Luke · chapter 1 · verse 30
Luke 1:30 in Kannada
ಆ ದೂತನು ಆಕೆಗೆ-- ಮರಿಯಳೇ, ಹೆದರಬೇಡ; ಯಾಕಂದರೆ ನೀನು ದೇವರ ದಯೆಯನ್ನು ಹೊಂದಿದ್ದೀ;
Aa dootanu aakege-- mariyale, hedarabeda; yaakandare neenu devara dayeyannu hondiddee;
Luke 1:30 in English
- King James Version (KJV)
- And the angel said unto her, Fear not, Mary: for thou hast found favour with God.
- World English Bible (WEB)
- The angel said to her, “Don’t be afraid, Mary, for you have found favor with God.
- American Standard Version (ASV)
- And the angel said unto her, Fear not, Mary: for thou hast found favor with God.
- Bible in Basic English (BBE)
- And the angel said to her, Have no fear, Mary, for you have God's approval.
- Darby Translation (DBY)
- And the angel said to her, Fear not, Mary, for thou hast found favour with God;
- Webster's Bible (WBS)
- And the angel said to her, Fear not, Mary: for thou hast found favor with God.
- Young's Literal Translation (YLT)
- And the messenger said to her, 'Fear not, Mary, for thou hast found favour with God;
Read in context
- 28ಆ ದೂತನು ಆಕೆಗೆ--ಅಪಾರ ದಯೆ ಹೊಂದಿದವಳೇ, ನಿನಗೆ ವಂದನೆ; ಕರ್ತನು ನಿನ್ನೊಂದಿಗಿದ್ದಾನೆ; ಸ್ತ್ರೀಯರಲ್ಲಿ ನೀನು ಧನ್ಯಳೇ ಎಂದು ಹೇಳಿದನು.
- 29ಆಕೆಯು ಅವನನ್ನು ನೋಡಿ ಅವನ ಮಾತಿಗೆ ಕಳವಳಗೊಂಡು ಇದು ಎಂಥಾತರವಾದ ವಂದನೆ ಎಂದು ತನ್ನ ಮನದಲ್ಲಿ ಯೋಚಿಸುತ್ತಿರುವಾಗ
- 30ಆ ದೂತನು ಆಕೆಗೆ-- ಮರಿಯಳೇ, ಹೆದರಬೇಡ; ಯಾಕಂದರೆ ನೀನು ದೇವರ ದಯೆಯನ್ನು ಹೊಂದಿದ್ದೀ;
- 31ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು.
- 32ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು.
Cross references
- Luke 1:13 ಲೂಕನು 1:13ಆದರೆ ಆ ದೂತನು ಅವನಿಗೆ--ಜಕರೀಯನೇ, ಭಯಪಡಬೇಡ; ಯಾಕಂದರೆ ನಿನ್ನ ಪ್ರಾರ್ಥನೆಯು ಕೇಳಲ್ಪಟ್ಟಿದೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನನ್ನು ಯೋಹಾನನೆಂದು ಕರೆಯಬೇಕು.
- Luke 12:32 ಲೂಕನು 12:32ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
- Romans 8:31 ರೋಮಾಪುರದವರಿಗೆ 8:31ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
- Acts 18:9–10 ಅಪೊಸ್ತಲರ ಕೃತ್ಯಗಳು 18:9–10ಇದಲ್ಲದೆ ಕರ್ತನು ರಾತ್ರಿಯಲ್ಲಿ ಪೌಲನಿಗೆ ದರ್ಶನ ಕೊಟ್ಟು--ನೀನು ಹೆದರಬೇಡ; ಸುಮ್ಮನಿರದೆ ಮಾತ ನಾಡುತ್ತಲೇ ಇರು. ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡುಮಾಡುವದಿಲ್ಲ; ಈ ಪಟ್ಟಣದಲ್ಲಿ ಬಹಳ ಮಂದಿ ನನಗೆ ಇದ್ದಾರೆ ಎಂದು ಹೇಳಿದನು.
- Matthew 28:5 ಮತ್ತಾಯನು 28:5ಆ ದೂತನು ಸ್ತ್ರೀಯರಿಗೆ-- ನೀವು ಭಯಪಡಬೇಡಿರಿ; ಯಾಕಂದರೆ ಶಿಲುಬೆಗೆ ಹಾಕಲ್ಪಟ್ಟವನಾದ ಯೇಸುವನ್ನು ನೀವು ಹುಡುಕುತ್ತೀರೆಂದು ನಾನು ಬಲ್ಲೆನು.
- Matthew 14:27 ಮತ್ತಾಯನು 14:27ಆದರೆ ಯೇಸು ತಕ್ಷಣವೇ ಮಾತನಾಡಿ ಅವರಿಗೆ--ಧೈರ್ಯವಾಗಿರ್ರಿ; ನಾನೇ, ಭಯಪಡಬೇಡಿರಿಅಂದನು.
- Isaiah 44:2 ಯೆಶಾಯ 44:2ನಿನ್ನನ್ನು ನಿರ್ಮಾಣ ಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಕರ್ತನು ಹೀಗೆನ್ನುತ್ತಾನೆ--ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ.
- Isaiah 41:14 ಯೆಶಾಯ 41:14ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
- Isaiah 43:1–4 ಯೆಶಾಯ 43:1–4ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ. ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು. ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ. ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
- Hebrews 13:6 ಇಬ್ರಿಯರಿಗೆ 13:6ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Acts 27:24 ಅಪೊಸ್ತಲರ ಕೃತ್ಯಗಳು 27:24ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲತಕ್ಕದ್ದು; ಇಗೋ, ನಿನ್ನೊಂದಿಗೆ ಪ್ರಯಾಣಮಾಡುವವರೆಲ್ಲರನ್ನು ನಿನಗೆ ದೇವರು ಕೊಟ್ಟಿದ್ದಾನೆ ಎಂದು ಹೇಳಿದನು.