Luke · chapter 2 · verse 35
Luke 2:35 in Kannada
ಅನೇಕರ ಹೃದಯ ಗಳ ಅಲೋಚನೆಗಳು ಪ್ರಕಟವಾಗುವವು. (ಹೌದು, ನಿನ್ನ ಸ್ವಂತ ಪ್ರಾಣವನ್ನು ಸಹ ಕತ್ತಿಯು ತಿವಿಯುವದು) ಅಂದನು.
Anekara hrudaya gala alochanegalu prakatavaaguvavu. (haudu, ninna svanta praanavannu saha kattiyu tiviyuvadu) andanu.
Luke 2:35 in English
- King James Version (KJV)
- (Yea, a sword shall pierce through thy own soul also,) that the thoughts of many hearts may be revealed.
- World English Bible (WEB)
- Yes, a sword will pierce through your own soul, that the thoughts of many hearts may be revealed.”
- American Standard Version (ASV)
- yea and a sword shall pierce through thine own soul; that thoughts out of many hearts may be revealed.
- Bible in Basic English (BBE)
- (And a sword will go through your heart;) so that the secret thoughts of men may come to light.
- Darby Translation (DBY)
- (and even a sword shall go through thine own soul;) so that [the] thoughts may be revealed from many hearts.
- Webster's Bible (WBS)
- (And a sword shall pierce through thy own soul also) that the thoughts of many hearts may be revealed.
- Young's Literal Translation (YLT)
- (and also thine own soul shall a sword pass through) — that the reasonings of many hearts may be revealed.'
Read in context
- 33ಆಗ ಅವನು ಹೇಳಿದ ಮಾತುಗಳಿಗಾಗಿ ಯೋಸೇಫನೂ ಆತನ ತಾಯಿಯೂ ಆಶ್ಚರ್ಯಪಟ್ಟರು.
- 34ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.
- 35ಅನೇಕರ ಹೃದಯ ಗಳ ಅಲೋಚನೆಗಳು ಪ್ರಕಟವಾಗುವವು. (ಹೌದು, ನಿನ್ನ ಸ್ವಂತ ಪ್ರಾಣವನ್ನು ಸಹ ಕತ್ತಿಯು ತಿವಿಯುವದು) ಅಂದನು.
- 36ಅಲ್ಲಿ ಅಸೇರನ ಗೋತ್ರದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿಯಿದ್ದಳು; ಅವಳು ಬಹು ಮುಪ್ಪಿನವಳು; ತನ್ನ ಕನ್ಯಾವಸ್ಥೆಯಿಂದ ಗಂಡನೊಂದಿಗೆ ಏಳು ವರುಷ ಜೀವಿಸಿದ್ದಳು.
- 37ಅವಳು ಹೆಚ್ಚು ಕಡಿಮೆ ಎಂಭತ್ತುನಾಲ್ಕು ವರುಷದ ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು.
Cross references
- Deuteronomy 8:2 ಧರ್ಮೋಪದೇಶಕಾಂಡ 8:2ನೀನು ತಗ್ಗಿಸಿಕೊಳ್ಳುವ ನಿಮಿತ್ತವೂ ಹೃದಯದಲ್ಲಿ ಇರುವದನ್ನು ಅಂದರೆ ನೀನು ಆತನ ಆಜ್ಞೆಗಳನ್ನು ಕಾಪಾಡುವಿಯೋ ಇಲ್ಲವೋ ಎಂದು ತಿಳುಕೊಳ್ಳುವ ದಕ್ಕೂ ನಿನ್ನ ದೇವರಾದ ಕರ್ತನು ನಿನ್ನನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಬೇಕು.
- 1 Corinthians 11:19 1 ಕೊರಿಂಥದವರಿಗೆ 11:19ನಿಮ್ಮಲ್ಲಿಯೂ ಇಂಥಿಂಥ ವರು ಯೋಗ್ಯರೆಂದು ಕಾಣಬರುವಂತೆ ಭಿನ್ನಾಭಿಪ್ರಾಯ ಗಳು ಇರುವದು ಅವಶ್ಯವೇ.
- John 15:22–24 ಯೋಹಾನನು 15:22–24ನಾನು ಬಂದು ಅವರಿಗೆ ಹೇಳದಿದ್ದರೆ ಅವರಲ್ಲಿ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರ ಪಾಪಕ್ಕೆ ನೆವವಿಲ್ಲ. ನನ್ನನ್ನು ದ್ವೇಷಮಾಡುವವನು ನನ್ನ ತಂದೆಯನ್ನು ಸಹ ದ್ವೇಷಮಾಡುತ್ತಾನೆ. ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ.
