Luke · chapter 13 · verse 29
Luke 13:29 in Kannada
ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಅವರು ಬಂದು ದೇವರ ರಾಜ್ಯದಲ್ಲಿ ಕೂತುಕೊಳ್ಳುವರು.
Idallade poorva pashchima uttara dakshinagalinda avaru bandu devara raajyadalli kootukolluvaru.
Luke 13:29 in English
- King James Version (KJV)
- And they shall come from the east, and [from] the west, and from the north, and [from] the south, and shall sit down in the kingdom of God.
- World English Bible (WEB)
- They will come from the east, west, north, and south, and will sit down in God’s Kingdom.
- American Standard Version (ASV)
- And they shall come from the east and west, and from the north and south, and shall sit down in the kingdom of God.
- Bible in Basic English (BBE)
- And they will come from the east and from the west, from the north and from the south, and take their places in the kingdom of God.
- Darby Translation (DBY)
- And they shall come from east and west, and from north and south, and shall lie down at table in the kingdom of God.
- Webster's Bible (WBS)
- And they will come from the east, and [from] the west, and from the north, and [from] the south, and will sit down in the kingdom of God.
- Young's Literal Translation (YLT)
- and they shall come from east and west, and from north and south, and shall recline in the reign of God,
Read in context
- 27ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
- 28ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
- 29ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಅವರು ಬಂದು ದೇವರ ರಾಜ್ಯದಲ್ಲಿ ಕೂತುಕೊಳ್ಳುವರು.
- 30ಆಗ ಇಗೋ, ಕೊನೆಯವರು ಮೊದಲನೆಯವರಾಗುವರು; ಮೊದ ಲನೆಯವರು ಕೊನೆಯವರಾಗುವರು ಎಂದು ಹೇಳಿದನು.
- 31ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು.
Cross references
- Isaiah 49:6 ಯೆಶಾಯ 49:6ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
- Malachi 1:11 ಮಲಾಕಿಯ 1:11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Isaiah 43:6 ಯೆಶಾಯ 43:6ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
- Isaiah 66:18–20 ಯೆಶಾಯ 66:18–20ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು. ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು. ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
- Isaiah 54:2–3 ಯೆಶಾಯ 54:2–3ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ನಿನ್ನ ನಿವಾಸದ ಪರದೆಗಳು ಹರಡಲಿ; ಹಿಂತೆ ಗೆಯಬೇಡ; ನಿನ್ನ ಹಗ್ಗಗಳನ್ನು ಉದ್ದ ಮಾಡಿ ಗೂಟ ಗಳನ್ನು ಬಲಪಡಿಸು. ನೀನು ಬಲಗಡೆಗೂ ಎಡ ಗಡೆಗೂ ಹಬ್ಬಿಕೊಳ್ಳುವಿ; ನಿನ್ನ ಸಂತಾನವು ಅನ್ಯ ಜನಾಂಗಗಳನ್ನು ವಶಪಡಿಸಿಕೊಂಡು ಹಾಳಾದ ಪಟ್ಟಣ ಗಳನ್ನು ನಿವಾಸವಾಗಮಾಡುವದು.
- Acts 28:28 ಅಪೊಸ್ತಲರ ಕೃತ್ಯಗಳು 28:28ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.
- Ephesians 3:6–8 ಎಫೆಸದವರಿಗೆ 3:6–8ಅದೇನಂದರೆ, ಅನ್ಯಜನರು (ಯೆಹೂದ್ಯರೊಂದಿಗೆ) ಸಹ ಬಾಧ್ಯರೂ ಒಂದೇ ದೇಹದವರೂ ಸುವಾರ್ತೆಯಿಂದ ಕ್ರಿಸ್ತನ ಮೂಲಕ ಆತನ ವಾಗ್ದಾನದಲ್ಲಿ ಪಾಲುಗಾರರೂ ಆಗಿರಬೇಕೆಂ ಬದೇ. ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಅನುಗ್ರಹಿಸಿದ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು. ಕ್ರಿಸ್ತನ ಶೋಧಿಸಲ ಶಕ್ಯವಾದ ಐಶ್ವರ್ಯದ ವಿಷಯವಾಗಿ ಅನ್ಯಜನರಿಗೆ ನಾನು ಸಾರುವ ಹಾಗೆ ಪರಿಶುದ್ಧರೊಳಗೆ ಅತ್ಯಲ್ಪ ನಾದ ನನಗೆ ಅನುಗ್ರಹಿಸೋಣವಾಯಿತು.
- Revelation 7:9–10 ಪ್ರಕಟನೆ 7:9–10ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು.
- Mark 13:27 ಮಾರ್ಕನು 13:27ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ತಾನು ಆರಿಸಿಕೊಂಡ ವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವನು.
- Colossians 1:23 ಕೊಲೊಸ್ಸೆಯವರಿಗೆ 1:23ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು; ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯಿಂದ ಉಂಟಾದ ನಿರೀಕ್ಷೆ ಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರು ವದಾದರೆ
- Matthew 8:11 ಮತ್ತಾಯನು 8:11ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
- Genesis 28:14 ಆದಿಕಾಂಡ 28:14ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು.