Luke · chapter 22 · verse 21
Luke 22:21 in Kannada
ಆದರೂ ಇಗೋ, ನನ್ನನ್ನು ಹಿಡುಕೊಡುವವನ ಕೈ ನನ್ನ ಸಂಗಡ ಮೇಜಿನ ಮೇಲೆ ಇದೆ.
Aadaroo igo, nannannu hidukoduvavana kai nanna sangada mejina mele ide.
Luke 22:21 in English
- King James Version (KJV)
- But, behold, the hand of him that betrayeth me [is] with me on the table.
- World English Bible (WEB)
- But behold, the hand of him who betrays me is with me on the table.
- American Standard Version (ASV)
- But behold, the hand of him that betrayeth me is with me on the table.
- Bible in Basic English (BBE)
- But the hand of him who is false to me is with me at the table.
- Darby Translation (DBY)
- Moreover, behold, the hand of him that delivers me up [is] with me on the table;
- Webster's Bible (WBS)
- But behold, the hand of him that betrayeth me [is] with me on the table.
- Young's Literal Translation (YLT)
- 'But, lo, the hand of him delivering me up [is] with me on the table,
Read in context
- 19ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟು--ಇದು ನಿಮಗೋಸ್ಕರ ಕೊಡಲ್ಪಟ್ಟ ನನ್ನ ದೇಹ; ನನ್ನ ನೆನಪಿ ಗಾಗಿ ನೀವು ಇದನ್ನು ಮಾಡಿರಿ ಅಂದನು.
- 20ಅದೇ ಪ್ರಕಾರ ಊಟವಾದ ಮೇಲೆ ಪಾತ್ರೆಯನ್ನು ತೆಗೆದು ಕೊಂಡು--ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪ ಡುವ ನನ್ನ ರಕ್ತದಿಂದಾದ ಹೊಸಒಡಂಬಡಿಕೆಯಾಗಿದೆ.
- 21ಆದರೂ ಇಗೋ, ನನ್ನನ್ನು ಹಿಡುಕೊಡುವವನ ಕೈ ನನ್ನ ಸಂಗಡ ಮೇಜಿನ ಮೇಲೆ ಇದೆ.
- 22ನಿರ್ಧರಿಸ ಲ್ಪಟ್ಟಂತೆಯೇ ಮನುಷ್ಯಕುಮಾರನು ನಿಜವಾಗಿಯೂ ಹೋಗುತ್ತಾನೆ; ಆದರೆ ಆತನನ್ನು ಹಿಡುಕೊಡುವ ಆ ಮನುಷ್ಯನಿಗೆ ಅಯ್ಯೋ! ಎಂದು ಹೇಳಿದನು.
- 23ಆಗ ಇದನ್ನು ಮಾಡುವದಕ್ಕಿರುವವನು ಯಾವನು ಎಂದು ಅವರು ತಮ್ಮೊಳಗೆ ವಿಚಾರಣೆ ಮಾಡಲಾರಂಭಿಸಿದರು.
Cross references
- Psalm 41:9 ಕೀರ್ತನೆಗಳು 41:9ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.
- John 13:26 ಯೋಹಾನನು 13:26ಅದಕ್ಕೆ ಯೇಸು--ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ ಎಂದು ಉತ್ತರ ಕೊಟ್ಟನು. ಆ ರೊಟ್ಟಿಯ ತುಂಡನ್ನು ಅದ್ದಿ ಆತನು ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟನು.
- John 13:21–22 ಯೋಹಾನನು 13:21–22ಯೇಸು ಹೀಗೆ ಹೇಳಿದ ಮೇಲೆ ಆತ್ಮದಲ್ಲಿ ಕಳವಳ ಗೊಂಡು ಸಾಕ್ಷೀಕರಿಸಿ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು ಕೊಡುವನು ಎಂದು ಹೇಳಿದನು. ಆಗ ಶಿಷ್ಯರು ಅನುಮಾನದಿಂದ ಈತನು ಯಾರನ್ನು ಕುರಿತು ಹೇಳಿದನೆಂದು ಒಬ್ಬರನೊಬ್ಬರು ನೋಡಿದರು.
- John 13:18–19 ಯೋಹಾನನು 13:18–19ನಾನು ನಿಮ್ಮೆಲ್ಲರ ವಿಷಯದಲ್ಲಿ ಮಾತ ನಾಡುವದಿಲ್ಲ; ನಾನು ಆರಿಸಿಕೊಂಡವರನ್ನು ಬಲ್ಲೆನು; ಆದರೆ--ನನ್ನೊಂದಿಗೆ ರೊಟ್ಟಿಯನ್ನು ತಿನ್ನುವವನು ನನಗೆ ವಿರೋಧವಾಗಿ ತನ್ನ ಹಿಮ್ಮಡಿಯನ್ನು ಎತ್ತಿದ್ದಾನೆ ಎಂಬ ಬರಹವು ನೆರವೇರಬೇಕಾಗಿದೆ. ಅದು ಆಗುವಾಗ ನಾನೇ ಆತನೆಂದು ನೀವು ನಂಬುವಂತೆ ಅದು ಸಂಭವಿಸುವದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತೇನೆ.
- Mark 14:18–21 ಮಾರ್ಕನು 14:18–21ಅವರು ಕೂತುಕೊಂಡು ಊಟಮಾಡುತ್ತಿದ್ದಾಗ ಯೇಸು ಅವರಿಗೆ--ನನ್ನೊಂದಿಗೆ ಊಟ ಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು. ಆಗ ಅವರು ದುಃಖಿಸ ಲಾರಂಭಿಸಿ ಒಬ್ಬೊಬ್ಬರಾಗಿ ಆತನಿಗೆ--ಅದು ನಾನೋ? ಮತ್ತು ಇನ್ನೊಬ್ಬನು--ಅದು ನಾನೋ? ಎಂದು ಆತನನ್ನು ಕೇಳಿದರು. ಅದಕ್ಕಾತನು ಪ್ರತ್ಯುತ್ತರವಾಗಿ ಅವರಿಗೆ--ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು, ಅಂದರೆ ನನ್ನ ಸಂಗಡ ಪಾತ್ರೆಯಲ್ಲಿ ಅದ್ದುವವನೇ. ತನ್ನ ವಿಷಯವಾಗಿ ಬರೆದಿರುವ ಪ್ರಕಾರ ಮನುಷ್ಯ ಕುಮಾರನು ನಿಜವಾಗಿಯೂ ಹೋಗುತ್ತಾನೆ; ಆದರೆ ಯಾವನಿಂದ ಮನುಷ್ಯಕುಮಾರನು ಹಿಡುಕೊಡಲ್ಪಡು ತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಎಂದು ಹೇಳಿದನು.
- Matthew 26:21–24 ಮತ್ತಾಯನು 26:21–24ಅವರು ಊಟಮಾಡು ತ್ತಿದ್ದಾಗ ಆತನು--ನಾನು ನಿಮಗೆ ನಿಜವಾಗಿ ಹೇಳು ತ್ತೇನೆ, ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಅಂದನು. ಆಗ ಅವರು ಬಹಳ ದುಃಖಪಟ್ಟು--ಕರ್ತನೇ, ಅವನು ನಾನೋ ಎಂದು ಅವರಲ್ಲಿ ಪ್ರತಿಯೊಬ್ಬನು ಆತನನ್ನು ಕೇಳಲಾರಂಭಿಸಿದರು. ಅದಕ್ಕೆ ಆತನು ಪ್ರತ್ಯುತ್ತರವಾಗಿ--ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನ್ನನ್ನು ಹಿಡುಕೊಡುವನು. ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.
- Job 19:19 ಯೋಬನು 19:19ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಅಸಹ್ಯಿಸುತ್ತಾರೆ; ನಾನು ಪ್ರೀತಿಮಾಡಿದವರೇ ನನಗೆ ವಿರೋಧವಾಗಿ ತಿರುಗಿ ದ್ದಾರೆ.
- Micah 7:5–6 ಮೀಕ 7:5–6ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ. ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು.