Luke · chapter 13 · verse 7
Luke 13:7 in Kannada
ಆಗ ಅವನು ತನ್ನ ದ್ರಾಕ್ಷೇತೋಟ ಮಾಡು ವವನಿಗೆ--ಇಗೋ, ಈ ಮೂರು ವರುಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕಿದರೂ ಒಂದನ್ನೂ ಕಂಡುಕೊಳ್ಳಲಿಲ್ಲ; ಇದನ್ನು ಕಡಿದುಹಾಕು; ಭೂಮಿಗೆ ಇದು ಯಾಕೆ ಭಾರವಾಗಿರಬೇಕು ಎಂದು ಹೇಳಿದನು.
Aaga avanu tanna draakshetota maadu vavanige--igo, ee mooru varushagalinda naanu ee anjoorada maradalli phala hudukidaroo ondannoo kandukollalilla; idannu kadiduhaaku; bhoomige idu yaake bhaaravaagirabeku endu helidanu.
Luke 13:7 in English
- King James Version (KJV)
- Then said he unto the dresser of his vineyard, Behold, these three years I come seeking fruit on this fig tree, and find none: cut it down; why cumbereth it the ground?
- World English Bible (WEB)
- He said to the vine dresser, ‘Behold, these three years I have come looking for fruit on this fig tree, and found none. Cut it down! Why does it waste the soil?’
- American Standard Version (ASV)
- And he said unto the vinedresser, Behold, these three years I come seeking fruit on this fig tree, and find none: cut it down; why doth it also cumber the ground?
- Bible in Basic English (BBE)
- And he said to the gardener, See, for three years I have been looking for fruit from this tree, and I have not had any: let it be cut down; why is it taking up space?
- Darby Translation (DBY)
- And he said to the vinedresser, Behold, [these] three years I come seeking fruit on this fig-tree and find none: cut it down; why does it also render the ground useless?
- Webster's Bible (WBS)
- Then said he to the dresser of his vineyard, Behold, these three years I come seeking fruit on this fig-tree, and find none: cut it down; why cumbereth it the ground?
- Young's Literal Translation (YLT)
- and he said unto the vine-dresser, Lo, three years I come seeking fruit in this fig-tree, and do not find, cut it off, why also the ground doth it render useless?
Read in context
- 5ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.
- 6ಆತನು ಈ ಸಾಮ್ಯವನ್ನು ಕೂಡ ಹೇಳಿದನು: ಒಬ್ಬಾನೊಬ್ಬ ಮನುಷ್ಯನಿಗೆ ತನ್ನ ದ್ರಾಕ್ಷೇತೋಟದಲ್ಲಿ ನೆಡಲ್ಪಟ್ಟಿದ್ದ ಒಂದು ಅಂಜೂರದ ಮರವಿತ್ತು; ಅವನು ಬಂದು ಅದರಲ್ಲಿ ಫಲವನ್ನು ಹುಡುಕಿದಾಗ ಒಂದೂ ಸಿಕ್ಕಲಿಲ್ಲ.
- 7ಆಗ ಅವನು ತನ್ನ ದ್ರಾಕ್ಷೇತೋಟ ಮಾಡು ವವನಿಗೆ--ಇಗೋ, ಈ ಮೂರು ವರುಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕಿದರೂ ಒಂದನ್ನೂ ಕಂಡುಕೊಳ್ಳಲಿಲ್ಲ; ಇದನ್ನು ಕಡಿದುಹಾಕು; ಭೂಮಿಗೆ ಇದು ಯಾಕೆ ಭಾರವಾಗಿರಬೇಕು ಎಂದು ಹೇಳಿದನು.
- 8ಆದರೆ ಅವನು ಪ್ರತ್ಯುತ್ತರವಾಗಿ ಅವ ನಿಗೆ--ಒಡೆಯನೇ, ನಾನು ಅದರ ಸುತ್ತಲೂ ಅಗೆದು ಗೊಬ್ಬರ ಹಾಕುವ ವರೆಗೆ ಈ ವರುಷವೂ ಇದನ್ನು ಬಿಡು;
- 9ಇದು ಫಲ ಫಲಿಸಿದರೆ ಸರಿ; ಇಲ್ಲವಾದರೆ ನೀನು ಇದನ್ನು ಕಡಿದುಹಾಕಬಹುದು ಅಂದನು.
Cross references
- Matthew 7:19 ಮತ್ತಾಯನು 7:19ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುತ್ತದೆ.
- Luke 3:9 ಲೂಕನು 3:9ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು.
- John 15:6 ಯೋಹಾನನು 15:6ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು.
- Romans 2:4–5 ರೋಮಾಪುರದವರಿಗೆ 2:4–5ಇಲ್ಲವೆ ದೇವರ ದಯೆಯು ನಿನ್ನನ್ನು ಮಾನಸಾಂತರಕ್ಕೆ ನಡಿಸುತ್ತದೆಯೆಂದು ನೀನು ತಿಳಿಯದೆ ಆತನ ಅಪಾರವಾದ ದಯೆ ಸಹನೆ ದೀರ್ಘ ಶಾಂತಿ ಇವುಗಳನ್ನು ಅಸಡ್ಡೆಮಾಡುತ್ತೀಯೋ? ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ.
- John 15:2 ಯೋಹಾನನು 15:2ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.
- Leviticus 19:23 ಯಾಜಕಕಾಂಡ 19:23ನೀವು ದೇಶದೊಳಗೆ ಬಂದು ಎಲ್ಲಾ ತರಹದ ಮರಗಳನ್ನು ಆಹಾರಕ್ಕೋಸ್ಕರ ನೆಟ್ಟಾಗ ಅದರ ಫಲ ವನ್ನು ನೀವು ಸುನ್ನತಿಯಿಲ್ಲದ್ದೆಂದು ಲೆಕ್ಕಿಸಬೇಕು; ಮೂರು ವರುಷಗಳ ವರೆಗೆ ಅದು ನಿಮಗೆ ಸುನ್ನತಿಯಿಲ್ಲದ್ದಾಗಿ ರುವದು; ಅದನ್ನು ತಿನ್ನಬಾರದು.
- Matthew 3:9–10 ಮತ್ತಾಯನು 3:9–10ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು.
- Exodus 32:10 ವಿಮೋಚನಕಾಂಡ 32:10ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.
- Daniel 4:14 ದಾನಿಯೇಲನು 4:14ಅವನು ಗಟ್ಟಿಯಾಗಿ ಕೂಗಿ--ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ.
- Leviticus 25:21 ಯಾಜಕಕಾಂಡ 25:21ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು.