Luke · chapter 12 · verse 35
Luke 12:35 in Kannada
ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀಪಗಳು ಉರಿಯುತ್ತಿರಲಿ.
Nimma nadugalu kattirali; nimma deepagalu uriyuttirali.
Luke 12:35 in English
- King James Version (KJV)
- Let your loins be girded about, and [your] lights burning;
- World English Bible (WEB)
- “Let your waist be dressed and your lamps burning.
- American Standard Version (ASV)
- Let your loins be girded about, and your lamps burning;
- Bible in Basic English (BBE)
- Be ready, dressed as for a journey, with your lights burning.
- Darby Translation (DBY)
- Let your loins be girded about, and lamps burning;
- Webster's Bible (WBS)
- Let your loins be girt, and [your] lights burning;
- Young's Literal Translation (YLT)
- 'Let your loins be girded, and the lamps burning,
Read in context
- 33ನಿಮಗಿರು ವದನ್ನು ಮಾರಿ ದಾನಮಾಡಿರಿ; ನಿಮಗೋಸ್ಕರ ಹಳೇದಾಗದಂಥ ಚೀಲಗಳನ್ನೂ ಅಳಿದುಹೋಗದಂಥ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ; ಅಲ್ಲಿ ಕಳ್ಳನು ಸವಿಾಪಕ್ಕೆ ಬರುವದಿಲ್ಲ, ನುಸಿಯು ಕೆಡಿಸು ವದಿಲ್ಲ.
- 34ಯಾಕಂದರೆ ನಿಮ್ಮ ಸಂಪತ್ತು ಇರುವಲ್ಲಿಯೇ ನಿಮ್ಮ ಹೃದಯವು ಸಹ ಇರುವದು.
- 35ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀಪಗಳು ಉರಿಯುತ್ತಿರಲಿ.
- 36ನೀವಂತೂ ತಮ್ಮ ಒಡೆಯನು ಮದುವೆಯಿಂದ ಯಾವಾಗ ಹಿಂದಿರುಗುವನೋ ಎಂದು ಕಾಯುವ ಮತ್ತು ಅವನು ಬಂದು ತಟ್ಟಿದಾಗ ತಕ್ಷಣವೇ ಅವನಿಗೆ ತೆರೆಯುವ ಮನುಷ್ಯರಂತೆ ಇರ್ರಿ.
- 37ಒಡೆಯನು ಬಂದಾಗ ಯಾರು ಎಚ್ಚರವಾಗಿರುವದನ್ನು ಅವನು ಕಾಣುವನೋ ಆ ಸೇವಕರು ಧನ್ಯರು; ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಅವನು ಬಂದು ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂಡ್ರಿಸಿ ಅವರಿಗೆ ತಾನೇ ಉಪಚರಿಸುವನು.
Cross references
- 1 Peter 1:13 1 ಪೇತ್ರನು 1:13ಆದದರಿಂದ ನೀವು ಮನಸ್ಸಿನ ನಡುವನ್ನು ಕಟ್ಟಿ ಕೊಂಡು ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷ ನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನೀರಿಕ್ಷೆಯನ್ನು ಅಂತ್ಯದವರೆಗೆ ಇಡಿರಿ.
- Ephesians 6:14 ಎಫೆಸದವರಿಗೆ 6:14ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ಎದೆಕವಚವನ್ನು ಧರಿಸಿಕೊಳ್ಳಿರಿ.ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
- Matthew 25:4–10 ಮತ್ತಾಯನು 25:4–10ಬುದ್ದಿವಂತೆಯರು ತಮ್ಮ ದೀಪಗಳೊ ಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತಕ್ಕೊಂಡರು. ಮದಲಿಂಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸಿ ನಿದ್ರಿಸಿದರು. ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು. ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು; ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು. ಆದರೆ ಬುದ್ಧಿವಂತೆಯರು ಪ್ರತ್ಯುತ್ತರ ವಾಗಿ--ಹಾಗಲ್ಲ, ಅದು ನಮಗೂ ನಿಮಗೂ ಸಾಲದೆ ಹೋದೀತು; ಆದದರಿಂದ ನೀವು ಮಾರು ವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡು ಕೊಳ್ಳಿರಿ ಅಂದರು. ಅವರು ಕೊಂಡುಕೊಳ್ಳುವದಕ್ಕೆ ಹೋದಾಗ ಮದಲಿಂಗನು ಬಂದನು. ಆಗ ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಲು ಮುಚ್ಚಲಾಯಿತು.
- Isaiah 5:27 ಯೆಶಾಯ 5:27ಅವರಲ್ಲಿ ಯಾರೂ ದಣಿದು ಮುಗ್ಗರಿಸರು; ಅಥವಾ ಅವರು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ, ಇಲ್ಲವೆ ಅವರ ನಡುಕಟ್ಟು ಬಿಚ್ಚಿಕೊಳ್ಳುವದಿಲ್ಲ. ಕೆರದ ಬಾರು ಹರಿಯುವದಿಲ್ಲ.
- Matthew 5:16 ಮತ್ತಾಯನು 5:16ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.
- Matthew 25:1 ಮತ್ತಾಯನು 25:1ಇದಲ್ಲದೆ ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತಕ್ಕೊಂಡು ಮದಲಿಂಗ ನನ್ನು ಎದುರುಗೊಳ್ಳುವದಕ್ಕಾಗಿ ಹೊರಟುಹೋದ ಹತ್ತುಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.
- Isaiah 11:5 ಯೆಶಾಯ 11:5ನೀತಿಯೇ ಅವನಿಗೆ ನಡುಕಟ್ಟು, ನಂಬಿಗಸ್ತಿಕೆಯು ಅವನ ಸೊಂಟದ ಪಟ್ಟಿ.
- Philippians 2:15 ಫಿಲಿಪ್ಪಿಯವರಿಗೆ 2:15ಹೀಗೆ ನೀವು ದೋಷವಿಲ್ಲದವರೂ ಕೇಡುಮಾಡ ದವರೂ ನಿಂದಾರಹಿತರೂ ಆದ ದೇವಪುತ್ರರಾಗಿ ವಕ್ರವುಳ್ಳ ದುಷ್ಟಜನಾಂಗದ ಮಧ್ಯದಲ್ಲಿ ಜೀವದಾಯಕ ವಾಕ್ಯವನ್ನು ಹಿಡುಕೊಂಡು ಲೋಕದಲ್ಲಿ ಬೆಳಕುಗಳಂತೆ ಹೊಳೆಯುವವರಾಗಿದ್ದೀರಿ.
- Proverbs 31:17 ಜ್ಞಾನೋಕ್ತಿಗಳು 31:17ಆಕೆಯು ತನ್ನ ಬಲದಿಂದ ನಡುವನ್ನು ಕಟ್ಟಿಕೊಂಡು ತನ್ನ ತೋಳುಗಳನ್ನು ಶಕ್ತಿಗೊಳಿಸುತ್ತಾಳೆ.
- 1 Kings 18:46 1 ಅರಸುಗಳು 18:46ಆದರೆ ಕರ್ತನ ಕೈ ಎಲೀಯನ ಮೇಲೆ ಇದ್ದದರಿಂದ ಅವನು ತನ್ನ ನಡುವನ್ನು ಕಟ್ಟಿಕೊಂಡು ಇಜ್ರೇಲಿನ ವರೆಗೂ ಅಹಾಬನಿಗೆ ಮುಂದಾಗಿ ಓಡಿದನು.