Luke · chapter 21 · verse 8
Luke 21:8 in Kannada
ಅದಕ್ಕೆ ಆತನು--ನೀವು ಮೋಸ ಹೋಗ ದಂತೆ ಎಚ್ಚರಿಕೆ ತಂದುಕೊಳ್ಳಿರಿ; ಯಾಕಂದರೆ ಅನೇಕರು ನನ್ನ ಹೆಸರಿನಲ್ಲಿ ಬಂದು--ನಾನೇ ಕ್ರಿಸ್ತನು ಎಂದು ಹೇಳುವರು; ಸಮಯವು ಸವಿಾಪಿಸಿದೆ, ಆದಕಾರಣ ನೀವು ಅವರ ಹಿಂದೆ ಹೋಗಬೇಡಿರಿ.
Adakke aatanu--neevu mosa hoga dante echcharike tandukolliri; yaakandare anekaru nanna hesarinalli bandu--naane kristanu endu heluvaru; samayavu saviాpiside, aadakaarana neevu avara hinde hogabediri.
Luke 21:8 in English
- King James Version (KJV)
- And he said, Take heed that ye be not deceived: for many shall come in my name, saying, I am [Christ]; and the time draweth near: go ye not therefore after them.
- World English Bible (WEB)
- He said, “Watch out that you don’t get led astray, for many will come in my name, saying, ‘I am he,’ and, ‘The time is at hand.’ Therefore don’t follow them.
- American Standard Version (ASV)
- And he said, Take heed that ye be not led astray: for many shall come in my name, saying, I am [he]; and, The time is at hand: go ye not after them.
- Bible in Basic English (BBE)
- And he said, Take care that you are not tricked: for a number of people will come in my name, saying, I am he; and, The time is near: do not go after them.
- Darby Translation (DBY)
- And he said, See that ye be not led astray, for many shall come in my name, saying, I am [he], and the time is drawn nigh: go ye not [therefore] after them.
- Webster's Bible (WBS)
- And he said, Take heed that ye be not deceived: for many will come in my name, saying, I am [Christ] ; and the time draweth near: therefore go ye not after them.
- Young's Literal Translation (YLT)
- And he said, 'See — ye may not be led astray, for many shall come in my name, saying — I am [he], and the time hath come nigh; go not on then after them;
Read in context
- 6ನೀವು ನೋಡುತ್ತಿರುವ ಇವುಗ ಳಾದರೋ ಕೆಡವಲ್ಪಟ್ಟು ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಬಿಡಲ್ಪಡದ ದಿವಸಗಳು ಬರುವವು ಅಂದನು.
- 7ಆಗ ಅವರು ಆತನಿಗೆ--ಬೋಧಕನೇ, ಇವುಗಳು ಯಾವಾಗ ಆಗುವವು? ಇವುಗಳು ಸಂಭವಿ ಸುವದಕ್ಕಿರುವಾಗ ಯಾವ ಸೂಚನೆ ಇರುವದು ಎಂದು ಕೇಳಿದರು.
- 8ಅದಕ್ಕೆ ಆತನು--ನೀವು ಮೋಸ ಹೋಗ ದಂತೆ ಎಚ್ಚರಿಕೆ ತಂದುಕೊಳ್ಳಿರಿ; ಯಾಕಂದರೆ ಅನೇಕರು ನನ್ನ ಹೆಸರಿನಲ್ಲಿ ಬಂದು--ನಾನೇ ಕ್ರಿಸ್ತನು ಎಂದು ಹೇಳುವರು; ಸಮಯವು ಸವಿಾಪಿಸಿದೆ, ಆದಕಾರಣ ನೀವು ಅವರ ಹಿಂದೆ ಹೋಗಬೇಡಿರಿ.
- 9ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇವುಗಳು ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು.
- 10ಆತನು ಅವರಿಗೆ--ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳು ವವು.
Cross references
- 1 John 4:1 1 ಯೋಹಾನನು 4:1ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಹೋಗಿರುವದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.
