ ತಕ್ಕೊಂಡು ಬಂದು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು. ಆಗ ಸಮಸ್ತ ಇಸ್ರಾಯೇ ಲಿಗೋಸ್ಕರ ಪ್ರಾಯಶ್ಚಿತ್ತವಾಗಿ ಯಾಜಕರು ಅವುಗಳನ್ನು ವಧಿಸಿ ಬಲಿಪೀಠದ ಮೇಲೆ ಅವುಗಳ ರಕ್ತದಿಂದ ಪಾಪ ನಿವಾರಣೆ ಮಾಡಿದರು. ದಹನಬಲಿಯೂ ಪಾಪದ ಬಲಿಯೂ ಸಮಸ್ತ ಇಸ್ರಾಯೇಲಿಗೋಸ್ಕರ ಆಗ ಬೇಕೆಂದು ಅರಸನು ಆಜ್ಞಾಪಿಸಿದನು,
- Leviticus 16:21 ಯಾಜಕಕಾಂಡ 16:21ಆರೋನನು ಆ ಜೀವವುಳ್ಳ ಆಡಿನ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು ಇಸ್ರಾಯೇಲ್ ಮಕ್ಕಳ ಎಲ್ಲಾ ಅಕ್ರಮಗಳನ್ನೂ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆ ಮಾಡಿ ಅವುಗಳನ್ನು ಆಡಿನ ತಲೆಯ ಮೇಲೆ ಇರಿಸಿ ಯೋಗ್ಯನಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.
- 1 Timothy 2:5–6 1 ತಿಮೊಥೆಯನಿಗೆ 2:5–6ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ; ಆತನು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು; ಇದೇ ತಕ್ಕಕಾಲದಲ್ಲಿ ಹೇಳ ಬೇಕಾದ ಸಾಕ್ಷಿಯಾಗಿದೆ.