Luke · chapter 21 · verse 15
Luke 21:15 in Kannada
ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.
Yaaka ndare nimma virodhigalellaroo prativaada maada dantha illave virodhisadantha baayannoo jnyaana vannoo naanu nimage koduvenu.
Luke 21:15 in English
- King James Version (KJV)
- For I will give you a mouth and wisdom, which all your adversaries shall not be able to gainsay nor resist.
- World English Bible (WEB)
- for I will give you a mouth and wisdom which all your adversaries will not be able to withstand or to contradict.
- American Standard Version (ASV)
- for I will give you a mouth and wisdom, which all your adversaries shall not be able to withstand or to gainsay.
- Bible in Basic English (BBE)
- For I will give you words and wisdom, so that not one of those who are against you will be able to get the better of you, or to put you in the wrong.
- Darby Translation (DBY)
- for I will give you a mouth and wisdom which all your opposers shall not be able to reply to or resist.
- Webster's Bible (WBS)
- For I will give you a mouth and wisdom, which all your adversaries shall not be able to gainsay nor resist.
- Young's Literal Translation (YLT)
- for I will give to you a mouth and wisdom that all your opposers shall not be able to refute or resist.
Read in context
- 13ಇದು ಸಾಕ್ಷಿಗೋಸ್ಕರ ನಿಮಗೆ ಪರಿಣಮಿ ಸುವದು.
- 14ಹೀಗಿರುವದರಿಂದ ನೀವು ಏನು ಉತ್ತರ ಕೊಡಬೇಕೆಂದು ಮುಂದಾಗಿ ಯೋಚಿಸಬಾರದೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ.
- 15ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.
- 16ಆದರೆ ತಂದೆ ತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿ ತರೂ ನಿಮ್ಮನ್ನು ಹಿಡಿದುಕೊಡುವರು; ನಿಮ್ಮಲ್ಲಿ ಕೆಲವ ರನ್ನು ಕೊಲ್ಲಿಸುವರು.
- 17ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ದ್ವೇಷಿಸುವರು.
Cross references
- Jeremiah 1:9 ಯೆರೆಮೀಯ 1:9ಆಗ ಕರ್ತನು ಕೈಚಾಚಿ ನನ್ನ ಬಾಯಿಯನ್ನು ಮುಟ್ಟಿದನು; ನನಗೆ--ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
- Ephesians 6:19 ಎಫೆಸದವರಿಗೆ 6:19ನಾನು ಬಾಯಿ ತೆರೆಯುವಾಗ ಗುಪ್ತವಾಗಿದ್ದ ಸುವಾರ್ತೆಯ ಮರ್ಮವನ್ನು ಧೈರ್ಯವಾಗಿ ತಿಳಿಸುವದಕ್ಕೆ ಬೇಕಾದ ಮಾತನ್ನು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.
- Luke 12:12 ಲೂಕನು 12:12ಯಾಕಂದರೆ ಅದೇ ಗಳಿಗೆಯಲ್ಲಿ ನೀವು ಹೇಳಬೇಕಾದದ್ದನ್ನು ಪರಿಶುದ್ಧಾತ್ಮನು ನಿಮಗೆ ಕಲಿಸುವನು ಅಂದನು.
- Acts 6:10 ಅಪೊಸ್ತಲರ ಕೃತ್ಯಗಳು 6:10ಆದರೆ ಅವನು ಜ್ಞಾನದಿಂದಲೂ ಆತ್ಮನಿಂದಲೂ ಮಾತನಾಡಿದ್ದನ್ನು ಅವರು ಎದುರಿಸ ಲಾರದೆ ಹೋದರು.
- Exodus 4:11–12 ವಿಮೋಚನಕಾಂಡ 4:11–12ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ? ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು.
