Luke · chapter 21 · verse 34
Luke 21:34 in Kannada
ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ.
Aadare nimma mele aa divasavu phakkane baaradante neevu ati bhojanadindaloo amalinindaloo ee jeevanada chintegalindaloo nimma hrudayagalu bhaaravaagadante nimma vishayadali jaagarookaraagirri.
Luke 21:34 in English
- King James Version (KJV)
- And take heed to yourselves, lest at any time your hearts be overcharged with surfeiting, and drunkenness, and cares of this life, and [so] that day come upon you unawares.
- World English Bible (WEB)
- “So be careful, or your hearts will be loaded down with carousing, drunkenness, and cares of this life, and that day will come on you suddenly.
- American Standard Version (ASV)
- But take heed to yourselves, lest haply your hearts be overcharged with surfeiting, and drunkenness, and cares of this life, and that day come on you suddenly as a snare:
- Bible in Basic English (BBE)
- But give attention to yourselves, for fear that your hearts become over-full of the pleasures of food and wine, and the cares of this life, and that day may come on you suddenly, and take you as in a net:
- Darby Translation (DBY)
- But take heed to yourselves lest possibly your hearts be laden with surfeiting and drinking and cares of life, and that day come upon you suddenly unawares;
- Webster's Bible (WBS)
- And take heed to yourselves, lest at any time your hearts be overcharged with surfeiting and drunkenness, and cares of this life, and [so] that day come upon you unawares.
- Young's Literal Translation (YLT)
- 'And take heed to yourselves, lest your hearts may be weighed down with surfeiting, and drunkenness, and anxieties of life, and suddenly that day may come on you,
Read in context
- 32ಎಲ್ಲವುಗಳು ನೆರವೇರುವ ವರೆಗೆ ಈ ಸಂತತಿಯು ಅಳಿದು ಹೋಗುವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- 33ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.
- 34ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ.
- 35ಯಾಕಂದರೆ ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಉರ್ಲಿನಂತೆ ಬರುವದು.
- 36ಆದಕಾರಣ ಸಂಭವಿಸುವದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವದಕ್ಕೆ ಯೋಗ್ಯರೆಂದು ಎಣಿಸಲ್ಪಡು ವಂತೆಯೂ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು.
Cross references
- Mark 4:19 ಮಾರ್ಕನು 4:19ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
- 1 Thessalonians 5:2–8 1 ಥೆಸಲೊನೀಕದವರಿಗೆ 5:2–8ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು. ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ; ನೀವು ಕತ್ತಲೆಯಲ್ಲಿರುವವರಲ್ಲ. ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಷ್ಟೆ; ನಾವು ರಾತ್ರಿಯವರೂ ಅಲ್ಲ, ಕತ್ತಲೆ ಯವರೂ ಅಲ್ಲ. ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ. ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮ ಲೇರುತ್ತಾರೆ. ನಾವಾದರೋ ಹಗಲಿನವರಾಗಿರಲಾಗಿ ವಿಶ್ವಾಸ ಪ್ರೀತಿಗಳೆಂಬ ಎದೆಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥ ಚಿತ್ತರಾಗಿರೋಣ.
- Luke 12:40 ಲೂಕನು 12:40ಆದ ಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಎಂದು ಹೇಳಿದನು.
- Luke 12:45–46 ಲೂಕನು 12:45–46ಆದರೆ ಆ ಸೇವಕನು--ನನ್ನ ಒಡೆಯನು ಬರುವದಕ್ಕೆ ತಡಮಾಡುತ್ತಾನೆ ಎಂದು ತನ್ನ ಹೃದಯದಲ್ಲಿ ಅಂದು ಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯು ವದಕ್ಕೂ ತಿಂದು ಕುಡಿದು ಮತ್ತನಾಗುವದಕ್ಕೂ ಆರಂಭಿಸಿದರೆ ಅವನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಸೇವಕನ ಒಡೆಯನು ಬಂದು ಅವನನ್ನು ಕಠಿಣವಾಗಿ ಛೇದಿಸಿ ಅವನಿಗೆ ನಂಬಿಕೆಯಿಲ್ಲದವರ ಕೂಡ ಪಾಲನ್ನು ನೇಮಕ ಮಾಡುವನು.
- 1 Peter 4:3–7 1 ಪೇತ್ರನು 4:3–7ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು. ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಅವರೊಂದಿಗೆ ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯ ಪಟ್ಟು ನಿಮ್ಮನ್ನು ದೂಷಿಸುತ್ತಾರೆ. ಅವರು ಬದುಕುವ ವರಿಗೂ ಸತ್ತವರಿಗೂ ನ್ಯಾಯತೀರಿಸುವದಕ್ಕಾಗಿ ಸಿದ್ಧ ವಾಗಿರುವಾತನಿಗೆ ಲೆಕ್ಕ ಒಪ್ಪಿಸುವರು. ಈ ಕಾರಣದಿಂದ ಸತ್ತಿರುವವರು ಶರೀರದಲ್ಲಿ ಮನುಷ್ಯರಿಗೆ ತಕ್ಕಂತೆ ನ್ಯಾಯತೀರ್ಪನ್ನು ಹೊಂದಿ ಆತ್ಮದಲ್ಲಿ ದೇವರಿಗಾಗಿ ಜೀವಿಸುವಂತೆ ಅವರಿಗೂ ಸುವಾರ್ತೆ ಸಾರಲ್ಪಟ್ಟಿತು. ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.
- 1 Corinthians 6:10 1 ಕೊರಿಂಥದವರಿಗೆ 6:10ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.
- Revelation 3:3 ಪ್ರಕಟನೆ 3:3ಆದದರಿಂದ ನೀನು ಹೊಂದಿದ್ದನ್ನೂ ಕೇಳಿದ್ದನ್ನೂ ನೆನಪಿಗೆ ತಂದುಕೊಂಡು ಅದನ್ನು ಬಿಗಿಯಾಗಿ ಹಿಡಿದುಕೋ, ಮಾನಸಾಂತರ ಪಡು. ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ನಾನು ನಿನ್ನ ಮೇಲೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯದು.
- 2 Peter 3:14 2 ಪೇತ್ರನು 3:14ಆದಕಾರಣ ಪ್ರಿಯರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವದರಿಂದ ಸಮಾಧಾನ ದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವ ರಾಗಿರ್ರಿ.
- Mark 13:35–37 ಮಾರ್ಕನು 13:35–37ಆದದರಿಂದ ಜಾಗರೂಕರಾಗಿರ್ರಿ. ಯಾಕಂದರೆ ಮನೇ ಯಜಮಾನನು ಸಂಜೆಯಲ್ಲಿಯೋ ಸರಿಹೊತ್ತಿನಲ್ಲಿಯೋ ಇಲ್ಲವೆ ಹುಂಜ ಕೂಗುವಾ ಗಲೋ ಇಲ್ಲವೆ ಮುಂಜಾನೆಯಲ್ಲಿಯೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ. ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವದನ್ನು ಕಂಡಾನು.ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು. ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.
- Hosea 4:11 ಹೋಶೇಯ 4:11ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ.
- Galatians 5:20 ಗಲಾತ್ಯದವರಿಗೆ 5:20ವಿಗ್ರಹಾರಾಧನೆ ಮಾಟ ಹಗೆತನ ಮತಭೇದ ಹೊಟ್ಟೇಕಿಚ್ಚು ಸಿಟ್ಟು ಜಗಳ ಒಳಸಂಚು ಭಿನ್ನಾಭಿಪ್ರಾಯಗಳು
- 1 Corinthians 5:11 1 ಕೊರಿಂಥದವರಿಗೆ 5:11ಆದರೆ ಸಹೋದರ ನೆನಿಸಿಕೊಂಡ ವನು ಜಾರನಾದರೂ ಲೋಭಿಯಾದರೂ ವಿಗ್ರಹಾ ರಾಧಕನಾದರೂ ಬೈಯುವವನಾದರೂ ಕುಡುಕ ನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅಂಥವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟ ಮಾಡಲೂಬಾರದು ಎಂದು ನಾನು ಈಗ ಬರೆದಿದ್ದೇನೆ.