Leviticus · chapter 5 · verse 4
Leviticus 5:4 in Kannada
ಇಲ್ಲವೆ ಒಬ್ಬನು ಆಣೆಯಿಟ್ಟು ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ಮಾಡುವದನ್ನು ತನ್ನ ತುಟಿಗಳಿಂದ ಉಚ್ಚರಿಸಿ ಪ್ರಮಾಣದೊಡನೆ ಉಚ್ಚರಿಸಿದ್ದು ಯಾವದೇ ಆಗಿರಲಿ ಅದು ಅವನಿಗೆ ತಿಳಿಯದೆ ಇದ್ದು ತರುವಾಯ ತಿಳಿದಾಗ ಇವುಗಳಲ್ಲೊಂದರಲ್ಲಿ ಅವನು ಅಪರಾಧಿಯಾಗಿರುವನು.
Illave obbanu aaneyittu kettaddannaagali olleyadannaagali maaduvadannu tanna tutigalinda uchcharisi pramaanadodane uchcharisiddu yaavade aagirali adu avanige tiliyade iddu taruvaaya tilidaaga ivugalallondaralli avanu aparaadhiyaagiruvanu.
Leviticus 5:4 in English
- King James Version (KJV)
- Or if a soul swear, pronouncing with [his] lips to do evil, or to do good, whatsoever [it be] that a man shall pronounce with an oath, and it be hid from him; when he knoweth [of it], then he shall be guilty in one of these.
- World English Bible (WEB)
- “‘Or if anyone swears rashly with his lips to do evil or to do good—whatever it is that a man might utter rashly with an oath, and it is hidden from him—when he knows of it, then he will be guilty of one of these.
- American Standard Version (ASV)
- Or if any one swear rashly with his lips to do evil, or to do good, whatsoever it be that a man shall utter rashly with an oath, and it be hid from him; when he knoweth of it, then he shall be guilty in one of these [things].
- Bible in Basic English (BBE)
- Or if anyone, without thought, takes an oath to do evil or to do good, whatever he says without thought, with an oath, having no knowledge of what he is doing; when it becomes clear to him, he will be responsible for any of these things.
- Darby Translation (DBY)
- Or if any one swear, talking rashly with the lips, to do evil or to do good, in everything that a man shall say rashly with an oath, and it be hid from him, when he knoweth [it], then is he guilty in one of these.
- Webster's Bible (WBS)
- Or if a soul shall swear, pronouncing with [his] lips to do evil, or to do good, whatever [it may be] , that a man shall pronounce with an oath, and it be hid from him; when he knoweth [of it] , then he shall be guilty in one of these.
- Young's Literal Translation (YLT)
- 'Or when a person sweareth, speaking wrongfully with the lips to do evil, or to do good, even anything which man speaketh wrongfully with an oath, and it hath been hid from him; — when he hath known then he hath been guilty of one of these;
Read in context
- 2ಇಲ್ಲವೆ ಯಾವನಾದರೂ ಅಶುದ್ಧವಾದ ಯಾವದನ್ನಾದರೂ ಮುಟ್ಟಿದರೆ, ಅಂದರೆ ಅದು ಅಶುದ್ಧ ವಾದ ಮೃಗದ ಹೆಣವಾಗಲಿ ದನದ ಹೆಣವಾಗಲಿ ಹರಿದಾಡುವವುಗಳ ಹೆಣಗಳಾಗಲಿ ಅವನಿಗೆ ತಿಳಿಯದಿ ದ್ದರೂ ಅವನು ಅಶುದ್ಧನಾಗಿದ್ದು ಅಪರಾಧಿಯಾಗಿರುವನು.
- 3ಮನುಷ್ಯದೇಹದಿಂದುಂಟಾದ ಯಾವದಾ ದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆ ಹೋದರೂ ತಿಳಿದು ಬಂದಾಗ ಅವನು ದೋಷಿಯಾಗುವನು.
- 4ಇಲ್ಲವೆ ಒಬ್ಬನು ಆಣೆಯಿಟ್ಟು ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ಮಾಡುವದನ್ನು ತನ್ನ ತುಟಿಗಳಿಂದ ಉಚ್ಚರಿಸಿ ಪ್ರಮಾಣದೊಡನೆ ಉಚ್ಚರಿಸಿದ್ದು ಯಾವದೇ ಆಗಿರಲಿ ಅದು ಅವನಿಗೆ ತಿಳಿಯದೆ ಇದ್ದು ತರುವಾಯ ತಿಳಿದಾಗ ಇವುಗಳಲ್ಲೊಂದರಲ್ಲಿ ಅವನು ಅಪರಾಧಿಯಾಗಿರುವನು.
- 5ಅವನು ಇವುಗಳಲ್ಲೊಂದ ರಲ್ಲಿ ಅಪರಾಧಿಯಾಗಿದ್ದು ತಾನು ಅದರಲ್ಲಿ ಪಾಪಮಾಡಿ ದ್ದೇನೆಂದು ಅರಿಕೆ ಮಾಡುವದಾದರೆ
- 6ಅವನು ತಾನು ಮಾಡಿದ ಪಾಪಕ್ಕಾಗಿ ಕರ್ತನಿಗೆ ಅಪರಾಧ ಬಲಿಯನ್ನು ಪಾಪದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣುಕುರಿ ಇಲ್ಲವೆ ಮೇಕೆಗಳಲ್ಲಿ ಒಂದು ಮರಿಯನ್ನು ತರಬೇಕು; ಯಾಜಕನು ಅವನ ಪಾಪದ ವಿಷಯದಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
Cross references
- Ecclesiastes 5:2–6 ಪ್ರಸಂಗಿ 5:2–6ನಿನ್ನ ಬಾಯಿಂದ ಆತುರಪಡದಿರು ಮತ್ತು ದೇವರ ಮುಂದೆ ಯಾವದನ್ನು ಉಚ್ಚರಿಸುವದಕ್ಕೆ ನಿನ್ನ ಹೃದಯವು ದುಡುಕದೇ ಇರಲಿ; ದೇವರು ಪರಲೋಕ ದಲ್ಲಿದ್ದಾನೆ; ನೀನು ಭೂಮಿಯ ಮೇಲೆ ಇದ್ದೀ; ಆದ ಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ. ಬಹಳ ಕೆಲಸದ ಮೂಲಕ ಕನಸು ಉಂಟಾಗುತ್ತದೆ; ಬಹು ಮಾತುಗಳಿಂದ ಮೂಢನ ಧ್ವನಿಯು ಗೊತ್ತಾಗುತ್ತದೆ; ದೇವರಿಗೆ ನೀನು ಪ್ರಮಾಣವನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ; ಮೂಢರಲ್ಲಿ ಆತನಿಗೆ ಸಂತೋಷವಿಲ್ಲ; ನೀನು ಪ್ರಮಾಣಮಾಡಿದ್ದನು ತೀರಿಸು. ಪ್ರಮಾಣಮಾಡಿ ತೀರಿಸದೆ ಇರುವದಕ್ಕಿಂತ ಪ್ರಮಾಣಮಾಡದೆ ಇರುವದು ಒಳ್ಳೇದು. ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು?
- Judges 11:31 ನ್ಯಾಯಸ್ಥಾಪಕರು 11:31ನಾನು ಅಮ್ಮೋನನ ಮಕ್ಕಳ ಬಳಿಯಿಂದ ಸಮಾಧಾನದಲ್ಲಿ ತಿರಿಗಿ ಬರುವಾಗ ನನ್ನ ಮನೆಯ ಬಾಗಲಿಂದ ನನ್ನನ್ನು ಎದುರುಗೊಳ್ಳಲು ಬರುವಂಥದ್ದು ನಿಜವಾಗಿ ಕರ್ತನದಾಗಿರುವದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು ಅಂದನು.
- Mark 6:23 ಮಾರ್ಕನು 6:23ಅವನು--ನೀನು ನನ್ನಿಂದ ಯಾವದನ್ನು ಕೇಳಿಕೊಂಡರೂ ಅಂದರೆ ಅದು ನನ್ನ ರಾಜ್ಯದಲ್ಲಿ ಅರ್ಧವಾಗಿದ್ದರೂ ನಾನು ನಿನಗೆ ಕೊಡುತ್ತೇನೆ ಎಂದು ಅವಳಿಗೆ ಆಣೆಯಿಟ್ಟು ಹೇಳಿದನು.
- Acts 23:12 ಅಪೊಸ್ತಲರ ಕೃತ್ಯಗಳು 23:12ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು.
- Numbers 30:8 ಅರಣ್ಯಕಾಂಡ 30:8ಆದರೆ ಅವಳ ಗಂಡನು ಅದನ್ನು ಕೇಳಿದ ದಿವಸದಲ್ಲಿ ಅವಳನ್ನು ತಡೆದು ಅವಳ ಮೇಲೆ ಇರುವ ಅವಳ ಪ್ರಮಾಣವನ್ನೂ ಪ್ರಾಣದ ಮೇಲೆ ಅವಳು ಬಂಧಿಸಿ ಕೊಂಡ ಬಾಯಿಂದ ಬಂದ ಮಾತನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಕರ್ತನು ಅವಳಿಗೆ ಕ್ಷಮಿಸುವನು.
- 1 Samuel 25:22 1 ಸಮುವೇಲನು 25:22ಅವನಿಗೆ ಇರುವವ ರೆಲ್ಲರಲ್ಲಿ ಉದಯವಾಗುವವರೆಗೆ ನಾನು ಒಬ್ಬ ಗಂಡ ಸನ್ನು ಉಳಿಸಿದರೆ ದೇವರು ದಾವೀದನ ಶತ್ರುಗಳಿಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ ಅಂದನು.
- 1 Samuel 1:11 1 ಸಮುವೇಲನು 1:11ಆಕೆಯು ಒಂದು ಪ್ರಮಾಣವನ್ನು ಮಾಡಿ ಹೇಳಿದ್ದೇನಂದರೆಸೈನ್ಯಗಳ ಕರ್ತನೇ, ನೀನು ನಿಶ್ಚಯವಾಗಿ ನಿನ್ನ ದಾಸಿಯ ದೀನತೆಯನ್ನು ನೋಡಿ, ನಿನ್ನ ದಾಸಿಯನ್ನು ಮರೆ ಯದೆ, ನನ್ನನ್ನು ನೆನಸಿ, ನಿನ್ನ ದಾಸಿಗೆ ಗಂಡು ಮಗು ವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರ ಕತ್ತಿ ಬೀಳುವದಿಲ್ಲ ಅಂದಳು.
- Matthew 14:7 ಮತ್ತಾಯನು 14:7ಆದದರಿಂದ ಅವಳು ಏನು ಕೇಳಿಕೊಂಡರೂ ಅವಳಿಗೆ ಕೊಡುವೆನೆಂದು ಅವನು ಆಣೆಯಿಟ್ಟು ವಾಗ್ದಾನಮಾಡಿದನು.
- Judges 21:18 ನ್ಯಾಯಸ್ಥಾಪಕರು 21:18ನಾವಾದರೋ ನಮ್ಮ ಕುಮಾರ್ತೆಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು. ಯಾಕಂದರೆ, ಬೆನ್ಯಾವಿಾನ್ಯರಿಗೆ ಹೆಣ್ಣು ಕೊಡುವವನು ಶಪಿಸಲ್ಪಡಲೆಂದು ಇಸ್ರಾಯೇ ಲಿನ ಮಕ್ಕಳು ಆಣೆ ಇಟ್ಟುಕೊಂಡಿದ್ದಾರೆ ಅಂದರು.
- Leviticus 27:2–34 ಯಾಜಕಕಾಂಡ 27:2–34ಇಸ್ರಾಯೇಲ್ ಮಕ್ಕಳ ಸಂಗಡ ನೀನು ಮಾತನಾಡಿ ಅವರಿಗೆ ಹೇಳ ಬೇಕಾದದ್ದೇನಂದರೆ--ಒಬ್ಬನು ಪ್ರತ್ಯೇಕವಾದ ಪ್ರಮಾ ಣವನ್ನು ಮಾಡಿಕೊಂಡರೆ ನೀನು ನೇಮಿಸಿದ ಕ್ರಯದ ಪ್ರಕಾರ ಜನರು ಕರ್ತನಿಗೆ ಮಾಡಬೇಕು. ನೀನು ನೇಮಿಸಬೇಕಾದ ಕ್ರಯವು ಯಾವದಂದರೆ--ಇಪ್ಪತ್ತು ವರುಷದವನು ಮೊದಲುಗೊಂಡು ಅರವತ್ತು ವರುಷ ದವನ ವರೆಗೆ ನೀನು ನೇಮಿಸುವ ಕ್ರಯವು ಪರಿಶುದ್ಧ ಶೇಕೆಲಿನ ಮೇರೆಗೆ ಐವತ್ತು ಬೆಳ್ಳಿಯ ಶೇಕೆಲುಗಳಾಗಿರ ಬೇಕು. ಹೆಣ್ಣಾಗಿದ್ದರೆ ನೀನು ನೇಮಿಸುವ ಕ್ರಯವು ಮೂವತ್ತು ಶೇಕೆಲುಗಳಾಗಿರಬೇಕು. ಐದು ವರುಷ ದವನು ಮೊದಲುಗೊಂಡು ಇಪ್ಪತ್ತು ವರುಷದವನ ವರೆಗೆ ಗಂಡಸಿನ ಕ್ರಯವು ಎಪ್ಪತ್ತು ಶೇಕೆಲುಗಳೂ ಹೆಂಗಸಿನ ಕ್ರಯವು ಹತ್ತು ಶೇಕೆಲುಗಳೂ ಆಗಿರಬೇಕು. ಒಂದು ತಿಂಗಳಿನವನ ಮೊದಲುಗೊಂಡು ಐದು ವರುಷದವನ ವರೆಗೆ ಗಂಡಸಿನ ಕ್ರಯವು ಐದು ಬೆಳ್ಳಿಯ ಶೇಕೆಲುಗಳೂ ಹೆಣ್ಣಿನ ಕ್ರಯವು ಮೂರು ಬೆಳ್ಳಿಯ ಶೇಕೆಲುಗಳೂ ಆಗಿರಬೇಕು. ಅರವತ್ತು ವರುಷವು ಅದಕ್ಕೆ ಹೆಚ್ಚಾದ ಪ್ರಾಯವುಳ್ಳ ಗಂಡಸಾಗಿದ್ದರೆ ನೀನು ನೇಮಿಸುವ ಕ್ರಯವು ಹದಿನೈದು ಶೇಕೆಲುಗಳೂ ಹೆಂಗಸಿಗೆ ಹತ್ತು ಶೇಕೆಲುಗಳೂ ಆಗಿರಬೇಕು. ಆದರೆ ನೀನು ನೇಮಿಸಿದ ಕ್ರಯವನ್ನು ಕೂಡ ಕೊಡದಷ್ಟು ಅವನು ಬಡವನಾಗಿದ್ದರೆ ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿ ಸಬೇಕು. ಪ್ರಮಾಣಮಾಡಿದವನ ಸಂಪತ್ತಿಗೆ ಸರಿಯಾಗಿ ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು. ಮನುಷ್ಯನು ಕರ್ತನಿಗೆ ಅರ್ಪಣೆಗಾಗಿ ತರುವವುಗ ಳಲ್ಲಿ ಅದು ಪಶುವಾಗಿದ್ದರೆ ಅವನು ಕೊಡುವಂತವು ಗಳೆಲ್ಲಾ ಕರ್ತನಿಗೆ ಶುದ್ಧವಾಗಿರುವದು. ಅದನ್ನು ಒಳ್ಳೇದಕ್ಕೆ ಕೆಟ್ಟದ್ದನ್ನಾಗಲಿ ಕೆಟ್ಟದ್ದಕ್ಕೆ ಒಳ್ಳೇದನ್ನಾಗಲಿ ಬದಲು ಮಾಡಬಾರದು ಮತ್ತು ಮಾರ್ಪಡಿ ಸಲೂಬಾರದು; ಹೇಗಾದರೂ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ ಅದು ಅದರ ಬದಲೂ ಪರಿಶುದ್ಧವಾಗಿರಬೇಕು. ಅದು ಕರ್ತನಿಗೆ ಅರ್ಪಣೆಯಾಗಿ ತಾರದ ಯಾವದಾದರೂ ಅಶುದ್ಧ ಪಶುವಾಗಿದ್ದರೆ ಆ ಪಶುವನ್ನು ಅವನು ಯಾಜಕನ ಮುಂದೆ ನಿಲ್ಲಿಸಬೇಕು. ಆಗ ಯಾಜಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಅದಕ್ಕೆ ಕ್ರಯಕಟ್ಟಬೇಕು. ಯಾಜಕನಾದ ನೀನು ಮಾಡಿದ ಕ್ರಯವೇ ಕ್ರಯವಾ ಗಿರಬೇಕು. ಅದನ್ನು ಹೇಗಾದರೂ ವಿಮೋಚಿಸ ಬೇಕೆಂದಿದ್ದರೆ ನೀನು ಮಾಡಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅದಕ್ಕೆ ಕೂಡಿಸಬೇಕು. ಒಬ್ಬನು ತನ್ನ ಮನೆಯನ್ನು ಕರ್ತನಿಗೆ ಪರಿಶುದ್ಧ ವಾಗಿರಲೆಂದು ಅದನ್ನು ಪರಿಶುದ್ಧ ಮಾಡಿದರೆ ಯಾಜ ಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಕ್ರಯವನ್ನು ಕಟ್ಟಬೇಕು; ಯಾಜಕನು ಕ್ರಯಕಟ್ಟುವ ಪ್ರಕಾರವೇ ಅದು ಸ್ಥಿರವಾಗಿರಬೇಕು. ಆದರೆ ಪರಿಶುದ್ಧ ಮಾಡಿ ದವನು ತನ್ನ ಮನೆಯನ್ನು ವಿಮೋಚಿಸಬೇಕೆಂದಿದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಪಾಲಿನ ಹಣವನ್ನು ಕೊಡಲಿ; ಆಗ ಅದು ಅವನದಾಗಿರುವದು. ಒಬ್ಬನು ತನ್ನ ಸ್ವಾಸ್ತ್ಯದ ಹೊಲದಲ್ಲಿ ಏನಾದರೂ ಕರ್ತನಿಗೆ ಪರಿಶುದ್ಧ ಮಾಡಿದರೆ ನೀನು ಅದರ ಬೀಜದ ಪ್ರಕಾರ ಕ್ರಯಕಟ್ಟಬೇಕು; ಜವೆಗೋಧಿಯ ಒಂದು ಓಮೆರಷ್ಟು ಬೀಜಕ್ಕೆ ಐವತ್ತು ಬೆಳ್ಳಿ ಶೇಕೆಲುಗಳು. ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು. ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ಜೂಬಿಲಿ ಸಂವತ್ಸರದ ವರೆಗೆ ಮಿಕ್ಕ ವರುಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ಎಣಿಸಿ ನೀನು ಕಟ್ಟಿದ ಕ್ರಯದಿಂದ ಕಳೆಯ ಬೇಕು. ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿ ದವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿ ದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅವನು ಕೊಡಬೇಕು; ಆಗ ಅವನಿಗೆ ಅದು ಸ್ಥಿರವಾಗಿರುವದು. ಆದರೆ ಅವನು ಹೊಲವನ್ನು ವಿಮೋಚಿಸದೆ ಹೋದರೆ ಇಲ್ಲವೆ ಮತ್ತೊಬ್ಬನಿಗೆ ಆ ಹೊಲವನ್ನು ಮಾರಿದ್ದರೆ ಅದನ್ನು ಇನ್ನು ಮೇಲೆ ವಿಮೋಚಿಸಕೂಡದು. ಆ ಹೊಲವು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವಾಗ ಪ್ರತ್ಯೇಕಿಸಲ್ಪಟ್ಟು ಒಪ್ಪಿಸಲ್ಪಟ್ಟ ಹೊಲದ ಹಾಗೆ ಕರ್ತನಿಗೆ ಅದು ಪರಿಶುದ್ಧವಾಗಿರಬೇಕು; ಅದರ ಸ್ವಾಸ್ತ್ಯವು ಯಾಜಕ ನಿಗೆ ಸಲ್ಲಬೇಕು. ತನ್ನ ಸ್ವಾಸ್ತ್ಯದ ಹೊಲಗಳಲ್ಲಿ ಸೇರದಂಥ, ತಾನು ಕೊಂಡುಕೊಂಡ ಹೊಲವನ್ನು ಒಬ್ಬನು ಕರ್ತನಿಗೆ ಪರಿಶುದ್ಧ ಮಾಡಿದರೆ ಯಾಜಕನು ಅವನಿಗೆ ನೀನು ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದ ವರೆಗೂ ಎಣಿಸಬೇಕು; ಅವರು ಆ ದಿವಸದಲ್ಲಿ ನೀನು ಕಟ್ಟಿದ ಕ್ರಯವನ್ನು ಕರ್ತನಿಗೆ ಪರಿಶುದ್ಧವಾದದ್ದಾಗಿ ಅವನು ಕೊಡಬೇಕು. ಜೂಬಿಲಿ ಸಂವತ್ಸರದಲ್ಲಿ ಆ ಹೊಲದ ಭೂಮಿಯ ಸ್ವಾಸ್ತ್ಯವುಂಟಾದವನಿಗೆ ಅಂದರೆ ಇವನು ಯಾವನಿಂದ ಕೊಂಡುಕೊಂಡನೋ ಅವನಿಗೆ ತಿರುಗಿ ಹಿಂದಕ್ಕೆ ಕೊಡಬೇಕು. ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು. ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ. ಆದರೆ ಅದು ಅಶುದ್ಧ ಪಶುವಾಗಿದ್ದರೆ ನೀನು ಕ್ರಯ ಕಟ್ಟಿದ ಪ್ರಕಾರ ಅದಕ್ಕೆ ಹೆಚ್ಚಾಗಿ ಐದನೇ ಪಾಲನ್ನು ಕೊಟ್ಟು ಅವನು ಅದನ್ನು ವಿಮೋಚಿಸಬೇಕು; ವಿಮೋಚಿಸದಿದ್ದರೆ ಅದನ್ನು ನೀನು ಕ್ರಯ ಕಟ್ಟಿದ ಪ್ರಕಾರ ಮಾರಬೇಕು. ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ. ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು. ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು. ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು. ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು. ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ. ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.
- Numbers 30:6 ಅರಣ್ಯಕಾಂಡ 30:6ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಪ್ರಮಾಣಗಳು ಇಲ್ಲವೆ ಪ್ರಾಣವನ್ನು ಬಂಧಿ ಸುವ ಬಾಯಿಂದ ಬಂದ ಮಾತು ಇದ್ದರೆ
- Psalm 132:2–5 ಕೀರ್ತನೆಗಳು 132:2–5ಅವನು ಕರ್ತನಿಗೆ ಆಣೆ ಇಟ್ಟು ಶಕ್ತಿ ಯುಳ್ಳ ಯಾಕೋಬನ ದೇವರಿಗೆ ಪ್ರಮಾಣಮಾಡಿ ಕೊಂಡದ್ದೇನಂದರೆ-- ಕರ್ತನಿಗೆ ಒಂದು ಸ್ಥಳವನ್ನೂ ಯಾಕೋಬನ ದೇವರಿಗೆ ನಿವಾಸಗಳನ್ನೂ ನಾನು ಕಂಡುಕೊಳ್ಳುವ ವರೆಗೆ ನಿಶ್ಚಯವಾಗಿ ನನ್ನ ಮನೆಯ ಗುಡಾರದಲ್ಲಿ ಸೇರೆನು; ನನ್ನ ಮಂಚದ ಹಾಸಿಗೆಯನ್ನು ಏರೆನು; ನನ್ನ ಕಣ್ಣುಗಳಿಗೆ ನಿದ್ದೆಯನ್ನೂ ನನ್ನ ರೆಪ್ಪೆ ಗಳಿಗೆ ತೂಕಡಿಕೆಯನ್ನೂ ಕೊಡೆನು ಎಂಬದು.
Original words (Hebrew)
- soul · H5315נֶפֶשׁ nephesh
- swear · H7650שָׁבַע shâbaʻ
- pronouncing · H981בָּטָא bâṭâʼ
- lips · H8193שָׂפָה sâphâh
- evil · H7489רָעַע râʻaʻ
- good · H3190יָטַב yâṭab
- man · H120אָדָם ʼâdâm
- pronounce · H981בָּטָא bâṭâʼ
- oath · H7621שְׁבוּעָה shᵉbûwʻâh
- hid · H5956עָלַם ʻâlam
- knoweth · H3045יָדַע yâdaʻ
- guilty · H816אָשַׁם ʼâsham
- one · H259אֶחָד ʼechâd