Luke · chapter 1 · verse 68
Luke 1:68 in Kannada
ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿ ಹೊಂದಲಿ, ಯಾಕಂದರೆ ಆತನು ತನ್ನ ಜನರನ್ನು ಸಂಧಿಸಿ ಅವರನ್ನು ವಿಮೋಚಿ ಸಿದ್ದಾನೆ.
Israayelina devaraada kartanu stuti hondali, yaakandare aatanu tanna janarannu sandhisi avarannu vimochi siddaane.
Luke 1:68 in English
- King James Version (KJV)
- Blessed [be] the Lord God of Israel; for he hath visited and redeemed his people,
- World English Bible (WEB)
- “Blessed be the Lord, the God of Israel, for he has visited and redeemed his people;
- American Standard Version (ASV)
- Blessed [be] the Lord, the God of Israel; For he hath visited and wrought redemption for his people,
- Bible in Basic English (BBE)
- Praise be to the Lord, the God of Israel, for he has come to his people and made them free,
- Darby Translation (DBY)
- Blessed be [the] Lord the God of Israel, because he has visited and wrought redemption for his people,
- Webster's Bible (WBS)
- Blessed [be] the Lord God of Israel; for he hath visited and redeemed his people.
- Young's Literal Translation (YLT)
- 'Blessed [is] the Lord, the God of Israel, Because He did look upon, And wrought redemption for His people,
Read in context
- 66ಕೇಳಿದವರೆಲ್ಲರೂ ಅವುಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು--ಈ ಕೂಸೂ ಎಂಥದ್ದಾಗುವನೊ ಎಂದು ಅಂದುಕೊಂಡರು. ಕರ್ತನ ಹಸ್ತವು ಅವನ ಸಂಗಡ ಇತ್ತು.
- 67ಅವನ ತಂದೆಯಾದ ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ--
- 68ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿ ಹೊಂದಲಿ, ಯಾಕಂದರೆ ಆತನು ತನ್ನ ಜನರನ್ನು ಸಂಧಿಸಿ ಅವರನ್ನು ವಿಮೋಚಿ ಸಿದ್ದಾನೆ.
- 69ಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಕೊಂಬನ್ನು ಎತ್ತಿ ದ್ದಾನೆ.
- 70ಲೋಕಾದಿಯಿಂದ ಆತನು ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ
Cross references
- Psalm 106:48 ಕೀರ್ತನೆಗಳು 106:48ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
- Luke 7:16 ಲೂಕನು 7:16ಆಗ ಅವರೆಲ್ಲರೂ ಭಯಹಿಡಿದವರಾಗಿ--ನಮ್ಮ ಮಧ್ಯ ದಲ್ಲಿ ಒಬ್ಬ ದೊಡ್ಡ ಪ್ರವಾದಿಯು ಎದ್ದಿದ್ದಾನೆ; --ದೇವರು ತನ್ನ ಜನರನ್ನು ದರ್ಶಿಸಿದ್ದಾನೆ ಎಂದು ದೇವ ರನ್ನು ಮಹಿಮೆಪಡಿಸುತ್ತಾ ಹೇಳಿದರು.
- Psalm 41:13 ಕೀರ್ತನೆಗಳು 41:13ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಕ್ಕೂ ಕೊಂಡಾಟ ವಾಗಲಿ. ಆಮೆನ್. ಆಮೆನ್.
- Psalm 111:9 ಕೀರ್ತನೆಗಳು 111:9ತನ್ನ ಜನರಿಗೆ ವಿಮೋಚನೆಯನ್ನು ಕಳುಹಿ ಸಿದನು; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಆಜ್ಞಾಪಿಸಿದನು; ಆತನ ಹೆಸರು ಪರಿಶುದ್ಧವೂ ಘನವೂ ಆಗಿದೆ.ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ.
- Exodus 4:31 ವಿಮೋಚನಕಾಂಡ 4:31ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.
- Exodus 3:16–17 ವಿಮೋಚನಕಾಂಡ 3:16–17ಆತನು--ನೀನು ಹೋಗಿ ಇಸ್ರಾಯೇಲ್ ಹಿರಿಯ ರನ್ನು ಕೂಡಿಸಿ ಅವರಿಗೆ--ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಕರ್ತನು ನನಗೆ ಕಾಣಿಸಿಕೊಂಡು--ನಿಮ್ಮನ್ನೂ ಐಗುಪ್ತದಲ್ಲಿ ನಿಮಗೆ ಮಾಡಿದ್ದನ್ನೂ ನಿಶ್ಚಯವಾಗಿ ನಾನು ನೋಡಿದ್ದೇನೆ. ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.
- 1 Kings 1:48 1 ಅರಸುಗಳು 1:48ಅರಸನು--ನನ್ನ ಕಣ್ಣುಗಳು ನೋಡುತ್ತಿರುವಾಗ ಇಂದು ನನ್ನ ಸಿಂಹಾಸನದ ಮೇಲೆ ಕೂಡುವವನನ್ನು ನನಗೆ ಕೊಟ್ಟಿರುವ ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು.
- Ephesians 1:7 ಎಫೆಸದವರಿಗೆ 1:7ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು.
- Psalm 72:17–19 ಕೀರ್ತನೆಗಳು 72:17–19ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು. ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ. ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್. ಆಮೆನ್.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.
- Luke 2:38 ಲೂಕನು 2:38ಆ ಕ್ಷಣದಲ್ಲಿ ಅವಳು ಬಂದು ಕರ್ತನನ್ನು ಅದೇ ರೀತಿಯಾಗಿ ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಆತನ ವಿಷಯ ವಾಗಿ ಮಾತನಾಡಿದಳು.
- Ephesians 1:3 ಎಫೆಸದವರಿಗೆ 1:3ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ಆಶೀರ್ವಾದ ಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
- 1 Chronicles 29:20 1 ಪೂರ್ವಕಾಲವೃತ್ತಾಂತ 29:20ದಾವೀದನು ಸಮಸ್ತ ಸಭೆಗೆ--ಈಗ ನಿಮ್ಮ ದೇವರಾದ ಕರ್ತನನ್ನು ಸ್ತುತಿಸಿರಿ ಅಂದನು. ಆಗ ಸಭೆಯವರೆಲ್ಲರೂ ತಮ್ಮ ಪಿತೃಗಳ ದೇವರಾದ ಕರ್ತ ನನ್ನು ಸ್ತುತಿಸುತ್ತಾ ತಮ್ಮ ತಲೆಗಳನ್ನು ಬಾಗಿಸಿ ಕರ್ತನನ್ನೂ ಅರಸನನ್ನೂ ಆರಾಧಿಸಿದರು.