- John 19:25 ಯೋಹಾನನು 19:25ಆಗ ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ಸಹೋದರಿಯೂ ಕ್ಲೋಫನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.
- Judges 5:15–16 ನ್ಯಾಯಸ್ಥಾಪಕರು 5:15–16ಇಸ್ಸಾಕಾರನ ಪ್ರಧಾನರು ದೆಬೋ ರಳ ಸಂಗಡ ಇದ್ದರು; ಇಸ್ಸಾಕಾರನು, ಬಾರಾಕನು ಹಾಗೆಯೇ; ಕಾಲು ನಡೆಯಾಗಿ ತಗ್ಗಿನಲ್ಲಿ ಕಳುಹಿಸ ಲ್ಪಟ್ಟನು. ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಆಲೋಚನೆಗಳು ಇದ್ದವು. ಮಂದೆಗಳ ಕೂಗನ್ನು ಕೇಳಿ ನೀನು ದೊಡ್ಡಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಪರಿಶೋ ಧನೆಗಳು ಇದ್ದವು.
- Psalm 42:10 ಕೀರ್ತನೆಗಳು 42:10ನನ್ನ ವೈರಿಗಳು--ನಿನ್ನ ದೇವರು ಎಲ್ಲಿ ಎಂದು ದಿನವೆಲ್ಲಾ ನನಗೆ ಹೇಳಿ ನನ್ನನ್ನು ನಿಂದಿಸಿದ್ದರಿಂದ ನನ್ನ ಎಲುಬುಗಳು ಮುರಿದಹಾಗಿವೆ.ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.
- Acts 8:21–23 ಅಪೊಸ್ತಲರ ಕೃತ್ಯಗಳು 8:21–23ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ. ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು. ಯಾಕಂದರೆ ನೀನು ಹಾನಿಕರ ವಾದ ವಿಷದಲ್ಲಿಯೂ ದುಷ್ಟತ್ವದ ಬಂಧನದಲ್ಲಿಯೂ ಇರುತ್ತೀಯೆಂದು ನನಗೆ ಕಾಣುತ್ತದೆ ಅಂದನು.
- Matthew 12:24–35 ಮತ್ತಾಯನು 12:24–35ಆದರೆ ಫರಿಸಾಯರು ಇದನ್ನು ಕೇಳಿದಾಗ--ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನಿಂದಲೇ ಹೊರತು ದೆವ್ವಗಳನ್ನು ಬಿಡಿಸು ವದಿಲ್ಲ ಅಂದರು. ಆಗ ಯೇಸು ಅವರ ಆಲೋಚನೆ ಗಳನ್ನು ತಿಳಿದು ಅವರಿಗೆ--ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುತ್ತದೆ; ಮತ್ತು ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ಪಟ್ಟಣವಾಗಲೀ ಮನೆಯಾಗಲೀ ನಿಲ್ಲುವದಿಲ್ಲ. ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಹಾಕಿದರೆ ಅವನು ತನಗೆ ವಿರೋಧವಾಗಿ ತಾನೇ ವಿಭಾಗಿಸಲ್ಪಟ್ಟಿದ್ದಾನೆ; ಹಾಗಾದರೆ ಅವನ ರಾಜ್ಯವು ಹೇಗೆ ನಿಂತೀತು? ಮತ್ತು ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಬಿಡಿಸಿದರೆ ನಿಮ್ಮ ಮಕ್ಕಳು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವರು. ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ. ಇಲ್ಲವೆ ಯಾವನಾದರೂ ಮೊದಲು ಬಲವುಳ್ಳ ಮನುಷ್ಯನನ್ನು ಕಟ್ಟಿಹಾಕದ ಹೊರತು ಅವನ ಮನೆ ಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳು ವದಕ್ಕಾದೀತೇ? ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವದಕ್ಕಾಗುವದು. ನನ್ನ ಸಂಗಡ ಇರದ ವನು ನನಗೆ ವಿರೋಧವಾಗಿದ್ದಾನೆ; ಮತ್ತು ನನ್ನ ಸಂಗಡ ಕೂಡಿಸದವನು ಚದರಿಸುವವನಾಗಿದ್ದಾನೆ ಎಂದು ಹೇಳಿದನು. ಆದಕಾರಣ ನಾನು ನಿಮಗೆ ಹೇಳುವದೇ ನಂದರೆ-- ಎಲ್ಲಾ ತರದ ಪಾಪವೂ ದೂಷಣೆಯೂ ಮನುಷ್ಯರಿಗೆ ಕ್ಷಮಿಸಲ್ಪಡುವದು; ಆದರೆ ಪರಿಶು ದ್ಧಾತ್ಮನಿಗೆ ವಿರೋಧವಾದ ದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವದಿಲ್ಲ. ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ. ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದೆಂದು ಎಣಿಸಿರಿ; ಇಲ್ಲವೇ ಮರವು ಕೆಟ್ಟದ್ದಾಗಿದ್ದರೆ ಅದರ ಫಲವೂ ಕೆಟ್ಟದ್ದೆಂದೆಣಿಸಿರಿ; ಯಾಕಂದರೆ ಮರವು ತನ್ನ ಫಲದಿಂದಲೇ ತಿಳಿಯಲ್ಪ ಡುವದು. ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ. ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.
- Luke 16:14–15 ಲೂಕನು 16:14–15ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು. ಆಗ ಆತನು ಅವರಿಗೆ--ಮನುಷ್ಯರ ಮುಂದೆ ನೀತಿವಂತರಾಗಿ ಮಾಡಿ ಕೊಳ್ಳುವವರು ನೀವೇ; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾನೆ; ಯಾಕಂದರೆ ಮನುಷ್ಯರಲ್ಲಿ ಯಾವದು ಶ್ರೇಷ್ಠವೆಂದು ಎಣಿಸಲ್ಪ ಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
- John 8:42–47 ಯೋಹಾನನು 8:42–47ಯೇಸು ಅವರಿಗೆ--ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದ ಹೊರಟುಬಂದಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆದರೆ ಆತನೇ ನನ್ನನ್ನು ಕಳುಹಿಸಿದನು. ನೀವು ನನ್ನ ಮಾತನ್ನು ಯಾಕೆ ಗ್ರಹಿ ಸದೆ ಇದ್ದೀರಿ? ನೀವು ನನ್ನ ವಾಕ್ಯವನ್ನು ಕೇಳದೆ ಇರುವದರಿಂದಲೇ. ನೀವು ನಿಮ್ಮ ತಂದೆಯಾದ ಸೈತಾನನಿಗೆ ಸಂಬಂಧಪಟ್ಟವರಾಗಿದ್ದೀರಿ. ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡುವದಕ್ಕೆ ಇಚ್ಛೈಸುತ್ತೀರಿ; ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯ ದಲ್ಲಿ ನಿಲ್ಲಲಿಲ್ಲ. ಯಾಕಂದರೆ ಅವನಲ್ಲಿ ಸತ್ಯವೇ ಇಲ್ಲ; ಅವನು ಸುಳ್ಳಾಡುವಾಗ ತನ್ನ ಸ್ವಂತವಾದವುಗಳಿಂದ ಮಾ ನಾನು ನಿಮಗೆ ಸತ್ಯವನ್ನು ಹೇಳುವವನಾದದರಿಂದ ನೀವು ನನ್ನನ್ನು ನಂಬುವದಿಲ್ಲ. ನನ್ನಲ್ಲಿ ಪಾಪವಿದೆ ಎಂದು ನಿಮ್ಮಲ್ಲಿ ಯಾರು ಸ್ಥಾಪಿಸುವಿರಿ? ಮತ್ತು ನಾನು ಸತ್ಯವನ್ನು ಹೇಳಿದರೆ ನೀವು ನನ್ನನ್ನು ಯಾಕೆ ನಂಬುವದಿಲ್ಲ? ದೇವರಿಗೆ ಸಂಬಂಧಪಟ್ಟವನು ದೇವರ ವಾಕ್ಯಗಳನ್ನು ಕೇಳುತ್ತಾನೆ. ಆದರೆ ನೀವು ದೇವರಿಗೆ ಸಂಬಂಧಪಟ್ಟವರಲ್ಲದ ಕಾರಣ ಅವುಗಳನ್ನು ಕೇಳುವದಿಲ್ಲ ಎಂದು ಹೇಳಿದನು.
- 1 John 2:19 1 ಯೋಹಾನನು 2:19ಅವರು ನಮ್ಮಿಂದ ಹೊರಟುಹೋದರು; ಆದರೆ ಅವರು ನಮ್ಮವ ರಾಗಿರಲಿಲ್ಲ. ಯಾಕಂದರೆ ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದದರಿಂದ ಅವರೆಲ್ಲರೂ ನಮ್ಮವರಲ್ಲವೆಂಬದು ತೋರಿಬಂತು.
Original words (Greek)
- Yea · G1161δέ dé
- sword · G4501ῥομφαία rhomphaía
- through · G1330διέρχομαι diérchomai
- thy · G4675σοῦ soû
- own · G846αὐτός autós
- soul · G5590ψυχή psychḗ
- also · G2532καί kaí
- that · G3704ὅπως hópōs
- thoughts · G1261διαλογισμός dialogismós
- of · G1537ἐκ ek
- many · G4183πολύς polýs
- hearts · G2588καρδία kardía
- revealed · G601ἀποκαλύπτω apokalýptō