- 2 Thessalonians 2:3 2 ಥೆಸಲೊನೀಕದವರಿಗೆ 2:3ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;
- Ephesians 5:6 ಎಫೆಸದವರಿಗೆ 5:6ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
- Mark 13:5–6 ಮಾರ್ಕನು 13:5–6ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಲಾ ರಂಭಿಸಿ-- ಯಾವನಾದರೂ ನಿಮ್ಮನ್ನು ಮೋಸಗೊಳಿಸ ದಂತೆ ಎಚ್ಚರಿಕೆ ತೆಗೆದು ಕೊಳ್ಳಿರಿ; ಯಾಕಂದರೆ ಅನೇ ಕರು ನನ್ನ ಹೆಸರಿನಲ್ಲಿ ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
- Matthew 24:11 ಮತ್ತಾಯನು 24:11ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
- Matthew 24:4–5 ಮತ್ತಾಯನು 24:4–5ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಯಾವನಾ ದರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆ ಯಿಂದಿರ್ರಿ. ಯಾಕಂದರೆ ನನ್ನ ಹೆಸರಿನಲ್ಲಿ ಅನೇಕರು ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
- Mark 13:21–23 ಮಾರ್ಕನು 13:21–23ಆಗ ಯಾವನಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ; ಇಲ್ಲವೆ ಅಗೋ, ಆತನು ಅಲ್ಲಿ ದ್ದಾನೆ ಎಂದು ಹೇಳಿದರೆ ಅವನನ್ನು ನಂಬಬೇಡಿರಿ; ಯಾಕಂದರೆ ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ಆರಿಸಿಕೊಂಡವರನ್ನೂ ಮೋಸ ಗೊಳಿಸುವದಕ್ಕೊಸ್ಕರ ಸೂಚಕಕಾರ್ಯಗಳನ್ನು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವರು. ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ.
- Jeremiah 29:8 ಯೆರೆಮೀಯ 29:8ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಧ್ಯ ದಲ್ಲಿರುವ ನಿಮ್ಮ ಪ್ರವಾದಿಗಳೂ ಶಕುನದವರೂ ನಿಮಗೆ ಮೋಸಮಾಡದಿರಲಿ; ನಿಮಗಾಗಿ ಕನಸು ಕಂಡು ಹೇಳು ವವರಿಗೆ ಕಿವಿಗೊಡಬೇಡಿರಿ.
- 2 Timothy 3:13 2 ತಿಮೊಥೆಯನಿಗೆ 3:13ಆದರೆ ದುಷ್ಟರೂ ವಂಚಕರೂ ಮೋಸಮಾಡುತ್ತಾ ತಾವೇ ಮೋಸ ಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.
- Matthew 24:23–25 ಮತ್ತಾಯನು 24:23–25ಆಗ ಯಾರಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ ಇಲ್ಲವೆ ಅಲ್ಲಿದ್ದಾನೆ ಎಂದು ಹೇಳಿದರೆ ಅದನ್ನು ನಂಬಬೇಡಿರಿ. ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು. ಇಗೋ, ಮುಂದಾಗಿ ನಾನು ನಿಮಗೆ ಹೇಳಿದ್ದೇನೆ.
- Acts 8:9–10 ಅಪೊಸ್ತಲರ ಕೃತ್ಯಗಳು 8:9–10ಆದರೆ ಇದಕ್ಕಿಂತ ಮುಂಚೆ ಸೀಮೋನ ನೆಂಬವನೊಬ್ಬನು ಆ ಪಟ್ಟಣದಲ್ಲಿ ತಾನು ಏನೋ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಕೊಂಡು ಮಂತ್ರ ತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರ ಗನ್ನು ಹುಟ್ಟಿಸುತ್ತಿದ್ದನು. ಚಿಕ್ಕವರು ಮೊದಲು ಗೊಂಡು ದೊಡ್ಡವರ ಪರ್ಯಂತರ ಎಲ್ಲರೂ--ಇವನು ದೇವರ ಮಹಾಶಕ್ತಿ ಎಂದು ಹೇಳುತ್ತಾ ಅವ ನಿಗೆ ಲಕ್ಷ್ಯಕೊಡುತ್ತಿದ್ದರು.
- 2 Corinthians 11:13–15 2 ಕೊರಿಂಥದವರಿಗೆ 11:13–15ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ. ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.