Luke · chapter 11 · verse 22
Luke 11:22 in Kannada
ಆದರೆ ಅವನಿಗಿಂತ ಬಲಿ ಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ ಅವನು ನಂಬಿಕೊಂಡಿದ್ದ ಆಯುಧಗಳನ್ನು ಅವನಿಂದ ತಕ್ಕೊಂಡು ತನ್ನ ಸುಲಿಗೆಗಳನ್ನು ಹಂಚುವನು.
Aadare avaniginta bali shthanu avana mele bandu avanannu jayisi avanu nambikondidda aayudhagalannu avaninda takkondu tanna suligegalannu hanchuvanu.
Luke 11:22 in English
- King James Version (KJV)
- But when a stronger than he shall come upon him, and overcome him, he taketh from him all his armour wherein he trusted, and divideth his spoils.
- World English Bible (WEB)
- But when someone stronger attacks him and overcomes him, he takes from him his whole armor in which he trusted, and divides his plunder.
- American Standard Version (ASV)
- but when a stronger than he shall come upon him, and overcome him, he taketh from him his whole armor wherein he trusted, and divideth his spoils.
- Bible in Basic English (BBE)
- But when one who is stronger makes an attack on him and overcomes him, he takes away his instruments of war, in which he had put his faith, and makes division of his goods.
- Darby Translation (DBY)
- but when the stronger than he coming upon [him] overcomes him, he takes away his panoply in which he trusted, and he will divide the spoil [he has taken] from him.
- Webster's Bible (WBS)
- But when a stronger than he shall come upon him, and overcome him, he taketh from him all his armor in which he trusted, and divideth his spoils.
- Young's Literal Translation (YLT)
- but when the stronger than he, having come upon [him], may overcome him, his whole-armour he doth take away in which he had trusted, and his spoils he distributeth;
Read in context
- 20ಆದರೆ ನಾನು ದೇವರ ಹಸ್ತದಿಂದಲೇ ದೆವ್ವಗಳನ್ನು ಹೊರಡಿಸುವದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
- 21ಆಯುಧ ಗಳನ್ನು ಧರಿಸಿಕೊಂಡು ಬಲಿಷ್ಠನಾದವನೊಬ್ಬನು ತನ್ನ ಅರಮನೆಯನ್ನು ಕಾಯುವದಾದರೆ ಅವನ ಸೊತ್ತು ಸುರಕ್ಷಿತವಾಗಿರುವದು.
- 22ಆದರೆ ಅವನಿಗಿಂತ ಬಲಿ ಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ ಅವನು ನಂಬಿಕೊಂಡಿದ್ದ ಆಯುಧಗಳನ್ನು ಅವನಿಂದ ತಕ್ಕೊಂಡು ತನ್ನ ಸುಲಿಗೆಗಳನ್ನು ಹಂಚುವನು.
- 23ನನ್ನ ಜೊತೆಯಲ್ಲಿ ಇಲ್ಲದಿರುವವನು ನನಗೆ ವಿರೋಧವಾಗಿ ದ್ದಾನೆ; ನನ್ನೊಂದಿಗೆ ಕೂಡಿಸದೆ ಇರುವವನು ಚದರಿ ಸುತ್ತಾನೆ.
- 24ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದಮೇಲೆ ನೀರಿಲ್ಲದ ಸ್ಥಳಗಳಲ್ಲಿ ತಿರು ಗುತ್ತಾ ವಿಶ್ರಾಂತಿಯನ್ನು ಹುಡುಕಿ ಏನೂ ಕಾಣದೆ ಅದು--ನಾನು ಹೊರಟು ಬಂದ ನನ್ನ ಮನೆಗೆ ಹಿಂದಿ ರುಗುವೆನು ಎಂದು ಅಂದುಕೊಳ್ಳುತ್ತದೆ.
Cross references
- Isaiah 49:24–25 ಯೆಶಾಯ 49:24–25ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದು ಕೊಳ್ಳಬಹುದೋ? ಇಲ್ಲವೆ ನ್ಯಾಯವಾಗಿ ಸೆರೆಯವ ರನ್ನು ಬಿಡಿಸಬಹುದೋ? 25ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು. ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
- Isaiah 53:12 ಯೆಶಾಯ 53:12ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- 1 John 4:4 1 ಯೋಹಾನನು 4:4ಚಿಕ್ಕಮಕ್ಕಳೇ, ನೀವು ದೇವರಿಗೆ ಸಂಬಂಧಪಟ್ಟವರಾ ಗಿದ್ದೀರಿ. ಅವರನ್ನು ಜಯಿಸಿದ್ದೀರಿ. ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ.
- Colossians 2:15 ಕೊಲೊಸ್ಸೆಯವರಿಗೆ 2:15ಆತನು ದೊರೆತನಗಳನ್ನೂ ಅಧಿಕಾರ ಗಳನ್ನೂ ಕೆಡಿಸಿ ಶಿಲುಬೆಯಲ್ಲಿ ಅವುಗಳ ಮೇಲೆ ವಿಜಯ ಗೊಂಡು ಅವುಗಳನ್ನು ಬಹಿರಂಗವಾಗಿ ತೋರಿಸಿದನು.
- 1 John 3:8 1 ಯೋಹಾನನು 3:8ಪಾಪಮಾಡುವವನು ಸೈತಾನ ನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದದರಿಂದ ದೇವಕುಮಾರನು ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ಪ್ರತ್ಯಕ್ಷನಾದನು.
- Genesis 3:15 ಆದಿಕಾಂಡ 3:15ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು, ಕಚ್ಚುವಿ ಅಂದನು.
- Isaiah 27:1 ಯೆಶಾಯ 27:1ಆ ದಿನದಲ್ಲಿ ಕರ್ತನು, ತನ್ನ ಉಗ್ರದೊಂದಿಗೆ ದೊಡ್ಡ ಬಲವಾದ ಕತ್ತಿಯಿಂ ದ(ಖಡ್ಗದಿಂದ) ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ ದಂಡಿಸಿ ಸಮುದ್ರದಲ್ಲಿರುವ ಘಟಸರ್ಪ ವನ್ನೂ ಕೊಂದುಹಾಕುವನು.
- Isaiah 63:1–4 ಯೆಶಾಯ 63:1–4ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ. ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು.
- Revelation 20:1–3 ಪ್ರಕಟನೆ 20:1–3ಆಗ ಒಬ್ಬ ದೂತನು ತಳವಿಲ್ಲದ ತಗ್ಗಿನ ಬೀಗದ ಕೈಯನ್ನೂ ದೊಡ್ಡ ಸರಪಣಿ ಯನ್ನೂ ತನ್ನ ಕೈಯಲ್ಲಿ ಹಿಡಿದುಕೊಂಡು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪ ನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧಿಸಿದನು. ಆ ಸಾವಿರ ವರುಷ ತೀರುವ ತನಕ ಅವನು ಇನ್ನು ಎಂದಿಗೂ ಜನಾಂಗಗಳನ್ನು ಮರುಳು ಗೊಳಿಸದ ಹಾಗೆ ದೂತನು ಅವನನ್ನು ತಳವಿಲ್ಲದ ತಗ್ಗಿನಲ್ಲಿ ದೊಬ್ಬಿ ಅವನನ್ನು ಮುಚ್ಚಿ ಅದರ ಮೇಲೆ ಮುದ್ರೆ ಹಾಕಿದನು. ಆ ಸಾವಿರ ವರುಷಗಳಾದ ಮೇಲೆ ಅವನಿಗೆ ಸ್ವಲ್ಪ ಕಾಲ ಬಿಡುಗಡೆಯಾಗತಕ್ಕದ್ದು.