Luke · chapter 13 · verse 32
Luke 13:32 in Kannada
ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
Adakke aatanu avarige--igo, naanu ee divasa mattu naale devvagalannu bidisi svasthamaaduttene; mooraneya dinadalli naanu siddhige baruttene endu neevu hogi aa narige heliri.
Luke 13:32 in English
- King James Version (KJV)
- And he said unto them, Go ye, and tell that fox, Behold, I cast out devils, and I do cures to day and to morrow, and the third [day] I shall be perfected.
- World English Bible (WEB)
- He said to them, “Go and tell that fox, ‘Behold, I cast out demons and perform cures today and tomorrow, and the third day I complete my mission.
- American Standard Version (ASV)
- And he said unto them, Go and say to that fox, Behold, I cast out demons and perform cures to-day and to-morrow, and the third [day] I am perfected.
- Bible in Basic English (BBE)
- And he said, Go and say to that fox, I send out evil spirits and do works of mercy today and tomorrow, and on the third day my work will be complete.
- Darby Translation (DBY)
- And he said to them, Go, tell that fox, Behold, I cast out demons and accomplish cures to-day and to-morrow, and the third [day] I am perfected;
- Webster's Bible (WBS)
- And he said to them, Go ye and tell that fox, Behold, I cast out demons, and I do cures to-day and to-morrow, and the third [day] I shall be perfected.
- Young's Literal Translation (YLT)
- and he said to them, 'Having gone, say to this fox, Lo, I cast forth demons, and perfect cures to-day and to-morrow, and the third [day] I am being perfected;
Read in context
- 30ಆಗ ಇಗೋ, ಕೊನೆಯವರು ಮೊದಲನೆಯವರಾಗುವರು; ಮೊದ ಲನೆಯವರು ಕೊನೆಯವರಾಗುವರು ಎಂದು ಹೇಳಿದನು.
- 31ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು.
- 32ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
- 33ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು.
- 34ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
Cross references
- Hebrews 5:9 ಇಬ್ರಿಯರಿಗೆ 5:9ಇದಲ್ಲದೆ ಸಿದ್ಧಿಗೆ ಬಂದು ತನಗೆ ವಿಧೇಯ ರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಆತನು ಕರ್ತನಾದನು.
- Hebrews 2:10 ಇಬ್ರಿಯರಿಗೆ 2:10ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.
- John 17:4–5 ಯೋಹಾನನು 17:4–5ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ; ಓ ತಂದೆಯೇ, ಹೀಗೆ ಲೋಕವು ಇದ್ದದ್ದಕ್ಕಿಂತ ಮುಂಚೆ ನಿನ್ನೊಂದಿಗೆ ನನಗಿದ್ದ ಮಹಿಮೆಯಿಂದ ನೀನು ಸ್ವತಃ ನನ್ನನ್ನು ಮಹಿಮೆಪಡಿಸು.
- John 11:8–10 ಯೋಹಾನನು 11:8–10ಆತನ ಶಿಷ್ಯರು ಆತನಿಗೆ--ಬೋಧಕನೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿ ದ್ದರಲ್ಲಾ; ತಿರಿಗಿ ನೀನು ಅಲ್ಲಿಗೆ ಹೋಗುತ್ತೀಯೋ? ಅಂದರು. ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ. ಆದರೆ ಒಬ್ಬ ಮನುಷ್ಯನು ರಾತ್ರಿಯಲ್ಲಿ ತಿರುಗಾಡಿದರೆ ತನ್ನಲ್ಲಿ ಬೆಳಕು ಇಲ್ಲವಾದದರಿಂದ ಅವನು ಎಡವುತ್ತಾನೆ ಎಂದು ಉತ್ತರಕೊಟ್ಟನು.
- Luke 9:7–9 ಲೂಕನು 9:7–9ಚತುರಾಧಿಪತಿಯಾದ ಹೆರೋದನು ಯೇಸು ಮಾಡಿದವುಗಳನ್ನೆಲ್ಲಾ ಕೇಳಿ ಕಳವಳಗೊಂಡನು. ಯಾಕಂದರೆ ಯೋಹಾನನು ಸತ್ತವರೊಳಗಿಂದ ಎದ್ದಿ ದ್ದಾನೆಂದು ಕೆಲವರು ಹೇಳುತ್ತಿದ್ದರು. ಎಲೀಯನು ಪ್ರತ್ಯಕ್ಷವಾಗಿದ್ದಾನೆಂದು ಕೆಲವರು ಹಿಂದಿನ ಕಾಲದ ಪ್ರವಾದಿಗಳಲ್ಲಿ ಒಬ್ಬನು ಎದ್ದಿದ್ದಾನೆಂದು ಇನ್ನು ಬೇರೆ ಯವರು ಹೇಳುತ್ತಿದ್ದರು. ಆಗ ಹೆರೋದನು--ನಾನು ಯೋಹಾನನ ತಲೆ ಹೊಯ್ಸಿದ್ದೇನೆ; ಆದರೆ ನಾನು ಯಾರನ್ನು ಕುರಿತು ಈ ವಿಷಯಗಳನ್ನು ಕೇಳು ತ್ತೇನೋ ಇವನು ಯಾರು ಎಂದು ಹೇಳಿ ಅವನು ಆತನನ್ನು ನೋಡಲು ಅಪೇಕ್ಷಿಸಿದನು.
