Luke · chapter 11 · verse 30
Luke 11:30 in Kannada
ಯೋನನು ನಿನೆವೆಯವರಿಗೆ ಸೂಚನೆ ಯಾಗಿದ್ದಂತೆಯೇ ಮನುಷ್ಯಕುಮಾರನು ಸಹ ಈ ಸಂತತಿಗೆ ಸೂಚನೆಯಾಗಿರುವನು.
Yonanu nineveyavarige soochane yaagiddanteye manushyakumaaranu saha ee santatige soochaneyaagiruvanu.
Luke 11:30 in English
- King James Version (KJV)
- For as Jonas was a sign unto the Ninevites, so shall also the Son of man be to this generation.
- World English Bible (WEB)
- For even as Jonah became a sign to the Ninevites, so the Son of Man will also be to this generation.
- American Standard Version (ASV)
- For even as Jonah became a sign unto the Ninevites, so shall also the Son of man be to this generation.
- Bible in Basic English (BBE)
- For even as Jonah became a sign to the Ninevites, so will the Son of man be to this generation.
- Darby Translation (DBY)
- For as Jonas was a sign to the Ninevites, thus shall also the Son of man be to this generation.
- Webster's Bible (WBS)
- For as Jonah was a sign to the Ninevites, so also shall the Son of man be to this generation.
- Young's Literal Translation (YLT)
- for as Jonah became a sign to the Ninevites, so also shall the Son of Man be to this generation.
Read in context
- 28ಆದರೆ ಆತನು--ಹೌದು, ಇದಕ್ಕಿಂ ತಲೂ ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯು ವವರೇ ಧನ್ಯರು ಎಂದು ಹೇಳಿದನು.
- 29ಜನರು ಗುಂಪುಗುಂಪಾಗಿ ಕೂಡಿ ಬಂದಿದ್ದಾಗ ಆತನು--ಇದು ದುಷ್ಟಸಂತತಿಯು; ಇದು ಸೂಚಕ ಕಾರ್ಯವನ್ನು ಹುಡುಕುತ್ತದೆ. ಪ್ರವಾದಿಯಾದ ಯೋನ ನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡ ಲಾರದು.
- 30ಯೋನನು ನಿನೆವೆಯವರಿಗೆ ಸೂಚನೆ ಯಾಗಿದ್ದಂತೆಯೇ ಮನುಷ್ಯಕುಮಾರನು ಸಹ ಈ ಸಂತತಿಗೆ ಸೂಚನೆಯಾಗಿರುವನು.
- 31ನ್ಯಾಯ ತೀರ್ಪಿ ನಲ್ಲಿ ದಕ್ಷಿಣದ ರಾಣಿಯು ಈ ಸಂತತಿ ಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕೆ ಭೂಮಿಯ ಕಟ್ಟಕಡೆಯ ಭಾಗಗಳಿಂದ ಬಂದಳು; ಮತ್ತು ಇಗೋ, ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ.
- 32ನಿನೆವೆಯವರು ನ್ಯಾಯತೀರ್ಪಿನಲ್ಲಿ ಈ ಸಂತತಿಯವ ರೊಂದಿಗೆ ಎದ್ದು ಇದನ್ನು ಖಂಡಿಸುವರು. ಯಾಕಂದರೆ ಯೋನನು ಸಾರಿದ್ದನ್ನು ಕೇಳಿ ಅವರು ಮಾನಸಾಂತರ ಪಟ್ಟರು; ಮತ್ತು ಇಗೋ, ಯೋನನಿಗಿಂತಲೂ ಹೆಚ್ಚಿನ ವನು ಇಲ್ಲಿದ್ದಾನೆ.
Cross references
- Matthew 12:40–42 ಮತ್ತಾಯನು 12:40–42ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು. ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ. ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.
- Jonah 3:2–10 ಯೋನ 3:2–10ಏನಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಹೇಳಿದ ಪ್ರಕಟನೆಯನ್ನು ಅದಕ್ಕೆ ಸಾರು ಎಂದು ಹೇಳಿದನು. ಹೀಗೆ ಯೋನನು ಎದ್ದು ಕರ್ತನ ವಾಕ್ಯದ ಪ್ರಕಾರ ನಿನೆವೆಗೆ ಹೋದನು; ಆ ನಿನೆವೆಯು ಮೂರು ದಿವಸದ ಪ್ರಯಾಣವಾದ ಮಹಾದೊಡ್ಡ ಪಟ್ಟಣ ವಾಗಿತ್ತು. ಆಗ ಯೋನನು ಒಂದು ದಿನದ ಪ್ರಯಾಣ ಮಾಡಿ ಪಟ್ಟಣದಲ್ಲಿ ಪ್ರವೇಶಿಸಲಾರಂಭಿಸಿ--ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ಕೆಡವಲ್ಪಡು ವದೆಂದು ಕೂಗಿ ಹೇಳಿದನು. ಆಗ ನಿನೆವೆಯ ಮನು ಷ್ಯರು ದೇವರನ್ನು ನಂಬಿ ಉಪವಾಸವನ್ನು ಸಾರಿ ಅವ ರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನ ವರೆಗೂ ಗೋಣೀತಟ್ಟನ್ನು ಉಟ್ಟುಕೊಂಡರು. ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ ಅವನು ತನ್ನ ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದಿಟ್ಟು ಗೋಣೀತಟ್ಟನ್ನು ಉಟ್ಟುಕೊಂಡು ಬೂದಿ ಯಲ್ಲಿ ಕೂತು ಕೊಂಡನು. ಅವನು ಅರಸನಿಂದಲೂ ತನ್ನ ಶ್ರೇಷ್ಠರಿಂದಲೂ ಆದ ನಿರ್ಣಯವನ್ನು ನಿನೆವೆ ಯಲ್ಲಿ ಸಾರಿ ಹೇಳಿದ್ದೇನಂದರೆ--ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನಾ ದರೂ ರುಚಿ ನೋಡದಿರಲಿ, ಮೇಯ ದಿರಲಿ, ನೀರನ್ನು ಕುಡಿಯದಿರಲಿ, ಮನುಷ್ಯರೂ ಮೃಗಗಳೂ ಗೋಣೀ ತಟ್ಟು ಹಾಕಿಕೊಂಡು ಬಲವಾಗಿ ದೇವರಿಗೆ ಮೊರೆಯಿ ಡಲಿ; ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ. ದೇವರು ತಿರುಗಿ ಕೊಂಡು ಪಶ್ಚಾತ್ತಾಪಪಟ್ಟು ನಾವು ನಾಶವಾಗದ ಹಾಗೆ ತನ್ನ ಕೋಪದ ಉರಿಯನ್ನು ಬಿಟ್ಟಾನೇನೋ ಯಾರು ಬಲ್ಲರು ಅಂದನು.ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ. ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.
- Jonah 1:17 ಯೋನ 1:17ಆದರೆ ಕರ್ತನು ಯೋನನನ್ನು ನುಂಗುವ ಹಾಗೆ ದೊಡ್ಡ ವಿಾನನ್ನು ಸಿದ್ಧಮಾಡಿದ್ದನು; ಯೋನನು ಆ ವಿಾನಿನ ಹೊಟ್ಟೆಯಲ್ಲಿ ಮೂರು ಹಗಲು ಮೂರು ರಾತ್ರಿಯು ಇದ್ದನು.
- Luke 24:46–47 ಲೂಕನು 24:46–47ಅವರಿಗೆ--ಕ್ರಿಸ್ತನು ಹೀಗೆ ಶ್ರಮೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವಾಗಿತ್ತೆಂತಲೂ ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವ ರೊಳಗೆ ಆತನ ಹೆಸರಿನಲ್ಲಿ ಮಾನಸಾಂತರ ಮತ್ತು ಪಾಪಗಳ ಕ್ಷಮಾಪಣೆ ಸಾರಲ್ಪಡಬೇಕೆಂತಲೂ ಬರೆಯ ಲ್ಪಟ್ಟಿದೆ.
- Jonah 2:10 ಯೋನ 2:10ಆಗ ಕರ್ತನು ಆ ವಿಾನಿಗೆ ಹೇಳಿದ್ದರಿಂದ ಅದು ಯೋನನನ್ನು ಒಣ ಭೂಮಿಯ ಮೇಲೆ ಕಾರಿಬಿಟ್ಟಿತು.