Luke · chapter 11 · verse 8
Luke 11:8 in Kannada
ಆದರೆ ನಾನು ನಿಮಗೆ ಹೇಳುವದೇನಂದರೆ--ಅವನು ತನ್ನ ಸ್ನೇಹಿತನಾಗಿರುವದರಿಂದ ಎದ್ದು ಅವನಿಗೆ ಕೊಡದೆ ಹೋದರೂ ಅವನು ಮೇಲಿಂದ ಮೇಲೆ ಪೀಡಿಸಿ ಬೇಡುವದರಿಂದ ಎದ್ದು ಅವನಿಗೆ ಬೇಕಾದಷ್ಟು ಕೊಡುವನು.
Aadare naanu nimage heluvadenandare--avanu tanna snehitanaagiruvadarinda eddu avanige kodade hodaroo avanu melinda mele peedisi beduvadarinda eddu avanige bekaadashtu koduvanu.
Luke 11:8 in English
- King James Version (KJV)
- I say unto you, Though he will not rise and give him, because he is his friend, yet because of his importunity he will rise and give him as many as he needeth.
- World English Bible (WEB)
- I tell you, although he will not rise and give it to him because he is his friend, yet because of his persistence, he will get up and give him as many as he needs.
- American Standard Version (ASV)
- I say unto you, Though he will not rise and give him because he is his friend, yet because of his importunity he will arise and give him as many as he needeth.
- Bible in Basic English (BBE)
- I say to you, Though he will not get up and give to him, because he is his friend, still, if he keeps on making his request, he will get up and give him as much as he has need of.
- Darby Translation (DBY)
- — I say to you, Although he will not get up and give [them] to him because he is his friend, because of his shamelessness, at any rate, he will rise and give him as many as he wants.
- Webster's Bible (WBS)
- I say to you, Though he will not rise and give him, because he is his friend, yet because of his importunity he will rise and give him as many as he needeth.
- Young's Literal Translation (YLT)
- 'I say to you, even if he will not give to him, having risen, because of his being his friend, yet because of his importunity, having risen, he will give him as many as he doth need;
Read in context
- 6ನನ್ನ ಸ್ನೇಹಿ ತನು ಪ್ರಯಾಣವಾಗಿ ನನ್ನ ಬಳಿಗೆ ಬಂದಿದ್ದಾನೆ; ಅವನಿಗೆ ಬಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಅನ್ನಲು
- 7ಅವನು ಒಳಗಿನಿಂದಲೇ ಅವನಿಗೆ ಉತ್ತರವಾಗಿ--ನನ್ನನ್ನು ತೊಂದರೆಪಡಿಸಬೇಡ; ಬಾಗಲು ಈಗ ಮುಚ್ಚಿ ಯದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆಯಲ್ಲಿ ದ್ದಾರೆ; ನಾನೆದ್ದು ಕೊಡಲಾರೆನು ಎಂದು ಹೇಳುವನು.
- 8ಆದರೆ ನಾನು ನಿಮಗೆ ಹೇಳುವದೇನಂದರೆ--ಅವನು ತನ್ನ ಸ್ನೇಹಿತನಾಗಿರುವದರಿಂದ ಎದ್ದು ಅವನಿಗೆ ಕೊಡದೆ ಹೋದರೂ ಅವನು ಮೇಲಿಂದ ಮೇಲೆ ಪೀಡಿಸಿ ಬೇಡುವದರಿಂದ ಎದ್ದು ಅವನಿಗೆ ಬೇಕಾದಷ್ಟು ಕೊಡುವನು.
- 9ನಾನು ನಿಮಗೆ ಹೇಳುವದೇನಂ ದರೆ--ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನೀವು ಕಂಡುಕೊಳ್ಳುವಿರಿ; ತಟ್ಟಿರಿ, ನಿಮಗೆ ತೆರೆಯಲ್ಪಡುವದು.
- 10ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು; ಹುಡುಕುವವನು ಕಂಡುಕೊಳ್ಳುವನು; ತಟ್ಟುವವನಿಗೆ ತೆರೆಯಲ್ಪಡುವದು.
Cross references
- Genesis 32:26 ಆದಿಕಾಂಡ 32:26ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು.
- Romans 15:30 ರೋಮಾಪುರದವರಿಗೆ 15:30ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಹೋರಾಟದಿಂದ ವಿಜ್ಞಾಪಿಸಿಕೊಳ್ಳಬೇಕೆಂದು ಕರ್ತ ನಾದ ಯೇಸು ಕ್ರಿಸ್ತನ ನಿಮಿತ್ತವಾಗಿಯೂ ಪವಿತ್ರಾತ್ಮನ ಪ್ರೀತಿಯ ನಿಮಿತ್ತವಾಗಿಯೂ ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.
- Colossians 4:12 ಕೊಲೊಸ್ಸೆಯವರಿಗೆ 4:12ನಿಮ್ಮಲ್ಲಿ ಒಬ್ಬನಾದ ಕ್ರಿಸ್ತನ ಸೇವಕನಾಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ಪರಿಪೂರ್ಣರಾಗಿಯೂ ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕೆಂದು ಇವನು ನಿಮಗೋಸ್ಕರ ಕಷ್ಟಪಟ್ಟು ಪ್ರಾರ್ಥನೆಗಳಲ್ಲಿ ಹೋರಾಡುತ್ತಾನೆ.
- Luke 18:1–8 ಲೂಕನು 18:1–8ಜನರು ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸತಕ್ಕದ್ದೆಂದು ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು-- ಒಂದಾನೊಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಭಯಪಡದವನೂ ಮನುಷ್ಯರನ್ನು ಲಕ್ಷ್ಯ ಮಾಡದವನೂ ಆಗಿದ್ದನು. ಆ ಪಟ್ಟಣದಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಬಂದು--ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು. ಅವನು ಸ್ವಲ್ಪಕಾಲದವರೆಗೆ ಮನಸ್ಸಿಲ್ಲ ದವನಾಗಿದ್ದನು; ತರುವಾಯ ಅವನು ತನ್ನೊಳಗೆ--ನಾನು ದೇವರಿಗೆ ಭಯಪಡುವದಿಲ್ಲ, ಮನುಷ್ಯರನ್ನು ಲಕ್ಷ್ಯಮಾಡುವದೂ ಇಲ್ಲ. ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು. ಕರ್ತನು--ಈ ಅನ್ಯಾಯಗಾರನಾದ ನ್ಯಾಯಾಧಿ ಪತಿಯು ಅಂದುಕೊಂಡದ್ದನ್ನು ಕೇಳಿರಿ. ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.
- Matthew 15:22–28 ಮತ್ತಾಯನು 15:22–28ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು. ಆದರೆ ಆತನು ಆಕೆಗೆ ಒಂದು ಮಾತೂ ಉತ್ತರ ಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು--ಆಕೆಯನ್ನು ಕಳುಹಿಸಿಬಿಡು, ಯಾಕಂದರೆ ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ ಎಂದು ಆತನನ್ನು ಬೇಡಿಕೊಂಡರು. ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು. ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು. ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು. ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು. ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.
- 2 Corinthians 12:8 2 ಕೊರಿಂಥದವರಿಗೆ 12:8ಈ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.
- Colossians 2:1 ಕೊಲೊಸ್ಸೆಯವರಿಗೆ 2:1ನಿಮಗೋಸ್ಕರವೂ ಲವೊದಿಕೀಯದವರಿ ಗೋಸ್ಕರವೂ ನನ್ನನ್ನು ಕಣ್ಣಾರೆ ಕಾಣದಿರು ವವರೆಲ್ಲರಿಗೋಸ್ಕರವೂ ನನಗೆ ಬಹಳ ಹೋರಾಟ ಉಂಟೆಂಬದು ನಿಮಗೆ ತಿಳಿದಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.