- Ezekiel 13:4 ಯೆಹೆಜ್ಕೇಲನು 13:4ಓ ಇಸ್ರಾಯೇಲೇ, ನಿನ್ನ ಪ್ರವಾದಿಗಳು ನಿರ್ಜನ ಸ್ಥಳಗಳಲ್ಲಿರುವ ನರಿಗಳ ಹಾಗೆ ಇದ್ದಾರೆ.
- Hebrews 7:28 ಇಬ್ರಿಯರಿಗೆ 7:28ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.
- Mark 6:14 ಮಾರ್ಕನು 6:14ಅರಸನಾದ ಹೆರೋದನು ಆತನ ವಿಷಯವಾಗಿ ಕೇಳಿದನು. (ಯಾಕಂದರೆ ಆತನ ಹೆಸರು ಎಲ್ಲಾ ಕಡೆಗೂ ಹರಡಿತು); ಮತ್ತು ಅವನು--ಬಾಪ್ತಿಸ್ಮ ಮಾಡಿಸುವ ಯೋಹಾನನು ಸತ್ತವರೊಳಗಿಂದ ಎದ್ದು ಬಂದಿದ್ದಾನೆ; ಆದದರಿಂದ ಮಹತ್ಕಾರ್ಯಗಳು ಅವನಲ್ಲಿ ತೋರಿ ಬರುತ್ತವೆ ಅಂದನು.
- John 10:32 ಯೋಹಾನನು 10:32ಅದಕ್ಕೆ ಯೇಸು ಅವರಿಗೆ--ನನ್ನ ತಂದೆಯಿಂದ ಅನೇಕ ಒಳ್ಳೇ ಕಾರ್ಯ ಗಳನ್ನು ನಾನು ನಿಮಗೆ ತೋರಿಸಿದ್ದೇನೆ; ಅವುಗಳಲ್ಲಿ ಯಾವ ಕಾರ್ಯಗಳಿಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ ಎಂದು ಕೇಳಿದನು.
- Luke 23:8–11 ಲೂಕನು 23:8–11ಹೆರೋದನು ಯೇಸುವನ್ನು ನೋಡಿದಾಗ ಅತ್ಯಂತ ಸಂತೋಷಪಟ್ಟನು; ಯಾಕಂದರೆ ಅವನು ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ನೋಡುವಂತೆ ಬಹಳ ಕಾಲದಿಂದ ಆಶೆಪಟ್ಟಿ ದ್ದನು. ಆತನಿಂದಾಗುವ ಅದ್ಭುತ ಕಾರ್ಯವನ್ನು ನೋಡ ಲು ನಿರೀಕ್ಷಿಸುತ್ತಿದ್ದನು. ಆಗ ಅವನು ಆತನನ್ನು ಅನೇಕ ಮಾತುಗಳಿಂದ ಪ್ರಶ್ನಿಸಿದಾಗ್ಯೂ ಆತನು ಅವನಿಗೆ ಏನೂ ಉತ್ತರಕೊಡಲಿಲ್ಲ. ಆಗ ಪ್ರಧಾನಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಉಗ್ರತೆಯಿಂದ ಆತನ ಮೇಲೆ ದೂರು ಹೇಳಿದರು. ಹೆರೋದನು ತನ್ನ ಯುದ್ಧಭಟರೊಂದಿಗೆ ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಆತನ ಮೇಲೆ ಶೋಭಾಯಮಾನವಾದ ವಸ್ತ್ರವನ್ನು ಹೊದಿಸಿ ಆತನನ್ನು ತಿರಿಗಿ ಪಿಲಾತನ ಬಳಿಗೆ ಕಳುಹಿಸಿ ದನು.
- Mark 6:26–28 ಮಾರ್ಕನು 6:26–28ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದಾಗ್ಯೂ ತನ್ನ ಆಣೆಯ ನಿಮಿತ್ತವಾಗಿಯೂ ತನ್ನೊಂದಿಗೆ ಕೂತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವದಕ್ಕೆ ಮನಸ್ಸಿಲ್ಲದವನಾದನು. ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು
- Micah 3:1–3 ಮೀಕ 3:1–3ಆಗ ನಾನು ಹೇಳಿದ್ದೇನಂದರೆ--ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇ ಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ; ನ್ಯಾಯ ವನ್ನು ತಿಳಿಯುವದು ನಿಮ್ಮದಲ್ಲವೋ? ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.