- Colossians 4:3–4 ಕೊಲೊಸ್ಸೆಯವರಿಗೆ 4:3–4ನಾವು ಕ್ರಿಸ್ತನ ಮರ್ಮವನ್ನು ಮಾತನಾಡುವಂತೆ ದೇವರು ಅನುಕೂಲವಾದ ಬಾಗಲನ್ನು ನಮಗೆ ತೆರೆಯುವ ಹಾಗೆ ನಮಗೋಸ್ಕರವೂ ಪ್ರಾರ್ಥಿಸಿರಿ; ಇದಕ್ಕೋಸ್ಕರವೇ ನಾನು ಸೆರೆಯಲ್ಲಿದ್ದೇನಲ್ಲಾ; ನಾನು ಅದನ್ನು ಹೇಳಬೇಕಾದ ರೀತಿಯಲ್ಲಿ ಪ್ರಕಟಿಸುವಂತೆ ಅನುಗ್ರಹ ಮಾಡಬೇಕೆಂದು ಬೇಡಿಕೊಳ್ಳಿರಿ;
- 2 Timothy 4:16–17 2 ತಿಮೊಥೆಯನಿಗೆ 4:16–17ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ತೊರೆದುಬಿಟ್ಟರು; ಇದು ಅವರ ಲೆಕ್ಕಕ್ಕೆ ಸೇರಿಸಲ್ಪಡದೆ ಇರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
- Luke 24:45 ಲೂಕನು 24:45ತರುವಾಯ ಅವರು ಬರಹ ಗಳನ್ನು ಅರ್ಥ ಮಾಡಿಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದನು.
- James 1:5 ಯಾಕೋಬನು 1:5ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.
- Proverbs 2:6 ಜ್ಞಾನೋಕ್ತಿಗಳು 2:6ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
- Acts 4:8–13 ಅಪೊಸ್ತಲರ ಕೃತ್ಯಗಳು 4:8–13ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ--ಜನರ ಅಧಿಕಾರಿಗಳೇ, ಇಸ್ರಾಯೇಲಿನ ಹಿರಿಯರೇ, ಈ ದುರ್ಬಲನಿಗೆ ಸ್ವಸ್ಥವಾದ ಒಳ್ಳೇ ಕಾರ್ಯವು ಹೇಗಾಯಿತೆಂಬ ವಿಷಯವಾಗಿ ಈ ದಿವಸ ನಾವು ವಿಚಾರಿಸಲ್ಪಡುವದಾದರೆ ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ. ಮನೆ ಕಟ್ಟುವವರಾದ ನಿಮ್ಮಿಂದ ಹೀನೈಸಲ್ಪಟ್ಟ ಈ ಕಲ್ಲೇ ಮುಖ್ಯವಾದ ಮೂಲೆಗಲ್ಲಾ ಯಿತು. ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು. ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.
- Acts 4:31–33 ಅಪೊಸ್ತಲರ ಕೃತ್ಯಗಳು 4:31–33ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು. ನಂಬಿದ್ದ ಸಮೂಹದವರ ಹೃದಯವೂ ಪ್ರಾಣವೂ ಒಂದೇ ಆಗಿತ್ತು; ಇದಲ್ಲದೆ ಅವರಲ್ಲಿ ಯಾವನೂ ತನ್ನಗಿದ್ದ ಯಾವದೊಂದನ್ನೂ ತನ್ನ ಸ್ವಂತ ದ್ದೆಂದು ಹೇಳಲಿಲ್ಲ; ಆದರೆ ಎಲ್ಲವೂ ಅವರಿಗೆ ಹುದು ವಾಗಿತ್ತು. ಇದಲ್ಲದೆ ಕರ್ತನಾದ ಯೇಸುವಿನ ಪುನ ರುತ್ಥಾನದ ವಿಷಯವಾಗಿ ಅಪೊಸ್ತಲರು ಬಹಳ ಬಲ ವಾಗಿ ಸಾಕ್ಷಿಕೊಟ್ಟರು; ದೊಡ್ಡ ಕೃಪೆಯು ಅವರೆಲ್ಲರ ಮೇಲೆ ಇತ್ತು.