Leviticus · chapter 7 · verse 37
Leviticus 7:37 in Kannada
ದಹನಬಲಿ ಆಹಾರದಬಲಿ ಪಾಪದಬಲಿ ಅತಿಕ್ರಮದಬಲಿ ಪ್ರತಿಷ್ಠೆಗಳ ಮತ್ತು ಸಮಾಧಾನದ ಯಜ್ಞಾರ್ಪಣೆಗಳು ಇವೇ.ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಇವುಗಳನ್ನು ಕರ್ತನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಆಜ್ಞಾಪಿಸಿದನು.
Dahanabali aahaaradabali paapadabali atikramadabali pratishthegala mattu samaadhaanada yajnyaarpanegalu ive.seenaayi aranyadalli israayel makkalu kartanige samarpisuvante aajnyaapisida dinadalli ivugalannu kartanu moshege seenaayi bettadalli aajnyaapisidanu.
Leviticus 7:37 in English
- King James Version (KJV)
- This [is] the law of the burnt offering, of the meat offering, and of the sin offering, and of the trespass offering, and of the consecrations, and of the sacrifice of the peace offerings;
- World English Bible (WEB)
- This is the law of the burnt offering, the meal offering, the sin offering, the trespass offering, the consecration, and the sacrifice of peace offerings
- American Standard Version (ASV)
- This is the law of the burnt-offering, of the meal-offering, and of the sin-offering, and of the trespass-offering, and of the consecration, and of the sacrifice of peace-offerings;
- Bible in Basic English (BBE)
- These are the laws for the burned offering, the meal offering, and the offering for wrongdoing; and for the making of priests, and for the giving of peace-offerings;
- Darby Translation (DBY)
- This is the law of the burnt-offering, of the oblation, and of the sin-offering, and of the trespass-offering, and of the consecration-offering, and of the sacrifice of peace-offering,
- Webster's Bible (WBS)
- This [is] the law of the burnt-offering, of the meat-offering, and of the sin-offering, and of the trespass-offering, and of the consecrations, and of the sacrifice of the Peace-offerings;
- Young's Literal Translation (YLT)
- This [is] the law for burnt-offering, for present, and for sin-offering, and for guilt-offering, and for consecrations, and for a sacrifice of the peace-offerings,
Read in context
- 35ಆರೋನನ ಅಭಿಷೇಕವೂ ಅವನ ಮಕ್ಕಳ ಅಭಿಷೇಕವೂ ಆಗುವ ದಿನದಲ್ಲಿ ಅವರು ತಮ್ಮನ್ನು ಯಾಜಕನ ಉದ್ಯೋಗದ ಸೇವೆಗಾಗಿ ಕರ್ತನಿಗೆ ಒಪ್ಪಿಸಿ ಕೊಳ್ಳುವಾಗ ಕರ್ತನಿಗೆ ಬೆಂಕಿಯಿಂದ ಮಾಡಲ್ಪಡುವ ಸಮರ್ಪಣೆಗಳಲ್ಲಿ ಇರುವ ಪಾಲು ಇದೇ.
- 36ಅವರನ್ನು ಅಭಿಷೇಕಿಸಿದ ದಿನದಲ್ಲಿ ಇದನ್ನು ಕರ್ತನು ಇಸ್ರಾ ಯೇಲನ ಮಕ್ಕಳಿಗೆ ಅವರ ಎಲ್ಲಾ ಸಂತತಿಗಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿರುವಂತೆ ಅವರಿಗೆ ಆಜ್ಞಾಪಿಸಿದ್ದಾನೆ.
- 37ದಹನಬಲಿ ಆಹಾರದಬಲಿ ಪಾಪದಬಲಿ ಅತಿಕ್ರಮದಬಲಿ ಪ್ರತಿಷ್ಠೆಗಳ ಮತ್ತು ಸಮಾಧಾನದ ಯಜ್ಞಾರ್ಪಣೆಗಳು ಇವೇ.ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಇವುಗಳನ್ನು ಕರ್ತನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಆಜ್ಞಾಪಿಸಿದನು.
- 38ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಇವುಗಳನ್ನು ಕರ್ತನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಆಜ್ಞಾಪಿಸಿದನು.
Cross references
- Exodus 29:1 ವಿಮೋಚನಕಾಂಡ 29:1ಅವರು ನನಗೆ ಯಾಜಕ ಸೇವೆಮಾಡು ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ
- Exodus 29:38–42 ವಿಮೋಚನಕಾಂಡ 29:38–42ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು. ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು. ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು. ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು. ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು.
- Leviticus 1:1–6 ಯಾಜಕಕಾಂಡ 1:1–6ಕರ್ತನು ಮೋಶೆಯನ್ನು ಕರೆದು ಸಭೆಯಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಇಸ್ರಾಯೇಲ್ ಮಕ್ಕ ಳೊಂದಿಗೆ ಮಾತನಾಡಿ ಅವರಿಗೆ--ನಿಮ್ಮಲ್ಲಿ ಯಾವನಾ ದರೂ ಕರ್ತನಿಗೆ ಕಾಣಿಕೆಯನ್ನು ತರುವದಾದರೆ ನೀವು ನಿಮ್ಮ ಯಜ್ಞಗಳನ್ನು ಪಶುಗಳಿಂದಲೂ ಹಿಂಡು ಗಳಿಂದಲೂ ಮಂದೆಗಳಿಂದಲೂ ತರಬೇಕು. ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು. ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು. ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಅವನು ಆ ದಹನಬಲಿಯ ಚರ್ಮವನ್ನು ಸುಲಿದು ಅದನ್ನು ತುಂಡುಗಳನ್ನಾಗಿ ಮಾಡಬೇಕು.
- Leviticus 6:9–18 ಯಾಜಕಕಾಂಡ 6:9–18ಆರೋನನಿಗೂ ಅವನ ಕುಮಾರರಿಗೂ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ಇದು ದಹನಬಲಿಯ ನಿಯಮವಾಗಿದೆ, ಇದು ದಹನಬಲಿ; ಇಡೀ ರಾತ್ರಿ ಅಂದರೆ ಬೆಳಗಿನ ವರೆಗೆ ಅದು ಯಜ್ಞವೇದಿಯ ಮೇಲೆ ಸುಡುತ್ತಿರುವದು. ಯಜ್ಞವೇದಿಯ ಬೆಂಕಿಯು ಅದರೊ ಳಗೆ ಸುಡುತ್ತಾ ಇರುವದು. ಯಾಜಕನು ತನ್ನ ನಾರು ಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರು ಮಡಿಯ ಇಜಾರುಗಳನ್ನೂ ಹಾಕಿಕೊಂಡು ಯಜ್ಞ ವೇದಿಯ ಮೇಲೆ ದಹನಬಲಿಯೊಂದಿಗೆ ಬೆಂಕಿಯಲ್ಲಿ ಸುಟ್ಟು ಬೂದಿಯನ್ನು ತೆಗೆದುಕೊಂಡು ಅದನ್ನು ಯಜ್ಞ ವೇದಿಯ ಬಳಿಯಲ್ಲಿ ಹಾಕಬೇಕು. ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ ಬೇರೆ ಉಡುಪುಗಳನ್ನು ಧರಿಸಿಕೊಂಡು ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. ಯಜ್ಞವೇದಿಯ ಮೇಲಿನ ಬೆಂಕಿಯು ಅದರೊಳಗೆ ಸುಡುತ್ತಿರಬೇಕು; ಅದು ಉರಿಯುತ್ತಲೇ ಇರಬೇಕು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆ ಯನ್ನು ಸುಡಬೇಕು ಮತ್ತು ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು; ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಯಜ್ಞಗಳ ಕೊಬ್ಬನ್ನು ಸುಡಬೇಕು. ಯಜ್ಞವೇದಿಯ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು. ಅದು ಎಂದಿಗೂ ಆರಿಹೋಗಬಾರದು. ಆಹಾರ ಸಮರ್ಪಣೆಯ ನಿಯಮವು ಇದೇ; ಆರೋನನ ಕುಮಾರರು ಯಜ್ಞವೇದಿಯ ಮುಂದೆ ಕರ್ತನ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು. ಅವನು ಆಹಾರ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಆಹಾರ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದು ಕೊಂಡು ಜ್ಞಾಪಕಾರ್ಥವಾಗಿ ಕರ್ತನಿಗೆ ಯಜ್ಞವೇದಿಯ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು. ಅದ ರಲ್ಲಿ ಉಳಿದದ್ದನ್ನು ಆರೋನನೂ ಅವನ ಕುಮಾರರೂ ತಿನ್ನಬೇಕು; ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು; ಅದನ್ನು ಅವರು ಸಭೆಯ ಗುಡಾರದ ಅಂಗಳದಲ್ಲಿ ತಿನ್ನಬೇಕು. ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ನಾನು ಅದನ್ನು ಅವರಿಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆ ಗಳಲ್ಲಿ ಅವರ ಪಾಲನ್ನು ಅವರಿಗೆ ಕೊಟ್ಟಿದ್ದೇನೆ. ಅದು ಅತಿಕ್ರಮದ ಬಲಿಯ ಹಾಗೆಯೂ ಪಾಪದ ಬಲಿಯ ಹಾಗೆಯೂ ಅತಿ ಪರಿಶುದ್ಧವಾದದ್ದು. ಆರೋನನ ಮಕ್ಕಳಲ್ಲಿ ಎಲ್ಲಾ ಗಂಡು ಮಕ್ಕಳು ಅದನ್ನು ತಿನ್ನಬೇಕು, ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳ ವಿಷಯದಲ್ಲಿ ನಿಮ್ಮ ಸಂತತಿಗಳಿಗೆ ಇದು ಒಂದು ಶಾಶ್ವತ ಕಟ್ಟಳೆಯಾಗಿರುವದು; ಅವುಗಳನ್ನು ಮುಟ್ಟುವ ಪ್ರತಿ ಯೊಬ್ಬನು ಪರಿಶುದ್ಧನಾಗಿರಬೇಕು ಅಂದನು.
- Leviticus 7:11–21 ಯಾಜಕಕಾಂಡ 7:11–21ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ: ಅವನು ಉಪಕಾರಸ್ತುತಿಗಾಗಿ ಅರ್ಪಿಸುವದಾದರೆ, ಉಪಕಾರಸ್ತುತಿ ಬಲಿಯನ್ನು ಹುಳಿಯಿಲ್ಲದ ಎಣ್ಣೆ ಬೆರೆ ಸಿದ ರೊಟ್ಟಿಗಳೊಂದಿಗೆ ಹುಳಿಯಿಲ್ಲದ ಎಣ್ಣೆಹೊಯ್ದ ದೋಸೆಗಳೊಂದಿಗೂ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದರೊಟ್ಟಿಗಳೊಂದಿಗೂ ಸಮರ್ಪಿಸ ಬೇಕು. ರೊಟ್ಟಿಗಳಲ್ಲದೆ ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಸಮರ್ಪಣೆಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸ ಬೇಕು. ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಎತ್ತುವ ಕಾಣಿಕೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದಾಗಬೇಕು. ಉಪಕಾರಸ್ತುತಿಗಾಗಿ ಅವನ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ಅರ್ಪಿ ಸಲ್ಪಟ್ಟ ದಿನವೇ ತಿನ್ನಬೇಕು; ಅವನು ಅದರಲ್ಲಿ ಬೆಳಗಿನ ವರೆಗೆ ಯಾವದನ್ನೂ ಉಳಿಸಬಾರದು. ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಇಚ್ಛೆಯಾದ ಸಮರ್ಪಣೆ ಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ತಿನ್ನಬೇಕು; ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬೇಕು. ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿ ಯಿಂದ ಸುಡಬೇಕು. ತನ್ನ ಸಮಾಧಾನ ಬಲಿ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಸಮರ್ಪಣೆಯಾಗುವದಿಲ್ಲ ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರಿಸಲ್ಪಡುವದಿಲ್ಲ. ಅದು ಹೊಲೆಯಾಗಿರುವದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು. ಅಶುದ್ಧವಾದ ವಸ್ತುವನ್ನು ಮುಟ್ಟಿದ ಮಾಂಸವನ್ನು ತಿನ್ನಬಾರದು; ಅದು ಬೆಂಕಿಯಿಂದ ಸುಡಲ್ಪಡಬೇಕು. ಮಾಂಸದ ವಿಷಯದಲ್ಲಿ ಶುದ್ಧವಾಗಿರುವವರೆಲ್ಲರೂ ಅದನ್ನು ತಿನ್ನ ಬಹುದು. ಯಾವನಾದರೂ ಅಶುದ್ಧನಾಗಿದ್ದು ಕರ್ತ ನಿಗೆ ಸಂಬಂಧಪಟ್ಟ ಸಮಾಧಾನ ಬಲಿಗಳ ಯಜ್ಞದ ಮಾಂಸವನ್ನು ತಿನ್ನುವನೋ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು. ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧತ್ವವನ್ನಾಗಲಿ ಯಾವುದೇ ಅಶುದ್ಧ ವಾದದ್ದನ್ನಾಗಲಿ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧ ವಸ್ತುವನ್ನಾಗಲಿ ಯಾವುದೇ ಅಶುದ್ಧ ಪ್ರಾಣಿ ಯನ್ನಾಗಲಿ ಮುಟ್ಟಿದರೂ ಮತ್ತು ಕರ್ತನಿಗೆ ಸಂಬಂಧಿ ಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೂ ಅವನು ತನ್ನ ಜನರಿಂದ ತೆಗೆದುಹಾಕಲ್ಪಡ ಬೇಕು ಅಂದನು.