Luke · chapter 12 · verse 15
Luke 12:15 in Kannada
ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು.
Idallade aatanu avarige--jaagrate yaagiddu lobhakke echcharikeyaagirri; yaakandare obba manushyanige samruddhiyaada aastiyu avanige jeevaadhaaravalla andanu.
Luke 12:15 in English
- King James Version (KJV)
- And he said unto them, Take heed, and beware of covetousness: for a man’s life consisteth not in the abundance of the things which he possesseth.
- World English Bible (WEB)
- He said to them, “Beware! Keep yourselves from covetousness, for a man’s life doesn’t consist of the abundance of the things which he possesses.”
- American Standard Version (ASV)
- And he said unto them, Take heed, and keep yourselves from all covetousness: for a man’s life consisteth not in the abundance of the things which he possesseth.
- Bible in Basic English (BBE)
- And he said to them, Take care to keep yourselves free from the desire for property; for a man's life is not made up of the number of things which he has.
- Darby Translation (DBY)
- And he said to them, Take heed and keep yourselves from all covetousness, for [it is] not because a man is in abundance [that] his life is in his possessions.
- Webster's Bible (WBS)
- And he said to them, Take heed, and beware of covetousness: for a man's life consisteth not in the abundance of the things which he possesseth.
- Young's Literal Translation (YLT)
- And he said unto them, 'Observe, and beware of the covetousness, because not in the abundance of one's goods is his life.'
Read in context
- 13ಆಗ ಗುಂಪಿನಲ್ಲಿದ್ದ ಒಬ್ಬನು ಆತನಿಗೆ--ಬೋಧ ಕನೇ, ಆಸ್ತಿಯನ್ನು ಪಾಲುಮಾಡಿ ನನಗೆ ಕೊಡುವಂತೆ ನನ್ನ ಸಹೋದರನಿಗೆ ಹೇಳು ಅಂದನು.
- 14ಅದಕ್ಕೆ ಆತನು ಅವನಿಗೆ--ಮನುಷ್ಯನೇ, ನಿಮ್ಮ ಮೇಲೆ ನ್ಯಾಯಾಧಿಪತಿಯನ್ನಾಗಿ ಇಲ್ಲವೆ ಪಾಲುಮಾಡುವ ವನನ್ನಾಗಿ ನನ್ನನ್ನು ಯಾರು ಮಾಡಿದರು ಎಂದು ಕೇಳಿದನು.
- 15ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು.
- 16ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದ್ದೇನಂದರೆ--ಒಬ್ಬಾ ನೊಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆಯಿತು.
- 17ಆಗ ಅವನು ತನ್ನೊಳಗೆ--ನಾನೇನು ಮಾಡಲಿ? ನನಗಿರುವ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲ ಎಂದು ಆಲೋಚಿಸಿ ಅವನು--
Cross references
- Hebrews 13:5 ಇಬ್ರಿಯರಿಗೆ 13:5ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ.
- 1 Timothy 6:6–10 1 ತಿಮೊಥೆಯನಿಗೆ 6:6–10ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. ನಾವು ಲೋಕದೊಳಗೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ನಿಶ್ಚಯವಾಗಿ ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ಆದದರಿಂದ ಅನ್ನವಸ್ತ್ರಗಳುಳ್ಳವರಾಗಿ ಅವುಗಳಿಂದ ತೃಪ್ತರಾಗಿರೋಣ. ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ. ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ.
- Psalm 119:36–37 ಕೀರ್ತನೆಗಳು 119:36–37ಲೋಭದ ಕಡೆಗಲ್ಲ, ನಿನ್ನ ಸಾಕ್ಷಿಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸು. ವ್ಯರ್ಥತೆಯನ್ನು ನೋಡದ ಹಾಗೆ ನನ್ನ ಕಣ್ಣುಗಳನ್ನು ತೊಲಗಿಸು; ನಿನ್ನ ಮಾರ್ಗಗಳಲ್ಲಿ ನನ್ನನ್ನು ಚೈತನ್ಯ ಪಡಿಸು.
- Proverbs 15:16 ಜ್ಞಾನೋಕ್ತಿಗಳು 15:16ಕಳವಳದಿಂದ ಕೂಡಿದ ದೊಡ್ಡ ಸಂಪತ್ತಿ ಗಿಂತ ಕರ್ತನ ಭಯದಿಂದ ಕೂಡಿದ ಸ್ವಲ್ಪವೇ ಉತ್ತಮ ವಾಗಿದೆ.
- Proverbs 16:16 ಜ್ಞಾನೋಕ್ತಿಗಳು 16:16ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.
- Matthew 6:25–26 ಮತ್ತಾಯನು 6:25–26ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
- Luke 16:14 ಲೂಕನು 16:14ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು.
- Ecclesiastes 5:10–16 ಪ್ರಸಂಗಿ 5:10–16ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ. ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ? ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು. ಸೂರ್ಯನ ಕೆಳಗೆ ವ್ಯಥೆಯಿಂದ ಕೂಡಿದ ಒಂದು ಕೆಟ್ಟತನವನ್ನು ನಾನು ನೋಡಿದ್ದೇನೆ; ಅದು ಯಾವ ದಂದರೆ, ತಮ್ಮ ವ್ಯಥೆಗಾಗಿ ಅವುಗಳ ಯಜ ಮಾನರು ಇಟ್ಟುಕೊಂಡಿದ್ದ ಐಶ್ವರ್ಯವೇ. ಆದರೆ ಕೆಟ್ಟ ಪ್ರಯಾ ಸದಿಂದ ಆ ಆಸ್ತಿಯು ನಾಶವಾಗುತ್ತದೆ; ಅವನು ಒಬ್ಬ ಮಗನನ್ನು ಪಡೆದಿದ್ದರೆ ಅವನ ಕೈಯಲ್ಲಿ ಏನೂ ಇರದು. ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ. ಇದೂ ಕೂಡ ವ್ಯಥೆಯಿಂದ ಕೂಡಿದ ಕೆಟ್ಟತನವೇ. ಅದು ಯಾವ ದಂದರೆ ಎಲ್ಲಾ ವಿಷಯಗಳಲ್ಲಿ ತಾನು ಹೇಗೆ ಬಂದನೋ ಹಾಗೆಯೇ ಹೋಗುವನು; ಗಾಳಿಗಾಗಿ ಪ್ರಯಾಸಪಟ್ಟ ವನಿಗೆ ಲಾಭವೇನಿದೆ?
- 2 Timothy 3:2 2 ತಿಮೊಥೆಯನಿಗೆ 3:2ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ
- Luke 8:14 ಲೂಕನು 8:14ಮುಳ್ಳುಗಳ ಮಧ್ಯದಲ್ಲಿ ಬಿದ್ದ ಬೀಜದವರು ಯಾರಂದರೆ ಅವರು ಕೇಳಿದ ಮೇಲೆ ಮುಂದರಿದು ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಭೋಗಗಳಿಂದಲೂ ಅಡಗಿಸ ಲ್ಪಟ್ಟು ಪರಿಪೂರ್ಣವಾಗಿ ಫಲಿಸದವರು.
- Colossians 3:5 ಕೊಲೊಸ್ಸೆಯವರಿಗೆ 3:5ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.
- Psalm 62:10 ಕೀರ್ತನೆಗಳು 62:10ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.